ದೇಶದಾದ್ಯಂತ ಏರ್‌ಟೆಲ್ ನೆಟ್‌ವರ್ಕ್ ಡೌನ್! ನೆಟ್‌ವರ್ಕ್ ಸಿಗದೆ ಗ್ರಾಹಕರ ಪರದಾಟ!
ದೇಶದ ಮುಂಚೂಣಿ ಟೆಲಿಕಾಂಗಳಲ್ಲಿ ಒಂದಾದ ಏರ್‌ಟೆಲ್ ಟೆಲಿಕಾಂ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಎದುರಾಗಿದೆ. ಇದರಿಂದ ಭಾರತದಾದ್ಯಂತ ಏರ್‌ಟೆಲ್ ಬಳಕೆದಾರರು ನೆಟ್‌ವರ್ಕ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸ್ಥಗಿತವನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ ಏರ್‌ಟೆಲ್ ನೆಟ್‌ವರ್ಕ್ ಡೌನ್ ಆಗಿರುವುದರ ಬಗ್ಗೆ ಎಲ್ಲಾ ಕಡೆ ವರದಿಯಾಗಿದೆ. ನೆಟ್‌ವರ್ಕ್ ಸಮಸ್ಯೆಯನ್ನು ಎದುರಿಸುತ್ತಿರುವ ಅನೇಕ ಬಳಕೆದಾರರು ಸೊಶೀಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಶೇರ್ ಮಾಡುತ್ತಿದ್ದಾರೆ.

ಹೌದು, ದೇಶದಾದ್ಯಂತ ಬೆಳಿಗ್ಗೆ 11ಗಂಟೆಯಿಂದ ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಸಮಸ್ಯೆಯು ಟೆಲಿಕಾಂ ನೆಟ್‌ವರ್ಕ್‌ನಲ್ಲಿ ಬ್ರಾಡ್‌ಬ್ಯಾಂಡ್ ಮತ್ತು ಸೆಲ್ಯುಲಾರ್ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಇಂಟರ್‌ನೆಟ್ ಔಟೇಜ್ ಟ್ರ್ಯಾಕರ್ ಡೌನ್‌ಡಿಟೆಕ್ಟರ್ ಪ್ರಕಾರ ದೇಶದ ವಿವಿಧ ಭಾಗಗಳಲ್ಲಿ ಏರ್‌ಟೆಲ್ ನೆಟ್‌ವರ್ಕ್ ಸ್ಥಗಿತಗೊಂಡಿದೆ. ಇದು ಏರ್‌ಟೆಲ್ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಆದರೆ ಏರ್‌ಟೆಲ್ ಈ ಸಮಸ್ಯೆಯ ಬಗ್ಗೆ ಇನ್ನು ಯಾವುದೇ ಮಾಹಿತಿ ನೀಡಿಲ್ಲ ಎಂದು ವರದಿಯಾಗಿದೆ. ಹಾಗಾದ್ರೆ ಏರ್‌ಟೆಲ್ ಟೆಲಿಕಾಂ ಬಳಕೆದಾರರು ಸಮಸ್ಯೆ ಎದುರಿಸಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ ಟೆಲಿಕಾಂ ಬಳಕೆದಾರರು ಸುಮಾರು 11 ಗಂಟೆಯಿಂದ ನೆಟ್‌ವರ್ಕ್‌ನಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ. ಏಕಾಏಕಿ ಏರ್‌ಟೆಲ್ ಸೆಲ್ಯುಲಾರ್ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ದೇಶದ ವಿವಿಧ ಭಾಗಗಳ ಜನರು ಸಮಸ್ಯೆ ಅನುಭವಿಸಿದ್ದಾರೆ. ಈ ಸಮಸ್ಯೆಯ ಬಗ್ಗೆ ಅನೇಖ ಮಂದಿ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಸಮಸ್ಯೆಯು ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ನೆಟ್‌ವರ್ಕ್‌ಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ. ಏರ್‌ಟೆಲ್ ಅಪ್ಲಿಕೇಶನ್ ಪ್ರವೇಶಿಸುವುದಕ್ಕೂ ಕೂಡ ಕೆಲವು ಬಳಕೆದಾರರಿಗೆ ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ಇನ್ನು ಈ ಸಮಸ್ಯೆಯ ಬಗ್ಗೆ ಏರ್‌ಟೆಲ್ ಯಾವುದೇ ಸ್ಪಷ್ಟತೆ ನೀಡಿಲ್ಲ.

ಡೌನ್ ಡಿಟೆಕ್ಟರ್ ವರದಿ ಪ್ರಕಾರ ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಜೈಪುರ, ಕೋಲ್ಕತ್ತಾ ಸೇರಿದಂತೆ ಅನೇಕ ನಗರಗಳಲ್ಲಿ ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಆದರೂ ಕೂಡ ಈ ಸಮಸ್ಯೆಯು ಎಲ್ಲಾ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿಲ್ಲ, ಏಕೆಂದರೆ ಕೆಲವರು ಯಾವುದೇ ಸಮಸ್ಯೆಗಳಿಲ್ಲದೆ ಕರೆ ಮತ್ತು ಡೇಟಾ ಸೇವೆಗಳನ್ನು ಬಳಸುವುದನ್ನು ಮುಂದುವರೆಸಿದ್ದಾರೆ ಎಂದು ಸಹ ವರದಿಯಾಗಿದೆ.

ಏರ್‌ಟೆಲ್ ಟೆಲಿಕಾಂನ ತಾಂತ್ರಿಕ ಸಮಸ್ಯೆ ಇದೇ ಮೊದಲೇನಲ್ಲ, ಇದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಎಂದು ಹೇಳಲಾಗಿದೆ. ಹಲವು ಬಳಕೆದಾರರು ಎರಡು ಬಾರಿ ಈ ರೀತಿಯ ಸಮಸ್ಯೆಯನ್ನು ಎದುರಿಸಿದ್ದಾರೆ. ಆದರೆ ಈ ರೀತಿಯ ಸಮಸ್ಯೆಗಳಿಗೆ ನಿಖರ ಕಾರಣ ಏನು ಅನ್ನೊದನ್ನ ಏರ್‌ಟೆಲ್ ಇನ್ನು ಕೂಡ ಸ್ಪಷ್ಟ ಪಡಿಸಿಲ್ಲ. ಇನ್ನು ಏರ್‌ಟೆಲ್ ಟೆಲಿಕಾಂನ ಪ್ರತಿಸ್ಫರ್ಧಿ ಜಿಯೋ ಕೂಡ ಈ ರೀತಇಯ ತಾಂತ್ರಿಕ ಸಮಸ್ಯೆ ಎದುರಿಸಿತ್ತು. ಸಮಸ್ಯೆ ಎದುರಿಸಿದ ಗ್ರಾಹಕರಿಗೆ ಕೆಲ ದಿನಗಳ ಹಿಂದೆ ಎರಡು ದಿನಗಳ ಉಚಿತ ಕರೆ ಪ್ರಯೋಜನ ಹಾಗೂ ಡೇಟಾ ಸೇವೆ ಘೋಷಣೆ ಕೂಡ ಮಾಡಿತ್ತು.

ಸದ್ಯ ಏರ್‌ಟೆಲ್ ಟೆಲಿಕಾಂನಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷವನ್ನು ಪಡಿಸಲಾಗಿದ್ದು, ಸಮಸ್ಯೆಯನ್ನು ನಿವಾರಣೆ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಗ್ರಾಹಕರಿಗೆ ಉಂಟಾದ ಅನಾನುಕೂಲತೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ ಎಂದು ಏರ್‌ಟೆಲ್ ಹೇಳಿಕೆ ನೀಡಿದೆ. ಏರ್‌ಟೆಲ್ ಸ್ಥಗಿತಗೊಂಡ ಸ್ವಲ್ಪ ಸಮಯದ ನಂತರ, #AirtelDown ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಸಾಕಷ್ಟು ಟ್ರೆಂಡ್ ಆಗಿತ್ತು. ಟ್ವಟರ್‌ನಲ್ಲಿ ಏರ್‌ಟೆಲ್ ಟೆಲಿಕಾಂ ತೊಂದರೆಯ ಬಗ್ಗೆ ಸಾಕಷ್ಟು ಮಂದಿ ಮಾಹಿತಿ ಹಂಚಿಕೊಂಡಿದ್ದರೆ. ಇದೀಗ ಏರ್‌ಟೆಲ್ ಸಮಸ್ಯೆ ನಿವಾರಣೆಯಾಗಿದೆ.


Click it and Unblock the Notifications








