ಭಾರತದಲ್ಲೇ ಮೊದಲ ಬಾರಿ 5G ಪರೀಕ್ಷಾರ್ಥ ಬಳಕೆಗೆ ಏರ್‌ಟೆಲ್ ಸಜ್ಜು!!

|

ರಿಲಯನ್ಸ್ ಜಿಯೋಗೆ ಸೆಡ್ಡುಹೊಡೆಯಲು ಸಜ್ಜಾಗಿರುವ ದೇಶದ ಎರಡನೇ ಅತಿದೊಡ್ಡ ನೆಟ್‌ವರ್ಕ್ ಜಾಲ ಭಾರ್ತಿ ಏರ್‌ಟೆಲ್ ಇದೀಗ ಜಿಯೋ ವಿರುದ್ದ 5G ಅಸ್ತ್ರವನ್ನು ಪ್ರಯೋಗಿಸುತ್ತಿದೆ. ದೇಶದಲ್ಲಿ ಡಿಜಿಟಲ್ ಕ್ರಾಂತಿ ಮತ್ತು 5G ನೆಟ್‌ವರ್ಕ್ ಡೇಟಾ ಕ್ಷೇತ್ರದಲ್ಲಿನ ಅಪಾರ ಬೇಡಿಕೆಗೆ ಅನುಗುಣವಾಗಿ, ಭಾರತದಲ್ಲೇ ಮೊದಲ ಬಾರಿ ಅತಿವೇಗದ ನೆಟ್‌ವರ್ಕ್ ಪೂರೈಕೆಗೆ ಏರ್‌ಟೆಲ್ ಮುಂದಡಿಯಿರಿಸಿದ್ದು, ಶೀಘ್ರದಲ್ಲೇ ನೋಯ್ಡಾದಲ್ಲಿ 5G ನೆಟ್‌ವರ್ಕ್ ಅನ್ನು ಅಳವಡಿಸಿ ಪರೀಕ್ಷಾರ್ಥ ಬಳಕೆ ಮಾಡಲಿದೆ ಎಂದು ತಿಳಿದುಬಂದಿದೆ.

ಭಾರತದಲ್ಲೇ ಮೊದಲ ಬಾರಿ 5G ಪರೀಕ್ಷಾರ್ಥ ಬಳಕೆಗೆ ಏರ್‌ಟೆಲ್ ಸಜ್ಜು!!

ಹೌದು, ಫಿನ್ಲೆಂಡ್ ಮೂಲದ ಜನಪ್ರಿಯ ನೋಕಿಯಾ ಕಂಪೆನಿ ಸಹಯೋಗದಲ್ಲಿ 5G ನೆಟ್‌ವರ್ಕ್‌ ಒದಗಿಸಲು ಏರ್‌ಟೆಲ್ ಮುಂದಾಗಿದ್ದು, ನೋಯ್ಡಾದಲ್ಲಿ ಏರ್‌ಟೆಲ್ ಮತ್ತು ನೋಕಿಯಾ ಜಂಟಿಯಾಗಿ 5G ನೆಟ್‌ವರ್ಕ್ ಳವಡಿಸಿ ಪರೀಕ್ಷಾರ್ಥ ಬಳಕೆ ಮಾಡಲಿವೆ ಎಂದು ಹೇಳಲಾಗಿದೆ. ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಯ ಜತೆಗೆ ವಿಶ್ವದರ್ಜೆಯ ಡಿಜಿಟಲ್ ಸೇವೆಯನ್ನು ಗ್ರಾಹಕರಿಗೆ ಒದಗಿಸಲು ಏರ್‌ಟೆಲ್ ಅಗತ್ಯ ಕ್ರಮಕ್ಕೆ ಮುಂದಾಗಲಿದೆ ಎಂದು ಭಾರ್ತಿ ಏರ್‌ಟೆಲ್‌ನ ಸಿಟಿಒ ರಣ್‌ದೀಪ್ ಸೇಖೊನ್ ತಿಳಿಸಿದ್ದಾರೆ.

ಭಾರತದಲ್ಲೇ ಮೊದಲ ಬಾರಿ 5G ಪರೀಕ್ಷಾರ್ಥ ಬಳಕೆಗೆ ಏರ್‌ಟೆಲ್ ಸಜ್ಜು!!

ಪ್ರಸ್ತುತ 4G ನೆಟ್‌ವರ್ಕ್ ಬಳಕೆಯಲ್ಲಿ ಏರ್‌ಟೆಲ್ ದೇಶದಲ್ಲೇ ಅತಿ ವೇಗದ ನೆಟ್‌ವರ್ಕ್ ಎಂಬ ಪ್ರಶಂಸೆಗೆ ಪಾತ್ರವಾಗಿದ್ದು, 5G ನೆಟ್‌ವರ್ಕ್‌ ಒದಗಿಸುವ ನಿಗದಿತ ವೇಗ ಮತ್ತು ಇತರ ಸೌಲಭ್ಯಗಳನ್ನು ನೋಕಿಯಾ ಮೂಲಕ ನೀಡಲು ಏರ್‌ಟೆಲ್ ಮುಂದಾಗಿದೆ. ಅದಕ್ಕೆ ತಕ್ಕ ನೆಟ್‌ವರ್ಕ್ ಸವಲತ್ತನ್ನು ಶೀಘ್ರದಲ್ಲೇ ಏರ್‌ಟೆಲ್ ಕಲ್ಪಿಸುತ್ತದೆ ಎಂದು ನೋಕಿಯಾದ ಮಾರ್ಕೆಟ್ ಹೆಡ್ ಸಂಜಯ್ ಮಲಿಕ್ ತಿಳಿಸಿದ್ದಾರೆ. ಹಾಗಾದರೆ, 5G ನೆಟ್‌ವರ್ಕ್ ಬಳಕೆಗೆ ಬಂದರೆ ಹೇಗಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸಂವಹನ ವೇಗ 100ಪಟ್ಟು ಹೆಚ್ಚು

ಸಂವಹನ ವೇಗ 100ಪಟ್ಟು ಹೆಚ್ಚು

5ಜಿ ನೆಟ್‌ವರ್ಕ್‌ ತಂತ್ರಜ್ಞಾನ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದರೆ ಸಂವಹನ ವೇಗ 4ಜಿಗಿಂತ 100ಪಟ್ಟು ಹೆಚ್ಚಾಗಲಿದೆ. 4ಜಿ ನೆಟ್‌ವರ್ಕ್‌ನ ಸೌಲಭ್ಯಗಳ ಜತೆಗೆ, OFDM, MC-CDMA, LAS-CDMA, UWB, LMDS ನೆಟ್‌ವರ್ಕ್ ಮತ್ತು IPV6ನಂತಹ ಹಲವು ಸೌಲಭ್ಯಗಳು ಬಳಕೆದಾರರಿಗೆ ಸಿಗಲಿವೆ.!

ವರ್ಚುವಲ್ ರಿಯಾಲಿಟಿ

ವರ್ಚುವಲ್ ರಿಯಾಲಿಟಿ

ಪರಸ್ಪರ ಸಂವಹನ ಸಾಧಿಸುವ ಡಿಜಿಟಲ್‌ ಉಪಕರಣಗಳು ಆಗ್ಯುಮೆಂಟ್ ರಿಯಾಲಿಟಿ ಹಾಗೂ ವರ್ಚುವಲ್ ರಿಯಾಲಿಟಿಯಂತಹ ತಂತ್ರಜ್ಞಾನ ಬಳಕೆ ಮತ್ತಷ್ಟು ಹೆಚ್ಚಾಗಲಿದೆ. ಮನೆ, ಕಾರುಗಳೆಲ್ಲವೂ ಸ್ಮಾರ್ಟ್‌ ಆಗಲಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ವೇಗ ಸಮರ್ಥವಾಗಿ ಅಂತರ್ಜಾಲ ಬಳಕೆ ಮಾಡುವ ಸೌಲಭ್ಯವನ್ನು ಈ ನೆಟ್‌ವರ್ಕ್‌ ಕಲ್ಪಿಸಲಿದೆ.

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ ಪಡೆಯುವ ತಂತ್ರಿಕತೆಯನ್ನು 5G ನೆಟ್‌ವರ್ಕ್‌ ಹೊಂದಿದೆ. ಅಂದರೆ, ನೀವು ಕಣ್ಣುಮುಚ್ಚಿ ಕಣ್ಣು ಬಿಡುವುದರ ಒಳಗಾಗಿ ಅಂತರ್ಜಾಲ 10 ಬಾರಿ ಲೋಡಿಂಗ್ ಆಗಿರಲಿದೆ. ಹಾಗಾಗಿಯೇ, 5G ನೆಟ್‌ವರ್ಕ್‌ ವೇಗಕ್ಕೆ ವಿಶ್ವವೇ ಆಶ್ಚರ್ಯದಿಂದ ಕಾಯುತ್ತಿದೆ.

ಸಿನಿಮಾ ಡೌನ್‌ಲೋಡ್ ಆಗಲು ಸೆಕೆಂಡ್ಸ್ ಸಾಕು

ಸಿನಿಮಾ ಡೌನ್‌ಲೋಡ್ ಆಗಲು ಸೆಕೆಂಡ್ಸ್ ಸಾಕು

ಭವಿಷ್ಯದ 5G ನೆಟ್‌ವರ್ಕ್‌ ಬಳಕೆಗೆ ಬಂದರೆ ಎರಡೂವರೆ ಗಂಟೆ ಅವಧಿಯ ಚಲನಚಿತ್ರ ಡೌನ್‌ಲೋಡ್ ಆಗಲು ಕೇವಲ 5 ಸೆಕೆಂಡುಗಳಲ್ಲಿ ಸಾಕಾಗುತ್ತವೆ. ಪ್ರಸ್ತುತ 4ಜಿ ನೆಟ್‌ವರ್ಕ್‌ ಸಾಮರ್ಥ್ಯ 100ಎಂಬಿಪಿಎಸ್‌ನಿಂದ 1ಜಿಬಿವರೆಗೆ ಇದ್ದರೆ ಇದರ ಹತ್ತು ಪಟ್ಟು ವೇಗವನ್ನು 5G ನೆಟ್‌ವರ್ಕ್‌ ಪಡೆಯಲಿದೆ ಎಂದು ಹೇಳಲಾಗಿದೆ.

5G ನೆಟ್‌ವರ್ಕ್‌ನಿಂದ ಆಗುವ ಲಾಭಗಳೇನು?

5G ನೆಟ್‌ವರ್ಕ್‌ನಿಂದ ಆಗುವ ಲಾಭಗಳೇನು?

ಏಕ ಕಾಲದಲ್ಲಿ ಒಂದೇ ಆಕ್ಸೆಸ್‌ ಪಾಯಿಂಟ್‌ನಿಂದ ವಿವಿಧ ಡಿವೈಸ್‌ಗಳಿಗೆ ಅಡೆತಡೆಯಿಲ್ಲದ ಸಂಪರ್ಕವನ್ನು 5G ನೆಟ್‌ವರ್ಕ್‌ನಿಂದ ನಾವು ಪಡೆಯಬಹುದಾಗಿದೆ. ವೈ-ಫೈ ಸಂಪರ್ಕದಲ್ಲಿ ಸೆಕೆಂಡ್‌ಗೆ 10ಜಿಬಿವರೆಗೆ ವೇಗವನ್ನು ಪಡೆಯುವ ತಂತ್ರಜ್ಞಾನ, ಕಡಿಮೆ ಬ್ಯಾಟರಿ ಬಳಕೆ ಬಳಕೆ ಮಾಡಿಕೊಳ್ಳಲಿದೆ ಎಂಬುದೇ ವಿಶೇಷ.

Best Mobiles in India

English summary
Nokia said this trial has the potential to improve the performance of service providers' existing network even as it prepares the network for 5G and to meet the future demand.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X