ಜಿಯೋಗೆ ಶಾಕ್ ಕೊಟ್ಟ ಏರ್‌ಟೆಲ್..! ನೆಟ್‌ಫ್ಲಿಕ್ಸ್ ಫ್ರೀ.. ಪಡೆದುಕೊಳ್ಳುವುದು ಹೇಗೆ..?
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಬದಲಾವಣೆಯನ್ನು ಕಾಣಬಹುದಾಗಿದೆ. ಜಿಯೋ ತನ್ನ ಬಳಕೆದಾರರಿಗೆ ಕೇವಲ ಟೆಲಿಕಾಂ ಸೇವೆಯನ್ನು ಮಾತ್ರವೇ ಅಲ್ಲದೇ, ಮನರಂಜನೆಯ ಸೇವೆಯನ್ನು ನೀಡುವ ಮೂಲಕ ಅವರನ್ನು ಬಿಗಿಯಾಗಿ ಹಿಡಿದುಕೊಳ್ಳುವ ಕಾರ್ಯವನ್ನು ಮಾಡಿತು. ಇದಕ್ಕಾಗಿ ಜಿಯೋ ಹೆಸರಿನಲ್ಲಿ ಸಾಕಷ್ಟು ಆಪ್‌ಗಳನ್ನು ಮಾರುಕಟ್ಟೆಗೆ ಪರಿಚಯವನ್ನು ಮಾಡಿದಲ್ಲದೇ ಭರಪೂರ ಸೇವೆಯನ್ನು ನೀಡಿ ಅವರ ಮನಗೆದ್ದಿತ್ತು.

ಇದನ್ನು ಕಂಡ ಇತರೆ ಟೆಲಿಕಾಂ ಕಂಪನಿಗಳು ಈ ಮಾದರಿಯ ಸೇವೆಯನ್ನು ತಮ್ಮ ಬಳಕೆದಾರರಿಗೂ ನೀಡಲು ಮುಂದಾಯಿತು. ಅದರಲ್ಲಿ ಮುಖ್ಯವಾಗಿ ಏರ್‌ಟೆಲ್ ಮೊದಲಿಗೆ ತನ್ನ ಬಳಕೆದಾರರಿಗೆ ಉಚಿತವಾಗಿ ಎಂಟರ್ಟೈನ್ಮೆಂಟ್ ಸೇವೆಯನ್ನು ನೀಡಲು ಅಮೆಜಾನ್ ಪ್ರೈಮ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಉಚಿತವಾಗಿ ಬಳಕೆದಾರರಿಗೆ ನೀಡಿತ್ತು. ಇದು ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಿತ್ತು. ಸದ್ಯ ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮತ್ತೊಂದು ಆನ್‌ಲೈನ್ ಸ್ಟ್ರಿಂಗ್ ತಾಣವಾದ ನೆಟ್‌ಫ್ಲಿಕ್ಸ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಬಳಕೆದಾರರಿಗೆ ಉಚಿತವಾಗಿ ಸೇವೆಯನ್ನು ನೀಡಲು ಮುಂದಾಗಿದೆ.

ಅಮೆಜಾನ್ ಪ್ರೈಮ್ ಮಾದರಿ:
ಈಗಾಗಲೇ ತನ್ನ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಒಂದು ವರ್ಷದಕ್ಕೆ ಉಚಿತವಾಗಿ ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದೇ ಮಾದರಿಯಲ್ಲಿ ಸದ್ದು ಮಾಡುತ್ತಿರುವ ನೆಟ್‌ಫ್ಲಿಕ್ಸ್ ಅನ್ನು ನೀಡಲಿದೆ. ಇದರಲ್ಲಿ ನೀವು ಉಚಿತವಾಗಿ ವಿಡಿಯೋಗಳನ್ನು ನೋಡಬಹುದಾಗಿದೆ.

ಯಾರಿಗೆ..?
ಏರ್‌ಟೆಲ್ ಈ ಬಾರಿ ನೆಟ್‌ಫ್ಲಿಕ್ಸ್ ಸೇವೆಯನ್ನು ತನ್ನ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಮತ್ತು ವಿ ಫೈಬರ್ ಬಳಕೆದಾರರಿಗೆ ಮಾತ್ರವೇ ನೀಡುತ್ತಿದೆ. ಇದಲ್ಲದೇ ಮೂಲಗಳ ಪ್ರಕಾರ ಶೀಘ್ರವೇ ಪ್ರೀಪೇಯ್ಡ್ ಬಳಕೆದಾರರಿಗೂ ಈ ಆಫರ್ ಲಭ್ಯವಿರಲಿದೆ ಎನ್ನಲಾಗಿದೆ. ಆದರೆ ಮೊದಲಿಗೆ ಪೋಸ್ಟ್‌ಪೇಯ್ಡ್ ಮತ್ತು ವಿ-ಫೈಬರ್ ಹೋಂ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ದೊರೆಯಲಿದೆ.

ಮೂರು ತಿಂಗಳು ಉಚಿತ:
ಏರ್‌ಟೆಲ್ ಪೋಸ್ಟ್‌ಪೇಯ್ಡ್ ಮತ್ತು ವಿ-ಫೈಬರ್ ಹೋಂ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ನೆಟ್‌ಫ್ಲಿಕ್ಸ್ ಸೇವೆಯೂ ಮೊದಲ ಮೂರು ತಿಂಗಳು ಮಾತ್ರವೇ ಉಚಿತವಾಗಿ ದೊರೆಯಲಿದೆ ಎನ್ನಲಾಗಿದೆ. ಆದರೆ ಅಮೆಜಾನ್ ಪ್ರೈಮ್ ಒಂದು ವರ್ಷದ ಕಾಲ ಬಳಕೆಗೆ ದೊರೆಯಲಿದೆ.

ಎಲ್ಲಿ ನೋಡುವುದು?
ನೆಟ್‌ಫ್ಲಿಕ್ಸ್ ಅನ್ನು ಏರ್‌ಟೆಲ್ ಬಳಕೆದಾರರು ತನ್ನ ಮೈ ಏರ್‌ಟೆಲ್ ಆಪ್‌ನಲ್ಲಿ ನೋಡಬಹುದಾಗಿದೆ. ಇದರೊಂದಿಗೆ ಏರ್‌ಟೆಲ್ ವೆಬ್ ಸೈಟಿನಲ್ಲಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಎರಡು ವೇದಿಕೆಯಲ್ಲಿ ನೆಟ್‌ಫ್ಲಿಕ್ಸ್ ವಿಡಿಯೋಗಳನ್ನು ನೋಡಿ ಆನಂದಿಸಬಹುದಾಗಿದೆ.

ಬಳಕೆದಾರರನ್ನು ಸೆಳೆಯಲು:
ಈಗಾಗಲೇ ಪ್ರೀಪೇಯ್ಡ್ ಮಾರುಕಟ್ಟೆಯನ್ನು ಬಿಟ್ಟು ಪೋಸ್ಟ್ ಪೇಯ್ಡ್ ಮಾರುಕಟ್ಟೆಗೆ ಕಡೆಗೆ ತನ್ನ ಗಮನವನ್ನು ಹರಿಸಿರುವ ಏರ್‌ಟೆಲ್. ಇಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿಯೇ ಈ ಮಾದರಿಯ ಆಫರ್ ಅನ್ನು ನೀಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ನೆಟ್‌ಫ್ಲಿಕ್ಸ್ ಬೇಡಿಕೆಯೂ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣವಾಗಿದೆ.


Click it and Unblock the Notifications








