ಏರ್‌ಟೆಲ್‌ನಿಂದ ಹೊಸ ಡಾಟಾ ಆಡ್-ಆನ್ ಪ್ಯಾಕ್ ಲಾಂಚ್! 15GB ಡಾಟಾ ಪ್ರಯೋಜನ!
ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳ ದರ್ಬಾರ್ ಮುಂದುವರೆದಿದೆ. ಜಿಯೋ, ಏರ್‌ಟೆಲ್, ವಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಈ ಪೈಕಿ ಏರ್‌ಟೆಲ್ ರಿಲಯನ್ಸ್ ಜಿಯೋಗೆ ಪ್ರಬಲ ಪೈಪೋಟಿ ನೀಡುತ್ತಾ ಬಂದಿದೆ. ಈಗಾಗಲೇ ಹಲವು ಆಕರ್ಷಕ ಪ್ಲಾನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆಯುತ್ತಿದೆ. ಇದೀಗ ಏರ್‌ಟೆಲ್ ತನ್ನ ಚಂದಾದಾರರಿಗಾಗಿ ಎಕ್ಸ್‌ಸ್ಟ್ರೀಮ್ ಮೊಬೈಲ್ ಪ್ಯಾಕ್ ಎಂಬ ಹೊಸ ಡೇಟಾ ಆಡ್-ಆನ್ ಪ್ಯಾಕ್ ಅನ್ನು ಪರಿಚಯಿಸಿದೆ.

ಹೌದು, ಏರ್‌ಟೆಲ್ ಟೆಲಿಕಾಂ ತನ್ನ ಗ್ರಾಹಕರಿಗೆ ಹೊಸ ಡೇಟಾ ಆಡ್-ಆನ್ ಪ್ಯಾಕ್ ಅನ್ನು ಲಾಂಚ್ ಮಾಡಿದೆ. ಇದು 119ರೂ, ಬೆಲೆಯನ್ನು ಹೊಂದಿದ್ದು, 15GB ಹೈ ಸ್ಪೀಡ್ ಡೇಟಾವನ್ನು ನೀಡಲಿದೆ. ಇನ್ನು ಈ ಪ್ಲಾನ್ ಪ್ರತ್ಯೇಕ ಪ್ಲಾನ್ ಮಾನ್ಯತೆಯೊಂದಿಗೆ ಬರುವುದಿಲ್ಲ. ಬದಲಿಗೆ ಚಂದಾದಾರರ ಖಾತೆಯಲ್ಲಿ ಆಕ್ಟಿವ್ ಆಗಿರುವ ಬೇಸ್ ಪ್ಲಾನ್ ಮಾನ್ಯತೆಯನ್ನು ಬಳಸಲಿದೆ. ಹಾಗಾದ್ರೆ ಏರ್‌ಟೆಲ್ ಟೆಲಿಕಾಂನ ಈ ಹೊಸ ಪ್ಲಾನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏರ್‌ಟೆಲ್ 119ರೂ, ಬೆಲೆಯ ಹೊಸ ಡೇಟಾ ಆಡ್-ಆನ್ ಪ್ಯಾಕ್ ಪ್ಲಾನ್ ಡೇಟಾದ ಜೊತೆಗೆ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮೊಬೈಲ್ ಆಪ್‌ನಲ್ಲಿರುವ ಮೂರು ಚಾನೆಲ್‌ಗಳಲ್ಲಿ ಒಂದಕ್ಕೆ 30 ದಿನಗಳ ಚಂದಾದಾರಿಕೆಯನ್ನು ನೀಡಲಿದೆ. ಇನ್ನು ಈ ಪ್ಲಾನ್‌ಗೆ ಏರ್‌ಟೆಲ್ ಥ್ಯಾಂಕ್ಸ್ ಆಪ್ ಅಥವಾ ಯಾವುದೇ ಥರ್ಡ್ ಪಾರ್ಟಿ ರೀಚಾರ್ಜ್ ಪೋರ್ಟಲ್ ಮೂಲಕ ಎಂಟ್ರಿ ನೀಡಬಹುದಾಗಿದೆ. ಅಲ್ಲದೆ ಬಳಕೆದಾರರು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಕಂಟೆಂಟ್‌ಗೆ ಕೂಡ ಎಂಟ್ರಿ ಪಡೆದುಕೊಳ್ಳಬಹುದಾಗಿದೆ.

ಇನ್ನು ಈ ಪ್ಲಾನ್ ಮೂಲಕ ಆಂಡ್ರಾಯ್ಡ್ ಅಥವಾ ಐಒಎಸ್ ಮೊಬೈಲ್ ಡಿವೈಸ್‌ಗಳಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್‌ನ 30 ದಿನಗಳ ಚಂದಾದಾರಿಕೆಯನ್ನು ErosNow (Hindi), ManoramaMax (Malayalam) ಮತ್ತು Hoichoi (Bengali) OTT ಚಾನೆಲ್‌ಗಳ ನಡುವೆ ಆಯ್ಕೆ ಮಾಡಿಕೊಳ್ಳಬಹುದು. ಈ ಆಫರ್ ಅನ್ನು ಪಡೆಯಲು ಚಂದಾದಾರರು ತಮ್ಮ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್ ಅನ್ನು ಇತ್ತೀಚಿನ ಆವೃತ್ತಿಯನ್ನು ಅಪ್‌ಡೇಟ್ ಮಾಡಬೇಕಾಗಲಿದೆ.

ಇದಲ್ಲದೆ ಏರ್‌ಟೆಲ್ ಟೆಲಿಕಾಂ ಈಗಾಗಲೇ ತನ್ನ ಡಿಸ್ನಿ+ ಹಾಟ್ ಸ್ಟಾರ್ ಪ್ಲಾನ್‌ಗಳನ್ನು ಅಪ್ಡೇಟ್ ಮಾಡಿದೆ. ಇವುಗಳು 499, 699, 2798ರೂ ಬೆಲೆಯಲ್ಲಿ ಪ್ರಾರಂಭವಾಗಲಿದೆ. ಇದರಲ್ಲಿ 499ರೂ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಅನಿಯಮಿತ ಕರೆಗಳು, ದಿನಕ್ಕೆ 100 SMS ಮತ್ತು ಡೈಲಿ 3GB ಡೇಟಾ ಜೊತೆಗೆ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ಒಂದು ವರ್ಷದ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಹಾಗೆಯೇ ಏರ್‌ಟೆಲ್ 699ರೂ ಪ್ರಿಪೇಯ್ಡ್ ಪ್ಲಾನ್ ಡೈಲಿ 2GB ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಪ್ರತಿನಿತ್ಯ ನೂರು ಎಸ್‌ಎಂಎಸ್ ಅನ್ನು ನೀಡಲಿದೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ಮೂಲಕ ನೀವು ಒಂದು ವರ್ಷದವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಪ್ಲಾನ್ ಅನ್ನು ಪಡೆದುಕೊಳ್ಳಬಹುದು. ಇನ್ನು ಏರ್‌ಟೆಲ್ 2798ರೂ, ಪ್ರಿಪೇಯ್ಡ್ ಪ್ಲಾನ್ ವಾರ್ಷಿಕ ಪ್ಲಾನ್ ಆಗಿದೆ. ಇದರಲ್ಲಿ ದಿನಕ್ಕೆ 2GB ಡೇಟಾ, ಅನಿಯಮಿತ ಕರೆಗಳು, ದಿನನಿತ್ಯ ನೂರು ಎಸ್‌ಎಂಎಸ್ ಪ್ರಯೋಜನ ನೀಡಲಿದೆ. ಇದು ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.

ಇನ್ನು ಈಗಾಗಲೇ ಎಲ್ಲಾ ಟೆಲಿಕಾಂಗಳು ತಮ್ಮ ಎಂಟ್ರಿ ಲೆವೆಲ್ ಪ್ಲಾನ್‌ಗಳನ್ನು ಪರಿಷ್ಕರಿಸುತ್ತಿವೆ. ಏರ್‌ಟೆಲ್ ಮೂಲ ದರಗಳು ಶೀಘ್ರವೇ 99 ರೂ,ಗಳಿಂದ ಆರಂಭವಾಗುವ ನಿರೀಕ್ಷೆ ಇದೆ. ಈಗಾಗಲೇ ಹಲವು ಟೆಲಿಕಾಂ ಕಂಪನಿಗಳು ಕಳೆದ ತಿಂಗಳು ಸುಂಕ ಏರಿಕೆಯ ಪ್ರಕ್ರಿಯೆಯನ್ನು 49ರೂ. ಗಳಿಂದ 79ರೂ. ತನಕ ಹೆಚ್ಚಿಸಿವೆ. ಈಗಾಗಲೇ ಜಿಯೋ ಏರ್‌ಟೆಲ್ ವಿ ಟೆಲಿಕಾಂಗಳು ತನ್ನ ಬೇಸ್ ಪ್ಲಾನ್‌ನ ಬೆಲೆಯನ್ನು ಸಹ ಹೆಚ್ಚಳ ಮಾಡಿವೆ. ಇದರಲ್ಲಿ ಜಿಯೋ ತನ್ನ ಜಿಯೋಫೋನ್‌ನ ಎರಡು ಎಂಟ್ರಿ ಲೆವೆಲ್ ಪ್ರಿಪೇಯ್ಡ್ ಯೋಜನೆಗಳನ್ನು ನಿಲ್ಲಿಸಿದೆ. ಈ ಯೋಜನೆಗಳ ಬೆಲೆ 39ರೂ ಮತ್ತು 69ರೂ ಆಗಿದೆ. ಆದರೆ ಜಿಯೋಫೋನ್ ನೆಕ್ಸ್ಟ್ ಅನ್ನು ಲಾಂಚ್ ಮಾಡಿದ ನಂತರ ಜಿಯೋ ಹೊಸ ಯೋಜನೆಗಳನ್ನು ರೂಪಿಸುವ ಸಾಧ್ಯತೆಯಿದೆ.


Click it and Unblock the Notifications








