Home
ಸುದ್ದಿಜಾಲ

ಫೀಚರ್ ಫೋನ್ ರೀಚಾರ್ಜ್ ಪ್ಲಾನ್ ಬಿಡುಗಡೆಗೊಳಿಸಿದ ಏರ್ ಟೆಲ್

By Gizbot Bureau

ಟೆಲಿಕಾಂ ಆಪರೇಟರ್ ಏರ್ ಟೆಲ್ ಹೊಸದಾಗಿ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ದೀರ್ಘಾವಧಿ ವ್ಯಾಲಿಡಿಟಿ ಪ್ಲಾನ್ ನ್ನು ಪರಿಚಯಿಸಿದೆ. ರುಪಾಯಿ 597 ಕ್ಕೆ ದೀರ್ಘಾವಧಿ ವ್ಯಾಲಿಡಿಟಿ ಇರುವ ಹೊಸ ಪ್ರಿಪೇಯ್ಡ್ ಪ್ಲಾನ್ ನ್ನು ಏರ್ ಟೆಲ್ ಟೆಲಿಕಾಂ ಆಪರೇಟರ್ ಬಿಡುಗಡೆಗೊಳಿಸಿದೆ.

ಫೀಚರ್ ಫೋನ್ ರೀಚಾರ್ಜ್ ಪ್ಲಾನ್:

ಫೀಚರ್ ಫೋನ್ ರೀಚಾರ್ಜ್ ಪ್ಲಾನ್:

ಈ ಹೊಸ ಪ್ಲಾನ್ ಫೀಚರ್ ಫೋನ್ ಬಳಕೆದಾರರಿಗಾಗಿ ಏರ್ ಟೆಲ್ ಬಿಡುಗಡೆಗೊಳಿಸಿದೆ.ಹೊಸ ಪ್ಲಾನ್ ನ್ನು ಮೇರಾ ನಯಾ ಫೀಚರ್ ಫೋನ್ ರೀಚಾರ್ಜ್ ಪ್ಲಾನ್ ಎಂದು ಕರೆಯಲಾಗಿದೆ ಮತ್ತು ಇದು ದೀರ್ಘಾವಧಿ ವ್ಯಾಲಿಟಿಡಿಯನ್ನು ಜೊತೆಗೆ ಅನಿಯಮಿತ ಕರೆಗಳ ಬೆನಿಫಿಟ್ ನ್ನು ಹೊಂದಿರುತ್ತದೆ. ವರದಿಯು ತಿಳಿಸುವಂತೆ ಈ ಪ್ಲಾನ್ ಎಲ್ಲಾ ಟೆಲಿಕಾಂ ಸರ್ಕಲ್ ನಲ್ಲೂ ಕೂಡ ಲಭ್ಯವಿದೆ.

168 ದಿನಗಳ ವ್ಯಾಲಿಡಿಟಿ:

168 ದಿನಗಳ ವ್ಯಾಲಿಡಿಟಿ:

ಮೊದಲ ಬಾರಿಗೆ ಫೀಚರ್ ಫೋನ್ ಬಳಕೆದಾರರಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳು ಜೊತೆಗೆ 10ಜಿಬಿ ಡಾಟಾ 597 ರುಪಾಯಿ ಪ್ಲಾನಿನ ಅಡಿಯಲ್ಲಿ ಲಭ್ಯವಾಗುತ್ತದೆ. 168 ದಿನಗಳ ವ್ಯಾಲಿಡಿಟಿಯನ್ನು ಇದು ಹೊಂದಿದೆ.

ಪ್ಲಾನ್ ವಿವರ:

ಪ್ಲಾನ್ ವಿವರ:

10ಜಿಬಿ ಡಾಟಾ ಕೇವಲ ನಾನ್-4ಜಿ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರವೇ ಕೆಲಸ ಮಾಡುತ್ತದೆ. 300 ಎಸ್ಎಂಎಸ್ 28 ದಿನಗಳ ಅವಧಿಗೆ ಉಚಿತವಾಗಿ ಕಳುಹಿಸುವುದಕ್ಕೆ ಲಭ್ಯವಾಗುತ್ತದೆ. ಎಸ್ಎಂಎಸ್ ಪ್ಯಾಕ್ 28 ದಿನಗಳ ನಂತರ ಪುನಃ ರಿನಿವ್ಯೂ ಆಗುತ್ತದೆ.

ಸ್ಥಗಿತಗೊಂಡ ಪ್ಲಾನ್ ಗಳು:

ಸ್ಥಗಿತಗೊಂಡ ಪ್ಲಾನ್ ಗಳು:

ಇತ್ತೀಚೆಗೆ ಏರ್ ಟೆಲ್ ಕೆಲವು ಕಡಿಮೆ ಬೆಲೆಯ ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ನಿಲ್ಲಿಸಿತ್ತು. ಅದರಲ್ಲಿ 499 ರುಪಾಯಿಗಿಂತ ಕಡಿಮೆ ಬೆಲೆಯ ಪ್ಲಾನ್ ಗಳು ಸೇರಿದ್ದವು.ಕಂಪೆನಿಯು 229,399,649,1,199 ಮತ್ತು 2,999 ರುಪಾಯಿಯ ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ಕೂಡ ನಿಲ್ಲಿಸಿತ್ತು. ಇದೀಗ ನಾಲ್ಕು ಹೊಸ ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ಸರ್ವೀಸ್ ಪ್ರೊವೈಡರ್ ಏರ್ ಟೆಲ್ ಆಫರ್ ಮಾಡುತ್ತಿದೆ. ಅವುಗಳೆಂದರೆ 499, 749, 999 ಮತ್ತು 1,599 ರುಪಾಯಿಯ ಪ್ಲಾನ್ ಗಳಾಗಿವೆ.

ಏರ್ ಟೆಲ್ ಗೆ ನಷ್ಟ:

ಏರ್ ಟೆಲ್ ಗೆ ನಷ್ಟ:

ಎಕನಾಮಿಕ್ ಟೈಮ್ಸ್ ನ ವರದಿಯು ತಿಳಿಸುವ ಪ್ರಕಾರ ಏರ್ ಟೆಲ್ ಇದೀಗ

.ಹಣಕಾಸು ಒತ್ತಡವನ್ನು ಎದುರಿಸುತ್ತಿದೆ. ರಿಲಯನ್ಸ್ ಜಿಯೋ ಸಂಸ್ಥೆ ಮಾರುಕಟ್ಟೆಗೆ ಎಂಟ್ರಿ ಆದಾಗಿನಿಂದ ಏರ್ ಟೆಲ್ ನಷ್ಟವನ್ನು ಭಾರತದಲ್ಲಿ ಎದುರಿಸುತ್ತಿದೆ. ಒಟ್ಟಾರೆ ARPU ವನ್ನು ಅಧಿಕಗೊಳಿಸುವುದಕ್ಕೆ ಕಂಪೆನಿಯು ಹಲವು ಹೆಜ್ಜೆಗಳನ್ನು ಕೈಗೊಳ್ಳುತ್ತಿದೆ. ಕನಿಷ್ಟ ರೀಚಾರ್ಜ್ ಪ್ಲಾನ್ ಗಳನ್ನು ಕೂಡ ಪ್ರಿಪೇಯ್ಡ್ ಬಳಕೆದಾರರಿಗೆಗಾಗಿ ಏರ್ ಟೆಲ್ ಪರಿಚಯಿಸಿದೆ. ಇಂತಹ ಕೆಲವು ಪ್ಲಾನ್ ಗಳು ಏರ್ ಟೆಲ್ ಅಭಿವೃದ್ಧಿಗೆ ಕಾರಣವಾಗಿದೆ ಎಂದು ವರದಿ ತಿಳಿಸುತ್ತಿದೆ.

Best Mobiles in India

English summary
Airtel has launched a new prepaid plan for these users
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+