Home
ಸುದ್ದಿಜಾಲ

ಟೆಲಿಕಾಂ ವಲಯದಲ್ಲಿ ಸುನಾಮಿ ಎಬ್ಬಿಸಿದ ಏರ್‌ಟೆಲ್‌! ಏನಿದು ಏರ್‌ಟೆಲ್‌ ಅಡ್ವಾಂಟೇಜ್!

ದೇಶದ ಟೆಲಿಕಾಂ ವಲಯದಲ್ಲಿ ಭಾರ್ತಿ ಏರ್‌ಟೆಲ್‌ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ತನ್ನ ಚಂದದಾರರಿಗಾಗಿ ಹಲವು ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದರೊಂದಿಗೆ ವಿವಿಧ ರೀತಿಯ ಸೇವೆಗಳನ್ನು ಕೂಡ ಪರಿಚಯಿಸುತ್ತಿದೆ. ಅದರಂತೆ ಇದೀಗ ಹೊಸ "ಏರ್‌ಟೆಲ್ ಅಡ್ವಾಂಟೇಜ್" ಅನ್ನು ಪ್ರಾರಂಭಿಸಿದೆ.

ಹೌದು, ಏರ್‌ಟೆಲ್‌ ಟೆಲಿಕಾಂ "ಏರ್‌ಟೆಲ್ ಅಡ್ವಾಂಟೇಜ್" ಪ್ಲಾಟ್‌ಫಾರ್ಮ್‌ ಅನ್ನು ಅನಾವರಣಗೊಳಿಸಿದೆ. ಇದು ಆಟೋಮ್ಯಾಟಿಕ್‌ ಒನ್‌-ಸ್ಟಾಪ್‌ ಮೊದಲ-ರೀತಿಯ ಪ್ಲಾಟ್‌ಫಾರ್ಮ್ ಆಗಿದೆ. ಈ ಪ್ಲಾಟ್‌ಫಾರ್ಮ್ ಜಾಗತಿಕ ಇಂಟರ್‌ಕನೆಕ್ಟ್ ಪರಿಹಾರಗಳನ್ನು ನೀಡುತ್ತದೆ. ಇದು ನೇರ ಇಂಟರ್‌ಕನೆಕ್ಟ್ ಒದಗಿಸುವಿಕೆಯ ಮೂಲಕ ಸ್ಟ್ರೀಮ್‌ಲೈನ್ ಮಾಡಲು ಸಹಾಯ ಮಾಡುತ್ತದೆ ಎಂದು ಏರ್‌ಟೆಲ್‌ ಹೇಳಿದೆ. ಹಾಗಾದ್ರೆ ಏರ್‌ಟೆಲ್ ಅಡ್ವಾಂಟೇಜ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಕಾಂ ವಲಯದಲ್ಲಿ ಸುನಾಮಿ ಎಬ್ಬಿಸಿದ ಏರ್‌ಟೆಲ್‌! ಏನಿದು ಏರ್‌ಟೆಲ್‌ ಅಡ್ವಾಂಟೇಜ್

ಏರ್‌ಟೆಲ್‌ ಹೊಸದಾಗಿ ಏರ್‌ಟೆಲ್ ಅಡ್ವಾಂಟೇಜ್ ಪ್ಲಾಟ್‌ಫಾರ್ಮ್‌ ಪರಿಚಯಿಸುವ ಮೂಲಕ ಹೊಸ ಕ್ರಾಂತಿ ಬರೆಯುವ ಸೂಚನೆ ನೀಡಿದೆ. ಏಕೆಂದರೆ ಇದು ಇಂಟರ್‌ನ್ಯಾಷನಲ್ ವಾಯ್ಸ್, A2P, P2A, P2P SMS, ಡೈರೆಕ್ಟ್ ಇನ್‌ವರ್ಡ್ ಡಯಲಿಂಗ್ (DID) ಮತ್ತು ಇಂಟರ್ನ್ಯಾಷನಲ್ ಟೋಲ್ ಫ್ರೀ ಸರ್ವೀಸ್ (ITFS) ಅನ್ನು ನೀಡುತ್ತದೆ. ಇದರಿಂದ ಜಾಗತಿಕವಾಗಿ ವಾಹಕ ಪಾಲುದಾರರು ತಮ್ಮ ಸಂಪರ್ಕದ ಅಗತ್ಯತೆಗಳನ್ನು ಕೆಲವೇ ಕ್ಲಿಕ್‌ಗಳಲ್ಲಿ ಮನಬಂದಂತೆ ಪರಿಹರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ.

ಇನ್ನು ಏರ್‌ಟೆಲ್ ಅಡ್ವಾಂಟೇಜ್ ಪ್ಲಾಟ್‌ಫಾರ್ಮ್ ಇಂಟರ್‌ನ್ಯಾಷನಲ್ ವಾಯ್ಸ್ ಮತ್ತು ಎಸ್‌ಎಂಎಸ್ ಅನ್ನು ನೀಡುತ್ತದೆ. ನಂತರ ಡಿಐಡಿ ಮತ್ತು ಐಟಿಎಫ್‌ಎಸ್ ಅನ್ನು ಸೇರ್ಪಡೆ ಮಾಡಲಿದೆ ಎಂದು ಕಂಪನಿ ಹೇಳಿದೆ. ಅಂದರೆ ಏರ್‌ಟೆಲ್ ಅಡ್ವಾಂಟೇಜ್ ಏರ್‌ಟೆಲ್‌ನ ಜಾಗತಿಕ ನೆಟ್‌ವರ್ಕ್ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಡೈರೆಕ್ಟ್‌ ಇಂಟರ್‌ಕನೆಕ್ಟ್ ಮಾಡುವ ಮೂಲಕ ಸ್ಟ್ರೀಮ್‌ಲೈನ್ ಮಾಡಲು ಸಹಾಯ ಮಾಡಲಿದೆ. ಇದರಿಂದ ವೇಗವಾಗಿ ಗ್ರಾಹಕರ ಆನ್‌ಬೋರ್ಡಿಂಗ್ ಮತ್ತು ಮಲ್ಟಿ ಗ್ಲೋಬಲ್‌ ಲೊಕೇಶನ್‌ ಗಳಿಗೆ ತಡೆರಹಿತ ಇಂಟರ್‌ ಕನೆಕ್ಟ್‌ ಅನ್ನು ಆಕ್ಟಿವ್‌ ಮಾಡಲಿದೆ.

ಟೆಲಿಕಾಂ ವಲಯದಲ್ಲಿ ಸುನಾಮಿ ಎಬ್ಬಿಸಿದ ಏರ್‌ಟೆಲ್‌! ಏನಿದು ಏರ್‌ಟೆಲ್‌ ಅಡ್ವಾಂಟೇಜ್

ಇದರ ಮೂಲಕ ಗ್ರಾಹಕರು ಕಸ್ಟಮೈಸ್ ಮಾಡಿದ ವಿಶ್ಲೇಷಣಾ ಡ್ಯಾಶ್‌ಬೋರ್ಡ್‌ನಲ್ಲಿ ನೈಜ-ಸಮಯದ ಟ್ರಾಫಿಕ್ ಅಂಕಿಅಂಶಗಳನ್ನು ವೀಕ್ಷಿಸುವುದಕ್ಕೆ ಸಾಧ್ಯವಾಗಲಿದೆ. ಜೊತೆಗೆ ವಾಹಕಗಳು ಈಗ ತಮ್ಮ ಅನನ್ಯ ಅವಶ್ಯಕತೆಗಳ ಆಧಾರದ ಮೇಲೆ ಯಾವುದೇ ಸಂಪರ್ಕ ಸೇವೆಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಅಂದರೆ ಏರ್‌ಟೆಲ್ ಅಡ್ವಾಂಟೇಜ್ ಮೂಲಕ ಎಂಡ್ ಟು ಎಂಡ್ ಡಿಜಿಟೈಸ್ಡ್ ಜರ್ನಿ, ಸ್ವಿಫ್ಟ್ ಆನ್‌ಬೋರ್ಡಿಂಗ್ ಮತ್ತು ಇಂಟರ್‌ಕನೆಕ್ಟ್ ಆಯ್ಕೆಗಳು, ನೈಜ ಸಮಯದ ವಿಶ್ಲೇಷಣೆ, ಎಲ್ಲಾ ಸೇವೆಗಳಿಗೆ ಒಂದೇ ವಾಲೆಟ್ ಬಳಸುವುದಕ್ಕೆ ಅವಕಾಶ ನೀಡಲಿದೆ.

ಇನ್ನು ಏರ್‌ಟೆಲ್‌ ಟೆಲಿಕಾಂ ಇತ್ತೀಚಿಗೆ ನಡೆದ IMC 2023 ಈವೆಂಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದೆ. ಅದರಲ್ಲೂ ಏರ್‌ಟೆಲ್‌ ಟೆಲಿಕಾಂ ಮಾರ್ಚ್ 2024 ರ ವೇಳೆಗೆ ಇಡೀ ದೇಶದಲ್ಲಿ 5G ಅನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಏರ್‌ಟೆಲ್ ಈಗಾಗಲೇ ತನ್ನ 5G ಸೇವೆಗಳನ್ನು ಭಾರತದಾದ್ಯಂತ 5,000 ಪಟ್ಟಣಗಳು ಮತ್ತು ಸುಮಾರು 20,000 ಹಳ್ಳಿಗಳಲ್ಲಿ ಜಾರಿಗೆ ತಂದಿರುವುದಾಗಿಯು ಹೇಳಿಕೊಂಡಿದೆ. ಇನ್ನು ಭಾರತದಲ್ಲಿ 5G ನೆಟ್‌ವರ್ಕ್‌ ಅನ್ನು ವೇಗವಾಗಿ ಪಸರಿಸುವಲ್ಲಿ ಏರ್‌ಟೆಲ್‌ ಕಂಪನಿಯು ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.

ಟೆಲಿಕಾಂ ವಲಯದಲ್ಲಿ ಸುನಾಮಿ ಎಬ್ಬಿಸಿದ ಏರ್‌ಟೆಲ್‌! ಏನಿದು ಏರ್‌ಟೆಲ್‌ ಅಡ್ವಾಂಟೇಜ್

ಇನ್ನು ದೇಶದಾದ್ಯಂತ ಎಲ್ಲಾ ಗ್ರಾಮಗಳನ್ನು ಸಂಪರ್ಕದೊಂದಿಗೆ ಒಳಗೊಳ್ಳುವ ಸಲುವಾಗಿ, ಯುಟೆಲ್‌ಸ್ಯಾಟ್ ಒನ್‌ವೆಬ್ ಸಮೂಹ ಅನುಷ್ಠಾನ ಮಾಡುವ ಬಗ್ಗೆ ಏರ್‌ಟೆಲ್‌ ಹೇಳಿಕೊಂಡಿದೆ. ಅಲ್ಲದೆ ಇದರಲ್ಲಿ ಭಾರ್ತಿ ಏರ್‌ಟೆಲ್ ಅತಿದೊಡ್ಡ ಪಾಲನ್ನು ಹೊಂದಿದೆ. ಇದಕ್ಕಾಗಿ ಕಳೆದ ವರ್ಷ, ಏರ್‌ಟೆಲ್ 72 ಉಪಗ್ರಹಗಳನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೊಂದಿಗೆ ಸಹಕರಿಸಿದೆ. ಇದು ಒನ್‌ವೆಬ್ ಉಪಗ್ರಹ ಸಂವಹನವನ್ನು ಬಳಸುವುದಕ್ಕೆ ನಿರ್ಣಾಯಕವಾಗಿದೆ.

Best Mobiles in India

English summary
Airtel has launched Airtel Advantage digital platform: How to use?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+