ಜಿಯೋ ಫೈಬರ್‌ ಎಫೆಕ್ಟ್...ಏರ್‌ಟೆಲ್ 4ಜಿ ಹಾಟ್‌ಸ್ಪಾಟ್ ಮೇಲೆ ಬಂಪರ್ ಆಫರ್!

|

ಏರ್‌ಟೆಲ್ 4ಜಿ ಹಾಟ್‌ಸ್ಪಾಟ್ ಸಾಧನವನ್ನು ಖರೀದಿಸುವ ಎಲ್ಲಾ ಹೊಸ ಬಳಕೆದಾರರಿಗೆ ಹೆಚ್ಚು ಡೇಟಾ ಮತ್ತು ಕ್ಯಾಶ್‌ಬ್ಯಾಕ್ ನೀಡಿ ಏರ್‌ಟೆಲ್ ಗಮನಸೆಳೆದಿದೆ. ಟೆಲಿಕಾಂ ವರದಿಯ ಪ್ರಕಾರ, ಏರ್‌ಟೆಲ್ ತನ್ನ 4ಜಿ ಹಾಟ್‌ಸ್ಪಾಟ್ ಸಾಧನದ ಬೆಲೆಯನ್ನು ರೂ. 999 ರಿಂದ ರೂ. 2,000 ರೂ.ಗಳಿಗೆ ಹೆಚ್ಚಿಸಿದೆ. ಆದರೆ, ಹೊಸ ಬಳಕೆದಾರರು ಸಾಧನವನ್ನು ಖರೀದಿಸಿದರೆ 224 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 1.5 GB ಹೈ ಸ್ಪೀಡ್ ಡೇಟಾ ಮತ್ತು ಕ್ಯಾಶ್‌ಬ್ಯಾಕ್ ದೊರೆಯಲಿದೆ.

ಜಿಯೋ ಫೈಬರ್‌ ಎಫೆಕ್ಟ್...ಏರ್‌ಟೆಲ್ 4ಜಿ ಹಾಟ್‌ಸ್ಪಾಟ್ ಮೇಲೆ ಬಂಪರ್ ಆಫರ್!

ಹೌದು, ಜಿಯೋ ತನ್ನ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸೇವೆಯಾದ ಜಿಯೋ ಗಿಗಾ ಫೈಬರ್‌ನ ವಾಣಿಜ್ಯ ಉಡಾವಣೆಯನ್ನು ಘೋಷಿಸಿದ ನಂತರ ಇತ್ತೀಚಿನ ಬೆಳವಣಿಗೆ ಕಂಡುಬಂದಿದ್ದು, ಇದರ ಪರಿಣಾಮವಾಗಿಯೇ ಏರ್‌ಟೆಲ್ ತನ್ನ 4ಜಿ ಹಾಟ್‌ಸ್ಪಾಟ್ ಸಾಧನದ ಆಫರ್‌ನಲ್ಲಿ ಬದಲಾವಣೆ ಮಾಡಿದೆ. ಹೊಸದಾಗಿ ಏರ್‌ಟೆಲ್ 4G ಹಾಟ್‌ಸ್ಪಾಟ್ ಖರೀದಿಸುವ ಗ್ರಾಹಕರಿಗೆ 224 ದಿನಗಳು ದಿನಕ್ಕೆ 1.5 GB ಹೈ ಸ್ಪೀಡ್ ಡೇಟಾ ದೊರೆಯಲಿದೆ. ಪ್ರಿಪೇಯ್ಡ್ ಗ್ರಾಹಕರಿಗೆ ಈ ಆಫರ್ ದೊರೆತರೆ, ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಮತ್ತಷ್ಟು ಲಾಭವಿದೆ.

ಏರ್‌ಟೆಲ್ 4G ಹಾಟ್‌ಸ್ಪಾಟ್ ಖರೀದಿಸುವ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ 1,000 ರೂ. ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಈ ಕ್ಯಾಶ್‌ಬ್ಯಾಕ್ ಆಫರ್ ಪ್ರಯೋಜನ ಫೋಸ್ಟ್‌ಪೇಡ್ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಏರ್‌ಟೆಲ್ 4G ಹಾಟ್‌ಸ್ಪಾಟ್‌ಗೆ 2,000 ರೂ. ದರವಿದೆ. ಪೋಸ್ಟ್‌ಪೇಯ್ಡ್ ಗ್ರಾಹಕರು ಹೊಸ ಹಾಟ್‌ಸ್ಪಾಟ್ ಖರೀದಿಸುವಾಗ 399 ರೂ. ಮತ್ತು 499 ರೂ.ನ ಪ್ಲ್ಯಾನ್ ಪಡೆದುಕೊಳ್ಳಬಹುದು. ಇದರ ಜೊತೆಗೆ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ 1,000 ರೂ. ಕ್ಯಾಶ್‌ಬ್ಯಾಕ್ ವಾಪಸ್ ಸಿಗಲಿದೆ.

ಐಫೋನ್ 11 ಹೇಗಿರಲಿದೆ?..ರಿಲೀಸ್ ಡೇಟ್ ಯಾವುದು ಗೊತ್ತಾ?ಐಫೋನ್ 11 ಹೇಗಿರಲಿದೆ?..ರಿಲೀಸ್ ಡೇಟ್ ಯಾವುದು ಗೊತ್ತಾ?

ಏರ್‌ಟೆಲ್ 4ಜಿ ಹಾಟ್‌ಸ್ಪಾಟ್‌ಗಾಗಿ ಪ್ರಿಪೇಯ್ಡ್ ಯೋಜನೆ ಸಾಧನದೊಳಗೆ ಸಿಮ್ ಕಾರ್ಡ್ ಅನ್ನು ಸಕ್ರಿಯಗೊಳಿಸಿದ 48 ಗಂಟೆಗಳಿಂದ 224 ದಿನಗಳವರೆಗೆ ದಿನಕ್ಕೆ 1.5 ಜಿಬಿ ಡೇಟಾವನ್ನು ಒದಗಿಸುತ್ತದೆ. ಸಂಪೂರ್ಣ ಸಿಂಧುತ್ವಕ್ಕಾಗಿ ಒಟ್ಟು ಡೇಟಾವು 336GB ಡೇಟಾವನ್ನು ಸೇರಿಸುತ್ತದೆ. ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ರೂ. 399 ಅಥವಾ ರೂ. 499 ಯೋಜನೆಗಳಿದ್ದು, 399 ಅಲ್ಲಿ ತಿಂಗಳಿಗೆ 50 ಜಿಬಿ ಡೇಟಾವನ್ನು ಒದಗಿಸಲಾಗುತ್ತಿದೆ. ಇನ್ನು 499 ರೂ.ಗಳ ಎರಡನೇ ಯೋಜನೆಯು ತಿಂಗಳಿಗೆ 75 ಜಿಬಿ ಡೇಟಾವನ್ನು ನೀಡುತ್ತದೆ.

ಜಿಯೋಫೈಗಿಂತ ಭಿನ್ನವಾಗಿ ಏರ್‌ಟೆಲ್ 4 ಜಿ ಹಾಟ್‌ಸ್ಪಾಟ್ ಅನ್ನು 3 ಜಿ ನೆಟ್‌ವರ್ಕ್‌ಗೆ ಬದಲಾಯಿಸಬಹುದಾದ ವಿಶೇಷ ಪೀಚರ್ ಗ್ರಾಹಕರಿಗೆ ಸಿಗುತ್ತದೆ. ಹಾಗಾಗಿ, ಇದು ಪ್ರಯಾಣ ಮಾಡುವಾಗ ಸೂಕ್ತವಾಗಿ ಬಳಕೆಗೆ ಬರುತ್ತದೆ ಎಂದು ಹೇಳಬಹುದು. ಇನ್ನು ಏಕಕಾಲದಲ್ಲಿ 10 ಸಾಧನಗಳನ್ನು ಸಂಪರ್ಕಿಸಲು ನಿಮ್ಮನ್ನು ಅನುಮತಿಸುವ ಏರ್‌ಟೆಲ್ 4 ಜಿ ಹಾಟ್‌ಸ್ಪಾಟ್ ಸಾಧನದ ಬ್ಯಾಟರಿ 6 ಗಂಟೆಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.

Best Mobiles in India

English summary
According to the report, Airtel has also increased the prices of its 4G hotspot device from Rs. 999 to Rs. 2,000, which means new users will have to pay Rs 1,100 more to buy the device.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X