ಭಾರತದಲ್ಲಿ 5G ತಂತ್ರಜ್ಞಾನದ ಯಶಸ್ವಿ ಪರೀಕ್ಷೆ!!.ವಿಶ್ವಕ್ಕೆ ಸೆಡ್ಡು ಹೊಡೆದ ಭಾರತದ ಟೆಲಿಕಾಂ ಕಂಪೆನಿ!!

ಭಾರತದ ಖ್ಯಾತ ಟೆಲಿಕಾಂ ಸಂಸ್ಥೆ ಮತ್ತು ವಿಶ್ವದ ಮೊಬೈಲ್ ತಂತ್ರಜ್ಞಾನ ಸಂಸ್ಥೆ ಹುವಾವೆ ಕಂಪೆನಿಗಳು ಭಾರತದಲ್ಲಿ ಒಟ್ಟಾಗಿ ನಡೆಸಿದ 5ಜಿ ತಂತ್ರಜ್ಞಾನ ಪರೀಕ್ಷೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.!

|

2020ಕ್ಕೆ ಭಾರತ ಸೇರಿದಂತೆ ವಿಶ್ವದೆಲ್ಲೆಡೆ 5G ಸೇವೆ ಸಿಗಲಿದೆ ಎಂದು ವರದಿಗಳ ಬೆನ್ನಲ್ಲೆ ಭಾರತದಲ್ಲಿಯೇ 5G ತ್ರಂತ್ರಜ್ಞಾನದ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ಹೌದು, ವಿಶ್ವದ ಮಾಹಿತಿ ಸಂಪರ್ಕ ವೇಗದಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ ಎಂಬುದನ್ನು ಭಾರತದ ಟೆಲಿಕಾಂ ಕಂಪೆನಿಯೊಂದು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ. !!

ಭಾರತದಲ್ಲಿ 5G ತಂತ್ರಜ್ಞಾನದ ಯಶಸ್ವಿ ಪರೀಕ್ಷೆ!!.

ಭಾರತದ ಖ್ಯಾತ ಟೆಲಿಕಾಂ ಸಂಸ್ಥೆ ಮತ್ತು ವಿಶ್ವದ ಮೊಬೈಲ್ ತಂತ್ರಜ್ಞಾನ ಸಂಸ್ಥೆ ಹುವಾವೆ ಕಂಪೆನಿಗಳು ಭಾರತದಲ್ಲಿ ಒಟ್ಟಾಗಿ ನಡೆಸಿದ 5ಜಿ ತಂತ್ರಜ್ಞಾನ ಪರೀಕ್ಷೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.! ಹಾಗಾದರೆ, ಭಾರತದ ಮೊದಲ 5ಜಿ ತಂತ್ರಜ್ಞಾನ ಯಶಸ್ವಿ ಪರೀಕ್ಷೆ ನಡೆಸಿದ ಟೆಲಿಕಾಂ ಕಂಪೆನಿ ಯಾವುದು? ತಂತ್ರಜ್ಞಾನ ಪರೀಕ್ಷೆ ನಡೆದದ್ದು ಎಲ್ಲಿ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಭಾರತದ ಮೊದಲ 5G ಪರೀಕ್ಷೆ!!

ಭಾರತದ ಮೊದಲ 5G ಪರೀಕ್ಷೆ!!

ಇಡೀ ವಿಶ್ವದ ತಂತ್ರಜ್ಞಾನದ ಜತೆಯಲ್ಲಿಯೇ ಭಾರತ ಕೂಡ ಹೆಜ್ಜೆಹಾಕುತ್ತಿದೆ. ಹಾಗಾಗಿ, ಸರ್ಕಾರ ಸೇರಿದಂತೆ ಹಲವು ಕಂಪೆನಿಗಳು ಭಾರತದಲ್ಲಿ 5G ತಂತ್ರಜ್ಞಾನವನ್ನು ತರಲು ಪ್ರಯತ್ನಿಸುತ್ತಿದ್ದವು. ಇಂತಹ ಪರೀಕ್ಷೆಯಲ್ಲಿ ಭಾರತದ ಟೆಲಿಕಾಂ ಕಂಪೆನಿಯೊಂದು ಯಶಸ್ವಿಯಾಗಿ 5G ತಂತ್ರಜ್ಞಾನವನ್ನು ಪರೀಕ್ಷೆ ನಡೆಸಿದೆ.!!

5ಜಿ ತಂತ್ರಜ್ಞಾನ ಪರೀಕ್ಷೆ ನಡೆಸಿದ್ದು ಏರ್‌ಟೆಲ್!!

5ಜಿ ತಂತ್ರಜ್ಞಾನ ಪರೀಕ್ಷೆ ನಡೆಸಿದ್ದು ಏರ್‌ಟೆಲ್!!

ಭಾರತದಲ್ಲಿ ಮೊದಲ 5G ತಂತ್ರಜ್ಞಾನ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದು ಭಾರ್ತಿ ಏರ್‌ಟೆಲ್ ನೆಟ್‌ವರ್ಕ್.!! ಈ ಬಗ್ಗೆ ಸ್ವತಃ ಭಾರ್ತಿ ಏರ್‌ಟೆಲ್ ನೆಟ್‌ವರ್ಕ್ ನಿರ್ದೇಶಕರಾದ ಅಭಯ್ ಸಾವರ್ಗಾಂವ್ಕರ್ ಅವರು ಸಂತಸ ಹಂಚಿಕೊಂಡಿದ್ದು, 5ಜಿ ತಂತ್ರಜ್ಞಾನ ಸೇವೆ ಆರಂಭಕ್ಕೆ ನಾವು ಕಾರ್ಯಾರಂಭ ಮಾಡಿರುವುದಾಗಿ ಹೇಳಿದ್ದಾರೆ.!!

ಪರೀಕ್ಷೆ ನಡೆದದ್ದು ಎಲ್ಲಿ?!

ಪರೀಕ್ಷೆ ನಡೆದದ್ದು ಎಲ್ಲಿ?!

ಇದೇ ಶುಕ್ರವಾರ ನಡೆದ ದೇಶದ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ,ಮಾಧ್ಯಮ ಮೂಲಗಳ ಪ್ರಕಾರ. ಗುರುಗ್ರಾಮದ ಮನೇಸರ್ ನಲ್ಲಿರುವ ಏರ್‌ಟೆಲ್ ನೆಟ್‌ವರ್ಕ್ ಕೇಂದ್ರದಲ್ಲಿ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆಯನ್ನು ನಡೆಸಲಾಗಿದೆ.!!

ಯಶಸ್ವಿ 5G ವೇಗ ಎಷ್ಟು?

ಯಶಸ್ವಿ 5G ವೇಗ ಎಷ್ಟು?

ಏರ್‌ಟೆಲ್ ಮತ್ತು ಹುವಾವೆ ಕಂಪೆನಿಗಳು ಸೇರಿ 3.5ಗಿಗಾಹರ್ಟ್ಜ್ ಜೊತೆಗೆ 100ಮೆಗಾಹರ್ಟ್ಜ್ ಬ್ಯಾಂಡ್ ವಿಡ್ತ್ ಅನ್ನು ನಿನ್ನೆ ಪರೀಕ್ಷೆ ಮಾಡಿವೆ. ಪ್ರಸ್ತುತ ಯಶಸ್ವಿಯಾಗಿ ಪರೀಕ್ಷೆಯಾಗಿರುವ 5ಜಿ ಪ್ರತಿ ಸೆಕೆಂಡ್‌ಗೆ 3GBPSನಷ್ಟಿದೆ ಎಂದು ಹೇಳಲಾಗಿದೆ. ಅಂದರೆ, ಈಗಿರುವ ಡೇಟಾ ಸ್ಪೀಡ್‌ಗಿಂತ ಹಲವು ಪಟ್ಟು ಹೆಚ್ಚು.!!

ಹುವಾವೆ ಸಹಯೋಗ!!

ಹುವಾವೆ ಸಹಯೋಗ!!

ಭಾರತದಲ್ಲಿ ಮೊದಲ 5G ತಂತ್ರಜ್ಞಾನ ಪರೀಕ್ಷೆಯನ್ನು ಯಶಸ್ವಿಯಾಗುವಲ್ಲಿ ಏರ್‌ಟೆಲ್ ಕಂಪೆನಿಗೆ ಚೀನಾದ ಹುವಾವೆ ಕಂಪೆನಿ ಜತೆ ನಿಂತಿದೆ.5ಜಿ ತಂತ್ರಜ್ಞಾನ ಸೇವೆ ಆರಂಭಕ್ಕೆ ನಾವು ಕಾರ್ಯಾರಂಭ ಮಾಡಿದ್ದು, ನಮ್ಮ ಸಹಭಾಗಿತ್ವ ಸಂಸ್ಥೆಗಳೊಂದಿಗೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಏರ್‌ಟೆಲ್ ವಕ್ತಾರರು ತಿಳಿಸಿದ್ದಾರೆ.!!

Best Mobiles in India

English summary
Friday announced to have successfully conducted 5G network trial under a test set-up in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X