ಏರ್‌ಟೆಲ್‌ನಿಂದ ಇನ್‌ಪ್ಲೈಟ್ ರೋಮಿಂಗ್ ಪ್ಲಾನ್ ಘೋಷಣೆ: ಏನೆಲ್ಲಾ ಪ್ರಯೋಜನಗಳು
ಟೆಲಿಕಾಂ ದೈತ್ಯ ಕಂಪೆನಿಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್ ಭಾರತದಲ್ಲಿ ಇನ್-ಫ್ಲೈಟ್ ರೋಮಿಂಗ್ ಪ್ಯಾಕ್‌ಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಹೊಸ ರೋಮಿಂಗ್ ಪ್ಯಾಕ್‌ಗಳು ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ಈ ಹೊಸ ಇನ್-ಫ್ಲೈಟ್ ರೋಮಿಂಗ್ ಪ್ಲಾನ್‌ಗಳು ಏರ್‌ಟೆಲ್ ಗ್ರಾಹಕರು ಫ್ಲೈಟ್‌ನಲ್ಲಿರುವಾಗ ಸಂಪರ್ಕದಲ್ಲಿರಲು ಸಹಾಯ ಮಾಡಲಿದೆ.
ಹೌದು, ಏರ್‌ಟೆಲ್ ಟೆಲಿಕಾಂ ಭಾರತದಲ್ಲಿ ಹೊಸದಾಗಿ ಇನ್-ಫ್ಲೈಟ್ ರೋಮಿಂಗ್ ಪ್ಯಾಕ್‌ಗಳನ್ನು ಪರಿಚಯಿಸಿದೆ. ಈ ಮೂಲಕ ಪ್ಲೈಟ್‌ನಲ್ಲಿರುವಾಗಲೂ ಸಂಪರ್ಕದಲ್ಲಿರುವುದಕ್ಕೆ ಸಹಾಯ ಮಾಡಲಿದೆ. ಇದರಿಂದ ಸಾವಿರಾರು ಅಡಿ ಎತ್ತರದಲ್ಲಿರುವಾಗಲೂ ಹೆಚ್ಚಿನ ವೇಗದ ಇಂಟರ್‌ನೆಟ್ ಬ್ರೌಸಿಂಗ್ ಆನಂದಿಸುವುದಕ್ಕೆ ಸಾಧ್ಯವಾಗಲಿದೆ. ಹಾಗಾದ್ರೆ ಏರ್‌ಟೆಲ್ ಇನ್‌ಪ್ಲೈಟ್ ರೋಮಿಂಗ್ ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ ಇನ್‌ಪ್ಲೈಟ್ ರೋಮಿಂಗ್ ಪ್ಲಾನ್ ವಿಶೇಷ
ಏರ್‌ಟೆಲ್ ಟೆಲಿಕಾಂನ ಇನ್‌ಪ್ಲೈಟ್ ರೋಮಿಂಗ್ ಪ್ಲಾನ್ ವಿಮಾನ ಪ್ರಯಾಣಿಕರಿಗೆ ಸಾಕಷ್ಟು ಉಪಯುಕ್ತವಾಗಿದೆ. ಈ ಪ್ಲಾನ್ ಮೂಲಕ ಸಾವಿರಾರು ಅಡಿ ಎತ್ತರದಲ್ಲಿರುವಾಗ ಗ್ರಾಹಕರು ಹೆಚ್ಚಿನ ವೇಗದ ಇಂಟರ್‌ನೆಟ್ ಬ್ರೌಸಿಂಗ್ ಅನ್ನು ಆನಂದಿಸಬಹುದು. ಅಲ್ಲದೆ ಇತರ ಚಟುವಟಿಕೆಗಳನ್ನು ಮಾಡಬಹುದು ಎಂದು ಏರ್‌ಟೆಲ್ ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ಏರ್‌ಟೆಲ್ ನೆಟ್‌ವರ್ಕ್ ವಿಮಾನದಲ್ಲಿ ಸಂಪರ್ಕವನ್ನು ನೀಡಲು ಏರೋಮೊಬೈಲ್‌ನೊಂದಿಗೆ ಒಪ್ಪಂದವನ್ನು ಸಹ ಮಾಡಿಕೊಂಡಿದೆ.
ಇನ್ನು 19 ಕ್ಕೂ ಹೆಚ್ಚು ವಿಮಾನಯಾನ ಸಂಸ್ಥೆಗಳು ವಿವಿಧ ಅಂತರಾಷ್ಟ್ರೀಯ ವಲಯಗಳಲ್ಲಿ ಹಾರಾಟ ನಡೆಸುವುದರೊಂದಿಗೆ ಇನ್-ಫ್ಲೈಟ್ ಸಂಪರ್ಕವು ಲಭ್ಯವಿದೆ. ಇದಕ್ಕಾಗಿ ಏರ್‌ಟೆಲ್ ಕಂಪನಿಯು ಮೀಸಲಾದ 24 x 7 ಸಂಪರ್ಕ ಕೇಂದ್ರವನ್ನು ಸಹ ಸ್ಥಾಪಿಸಿದೆ, ಇದು WhatsApp ಮೂಲಕ ಬೆಂಬಲವನ್ನು ನೀಡುತ್ತದೆ. ನೀವು +919910099100 ಗೆ ಸಂದೇಶವನ್ನು ಕಳುಹಿಸುವ ಮೂಲಕ WhatsApp ಮೂಲಕ ಮೀಸಲಾದ ಬೆಂಬಲವನ್ನು ಪ್ರವೇಶಿಸಬಹುದಾಗಿದೆ.
ಇದಲ್ಲದೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೇಟಾ ಬಳಕೆಯನ್ನು ನಿರ್ವಹಿಸಲು ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ಖರೀದಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ನೀವು 3,999ರೂ ಕ್ಕಿಂತ ಹೆಚ್ಚಿನ ಬೆಲೆಯ ರೋಮಿಂಗ್ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿದ ಪೋಸ್ಟ್‌ಪೇಯ್ಡ್ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಇನ್-ಫ್ಲೈಟ್ ರೋಮಿಂಗ್ ಪ್ಯಾಕ್‌ಗಳಿಗೆ ಸ್ವಯಂಚಾಲಿತವಾಗಿ ಅರ್ಹರಾಗುತ್ತಾರೆ ಎಂದು ಏರ್‌ಟೆಲ್ ನೆಟ್‌ವರ್ಕ್ ಖಚಿತಪಡಿಸಲಿದೆ.

ಇನ್ನು 2,997ರೂ ಕ್ಕಿಂತ ಹೆಚ್ಚಿನ ಬೆಲೆಯ ರೋಮಿಂಗ್ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿದ ಪ್ರಿಪೇಯ್ಡ್ ಗ್ರಾಹಕರು ಸಹ ಇನ್-ಫ್ಲೈಟ್ ರೋಮಿಂಗ್ ಪ್ಯಾಕ್‌ಗಳಿಗೆ ಅರ್ಹರಾಗಿರುತ್ತಾರೆ. ಈ ಯೋಜನೆಗಳು ಸೀಮಿತ ಪ್ರಮಾಣದ ಡೇಟಾ, ಹೊರಹೋಗುವ ಕರೆಗಳು ಮತ್ತು ಹೊರಹೋಗುವ SMS ಅನ್ನು ಸೀಮಿತ ಮಾನ್ಯತೆಯೊಂದಿಗೆ ಬರಲಿದೆ. ಇದಲ್ಲದೆ ವಿಮಾನದೊಳಗಿನ ಯೋಜನೆಗಳು ಸಾಮಾನ್ಯವಾಗಿ ಉಚಿತ ಇಂಟರ್ನೆಟ್ ಆನ್‌ಬೋರ್ಡ್ ಅನ್ನು ಸ್ವೀಕರಿಸದ ಇಂಟರ್‌ನೆಟ್ ಅನ್ನು ಸರ್ಫ್ ಮಾಡುವುದಕ್ಕೆ ಸಾಧ್ಯವಾಗಲಿದೆ.
ಏರ್‌ಟೆಲ್ ಇನ್‌ಪ್ಲೈಟ್ ರೋಮಿಂಗ್ ಪ್ಲಾನ್ ಸೇವೆಯನ್ನು ಪ್ರವೇಶಿಸುವುದು ಹೇಗೆ?
ಮೊದಲಿಗೆ ಸ್ಮಾರ್ಟ್‌ಫೋನ್‌ನಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಆಫ್ ಮಾಡಿ ಮತ್ತು ಸೆಟ್ಟಿಂಗ್‌ಗಳಲ್ಲಿ ಡೇಟಾ ರೋಮಿಂಗ್ ಅನ್ನು ಆನ್ ಮಾಡಿ. ಸ್ಮಾರ್ಟ್‌ಫೋನ್ ಸ್ವಯಂಚಾಲಿತವಾಗಿ ಏರೋಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕಗೊಳ್ಳುತ್ತದೆ. ನೆಟ್‌ವರ್ಕ್ ಸ್ವಯಂಚಾಲಿತವಾಗಿ ಸಂಪರ್ಕಗೊಳ್ಳದಿದ್ದರೆ ಅದನ್ನು ಹಸ್ತಚಾಲಿತವಾಗಿ ಆಯ್ಕೆ ಮಾಡಬೇಕಾಗುತ್ತದೆ.
ಏರ್‌ಟೆಲ್ ಇನ್‌ಪ್ಲೈಟ್ ರೋಮಿಂಗ್ ಪ್ಲಾನ್‌ಗಳಲ್ಲಿ ಏರ್‌ಟೆಲ್ 195ರೂ, 295ರೂ ಮತ್ತು 595ರೂ ಮೂರು ಹೊಸ ಪ್ಲಾನ್‌ಗಳನ್ನು ಪರಿಚಯಿಸಿದೆ. ಪ್ರೀಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರಿಗಾಗಿ ಭಾರತದಲ್ಲಿ ಏರ್‌ಟೆಲ್ ಪರಿಚಯಿಸಿರುವ ಪ್ಲಾನ್‌ನ ಸಂಪೂರ್ಣ ವಿವರಗಳು ಇಲ್ಲಿವೆ.
195ರೂ ಏರ್‌ಟೆಲ್ ಇನ್‌ಪ್ಲೈಟ್ ರೋಮಿಂಗ್ ಪ್ಲಾನ್
ಈ ಪ್ಲಾನ್ 250MB ಡೇಟಾವನ್ನು ನೀಡಲಿದ್ದು, 100 ನಿಮಿಷಗಳ ಔಟ್ ಗೋಯಿಂಗ್ ಕರೆಗಳ ಸೌಲಭ್ಯ ನೀಡಲಿದೆ. ಇದರಲ್ಲಿ 100 SMS ಪ್ರಯೋಜನ ಕೂಡ ದೊರೆಯಲಿದ್ದು, 24 ಗಂಟೆಗಳ ಮಾನ್ಯತೆಯನ್ನು ಹೊಂದಿದೆ.
295ರೂ ಏರ್‌ಟೆಲ್ ಇನ್‌ಪ್ಲೈಟ್ ರೋಮಿಂಗ್ ಪ್ಲಾನ್
ಈ ಪ್ಲಾನ್‌ನಲ್ಲಿ ನಿಮಗೆ 500MB ಡೇಟಾ ಪ್ರಯೋಜನ ಸಿಗಲಿದೆ. ಇದು 100 ನಿಮಿಷಗಳ ಹೊರ ಕರೆಗಳ ಸೌಲಭ್ಯ ಕೂಡ ದೊರೆಯಲಿದ್ದು, 100 SMS ಪ್ರಯೋಜನ ಸಿಗಲಿದೆ. ಈ ಪ್ಲಾನ್ ಕೂಡ 24 ಗಂಟೆಗಳ ಅವಧಿ ಮಾನ್ಯತೆಯನ್ನು ಹೊಂದಿದೆ.
595ರೂ ಏರ್‌ಟೆಲ್ ಇನ್‌ಪ್ಲೈಟ್ ರೋಮಿಂಗ್ ಪ್ಲಾನ್
595ರೂ ಏರ್‌ಟೆಲ್ ಇನ್‌ಪ್ಲೈಟ್ ರೋಮಿಂಗ್ ಪ್ಲಾನ್ ನಿಮಗೆ 1GB ಡೇಟಾ ಸೌಲಭ್ಯ ನೀಡಲಿದ್ದು, 100 ನಿಮಿಷಗಳ ಹೊರ ಹೋಗುವ ಕರೆ ಪ್ರಯೋಜನ ನೀಡಲಿದೆ. ಅಲ್ಲದೆ 100 SMS ಸೌಲಭ್ಯ ನೀಡಲಿದ್ದು, 24 ಗಂಟೆಗಳ ಮಾನ್ಯತೆಯನ್ನು ಪಡೆದಿದೆ.


Click it and Unblock the Notifications








