Home
ಸುದ್ದಿಜಾಲ

ಏರ್‌ಟೆಲ್‌ನಿಂದ ಹೊಸ ಪ್ಲಾನ್ಸ್‌..! 90 ದಿನ 126GB ಡೇಟಾ..!

ಭಾರತೀಯ ಟೆಲಿಕಾಂ ಕ್ಷೇತ್ರವನ್ನು ಆಳುತ್ತಿರುವ ಮುಖೇಶ್‌ ಅಂಬಾನಿ ಮಾಲೀಕತ್ವದ ರಿಲಾಯನ್ಸ್‌ ಜಿಯೋಗೆ ಮತ್ತೊಂದು ಏಟು ನೀಡಲು ಭಾರತದ ನಂ.2 ಟೆಲಿಕಾಂ ನೆಟ್‌ವರ್ಕ್‌ ಭಾರ್ತಿ ಏರ್‌ಟೆಲ್‌ ಹೊಸ ಪ್ಲಾನ್‌ಗಳನ್ನು ಘೋಷಿಸಿದ್ದು, ದರ ಸಮರವನ್ನು ಮುಂದುವರೆಸಿದೆ. ಹೊಸ 5 ಪ್ಲಾನ್‌ಗಳನ್ನು ಘೋಷಿಸಿರುವ ಏರ್‌ಟೆಲ್‌ ಗ್ರಾಹಕರನ್ನು ಸೆಳೆಯಲು ಪ್ರಯತ್ನ ಮುಂದುವರೆಸಿದೆ.

ಏರ್‌ಟೆಲ್‌ನಿಂದ ಹೊಸ ಪ್ಲಾನ್ಸ್‌..! 90 ದಿನ 126GB ಡೇಟಾ..!

ಭಾರ್ತಿ ಏರ್‌ಟೆಲ್‌ ರೂ.178 ರಿಂದ ರೂ.559ರವರೆಗೆ ಪ್ಲಾನ್‌ಗಳನ್ನು ಘೋಷಿಸಿದ್ದು, ಎಲ್ಲವೂ ಮೊದಲ ರೀಚಾರ್ಜ್‌ಗಳಾಗಿವೆ. ಈ ಆಫರ್‌ಗಳು 28 ದಿನಗಳಿಂದ 90 ದಿನಗಳವರೆಗೂ ವ್ಯಾಲಿಡಿಟಿ ಹೊಂದಿದ್ದು, ಅನಿಯಮಿತ ಕರೆ ಹಾಗೂ 1.4GB ಡೇಟಾವನ್ನು ನೀಡುತ್ತಿದೆ. ಇದರ ಜತೆ ವೊಡಾಫೋನ್‌, ಐಡಿಯಾ ಮತ್ತು ಏರ್‌ಟೆಲ್‌ ಮೂರು ಆಪರೇಟರ್‌ಗಳು ಒಂದೇ ರೀತಿಯ ಆಫರ್‌ ಘೋಷಿಸಿ ಜಿಯೋವನ್ನು ಮಣಿಸಲು ಕಾರ್ಯತಂತ್ರ ಹೂಡಿವೆ. ಹಾಗಾದ್ರೆ ಹೊಸ ಪ್ಲಾನ್‌ಗಳು ಏನೆಲ್ಲಾ ಅಂಶಗಳನ್ನು ಹೊಂದಿವೆ ಎಂಬುದನ್ನು ನೋಡಿ.

ರೂ.178 ಪ್ಲಾನ್‌

ರೂ.178 ಪ್ಲಾನ್‌

ಏರ್‌ಟೆಲ್‌ನ ರೂ.178 ಪ್ಲಾನ್‌ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅನಿಯಮಿತ ಸ್ಥಳೀಯ ಹಾಗೂ ಎಸ್‌ಟಿಡಿ ಕರೆಗಳು ಅನಿಯಮಿತ ರೋಮಿಂಗ್‌ ಜತೆ ದೊರೆಯುತ್ತಿವೆ. ಅದಲ್ಲದೇ ದಿನಕ್ಕೆ 100 SMS ಉಚಿತವಾಗಿ ದೊರೆಯಲಿದೆ. ಜತೆಗೆ 1GB 3G/4G ಡೇಟಾವನ್ನು ಪಡೆಯಲಿದ್ದಾರೆ. ಈಗಿರುವ ಗ್ರಾಹಕರಿಗೂ ರೂ.149 ಪ್ಲಾನ್‌ ಇದೇ ಅಂಶಗಳೊಂದಿಗೆ ದೊರೆಯುತ್ತಿದೆ. ಆದರೆ, ಈ ಪ್ಲಾನ್‌ ಕೆಲವೇ ಗ್ರಾಹಕರಿಗೆ ಸೀಮಿತವಾಗಿದೆ.

ರೂ.229 ಪ್ಲಾನ್‌

ರೂ.229 ಪ್ಲಾನ್‌

ಈ ಪ್ಲಾನ್‌ನಲ್ಲಿ 28 ದಿನಗಳಿಗೆ ರೂ.178 ಪ್ಲಾನ್‌ನಂತೆಯೇ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಅನಿಯಮಿತ ರೋಮಿಂಗ್‌ ಜತೆ ದೊರೆಯಲಿವೆ. ಉಚಿತ 100 ಎಸ್‌ಎಂಎಸ್‌ ಕೂಡ ಲಭ್ಯವಿದ್ದು, ಈ ಪ್ಲಾನ್‌ನಲ್ಲಿ ದಿನಕ್ಕೆ 1GB ಡೇಟಾ ಬದಲಾಗಿ 1.4GB ಡೇಟಾ ಗ್ರಾಹಕರಿಗೆ ಸಿಗಲಿದೆ. ಈಗಾಗಲೇ ಇರುವ ಗ್ರಾಹಕರಿಗೆ ರೂ.199 ಪ್ಲಾನ್‌ನಲ್ಲಿ ಈ ಎಲ್ಲಾ ಸೌಲಭ್ಯಗಳು ದೊರೆಯಲಿವೆ.

ರೂ.344 ಪ್ಲಾನ್‌

ರೂ.344 ಪ್ಲಾನ್‌

ಈ ಪ್ಲಾನ್‌ನಲ್ಲಿ ಡೇಟಾ ಹೊರತಾಗಿ ಎಲ್ಲಾ ಅಂಶಗಳು ಸಮನಾಗಿ ಗ್ರಾಹಕರಿಗೆ ಸಿಗಲಿವೆ. ಅಂದರೆ, ಅನಿಯಮಿತ ಕರೆ ಹಾಗೂ ಉಚಿತ ಎಸ್‌ಎಂಎಸ್‌ಗಳು 28 ದಿನಗಳ ವ್ಯಾಲಿಡಿಟಿಯಲ್ಲಿ ಸಿಗಲಿವೆ. ಆದರೆ, ಗ್ರಾಹಕನು ಪ್ರತಿದಿನ 2GB ಡೇಟಾ ಪಡೆಯಲಿದ್ದಾನೆ.

ರೂ.495 ಮತ್ತು ರೂ.559 ಪ್ಲಾನ್‌

ರೂ.495 ಮತ್ತು ರೂ.559 ಪ್ಲಾನ್‌

ರೂ.495 ಮತ್ತು ರೂ.559 ಪ್ಲಾನ್‌ಗಳು ವ್ಯಾಲಿಡಿಟಿಯೊಂದನ್ನು ಬಿಟ್ಟು ಉಳಿದೆಲ್ಲಾ ಅಂಶಗಳಲ್ಲಿ ಸಾಮ್ಯತೆಯನ್ನು ಹೊಂದಿದೆ. ಎರಡು ಆಫರ್‌ಗಳು 1.4GB ಡೇಟಾವನ್ನು ನೀಡುತ್ತಿದ್ದು, ಅನಿಯಮಿತ ಸ್ಥಳೀಯ ಹಾಗೂ ಎಸ್‌ಟಿಡಿ ಕರೆಗಳನ್ನು ಅನಿಯಮಿತ ರೋಮಿಂಗ್‌ ಜತೆ ನೀಡುತ್ತಿದೆ. ಅದಲ್ಲದೇ 100 ಉಚಿತ ಎಸ್‌ಎಂಎಸ್‌ಗಳನ್ನು ಗ್ರಾಹಕರು ಪಡೆಯಲಿದ್ದಾರೆ. ರೂ.495 ಪ್ಲಾನ್‌ 84 ದಿನಗಳ ವ್ಯಾಲಿಡಿಟಿ ಹೊಂದಿದ್ದರೆ, ರೂ.559 ಪ್ಲಾನ್‌ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಯಾರಿಗೆ ಲಭ್ಯ..?

ಯಾರಿಗೆ ಲಭ್ಯ..?

ಮೇಲಿನ ಎಲ್ಲಾ ಪ್ಲಾನ್‌ಗಳು ಹೊಸ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಅಂದರೆ ಹೊಸ ಸಿಮ್‌ ಕಾರ್ಡ್‌ ತೆಗೆದುಕೊಂಡಾಗ ಅಥವಾ ಬೇರೆ ನೆಟ್‌ವರ್ಕ್‌ನಿಂದ ಪೋರ್ಟ್‌ ಆದಾಗ ಮಾಡುವ ರೀಚಾರ್ಜ್‌ ಪ್ಲಾನ್‌ಗಳಾಗಿವೆ. ಇವುಗಳನ್ನು ಏರ್‌ಟೆಲ್‌ ವೆಬ್‌ಸೈಟ್‌ ಅಥವಾ ಮೈ ಏರ್‌ಟೆಲ್‌ ಆಪ್‌ನಿಂದ ರೀಚಾರ್ಜ್‌ ಮಾಡಿಕೊಳ್ಳಬಹುದಾಗಿದೆ.

ಏರ್‌ಟೆಲ್‌, ವೊಡಾಫೋನ್‌ ಐಡಿಯಾ ರೂ.35 ಪ್ಲಾನ್‌

ಏರ್‌ಟೆಲ್‌, ವೊಡಾಫೋನ್‌ ಐಡಿಯಾ ರೂ.35 ಪ್ಲಾನ್‌

ಜಿಯೋವನ್ನು ಮಣಿಸಲುಮೂರು ಆಪರೇಟರ್‌ಗಳು ರೂ.35ರ ಪ್ಲಾನ್‌ ಪರಿಚಯಿಸಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್‌ನಲ್ಲಿ 100MB 3G/4G ಡೇಟಾವನ್ನು ಗ್ರಾಹಕರು ಪಡೆಯಲಿದ್ದು, ವೊಡಾಫೋನ್‌ ಮತ್ತು ಐಡಿಯಾ ರೂ.26 ಟಾಕ್‌ಟೈಮ್‌ ನೀಡಿದರೆ, ಏರ್‌ಟೆಲ್‌ ರೂ.26.66 ಟಾಕ್‌ಟೈಮ್‌ ನೀಡುತ್ತಿದೆ.

ಏರ್‌ಟೆಲ್‌, ವೊಡಾಫೋನ್‌ ಐಡಿಯಾ ರೂ.65 ಪ್ಲಾನ್‌

ಏರ್‌ಟೆಲ್‌, ವೊಡಾಫೋನ್‌ ಐಡಿಯಾ ರೂ.65 ಪ್ಲಾನ್‌

ರೂ.65ರ ಪ್ಲಾನ್‌ನ್ನು ಮೂರು ಆಪರೇಟರ್‌ಗಳು ಪರಿಚಯಿಸಿದ್ದು, ರೂ. 55 ಟಾಕ್‌ಟೈಮ್‌ ನೀಡುತ್ತಿವೆ. ಈ ಪ್ಲಾನ್‌ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, 200MB 3G/4G ಡೇಟಾವನ್ನು ನೀಡಲಿದೆ. ಈ ಪ್ಲಾನ್‌ ಮೂಲಕ ಎಲ್ಲಾ ಹೊರ ಹೋಗುವ ಕರೆಗಳು ಸೆಕೆಂಡ್‌ಗೆ 1ಪೈಸೆಯಾಗಲಿವೆ.

ಏರ್‌ಟೆಲ್‌, ವೊಡಾಫೋನ್‌ ಐಡಿಯಾ ರೂ.95 ಪ್ಲಾನ್‌

ಏರ್‌ಟೆಲ್‌, ವೊಡಾಫೋನ್‌ ಐಡಿಯಾ ರೂ.95 ಪ್ಲಾನ್‌

ರೂ.95 ರೀಚಾರ್ಜ್‌ ಪ್ಲಾನ್‌ನ್ನು ಮೂರು ಆಪರೇಟರ್‌ಗಳು ಜಿಯೋ ಎದುರಾಗಿ ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರು 500MB ಡೇಟಾವನ್ನು ಪಡೆಯಲಿದ್ದು, ಕರೆಗಳು ನಿಮಿಷಕ್ಕೆ 30 ಪೈಸೆ ದರ ಪಡೆಯಲಿವೆ. ಅಂದರೆ, ಬರೋಬ್ಬರಿ 330 ನಿಮಿಷದ ಕರೆಗಳು ಗ್ರಾಹಕರಿಗೆ ಸಿಗಲಿವೆ.

ಏರ್‌ಟೆಲ್‌, ವೊಡಾಫೋನ್‌ ಐಡಿಯಾ ರೂ.145 ಮತ್ತು ರೂ.245 ಪ್ಲಾನ್‌

ಏರ್‌ಟೆಲ್‌, ವೊಡಾಫೋನ್‌ ಐಡಿಯಾ ರೂ.145 ಮತ್ತು ರೂ.245 ಪ್ಲಾನ್‌

ರೂ.145 ಪ್ಲಾನ್‌ 42 ದಿನಗಳ ವ್ಯಾಲಿಡಿಟಿ ಹೊಂದಿದ್ದು, 1GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ. ಅದರಂತೆ ರೂ.245 ಪ್ಲಾನ್‌ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, 2GB ಡೇಟಾವನ್ನು ಪಡೆಯಲಿದ್ದಾರೆ. ಈ ಮೂಲಕ ಈ 5 ಪ್ಲಾನ್‌ಗಳನ್ನು ಜಿಯೋವನ್ನು ಮಣಿಸಲು ಏರ್‌ಟೆಲ್‌, ವೊಡಾಫೋನ್‌, ಐಡಿಯಾ ಕಂಪನಿಗಳು ಪರಿಚಯಿಸಿವೆ.

Best Mobiles in India

English summary
Airtel introduces 5 new prepaid plans starting at Rs 178; offers up to 90 days validity, 126GB data. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+