ಭಾರತೀಯ ಮಾರುಕಟ್ಟೆಗೆ ಮತ್ತೆ ಮೂರು ಪ್ಲಾನ್ ಲಾಂಚ್ ಮಾಡಿದ ಏರ್ ಟೆಲ್
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿರುವ ಏರ್ ಟೆಲ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಅತೀ ಕಡಿಮೆ ಬೆಲೆಗೆ ಅತೀ ಹೆಚ್ಚು ಲಾಭವನ್ನು ನೀಡುವ ಮೂರು ಆಫರ್ ಗಳು ಲಾಂಚ್ ಆಗಿದೆ. ಜಿಯೋ, ವೊಡಾಫೋನ್ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಹೊಡೆತ ನೀಡುವಂತೆ ಮೂರು ಆಫರ್ ಗಳು ಲಾಂಚ್ ಆಗಿದೆ.

ಏರ್ ಟೆಲ್ ರೂ.35, ರೂ.65 ಮತ್ತು ರೂ.95ಕ್ಕೆ ಲಾಂಚ್ ಮಾಡಿರುವ ಪ್ಲಾನ್ ಗಳು ಕರೆ ಮತ್ತು ಡೇಟಾ ಎರಡನ್ನು ಬಳಕೆದಾರರಿಗೆ ನೀಡಲಿದೆ. ಇದರಿಂದಾಗಿ ಬಳಕೆ ದಾರರು ಅತೀ ಕಡಿಮೆ ಬೆಲೆಗೆ ಎರಡು ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಮಾದರಿಯ ಪ್ಲಾನ್ ಬೇರೆ ಯಾವುದೇ ಟೆಲಿಕಾಂ ಕಂಪನಿಗಳಲ್ಲಿಯೂ ನೋಡಲು ಸಾಧ್ಯವಿಲ್ಲ. ಇದು ಏರ್ ಟೆಲ್ ಜನಪ್ರಿಯತೆಯನ್ನು ಮತ್ತಷ್ಟು ಏರಿಕೆ ಮಾಡಲಿದೆ.

ರೂ. 35 ಪ್ಲಾನ್
ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭ ದೊರೆಯಲಿದ್ದು, 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಅಲ್ಲದೆ ಬಳಕೆದಾರರು 100MB ಡೇಟಾ ವನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ರೂ.26 ಟಾಕ್ ಟೈಮ್‌ದೊರೆಯಲಿದೆ ಎನ್ನಲಾಗಿದೆ. ಒಂದು ಪೈಸೆಗೆ ಒಂದು ಸೆಕೆಂಡ್ ಕರೆ ಮಾಡುವ ಲಾಭವನ್ನು ಪಡೆದುಕೊಳ್ಳಬಹುದು.

ರೂ. 65 ಪ್ಲಾನ್
ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭ ದೊರೆಯಲಿದ್ದು, 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಅಲ್ಲದೆ ಬಳಕೆದಾರರು 200MB ಡೇಟಾ ವನ್ನು ಪಡೆದುಕೊ huಳ್ಳಬಹುದು. ಇದರೊಂದಿಗೆ ರೂ.65 ಟಾಕ್ ಟೈಮ್‌ದೊರೆಯಲಿದೆ ಎನ್ನಲಾಗಿದೆ. ಒಂದು ಪೈಸೆಗೆ ಒಂದು ಸೆಕೆಂಡ್ ಕರೆ ಮಾಡುವ ಲಾಭವನ್ನು ಪಡೆದುಕೊಳ್ಳಬಹುದು.

ರೂ. 95 ಪ್ಲಾನ್
ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭ ದೊರೆಯಲಿದ್ದು, 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಅಲ್ಲದೆ ಬಳಕೆದಾರರು 500MB ಡೇಟಾ ವನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ರೂ.95ಟಾಕ್ ಟೈಮ್‌ದೊರೆಯಲಿದೆ ಎನ್ನಲಾಗಿದೆ. ಒಂದು ಪೈಸೆಗೆ ಒಂದು ಸೆಕೆಂಡ್ ಕರೆ ಮಾಡುವ ಲಾಭವನ್ನು ಪಡೆದುಕೊಳ್ಳಬಹುದು.


Click it and Unblock the Notifications








