300 ಮಿಲಿಯನ್ ಬಳಕೆದಾರರು: ಸಂಭ್ರಮದಲ್ಲಿ ಏರ್‌ಟೆಲ್ ಕೊಟ್ಟ ಭರ್ಜರಿ ಆಫರ್..!
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿ ನಡೆಯುತ್ತಿದ್ದು, ಇದೇ ಮಾದರಿಯಲ್ಲಿ ಟೆಲಿಕಾಂನಲ್ಲಿ ನಂಬರ್ ಒನ್ ಸ್ಥಾನವನ್ನು ಅಂಕರಿಸಿರುವ ಹಿನ್ನಲೆಯಲ್ಲಿ ಏರ್‌ಟೆಲ್ ಬೊಂಬಾಟ್ ಆಫರ್ ವೊಂದನ್ನು ಲಾಂಚ್ ಮಾಡಿದ್ದು, ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಆಫರ್ ವೊಂದನ್ನು ನೀಡಿದೆ ಎನ್ನಲಾಗಿದೆ.

ಈಗಾಗಲೇ ದಿನಕ್ಕೆ ಒಂದು GB ಡೇಟಾಗಿಂತಲೂ ಅಧಿಕವಾಗಿ ನೀಡುವ ಪ್ಲಾನ್‌ಗಳು ಜಾರಿಯಲ್ಲಿದ್ದು, ಅದೇ ಮಾದರಿಯಲ್ಲಿ ಏರ್‌ಟೆಲ್ ಮತ್ತೊಂದು ಆಫರ್ ನೀಡಿದ್ದು, ಇದರಲ್ಲಿ ಬಳಕೆದಾರರಿಗೆ ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆಗನ್ನು ನೀಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಏರ್‌ಟೆಲ್ ಲಾಂಚ್ ಮಾಡಿರುವ ರೂ.219 ಪ್ಲಾನ್ ಕುರಿತ ಮಾಹಿತಿಯೂ ಮುಂದಿನಂತಿದೆ.

ರೂ.219 ಪ್ಲಾನ್:
ಈ ಪ್ಲಾನ್‌ನಲ್ಲಿ ಏರ್‌ಟೆಲ್ ಬಳಕೆದಾರರಿಗೆ ನಿತ್ಯ 1.4GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. 28 ದಿನಗಳ ವ್ಯಾಡಿಟಿಯನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಈ ಪ್ಲಾನ್ ಲಾಂಚ್ ಮಾಡುವ ಮೂಲಕ ವೊಡಾಫೋನ್ ಮತ್ತು ಜಿಯೋಗೆ ಸೆಡ್ಡು ಹೊಡೆದಿದೆ ಎನ್ನಲಾಗಿದೆ.

ಅನ್‌ಲಿಮಿಟೆಡ್ ಕರೆಗಳು:
ಏರ್‌ಟೆಲ್ ನೀಡಿರುವ ರೂ219 ಪ್ಲಾನ್‌ನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ಕರೆಗಳ ಲಾಭವು ದೊರೆಯಲಿದೆ ಎನ್ನಲಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ತನ್ನ ಬಳಕೆದಾರರಿಗೆ ಉಚಿತವಾಗಿ ಹಲೋ ಟ್ಯೂನ್‌ಗಳನ್ನು ಏರ್‌ಟೆಲ್ ನೀಡಲಿದೆ ಎನ್ನಲಾಗಿದೆ.

300 ಮಿಲಿಯನ್:
ಜಿಯೋ ಪ್ರಬಲ ಸ್ಪರ್ಧೆಯ ನಡುವೆಯೂ ಏರ್‌ಟೆಲ್ ಬಳಕೆದಾರರ ಸಂಖ್ಯೆಯೂ 300 ಮಿಲಿಯನ್ ತಲುಪಿದ್ದು, ಈ ಕಾರಣಕ್ಕಾಗಿ ತನ್ನ ಬಳಕೆದಾರರಿಗೆ ಈ ಪ್ಲಾನ್‌ಅನ್ನು ನೀಡಿದೆ ಎನ್ನಲಾಗಿದೆ.


ಜಿಯೋ -ವೊಡಾಫೋನ್:
ಈ ಮಾದರಿಯ ಆಫರ್ ಜಿಯೋ ಮತ್ತು ವೊಡಾಫೋನ್‌ನಲ್ಲಿಯೂ ಇಲ್ಲ ಎನ್ನಲಾಗಿದೆ. ಕಡಿಮೆ ಬೆಲೆಗೆ ಹೆಚ್ಚಿನ ಲಾಭವನ್ನು ಬೇಕು ಎನ್ನುವರರು ಈ ಪ್ಳಾನ್ ಅನ್ನು ಪಡೆದುಕೊಳ್ಳಬಹುದಾಘಿದೆ.


Click it and Unblock the Notifications








