ಜಿಯೋಹಾಟ್‌ಸ್ಟಾರ್ ಜೊತೆ ಏರ್‌ಟೆಲ್‌ನ ಹೊಸ 301 ರೂ. ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ!
ಐಪಿಎಲ್ (ಇಂಡಿಯಾ ಪ್ರೀಮಿಯರ್ ಲೀಗ್) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಾಗ ಏರ್‌ಟೆಲ್‌ನಿಂದ ಭರ್ಜರಿ ಸಿಹಿ ಸುದ್ದಿಗಳು ಹೊರಬರುತ್ತಿವೆ. ಇತ್ತೀಚೆಗೆ ಐಪಿಎಲ್ ಅನ್ನು ಸ್ಟ್ರೀಮ್ ಮಾಡಲು ಅನುಮತಿಸುವ ವೋಚರ್‌ಗಳನ್ನು ಬಿಡುಗಡೆ ಮಾಡಿದ ಏರ್‌ಟೆಲ್, ಇಂದು ಹೊಸ ಪ್ರೀಪೇಡ್ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ, ಈ ಪ್ರೀಪೇಡ್ ಯೋಜನೆಯು ಅನ್‌ಲಿಮಿಟೆಡ್ ಸೇವೆಗಳನ್ನು ಒಳಗೊಂಡಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ ಐಪಿಎಲ್ 2025 ಅನ್ನು ವೀಕ್ಷಿಸಲು ಬಯಸುವ ಬಳಕೆದಾರರು, ಈಗ ಏರ್‌ಟೆಲ್‌ನ 301 ರೂ. ಪ್ರೀಪೇಡ್ ಯೋಜನೆಯ ಮೂಲಕ ಕ್ರಿಕೆಟ್ ಸ್ರಟೀಮ್ ಮೊಬೈಲ್ ಯೋಜನೆಗೆ ಚಂದಾದಾರರಾಗಬಹುದು ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬಹುದು. ಭಾರ್ತಿ ಏರ್‌ಟೆಲ್‌ನ ಹೊಸ 301 ರೂ. ಮೌಲ್ಯದ ಜಿಯೋಹಾಟ್‌ಸ್ಟಾರ್ ಪ್ಯಾಕ್‌ನ ಸಂಪೂರ್ಣ ಪ್ರಯೋಜನಗಳನ್ನು ಈ ನೋಡೋಣ.
ಏರ್‌ಟೆಲ್‌ನ ಹೊಸ 301 ರೂ. ಪ್ರಿಪೇಯ್ಡ್ ಯೋಜನೆಯು ಜಿಯೋಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಗೆ 1GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಪ್ರಯೋಜನಗಳೊಂದಿಗೆ ಬಂದಿದೆ. ಈ ಯೋಜನೆಯು ಮೂರು ತಿಂಗಳುಗಳ ಕಾಲ ಜಿಯೋಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಒದಗಿಸುತ್ತದೆ, ಆದರೆ ಇದರ ವ್ಯಾಲಿಡಿಟಿ ಕೇವಲ 28 ದಿನಗಳಾಗಿರುತ್ತದೆ. ಈ ಯೋಜನೆಯೊಂದಿಗೆ ದೊರೆಯುವ ಹೆಚ್ಚುವರಿ ಪ್ರಯೋಜನಗಳಲ್ಲಿ ಮೂರು ತಿಂಗಳ ಕಾಲ ಅಪೊಲೊ 24|7 ಸರ್ಕಲ್ ಮತ್ತು ಉಚಿತ ಹೆಲೋಟ್ಯೂನ್‌ಗಳು ಸೇರಿವೆ. ಪ್ರಸ್ತುತ ರೀಚಾರ್ಜ್ ಹೊಂದಿರುವ ಏರ್‌ಟೆಲ್ ಬಳಕೆದಾರರು ತಮ್ಮ ಫೋನ್‌ಗಳಿಂದ ನೇರವಾಗಿ ಐಪಿಎಲ್ ಅನ್ನು ಸ್ಟ್ರೀಮ್ ಮಾಡಲು ಎರಡು ಹೊಸ ವೋಚರ್ ಆಧಾರಿತ ಯೋಜನೆಗಳನ್ನು ಬಳಸಬಹುದು, ಈ ಹೊಸ ಐಪಿಎಲ್ ಯೋಜನೆಗಳು ಕೇವಲ 100 ರೂ.ಗಳಿಂದ ಪ್ರಾರಂಭವಾಗುತ್ತವೆ.

ಏರ್‌ಟೆಲ್ ತನ್ನ ಗ್ರಾಹಕರಿಗೆ ಜಿಯೋಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯೊಂದಿಗೆ ಎರಡು ಹೊಸ ಕ್ರಿಕೆಟ್ ಪ್ಯಾಕ್‌ಗಳನ್ನು ಹೊರತಂದಿದೆ. ಇದರಲ್ಲಿ ಮೊದಲನೆಯದಾಗಿ, ಏರ್‌ಟೆಲ್ ಗ್ರಾಹಕರು 100 ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ ಖರೀದಿಸುವ ಮೂಲಕ 30 ದಿನಗಳ ಮಾನ್ಯತೆಯೊಂದಿಗೆ ಒಟ್ಟು 5GB ಡೇಟಾವನ್ನು ಮತ್ತು ಜಿಯೋಹಾಟ್‌ಸ್ಟಾರ್ OTT ಸ್ಟ್ರೀಮಿಂಗ್ ಸೇವೆಗೆ ಉಚಿತ ಪ್ರವೇಶವನ್ನು ಪಡೆಯಲಿದ್ದಾರೆ. ಹಾಗೆಯೇ, ಏರ್‌ಟೆಲ್‌ನ ಮತ್ತೊಂದು 195 ರೂ. ಯೋಜನೆಯು 15GB ಡೇಟಾವನ್ನು ಜೊತೆಗೆ 90 ದಿನಗಳ ಚಂದಾದಾರಿಕೆಯನ್ನು ನೀಡುತ್ತದೆ. ಈ ಎರಡೂ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್‌ಗಳು ಕೇವಲ ಡೇಟಾ ವೋಚರ್‌ಗಳಾಗಿವೆ ಮತ್ತು ಕರೆ ಮಾಡುವ ಪ್ರಯೋಜನಗಳನ್ನು ಹೊಂದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಹೀಗಾಗಿ, ಏರ್‌ಟೆಲ್ ಗ್ರಾಹಕರು ಸಕ್ರಿಯ ಬೇಸ್ ರೀಚಾರ್ಜ್ ಪ್ಯಾಕ್ ಹೊಂದಿರಬೇಕಾಗುತ್ತದೆ.
ವೊಡಾಫೋನ್ ಐಡಿಯಾದ ಕ್ರಿಕೆಟ್ ಪ್ಯಾಕ್‌ಗಳು
ವೊಡಾಫೋನ್ ಐಡಿಯಾ (Vi) ಕೂಡ ಜಿಯೋಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯೊಂದಿಗೆ ಡೇಟಾ ವೋಚರ್ ಮತ್ತು ಎರಡು ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್‌ಗಳನ್ನು ಪರಿಚಯಿಸಿದೆ. ನೀವು ವೊಡಾಫೋನ್ ಐಡಿಯಾ ಗ್ರಾಹಕರಾಗಿದ್ದರೆ, IPL 2025 ಅನ್ನು ವೀಕ್ಷಿಸಲು ಅತ್ಯುತ್ತಮ ಮಾರ್ಗವೆಂದರೆ 101 ರೂ. ಮೌಲ್ಯದ ಡೇಟಾ ವೋಚರ್ ಪಡೆಯುವುದು. ಈ ಯೋಜನೆಯು ನಿಮಗೆ ಮೂರು ತಿಂಗಳ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು, 30 ದಿನಗಳ ಮಾನ್ಯತೆಯೊಂದಿಗೆ 5GB ಡೇಟಾವನ್ನು ಒದಗಿಸುತ್ತದೆ. ಇದಕ್ಕಾಗಿ ಸಕ್ರಿಯ ಬೇಸ್ ರೀಚಾರ್ಜ್ ಪ್ಯಾಕ್ ಇರಬೇಕು.
ವೊಡಾಫೋನ್ ಐಡಿಯಾ ಗ್ರಾಹಕರು 239 ರೂ. ಮತ್ತು 399 ರೂ. ಪ್ಯಾಕ್‌ಗಳೊಂದಿಗೆ ರೀಚಾರ್ಜ್ ಮಾಡುವ ಮೂಲಕ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಅನ್‌ಲಿಮಿಟೆಡ್ ಸೇವೆಗಳ ಜೊತೆಗೆ ಪಡೆಯಬಹುದು. 239 ರೂ. ರೀಚಾರ್ಜ್ ಪ್ಯಾಕ್‌ನಲ್ಲಿ ಅನಿಯಮಿತ ಕರೆ, 2GB ಡೇಟಾ, 300 SMS ಮತ್ತು 28 ದಿನಗಳ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಇದೆ. ಇನ್ನೊಂದು 399 ರೂ. ಯೋಜನೆಯಲ್ಲಿ, ಗ್ರಾಹಕರಿಗೆ ಅನಿಯಮಿತ ಕರೆ, ದಿನಕ್ಕೆ 2GB ಡೇಟಾ, ದಿನಕ್ಕೆ 100 SMS ಮತ್ತು 28 ದಿನಗಳ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡಲಾಗುತ್ತದೆ.
ಈ ಎಲ್ಲಾ ಯೋಜನೆಗಳ ಮೂಲಕ, ನೀವು ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ಗಳ ವಿಲೀನದ ನಂತರ ಭಾರತದಲ್ಲಿ ಹೊಸದಾಗಿ ಪ್ರಾರಂಭವಾದ ಜಿಯೋಹಾಟ್‌ಸ್ಟಾರ್‌ಗೆ ಚಂದಾದಾರಿಕೆಯನ್ನು ಪಡೆಯಬಹುದು. ಇದರಿಂದ, ಮುಂಬರುವ ಐಪಿಎಲ್ ಪಂದ್ಯಗಳು, ಇತರ ಚಲನಚಿತ್ರಗಳು, ಶೋಗಳು, ಅನಿಮೆ ಮತ್ತು ಸಾಕ್ಷ್ಯಚಿತ್ರಗಳನ್ನು ನಿಮ್ಮ ಮೊಬೈಲ್ ಮತ್ತು ಟಿವಿಯಲ್ಲಿ 4K ಗುಣಮಟ್ಟದಲ್ಲಿ ಸ್ಟ್ರೀಮ್ ಮಾಡಬಹುದು.


Click it and Unblock the Notifications








