Home
ಸುದ್ದಿಜಾಲ

ಏರ್‌ಟೆಲ್‌ನಿಂದ 199 ರೂ,ಗಳ ಹೊಸ ಪ್ರಿಪೇಯ್ಡ್‌ ಪ್ಲ್ಯಾನ್‌ ಲಾಂಚ್‌!

ದೇಶದ ಟೆಲಿಕಾಂ ವಲಯದಲ್ಲಿ ಗುರುತಿಸಿಕೊಂಡಿರುವ ಟೆಲಿಕಾಂ ಆಪರೇಟರ್‌ಗಳಲ್ಲಿ ಏರ್‌ಟೆಲ್‌ ಕೂಡ ಒಂದಾಗಿದೆ. ಇನ್ನು ಏರ್‌ಟೆಲ್‌ ಟೆಲಿಕಾಂ ಈಗಾಗಲೇ ತನ್ನ ಗ್ರಾಹಕರಿಗೆ ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದೆ. ಕಡಿಮೆ ಬೆಲೆಯಲ್ಲಿ ಅಧಿಕ ಡೇಟಾ ನೀಡುವ ಹಲವು ಪ್ಲ್ಯಾನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಏರ್‌ಟೆಲ್‌ ಹೊಸದಾಗಿ ಆಯ್ದ ಬಳಕೆದಾರರಿಗೆ 199 ರೂ. ಬೆಲೆಯಲ್ಲಿ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಇದು 35 ದಿನಗಳ ಮಾನ್ಯತೆಯನ್ನು ಹೊಂದಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ 199 ರೂ. ಬೆಲೆಯ ಹೊಸ ಪ್ರಿಪೇಯ್ಡ್‌ ಪ್ಲ್ಯಾನ್‌ ಪರಿಚಯಿಸಿದೆ. ಇನ್ನು ಈ ಪ್ಲ್ಯಾನ್‌ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದ್ದು, 35 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳಲ್ಲಿ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಉಚಿತ ವಿಂಕ್ ಮ್ಯೂಸಿಕ್, ಉಚಿತ ಹಲೋ ಟ್ಯೂನ್ಸ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್‌ಗೆ ಪ್ರವೇಶವಿದೆ. ಹಾಗಾದ್ರೆ ಈ ಪ್ಲ್ಯಾನ್‌ ಯಾರಿಗೆಲ್ಲಾ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌ ಹೊಸದಾಗಿ ಪರಿಚಯಿಸಿರುವ 199 ರೂ.ಗಳ ಪ್ರಿಪೇಯ್ಡ್ ಯೋಜನೆ ದಿನಕ್ಕೆ 1.5ಜಿಬಿ ಹೈಸ್ಪೀಡ್ ಡೇಟಾ, ಟ್ರೂಲಿ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ದಿನಕ್ಕೆ 100 ಎಸ್‌ಎಂಎಸ್ ಜೊತೆಗೆ 35 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆ ಇತ್ತೀಚೆಗೆ ರೀಚಾರ್ಜ್ ಮಾಡದ ಬಳಕೆದಾರರಿಗೆ ಲಭ್ಯವಿರಬಹುದು ಅಥವಾ ಸ್ಮಾರ್ಟ್ ರೀಚಾರ್ಜ್ ಪ್ಯಾಕ್‌ಗಳಿಗೆ ಚಂದಾದಾರರಾಗಬಹುದು ಎಂದು ಹೇಳಲಾಗಿದೆ.

ಜಿಯೋನ

ಇದಲ್ಲದೆ ಜಿಯೋನ ಫ್ರೀಡಂ ಪ್ಲ್ಯಾನ್‌ಗಳಿಗೆ ಸೆಡ್ಡು ಹೊಡೆಯಲು ಏರ್‌ಟೆಲ್ ಬೃಹತ್ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ಪಡೆದಿರುವ 456 ರೂ. ಪ್ಲ್ಯಾನ್‌ ಅನ್ನು ಸಹ ಪರಿಚಯಿಸಿದೆ. ಇದು ಅನಿಯಮಿತ ಕರೆಗಳೊಂದಿಗೆ 60 ದಿನಗಳ ಮಾನ್ಯತೆ ಪಡೆದಿದ್ದು, 50 ಜಿಬಿ ಡೇಟಾ ಮತ್ತು ದಿನಕ್ಕೆ 100 ಎಸ್‌ಎಂಎಸ್ ಯೋಜನೆ ನೀಡುತ್ತದೆ. ಈ ಯೋಜನೆಯಲ್ಲಿ ದೈನಂದಿನ ಡೇಟಾ ಮಿತಿಯನ್ನು ಹೊಂದಿರುವುದಿಲ್ಲ ಮತ್ತು ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಡೇಟಾವನ್ನು ಬಳಸಬಹುದು. ಇನ್ನು ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳಲ್ಲಿ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ ಪ್ರವೇಶ, ಉಚಿತ ಹಲೋ ಟ್ಯೂನ್, ವಿಂಕ್ ಮ್ಯೂಸಿಕ್, ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಸೇವೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಟೆಲಿಕಾಂ

ಇನ್ನು ಇತ್ತೀಚಿನ ದಿನಗಳಲ್ಲಿ, ಟೆಲಿಕಾಂ ಕಂಪೆನಿಗಳು ತಮ್ಮ 28 ದಿನಗಳ ಯೋಜನೆಗಳ ಮಾನ್ಯತೆಯನ್ನು 30 ದಿನಗಳಿಗೆ ಹೆಚ್ಚಿಸಲು ನಿರ್ದೇಶಿಸಲಾಗಿದೆ. ಆದಾಗ್ಯೂ, ಏರ್‌ಟೆಲ್ ಜಿಯೋ ಮತ್ತು ವಿ ಜೊತೆಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಗೆ ಪ್ರಿಪೇಯ್ಡ್ ಯೋಜನೆಗಳ ಸಿಂಧುತ್ವವನ್ನು ನಿಗದಿಪಡಿಸುವಲ್ಲಿ ಮಧ್ಯಪ್ರವೇಶಿಸಬಾರದು ಮತ್ತು TRAI ಯ ಹಸ್ತಕ್ಷೇಪವು ಅಡ್ಡಿಪಡಿಸಬಹುದು ಎಂದು ಕೇಳಿಕೊಂಡಿದೆ. ಪ್ರಸ್ತುತ, TRAI ಅನುಸರಿಸುವ ಸಹಿಷ್ಣುತೆಯ ಆಡಳಿತವು ಮಾನ್ಯತೆ ಯೋಜನೆಗಳು ಸೇರಿದಂತೆ ಟಾರಿಫ್‌ಗಳನ್ನು ವಿನ್ಯಾಸಗೊಳಿಸಲು ಟೆಲ್ಕೋಸ್ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯುತ್ತದೆ.

Best Mobiles in India

English summary
Airtel has introduced a segmented offer where it is giving select users 35 days validity with its Rs 199 prepaid plan.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+