IPL 2023 ಗಾಗಿ ಹೊಸ ಆಫರ್ ನೀಡಿದ ಏರ್‌ಟೆಲ್! ಯಾರಿಗೆಲ್ಲಾ ಲಭ್ಯ!
ದೇಶದ ಜನಪ್ರಿಯ ಟೆಲಿಕಾಂಗಳಲ್ಲಿ ಒಂದಾದ ಏರ್‌ಟೆಲ್ ತನ್ನ ಬಳಕೆದಾರರಿಗೆ ಬಿಗ್ ಆಫರ್ ನೀಡಿದೆ. ಐಪಿಎಲ್ ಕ್ರಿಕೆಟ್ ಆರಂಭಕ್ಕೂ ಮುನ್ನವೇ ಕ್ರಿಕೆಟ್ ಪ್ರೇಮಿಗಳ ಮನಗೆಲ್ಲುವ ಪ್ಲಾನ್‌ಗಳನ್ನು ಘೋಷಣೆ ಮಾಡಿದೆ. ತನ್ನ ಅನ್‌ಲಿಮಿಟೆಡ್ ಡೇಟಾ ಆಫರ್ ಜೊತೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಕೆಲವು ಪ್ಲಾನ್‌ಗಳಲ್ಲಿ ಉಚಿತವಾಗಿ ನೀಡಲು ಮುಂದಾಗಿದೆ.
ಹೌದು, ಏರ್‌ಟೆಲ್ ತನ್ನ ಎಲ್ಲಾ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಅನಿಯಮಿತ 5G ಡೇಟಾ ಆಫರ್ ಲಾಂಚ್ ಮಾಡಿದೆ. ಇದರೊಂದಿಗೆ ಕೆಲವು ಆಯ್ದ ಪ್ಲಾನ್‌ಗಳಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸೇವೆಯನ್ನು ಉಚಿತವಾಗಿ ನೀಡಲು ಮುಂದಾಗಿದೆ. ಹಾಗಾದ್ರೆ ಈ ಹೊಸ ಡೇಟಾ ಆಫರ್ ಅನ್ನು ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ 5G ಪ್ಲಸ್ ನೆಟ್‌ವರ್ಕ್ ಲಭ್ಯವಿರುವ ಪ್ರದೇಶದಲ್ಲಿ ಮಾತ್ರ ಅನ್‌ಲಿಮಿಟೆಡ್ 5G ಡೇಟಾ ಆಫರ್ ಲಭ್ಯವಾಗಲಿದೆ. ಇದು 5G ಬೆಂಬಲಿತ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಾಗಲಿದ್ದು, ವೇಗವಾದ 5G ಡೇಟಾವನ್ನು ಆನಂದಿಸಬಹುದಾಗಿದೆ. ಇನ್ನು ಈ ಆಫರ್ 239 ರೂ ಮತ್ತು ಅದಕ್ಕಿಂತ ಹೆಚ್ಚಿನ ಆಕ್ಟಿವ್ ಡೇಟಾ ಪ್ಲಾನ್ ಹೊಂದಿರುವ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ.
ಇದಲ್ಲದೆ ಏರ್‌ಟೆಲ್ ತನ್ನ ಅನಿಯಮಿತ 5G ಡೇಟಾ ಆಫರ್ ಜೊತೆಗೆ ಕೆಲವು ಆಯ್ದ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಡಿಸ್ನಿ ಹಾಟ್‌ಸ್ಟಾರ್‌ನ ಉಚಿತ OTT ಚಂದಾದಾರಿಕೆಯನ್ನು ನೀಡುತ್ತಿದೆ. ಇದರಿಂದ IPL 2023 ಅನ್ನು ಆನಂದಿಸಲು ನಿಮಗೆ ಅತ್ಯುತ್ತಮ ಅವಕಾಶ ನೀಡಿದೆ. ಸದ್ಯ ಅನ್‌ಲಿಮಿಟೆಡ್ 5G ಡೇಟಾ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ನೀಡುವ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್ ವಿವರ ಕೆಳಗಿನ ಹಂತಗಳಲ್ಲಿ ತಿಳಿಯೋಣ ಬನ್ನಿರಿ.

ಏರ್‌ಟೆಲ್ 399ರೂ. ಪ್ಲಾನ್
ಏರ್‌ಟೆಲ್ ರೂ 399 ಪ್ಲಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದು ಮೂರು ತಿಂಗಳ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್ ಅನ್ನು ಉಚಿತವಾಗಿ ನೀಡಲಿದೆ. ಜೊತೆಗೆ ಏರ್‌ಟೆಲ್‌ನ ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ನೆಟ್‌ವರ್ಕ್‌ಗಳಲ್ಲಿ ಅನ್‌ಲಿಮಿಟೆಡ್ ಕರೆ ಪ್ರಯೋಜನ ನೀಡಲಿದೆ.
ಏರ್‌ಟೆಲ್ 499ರೂ. ಪ್ಲಾನ್
ಏರ್‌ಟೆಲ್ 499ರೂ. ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಈ ಪ್ಲಾನ್‌ನಲ್ಲಿ ನೀವು ಪ್ರತಿನಿತ್ಯ 3GB ಡೇಟಾ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ದೈನಂದಿನ 100 SMS ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ನೀಡಲಿದೆ. ಇದರೊಂದಿಗೆ ಗ್ರಾಹಕರು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ 3 ತಿಂಗಳ ಉಚಿತ ಚಂದಾದಾರಿಕೆ ನೀಡಲಿದೆ.

ಏರ್‌ಟೆಲ್ 839ರೂ. ಪ್ಲಾನ್
ಏರ್‌ಟೆಲ್ 839ರೂ. ಪ್ಲಾನ್ 84 ದಿನಗಳ ಮಾನ್ಯತೆಯನ್ನು ಪಡೆದಿದೆ. ಇದು ದೈನಂದಿನ 100 SMS ಮತ್ತು 2GB ಡೇಟಾ ಪ್ರಯೋಜನವನ್ನು ನೀಡಲಿದೆ. ಇದರೊಂದಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್‌ಗೆ 3 ತಿಂಗಳ ಉಚಿತ ಚಂದಾದಾರಿಕೆ ಪ್ರಯೋಜನ ಕೂಡ ದೊರೆಯಲಿದೆ.
ಏರ್‌ಟೆಲ್ 3359ರೂ. ಪ್ಲಾನ್
ಏರ್‌ಟೆಲ್ 3359ರೂ. ಪ್ಲಾನ್ ದೀರ್ಘಾವಾಧಿ ಪ್ಲಾನ್ ಆಗಿದೆ. ಇದು ಒಂದು ವರ್ಷದ ವ್ಯಾಲಿಡಿಟಿಯನ್ನು ನೀಡಲಿದೆ. ಇನ್ನು ಈ ಪ್ಲಾನ್ ಮೂಲಕ ನೀವು ದೈನಂದಿನ 2.5GB ಡೇಟಾ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ದೈನಂದಿನ ಡೇಟಾ ರೋಲ್‌ಓವರ್, SMS ಮತ್ತು ಕರೆ ಪ್ರಯೋಜನಗಳನ್ನು ಸಹ ಪಡೆದುಕೊಳ್ಳಬಹುದು. ಇದಲ್ಲದೆ ಗ್ರಾಹಕರು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ 1 ವರ್ಷದ ಚಂದಾದಾರಿಕೆಯನ್ನು ಆನಂದಿಸಬಹುದು.


Click it and Unblock the Notifications








