ಜಿಯೋ ಗಿಗಾಫೈಬರ್‌ಗೆ ಟಾಂಗ್ ನೀಡಲು ಏರ್‌ಟೆಲ್ ರೆಡಿ..!
ರಿಲಾಯನ್ಸ್ ಜಿಯೋದ ಬಹು ನಿರೀಕ್ಷಿತ ಜಿಯೋ ಗಿಗಾಫೈಬರ್‌ನಿಂದ ದೇಶದ ಬ್ರಾಡ್‌ಬ್ಯಾಂಡ್ ಲೋಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ACT NET ಮತ್ತು ಏರ್‌ಟೆಲ್‌ನಂತಹ ಕಂಪನಿಗಳಿಗೆ ಚಿಂತೆ ಶುರುವಾಗಿದೆ. ಆದರೆ, ಏರ್‌ಟೆಲ್ ಮಾತ್ರ ಜಿಯೋಗೆ ಎದೆಯೊಡ್ಡಲು ಸಿದ್ಧವಾಗಿದ್ದು, ಜಿಯೋ ಗಿಗಾಫೈಬರ್‌ಗೆ ಟಾಂಗ್ ನೀಡಲು ರೆಡಿಯಾಗಿದೆ.

ಹೌದು, ಏರ್‌ಟೆಲ್ ತನ್ನ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ವಿಧಿಸಿದ್ದ ಡೇಟಾ ಮಿತಿ ನೀತಿಯನ್ನು 20 ಮಾರುಕಟ್ಟೆಗಳಲ್ಲಿ ರದ್ಧುಪಡಿಸಿದ್ದು, ಆ ಪ್ಲಾನ್‌ಗಳನ್ನು ಅನ್‌ಲಿಮಿಟೆಡ್ ಡೇಟಾ ಪ್ಲಾನ್‌ಗಳನ್ನಾಗಿ ಪರಿವರ್ತಿಸಿದ್ದು, ಜಿಯೋದ ಮುಂದಿನ ಗಿಗಾಫೈಬರ್‌ಗೆ ಈಗಿನಿಂದಲೇ ಏರ್‌ಟೆಲ್ ಸ್ಪರ್ಧೆಯೊಡ್ಡುತ್ತಿದೆ.

ಹೈದರಾಬಾದ್‌ನಲ್ಲಿ ಅನ್‌ಲಿಮಿಟೆಡ್ ಡೇಟಾ
ಸದ್ಯ ಏರ್‌ಟೆಲ್ ಅನ್‌ಲಿಮಿಟೆಡ್ ಡೇಟಾ ಸೇವೆಯನ್ನು ಹೈದ್ರಾಬಾದ್‌ನಲ್ಲಿ ಪ್ರಾರಂಭಿಸಿದ್ದು, ಅನ್‌ಲಿಮಿಟೆಡ್ ಹೋಮ್ ಬ್ರಾಡ್‌ಬ್ಯಾಂಡ್ ಪ್ಲಾನ್‌ನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ವಿಸ್ತರಿಸುತ್ತಿದೆ. ಇದರ ಮೂಲಕ ಜಿಯೋಗೆ ಟಾಂಗ್ ನೀಡಲು ಮುಂದಾಗಿದೆ. ಈ ಪ್ಲಾನ್ ಮೂಲಕ ತನ್ನ 2.4 ಮಿಲಿಯನ್ ಸಕ್ರಿಯ ಬ್ರಾಡ್‌ಬ್ಯಾಂಡ್ ಬಳಕೆದಾರರನ್ನು ಉಳಿಸಿಕೊಳ್ಳು ಏರ್‌ಟೆಲ್ ಪ್ರಯತ್ನಿಸುತ್ತಿದೆ.

ಡೇಟಾ ಪ್ಲಾನ್‌ಗಳಲ್ಲಿ ರಿಯಾಯಿತಿ
ಕಳೆದ ತಿಂಗಳು ಏರ್‌ಟೆಲ್ ತನ್ನ ಗ್ರಾಹಕರಿಗೆ ಹೋಮ್ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳಲ್ಲಿ ಶೇ.15 ರಿಂದ ಶೇ.20ರಷ್ಟು ರಿಯಾಯಿತಿ ನೀಡಿದ್ದು, 300Mbps ವೇಗದಲ್ಲಿ ಡೇಟಾ ನೀಡುತ್ತಿದೆ. ಆರು ತಿಂಗಳು ಹಾಗೂ ಒಂದು ವರ್ಷದ ಪ್ಲಾನ್‌ಗಳಿಗೆ ಈ ರಿಯಾಯಿತಿ ಲಭ್ಯವಿದ್ದು, 89 ನಗರಗಳಲ್ಲಿ ಈ ರಿಯಾಯಿತಿಯನ್ನು ಗ್ರಾಹಕರು ಪಡೆಯಬಹುದಾಗಿದೆ.

ಭಾರತದ ಎರಡನೇ ದೊಡ್ಡ ವಯರ್ ಬ್ರಾಡ್‌ಬ್ಯಾಂಡ್
ಏರ್‌ಟೆಲ್ ಭಾರತದ ನಂ. 1 ಟೆಲಿಕಾಂ ಆಪರೇಟರ್ ಆಗಿದ್ದು, ವೈಯರ್ ಬ್ರಾಡ್‌ಬ್ಯಾಂಡ್ ಸೇವೇ ನೀಡುವ ನೆಟ್‌ವರ್ಕ್‌ನಲ್ಲಿ ಎರಡನೇ ಸ್ಥಾನವನ್ನು ಹೊಂದಿದ್ದು, ಆ ಸ್ಥಾನ ಉಳಿಸಿಕೊಳ್ಳಲು ಏರ್‌ಟೆಲ್ ವಿವಿಧ ನಗರಗಳಲ್ಲಿ ಆಕರ್ಷಕ ಆಫರ್‌ಗಳನ್ನು ನೀಡುತ್ತಿದೆ.

ಏರ್‌ಟೆಲ್‌ನ ವಿ ಫೈಬರ್
ಏರ್‌ಟೆಲ್‌ನ ಎಲ್ಲಾ ಹೋಮ್ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳು ವಿ ಫೈಬರ್‌ನಿಂದ ವಿತರಣೆಯಾಗುತ್ತಿದ್ದು, 300Mbps ವೇಗವದಲ್ಲಿ ವೈಫೈ ಸಂಪರ್ಕ ನೀಡುತ್ತಿದೆ. ಇದನ್ನು ಗ್ರಾಹಕರ ಅಗತ್ಯಕ್ಕನುಗುಣವಾಗಿ 1Gbps ವೇಗಕ್ಕೆ ವಿಸ್ತರಿಸುವ ಆಯ್ಕೆಯನ್ನು ಏರ್‌ಟೆಲ್ ಹೊಂದಿದೆ ಎಂದು ಏರ್‌ಟೆಲ್‌ನ ಹಿರಿಯ ಅಧಿಕಾರಿ ಹೇಳಿದ್ದಾರೆ.

ಜಿಯೋಗೆ ಟಾಂಗ್
ಏರ್‌ಟೆಲ್‌ನ ಈ ನಡೆಯನ್ನು ಟೆಲಿಕಾಂ ತಜ್ಞರು ಜಿಯೋಗೆ ಟಾಂಗ್ ಎಂದು ವ್ಯಾಖ್ಯಾನಿಸಿದ್ದಾರೆ. ಜಿಯೋ ಮುಂದಿನ ಕೆಲವೇ ದಿನಗಳಲ್ಲಿ ತನ್ನ ಗಿಗಾಫೈಬರ್ ಮೂಲಕ ಜನರಿಗೆ ಇಂಟರ್‌ನೆಟ್ ಆಧಾರಿತ ಟಿವಿ ಹಾಗೂ ವೈಯರ್ ಬ್ರಾಡ್‌ಬ್ಯಾಂಡ್ ಸೇವೆ ನೀಡಲು ಮುಂದಾಗಿದ್ದು, ಆರಂಭಿಕ ಬೆಲೆ 500 ರೂ. ಎನ್ನಲಾಗಿದೆ. ಆದ್ದರಿಂದ ಏರ್‌ಟೆಲ್ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಆದರೆ, ಏರ್‌ಟೆಲ್ ಮಾತ್ರ ಈ ಊಹೆಗಳನ್ನು ತಿರಸ್ಕರಿಸಿದೆ.

ಗ್ರಾಹಕರನ್ನು ಭದ್ರಪಡಿಸಿಕೊಳ್ಳಲು ಏರ್‌ಟೆಲ್ ಕ್ರಮ
ಜಿಯೋ ಗಿಗಾಫೈಬರ್ ಲಾಂಚ್ ಮಾಡುವ ಮುನ್ನ ಏರ್‌ಟೆಲ್ ತನ್ನ ಗ್ರಾಹಕರನ್ನು ಭದ್ರಪಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಹೀಗಾಗಲೇ ಟೆಲಿಕಾಂನಲ್ಲಿ ಜಿಯೋದಿಂದ ನಷ್ಟಕ್ಕೊಳಗಾಗಿರುವ ಏರ್‌ಟೆಲ್ ವೈಯರ್ ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಆಕರ್ಷಕ ಆಫರ್ ನೀಡುವ ಮೂಲಕ ಗ್ರಾಹಕರನ್ನು ಭದ್ರಪಡಿಸಿಕೊಳ್ಳುತ್ತಿದೆ ಎಂದು ಪಿಲಿಪ್ ಕ್ಯಾಪಿಟಲ್ ಟೆಲಿಕಾಂ ವಿಶ್ಲೇಷಕ ನವೀನ್ ಕುಲಕರ್ಣಿ ಹೇಳುತ್ತಾರೆ.

ಎಲ್ಲಾ ಕಡೆ ಫೈಬರ್ ನೆಟ್‌ವರ್ಕ್ ಇಲ್ಲ
ಸೌಥ್ ಏಷ್ಯಾ ಹಾಗೂ ಮಿಡಲ್ ಇಸ್ಟ್ ಅನಾಲಿಸಿಸ್ ಮಸೂನ್‌ನ ಪಾಲುದಾರ ಹಾಗೂ ಭಾರತದ ಮುಖ್ಯಸ್ಥ ರೋಹನ್ ಧಾಮಿಜಾ ಹೇಳುವಂತೆ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ವೇಗವು ಲಿಮಿಟೆಡ್ ಆಗಿದ್ದು, ಏರ್‌ಟೆಲ್‌ನ 89 ಪ್ರಮುಖ ಬ್ರಾಡ್‌ಬ್ಯಾಂಡ್ ಮಾರುಕಟ್ಟೆಗಳಲ್ಲಿ ಎಲ್ಲವೂ ಫೈಬರ್ ನೆಟ್‌ವರ್ಕ್ ಹೊಂದಿಲ್ಲ. ಬಹಳಷ್ಟು ನಗರಗಳಲ್ಲಿ ಇನ್ನು ಡಿಎಸ್‌ಎಲ್ ಟೆಕ್ನಾಲಜಿಯನ್ನು ಹೊಂದಿದ್ದು, ಕಡಿಮೆ ವೇಗವನ್ನು ನೀಡುತ್ತವೆ ಎಂದು ಹೇಳಿದ್ದಾರೆ.

ಏರ್‌ಟೆಲ್‌ನ ಆದಾಯದಲ್ಲಿ ಇಳಿಕೆ
ಹೋಮ್ ಬ್ರಾಡ್‌ಬ್ಯಾಂಡ್‌ನಲ್ಲಿ ಏರ್‌ಟೆಲ್ ಪ್ಲಾನ್‌ಗಳ ದರಗಳನ್ನು ಇಳಿಸಿದ್ದಕ್ಕೆ, ಶೆ.14ರಷ್ಟು ಆದಾಯ ಕಡಿತಗೊಂಡಿದ್ದು, ಎರಡನೇ ಕ್ವಾರ್ಟ್ರರ್ ಆದ ಜೂನ್ ಅಂತ್ಯಕ್ಕೆ ರೂ. 574.5 ಕೋಟಿ ಆದಾಯ ಗಳಿಸಿದ್ದು, ಗಣನೀಯ ಇಳಿಕೆ ಕಂಡಿದೆ.

24000 ಕೋಟಿ ರೂ. ಹೂಡಿಕೆ
ಏರ್‌ಟೆಲ್ ಸದ್ಯ ತನ್ನ ಹೋಮ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಭಾರತದ ಪ್ರಮುಖ 89 ನಗರಗಳಲ್ಲಿ ಹೊಂದಿದ್ದು, ಇದನ್ನು 100ರ ಗಡಿ ದಾಟಿಸಲು 2019ರ ವಿತ್ತವರ್ಷದಲ್ಲಿ 24000 ಕೋಟಿ ರೂ. ಮೀಸಲಿಡಲಾಗುತ್ತಿದೆ ಎಂದು ಮತ್ತೊಬ್ಬ ಹಿರಿಯ ಅಧಿಕಾರ ಹೇಳಿದ್ದಾರೆ.

ಒಂದು ಕೋಟಿಗೂ ಹೆಚ್ಚು ಗುರಿ
ಏರ್‌ಟೆಲ್ ತನ್ನ ಬ್ರಾಡ್‌ಬ್ಯಾಂಡ್ ಸೇವೆಯನ್ನು 2021ರ ವಿತ್ತ ವರ್ಷ ಎನ್ನುವಷ್ಟರಲ್ಲಿ ಕೋಟಿಗೂ ಹೆಚ್ಚು ಹೊಸ ಮನೆಗಳಿಗೆ ಬ್ರಾಡ್‌ಬ್ಯಾಂಡ್ ಸೇವೆಯನ್ನು ನೀಡುವ ಗುರಿ ಹೊಂದಿದ್ದು, ವರ್ಷಕ್ಕೆ 3 ರಿಂದ 5 ಮಿಲಿಯನ್ ಗ್ರಾಹಕರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆಯಂತೆ.


Click it and Unblock the Notifications








