Airtel, Jio, and Vi: ಒಂದು ವರ್ಷದ ವ್ಯಾಲಿಡಿಟಿ ನೀಡುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್‌ಗಳು!
ದೇಶದ ಪ್ರಮುಖ ಟೆಲಿಕಾಂಗಳಿಗೆ ಏರ್‌ಟೆಲ್, ಜಿಯೋ ಮತ್ತು ವಿ ಮುಂಚಚೂಣಿಯಲ್ಲಿ ಕಾಣಿಸಿಕೊಂಡಿವೆ. ಗ್ರಾಹಕರನ್ನು ತಮ್ಮ ಕಡೆ ಸೆಳೆಯುವುದಕ್ಕಾಗಿ ಪರಸ್ಪರ ಪೈಪೋಟಿಗೆ ಇಳಿದಿವೆ. ಇದಕ್ಕೆ ಅನುಗುಣವಾಗಿ ವಿವಿಧ ಬೆಲೆಯ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಅಲ್ಪಾವಧಿ ಮಾನ್ಯತೆ ಮಾತ್ರವಲ್ಲದೆ ವಾರ್ಷಿಕ ಅವಧಿಯ ಮಾನ್ಯತೆ ನೀಡುವ ಪ್ಲಾನ್‌ಗಳು ಕೂಡ ಸೇರಿವೆ.
ಹೌದು, ವಾರ್ಷಿಕ ಅವಧಿಯ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಮೂರು ಟೆಲಿಕಾಂಗಳು ಕೂಡ ಪರಿಚಯಿಸಿವೆ. ಇದರಲ್ಲಿ ಗ್ರಾಹಕರು ತಮ್ಮ ಡೇಟಾ ಅಧ್ಯತೆ ಹಾಗೂ ಮಾನ್ಯತೆಗೆ ಅನುಗುಣವಾಗಿ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾದ್ರೆ ಒಂದು ವರ್ಷದ ಅವಧಿಯ ಮಾನ್ಯತೆ ನೀಡುವ ಪ್ರಮುಖ ಪ್ರಿಪೇಯ್ಡ್ ಪ್ಲಾನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ 1,799ರೂ. ವಾರ್ಷಿಕ ಪ್ಲಾನ್: ಏರ್‌ಟೆಲ್‌ನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಒಟ್ಟು ಅವಧಿಗೆ 24 GB ಡೇಟಾ ಪ್ರಯೋಜನ ನೀಡಲಿದೆ. ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಜೊತೆಗೆ ಒಂದು ವರ್ಷದವರೆಗೆ ಉಚಿತ ಹಲೋ ಟ್ಯೂನ್‌ಗಳು ಮತ್ತು ವೈಂಕ್ ಮ್ಯೂಸಿಕ್ ಉಚಿತ ಚಂದಾದಾರಿಕೆಗಳನ್ನು ಸಹ ನೀಡುತ್ತದೆ.
ಏರ್‌ಟೆಲ್‌ನ 2999ರೂ. ಪ್ರೀಪೇಯ್ಡ್ ಪ್ಲಾನ್: ಏರ್‌ಟೆಲ್ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋದ 2,879ರೂ. ವಾರ್ಷಿಕ ಪ್ಲಾನ್: ಜಿಯೋದ 2,879ರೂ. ಪ್ಲಾನ್ ನಿಮಗೆ 365 ದಿನಗಳ ವ್ಯಾಲಿಡಿಟಿ ಅಂದರೆ ಒಂದು ವರ್ಷದ ಮಾನ್ಯತೆಯನ್ನು ನೀಡಲಿದೆ. ಈ ಪ್ಲಾನ್‌ನಲ್ಲಿ ನಿಮಗೆ ಅನಿಯಮಿತ ಕರೆ ಮತ್ತು ದೈನಂದಿನ 2 GB 4G ಡೇಟಾ ಪ್ರಯೋಜನ ದೊರೆಯಲಿದೆ. ಇದಲ್ಲದೆ, 5G ಸ್ಮಾರ್ಟ್‌ಫೋನ್ ಬಳಕೆದಾರರು ಈ ಯೋಜನೆಯೊಂದಿಗೆ ಅನಿಯಮಿತ 5G ಡೇಟಾವನ್ನು ಅನುಭವಿಸಬಹುದು. ಈ ಪ್ಲಾನ್‌ನಲ್ಲಿ ನೀವು ಜಿಯೋ ಸಿನಿಮಾ ಮತ್ತು ಜಿಯೋಟಿವಿ ಸೇವೆಗಳಿಗೆ ಪ್ರವೇಶವನ್ನು ಸಹ ಪಡೆದುಕೊಳ್ಳಬಹುದಾಗಿದೆ.
ಜಿಯೋ 2999ರೂ. ಪ್ರಿಪೇಯ್ಡ್ ಪ್ಲಾನ್: ಜಿಯೋ ಟೆಲಿಕಾಂ ನೀಡುವ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ 2999ರೂ. ಪ್ರಿಪೇಯ್ಡ್ ಪ್ಲಾನ್ ಕೂಡ ಒಂದಾಗಿದೆ. ಈ ಪ್ಲಾನ್‌ನಲ್ಲಿ ಒಟ್ಟು ಅವಧಿಗೆ 912.5GB ಡೇಟಾ ಪ್ರಯೋಜನ ಸಿಗಲಿದ್ದು, ದೈನಂದಿನ ಮಿತಿ 2.5GB ಡೇಟಾ ಸಿಗಲಿದೆ. ಇನ್ನು ಈ ಅವಧಿಯಲ್ಲಿ ಪ್ರತಿನಿತ್ಯ ಅನಿಯಮಿತ ವಾಯ್ಸ್ ಕಾಲ್ ಮತ್ತು ಡೈಲಿ 100 SMS ಪ್ರಯೋಜನ ದೊರೆಯಲಿದೆ. ಇದಲ್ಲದೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಪ್ರಯೋಜನ ಕೂಡ ದೊರೆಯಲಿದೆ. ಜೊತೆಗೆ ಈ ಪ್ಲಾನ್‌ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ಗೆ ವಾರ್ಷಿಕ ಚಂದಾದಾರಿಕೆಯನ್ನು ಲಭ್ಯವಾಗಲಿದೆ.
ವಿ ಟೆಲಿಕಾಂ 1,799ರೂ. ವಾರ್ಷಿಕ ಪ್ಲಾನ್: ವಿ ಟೆಲಿಕಾಂ 1,799ರೂ. ಪ್ರಿಪೇಯ್ಡ್ ಪ್ಲಾನ್ ಒಂದು ವರ್ಷದ ಅವಧಿಯ ಮಾನ್ಯತೆಯನ್ನು ನೀಡಲಿದೆ. ಈ ಪ್ಲಾನ್‌ನಲ್ಲಿ ನಿಮಗೆ ಒಟ್ಟು ಅವಧಿಗೆ 24 GB ಡೇಟಾ ಮತ್ತು ದೈನಂದಿನ ಅನಿಯಮಿತ ಕರೆ ಪ್ರಯೋಜನ ಲಭ್ಯವಾಗಲಿದೆ.

ವಿ ಟೆಲಿಕಾಂ 2899ರೂ ಪ್ರಿಪೇಯ್ಡ್ ಪ್ಲಾನ್: ವಿ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವಿ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯ.
ವಿ ಟೆಲಿಕಾಂ 3,099ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್: ವಿ ಟೆಲಿಕಾಂ 3,099ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್ 365 ದಿನಗಳ ಮಾನ್ಯತೆ ಪಡೆದಿದೆ. ಈ ಸಮಯದಲ್ಲಿ ಪ್ರತಿನಿತ್ಯ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100SMS ಪ್ರಯೋಜನ ನೀಡಲಿದೆ. ಜೊತೆಗೆ ದೈನಂದಿನ 1.5GB ಡೇಟಾ ಪ್ರಯೋಜನ ಕೂಡ ಸಿಗಲಿದೆ. ಇದಲ್ಲದೆ ಈ ಪ್ಲಾನ್ ರಾತ್ರಿಯಿಡೀ ಬಿಂಜ್‌ಗೆ ಪ್ರವೇಶವನ್ನು ನೀಡುತ್ತದೆ. ಇದರಲ್ಲಿ ವಾರಾಂತ್ಯದ ಡೇಟಾ ರೋಲ್‌ಓವರ್ ಪ್ರಯೋಜನ, ವಿ ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶ ಕೂಡ ಸಿಗಲಿದೆ. ಇದರೊಂದಿಗೆ ಡೇಟಾ ಡಿಲೈಟ್‌ಗಳೊಂದಿಗೆ ಪ್ರತಿ ತಿಂಗಳು 2GB ವರೆಗಿನ ಬ್ಯಾಕಪ್ ಡೇಟಾವನ್ನು ನೀಡುತ್ತದೆ.


Click it and Unblock the Notifications








