ಜಿಯೋ, ಏರ್‌ಟೆಲ್, ವಿ ಟೆಲಿಕಾಂ: ಡೈಲಿ 3GB ಡೇಟಾ ಅಗತ್ಯವಿದ್ದರೆ ಈ ಪ್ಲಾನ್‌ಗಳು ಸೂಕ್ತ!
ದೇಶದ ಟೆಲಿಕಾಂ ವಲಯದಲ್ಲಿ ಈ ವರ್ಷ ಭಾರಿ ಮಹತ್ತರವಾದ ಬೆಳವಣಿಗೆಗಳು ನಡೆದಿವೆ. ಜಿಯೋ, ಏರ್‌ಟೆಲ್, ವಿ ಟೆಲಿಕಾಂಗಳು ತಮ್ಮ ಟಾರಿಫ್ ಅನ್ನು ಹೆಚ್ಚಳ ಮಾಡಿವೆ. ಇದೇ ಕಾರಣಕ್ಕೆ ಎಲ್ಲಾ ಟೆಲಿಕಾಂ ಗಳು ತಮ್ಮ ಬೇಸ್ ಪ್ಲಾನ್‌ಗಳ ಬೆಲೆ ಹೆಚ್ಚಳ ಮಾಡಿವೆ. ಈ ಪೈಕಿ ವಿ ಟೆಲಿಕಾಂ ತನ್ನ ಡಬಲ್ ಡೇಟಾ ಪ್ರಯೋಜನವನ್ನು ಸ್ಥಗಿತಗೊಳಿಸಿದೆ. ಟಾರಿಫ್ ಬೆಲೆ ಏರಿಕೆ ಮಾಡಿದ್ದರೂ ಕೂಡ ಕೆಲವು ಪ್ಲಾನ್‌ಗಳು ಯಾವುದೇ ಬದಲಾವಣೆಗಳನ್ನು ಕಂಡಿಲ್ಲ. ಆದರಲ್ಲಿ ನೀವು ಅಧಿಕ ಪ್ರಮಾಣದ ಡೇಟಾ ಹಾಗೂ ಕರೆ ಪ್ರಯೋಜನಗಳನ್ನು ಹುಡುಕುತ್ತಿದ್ದರೆ ದೈನಂದಿನ 3GB ಡೇಟಾ ನೀಡುವ ಪ್ಲಾನ್‌ಗಳು ಲಭ್ಯವಿದೆ.

ಹೌದು, ಏರ್‌ಟೆಲ್, ಜಿಯೋ, ವಿ ಟೆಲಿಕಾಂಗಳು ಪರಿಚಯಿಸಿರುವ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ 3GB ಡೇಟಾ ಪ್ಲಾನ್‌ಗಳು ಕೂಡ ಸೇರಿವೆ. ಈ ಪ್ಲಾನ್‌ಗಳು 28 ದಿನಗಳು, 56 ದಿನಗಳು ಮತ್ತು 84 ದಿನಗಳ ಮಾನ್ಯತೆಯನ್ನು ಹೊಂದಿವೆ. ಇನ್ನು ಈ ಪ್ಲಾನ್‌ಗಳಲ್ಲಿ ಅನಿಯಮಿತ ಕರೆಗಳು ಮತ್ತು SMS ಪ್ರಯೋಜನಗಳೊಂದಿಗೆ 3GB ದೈನಂದಿನ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಇವುಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಹೊಸ ಪ್ಲಾನ್‌ಗಳನ್ನು ಸಹ ಅಪ್ಡೇಟ್ ಮಾಡಲಾಗಿದೆ. ಹಾಗಾದ್ರೆ ದೈನಂದಿನ 3GB ಡೇಟಾ ನೀಡುವ ಪ್ಲಾನ್‌ಗಳನ್ನು ನೀವು ಹುಡುಕುತ್ತಿದ್ದರೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ 349ರೂ. ಪ್ರಿಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂನ 349ರೂ, ಪ್ರಿಪೇಯ್ಡ್ ಪ್ಲಾನ್ ದೈನಂದಿನ 3GB ಡೇಟಾ ಪ್ರಯೋಜನ ನೀಡಲಿದೆ. ಇನ್ನು ಈ ಪ್ಲಾನ್ ಅನಿಯಮಿತ ಆನ್-ನೆಟ್ ಕರೆ ಪ್ರಯೋಜನಗಳು ಮತ್ತು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಜೊತೆಗೆ ಅನಿಯಮಿತ ದೇಶೀಯ ಕರೆ ಸೌಲಭ್ಯವನ್ನು ಸಹ ಹೊಂದಿದೆ. ಈ ಪ್ಲಾನ್ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ನೀಡಲಿದೆ.

ಏರ್‌ಟೆಲ್ 398ರೂ. ಪ್ರಿಪೇಯ್ಡ್ ಪ್ಲಾನ್
ಏರ್‌ಟೆಲ್ ಟೆಲಿಕಾಂ ಪರಿಚಯಿಸಿರುವ 398ರೂ, ಪ್ರಿಪೇಯ್ಡ್ ಪ್ಲಾನ್ ದಿನಕ್ಕೆ 3GB ಡೇಟಾವನ್ನು ನೀಡಲಿದೆ. ಇನ್ನು ಈ ಪ್ಲಾನ್ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಹೊಂದಿದ್ದು, 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ಹೆಚ್ಚುವರಿ ಪ್ರಯೋಜನಗಳಲ್ಲಿ ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಗೆ ಚಂದಾದಾರಿಕೆಗಳ ಜೊತೆಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆಯನ್ನ ಸಹ ನೀಡಲಿದೆ. ಆದರೆ ಈ ಪ್ಲಾನ್‌ನಲ್ಲಿ ಯಾವುದೇ ಸ್ಟ್ರೀಮಿಂಗ್ ಪ್ರಯೋಜನಗಳು ಸಿಗುವುದಿಲ್ಲ.

ಏರ್‌ಟೆಲ್ 558ರೂ. ಪ್ಲಾನ್
ಇನ್ನು ಏರ್‌ಟೆಲ್ ಟೆಲಿಕಾಂ ಪರಿಚಯಿಸಿರುವ ಈ ಪ್ಲಾನ್ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದು 3GB ದೈನಂದಿನ ಡೇಟಾ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್‌ಗೆ ಪ್ರವೇಶವನ್ನು ನೀಡುತ್ತದೆ.

ವಿ 501ರೂ. ಪ್ರಿಪೇಯ್ಡ್ ಪ್ಲಾನ್
ವಿ ಟೆಲಿಕಾಂನ ಈ ಪ್ರಿಪೇಯ್ಡ್ ಪ್ಲಾನ್ 28 ದಿನಗಳವರೆಗೆ 3GB ದೈನಂದಿನ ಡೇಟಾವನ್ನು ನೀಡುತ್ತದೆ. ಈ ಪ್ಲಾನ್ ಅನಿಯಮಿತ ಕರೆ, ಡೈಲಿ 100 ಎಸ್ಎಂಎಸ್ ಪ್ರಯೋಜನ ನೀಡುತ್ತದೆ. ಇದು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 16GB ಹೆಚ್ಚುವರಿ ಡೇಟಾ ಮತ್ತು 1 ವರ್ಷದ ಚಂದಾದಾರಿಕೆಯನ್ನು ನೀಡುತ್ತದೆ. ಇದು ಹೈ-ಸ್ಪೀಡ್ ನೈಟ್‌ಟೈಮ್ ಇಂಟರ್ನೆಟ್, ವಿಕೆಂಡ್ ರೋಲ್‌ಓವರ್ ಡೇಟಾ ಪ್ರಯೋಜನ, ಮತ್ತು ವಿ ಚಲನಚಿತ್ರಗಳು ಮತ್ತು ಟಿವಿಯಂತಹ ಹೆಚ್ಚುವರಿ ಪ್ಲಾನ್‌ಗಳನ್ನು ನೀಡಲಿದೆ.

ವಿ 701ರೂ, ಪ್ರಿಪೇಯ್ಡ್ ಪ್ಲಾನ್
ವಿ ಟೆಲಿಕಾಂನ 701ರೂ, ಪ್ರಿಪೇಯ್ಡ್ ಪ್ಲಾನ್ 3GB ದೈನಂದಿನ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ನೀಡುತ್ತದೆ. ಇದು 56 ದಿನಗಳ ಮಾನ್ಯತೆಯನ್ನು ಹೊಂದಿದೆ. ಇನ್ನು ಈ ಪ್ಲಾನ್ ಇದೀಗ ಒಂದು ವರ್ಷ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡಲಿದೆ. ಈ ಪ್ಲಾನ್ ಹೆಚ್ಚುವರಿ ಪ್ರಯೋಜನಗಳಲ್ಲಿ ನೈಟ್ ಟೈಂ ಹೈ ಸ್ಪೀಡ್ ಡೇಟಾ, ವಿಕೆಂಡ್ ರೋಲ್‌ಓವರ್ ಪ್ರಯೋಜನಗಳು ಲಭ್ಯವಾಗಲಿದೆ.


Click it and Unblock the Notifications








