ವರ್ಷಪೂರ್ತಿ ಕರೆ ಮತ್ತು SMS ಗಳಿಗೆ ಮಾತ್ರ ಇರುವ 3 ಬೆಸ್ಟ್ ರೀಚಾರ್ಜ್ ಪ್ಲಾನ್ಸ್ ಇವು!
ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿವೆ. ರಿಲಯನ್ಸ್ ಜಿಯೋ, ವೊಡಾಫೋನ್-ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಬೆಲೆಗಳನ್ನು ಪರಿಷ್ಕರಿಸುತ್ತಿದ್ದು, ಧ್ವನಿ ಕರೆ ಮತ್ತು SMS ಮಾತ್ರ ಬಳಸುವ ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು ಪರಿಚಯಿಸಿವೆ. ಈ ಬದಲಾವಣೆಗಳು ಗ್ರಾಹಕರ ಬೇಡಿಕೆ ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನೀಡಿದ ಸೂಚನೆಗಳ ಪರಿಣಾಮವಾಗಿದೆ. ಹಾಗಾದರೆ, ಕೇವಲ ಧ್ವನಿ ಕರೆ ಮತ್ತು SMS ಮಾತ್ರ ಬಳಸುವ ಗ್ರಾಹಕರಿಗಾಗಿ ಟೆಲಿಕಾಂ ಕಂಪೆನಿಗಳು ಒದಗಿಸುತ್ತಿರುವ ಪ್ರಮುಖ ರೀಚಾರ್ಜ್ ಯೋಜನೆಗಳು ಯಾವುವು ನೋಡೋಣ ಬನ್ನಿ.
ಜಿಯೋವಿನ 1,748 ರೂ.ಯೋಜನೆ
ರಿಲಯನ್ಸ್ ಜಿಯೋ ತನ್ನ 1,958 ರೂ. ಯೋಜನೆಯನ್ನು 1,748 ರೂ.ಗೆ ಬದಲಾಯಿಸಿದೆ. ಈ ಯೋಜನೆಯಲ್ಲಿ 336 ದಿನಗಳ ವ್ಯಾಲಿಡಿಟಿ, ಅನಿಯಮಿತ ಧ್ವನಿ ಕರೆಗಳು ಮತ್ತು 3,600 SMS ಸಿಗುತ್ತವೆ. ಜಿಯೋಟಿವಿ, ಜಿಯೋಸಿನಿಮಾ ಮತ್ತು ಜಿಯೋಕ್ಲೌಡ್‌ನಂತಹ ಜಿಯೋ ಆಪ್‌ಗಳಿಗೆ ಚಂದಾದಾರಿಕೆ ಇದೆ. ಈ ಯೋಜನೆಯಲ್ಲಿ ದಿನಕ್ಕೆ 5.20 ರೂ. ಖರ್ಚಾಗುತ್ತದೆ. ಆದರೆ, ಈ ಯೋಜನೆಯ ವ್ಯಾಲಿಡಿಟಿಯನ್ನು ಹಿಂದಿನ ಯೋಜನೆಗಿಂತ 29 ದಿನಗಳು ಕಡಿಮೆ ಮಾಡಲಾಗಿದೆ.

ಏರ್‌ಟೆಲ್‌ನ 1,849 ರೂ.ಯೋಜನೆ
ಏರ್‌ಟೆಲ್ ತನ್ನ ವಾರ್ಷಿಕ ಯೋಜನೆಯ ಬೆಲೆಯನ್ನು ಈ ಮೊದಲಿದ್ದ 1,959 ರೂ.ಗಳಿಂದ 1,849 ರೂ.ಗೆ ಇಳಿಸಿದೆ. ಈ ಯೋಜನೆಯಲ್ಲಿ 365 ದಿನಗಳ ವ್ಯಾಲಿಡಿಟಿ, ಅನಿಯಮಿತ ಧ್ವನಿ ಕರೆಗಳು ಮತ್ತು 3,600 SMS ಸಿಗುತ್ತವೆ. ಜೊತೆಗೆ, ಅಪೊಲೊ 24/7 ಸರ್ಕಲ್ ಸದಸ್ಯತ್ವ ಮತ್ತು ಉಚಿತ ಹಲೋ ಟ್ಯೂನ್ ಸೇವೆಯೂ ಇದೆ. ಈ ಯೋಜನೆಗೆ ದಿನಕ್ಕೆ 5.06 ರೂ. ಖರ್ಚಾಗುತ್ತದೆ. ಜಿಯೋ ಕಂಪೆನಿಯಂತೆ ಏರ್‌ಟೆಲ್ ತನ್ನ ಯೋಜನೆಯ ವ್ಯಾಲಿಡಿಟಿಯನ್ನು ಕಡಿಮೆ ಮಾಡಿಲ್ಲ.
ವೊಡಾಫೋನ್ ಐಡಿಯಾದ 1,849 ರೂ.ಯೋಜನೆ
ವೊಡಾಫೋನ್ ಐಡಿಯಾ ತನ್ನ 1,958 ರೂ. ಯೋಜನೆಯನ್ನು 1849 ರೂ.ಗೆ ಬದಲಾಯಿಸಿದೆ. ಈ ಯೋಜನೆಯಲ್ಲಿ 365 ದಿನಗಳ ವ್ಯಾಲಿಡಿಟಿ, ಅನಿಯಮಿತ ಧ್ವನಿ ಕರೆಗಳು ಮತ್ತು 3,600 SMS ಸಿಗುತ್ತವೆ. ಈ ಯೋಜನೆಯಲ್ಲಿ ವೊಡಾಫೋನ್ ಐಡಿಯಾದ ಅಪ್ಲಿಕೇಷನ್‌ಗಳನ್ನು ಉಚಿತವಾಗಿ ಬಳಸಬಹುದು. ಈ ಯೋಜನೆಯಲ್ಲಿ ದಿನಕ್ಕೆ 5.06 ರೂ. ಖರ್ಚಾಗುತ್ತದೆ. ವಿಐ ಕೂಡ ಜಿಯೋ ಕಂಪೆನಿಯಂತೆ ತನ್ನ ಯೋಜನೆಯ ವ್ಯಾಲಿಡಿಟಿಯನ್ನು ಕಡಿಮೆ ಮಾಡಿಲ್ಲ.
ಸಾಮಾನ್ಯವಾಗಿ, ರಿಲಯನ್ಸ್ ಜಿಯೋ, ವೊಡಾಫೋನ್-ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳಲ್ಲಿ ಡೇಟಾ ಸೇವೆಯನ್ನು ಸೇರಿಸುತ್ತಿದ್ದವು. ಆದರೆ, ಧ್ವನಿ ಕರೆ ಮತ್ತು SMS ಮಾತ್ರ ಬಳಸುವ ಗ್ರಾಹಕರಿಗೆ ಅಗತ್ಯವಿಲ್ಲದ ಡೇಟಾ ಸೇವೆಗೆ ಹಣ ನೀಡಬೇಕಾಗುತ್ತದೆ. ವಯೋವೃದ್ಧರು ಮತ್ತು ಗ್ರಾಮೀಣ ಪ್ರದೇಶದ ಜನರು ಈ ಬಗ್ಗೆ ಟ್ರಾಯ್‌ಗೆ ದೂರು ನೀಡಿದ ಕಾರಣ, ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಧ್ವನಿ ಕರೆ ಮತ್ತು SMS ಮಾತ್ರ ಇರುವ ಯೋಜನೆಗಳನ್ನು ಪರಿಚಯಿಸಲು ಸೂಚಿಸಿದೆ. ಇದರಿಂದಾಗಿ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ (Vi) ಕಂಪೆನಿಗಳು ಪರಿಷ್ಕರಿಸುವ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿವೆ. ಟ್ರಾಯ್ ಈ ಹೊಸ ಯೋಜನೆಗಳನ್ನು ಗಮನಿಸುತ್ತಿದ್ದು, ಎಲ್ಲಾ ಕಂಪೆನಿಗಳು ತಮ್ಮ ಯೋಜನೆಗಳನ್ನು ನಿಯಮಾನುಸಾರವಾಗಿ ತರಬೇಕು ಎಂದು ಹೇಳಿದೆ.


Click it and Unblock the Notifications








