Home
ಸುದ್ದಿಜಾಲ

100ರೂ. ಒಳಗೆ ಡೇಟಾ ಮತ್ತು ಕರೆ ಪ್ರಯೋಜನ ನೀಡುವ ಪ್ಲಾನ್‌ಗಳು!

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ತಮ್ಮ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಲವು ಆಕರ್ಷಕ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಅಲ್ಪಾವಧಿ ಮಾತ್ರವಲ್ಲ ದೀರ್ಘಾವಧಿ ಪ್ಲಾನ್‌ಗಳನ್ನು ಕೂಡ ಹೊಂದಿವೆ. ಅಲ್ಲದೆ ಬಳಕೆದಾರರು 100ರೂ. ಒಳಗಿನ ಪ್ಲಾನ್‌ ಬಯಸಿದರೆ ಅದಕ್ಕೂ ಕೂಡ ಅವಕಾಶವನ್ನು ಕಲ್ಪಿಸಿವೆ. ಇದರಲ್ಲಿ ಏರ್‌ಟೆಲ್‌ ಜಿಯೋ, ವಿ ಟೆಲಿಕಾಂ ಕಂಪೆನಿಗಳು ಕೇವಲ ಡೇಟಾ ಮತ್ತು ವಾಯ್ಸ್‌ ಕಾಲ್‌ ಪ್ರಯೋಜನ ಹೊಂದಿರುವ ಅನೇಕ ಪ್ರಿಪೇಯ್ಡ್‌ ಪ್ಲಾನ್‌ ಒಳಗೊಂಡಿವೆ.

ಟೆಲಿಕಾಂ

ಹೌದು, ಟೆಲಿಕಾಂ ಕಂಪೆನಿಗಳು ಬಳಕೆದಾರರಿಗೆ ಕೆಲವು ಅಲ್ಪಾವಧಿ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್‌ ಪ್ಲಾನ್‌ಗಳನ್ನು ಹೊಂದಿವೆ. ಕೆಲವು ಅಗತ್ಯ ಸಂದರ್ಭದಲ್ಲಿ ಬಳಕೆದಾರರಿಗೆ ಅಲ್ಪಾವಧಿಯ ವ್ಯಾಲಿಡಿಟಿ ಹೊಂದಿರುವ ಪ್ಲಾನ್‌ ಅವಶ್ಯಕತೆ ಬರಬಹುದು. ಅಂತಹ ಸನ್ನಿವೇಶದಲ್ಲಿ ಈ ಪ್ಲಾನ್‌ಗಳು ಸಾಕಷ್ಟು ಉಪಯುಕ್ತ ಎನಿಸಿಲಿದೆ. ಈ ಪ್ಲಾನ್‌ಗಳು ಬಳಕೆದಾರರು ತಮ್ಮ ಯೋಜನೆಗಳನ್ನು ಸಕ್ರಿಯವಾಗಿರಿಸಿಕೊಳ್ಳುವುದಕ್ಕೆ ಸಹಾಯ ಮಾಡಲಿವೆ. ಹಾಗಾದ್ರೆ ಏರ್‌ಟೆಲ್‌, ಜಿಯೋ, ವಿ ಟೆಲಿಕಾಂ ಕಂಪೆನಿಗಳು ನೀಡುವ ಅಲ್ಪಾವಧಿಯ ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏರ್‌ಟೆಲ್

ಏರ್‌ಟೆಲ್

ಏರ್‌ಟೆಲ್ 100ರೂ.ಗಳ ಅಡಿಯಲ್ಲಿ 19ರೂ, 48ರೂ, 49ರೂ ಮತ್ತು 79ರೂ ಬೆಲೆಯ ರೀಚಾರ್ಜ್ ಪ್ಲಾನ್‌ಗಳನ್ನು ನೀಡುತ್ತದೆ. ಇದರಲ್ಲಿ 19ರೂ ಮತ್ತು 48ರೂ. ಪ್ಲಾನ್‌ಗಳು ಕೇವಲ ಡೇಟಾವನ್ನು ಮಾತ್ರ ನೀಡುತ್ತವೆ. 19ರೂ.ಗಳ ಪ್ಲಾನ್‌ ಎರಡು ದಿನಗಳವರೆಗೆ 200ಎಂಬಿ ಡೇಟಾ ನೀಡಿದರೆ, 48ರೂ.ಗಳ ಪ್ಲಾನ್‌ 28 ದಿನಗಳವರೆಗೆ 3ಜಿಬಿ ಡೇಟಾ ಪ್ರಯೋಜನವನ್ನು ನೀಡಲಿದೆ. ಹಾಗೆಯೇ 49ರೂ.ಗಳ ಪ್ಲಾನ್‌ 100 MB ಡೇಟಾ ಮತ್ತು 79ರೂ.ಗಳ ಪ್ಲಾನ್‌ 200 MB ಡೇಟಾವನ್ನು 28 ದಿನಗಳ ವ್ಯಾಲಿಡಿಟಿ ಮತ್ತು ಟಾಕ್‌ಟೈಮ್‌ ಅನ್ನು ನೀಡಲಿವೆ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ಟೆಲಿಕಾಂ 100ರೂ. ಒಳಗೆ ಹಲವು ಆಯ್ಕೆಯ ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿದೆ. ಇದರಲ್ಲಿ 97ರೂ.ಗಳ ಪ್ಲಾನ್‌ 18 ದಿನಗಳ ವ್ಯಾಲಿಡಿಟಿಯೊಂದಿಗೆ 100 SMS ಜೊತೆಗೆ ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಹಾಗೆಯೇ 99ರೂ.ಗಳ ಪ್ರಿಪೇಯ್ಡ್‌ ಪ್ಲಾನ್‌ 22 ದಿನಗಳ ಮಾನ್ಯತೆಯೊಂದಿಗೆ ಡೇಟಾ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ, BSNL 94ರೂ. ಬೆಲೆಯ ಡೇಟಾ ವೋಚರ್ ಪ್ರಯೋಜನ ನೀಡಲಿದ್ದು, 75 ದಿನಗಳ ಮಾನ್ಯತೆ ಮತ್ತು 3GB ಡೇಟಾ ನೀಡಲಿದೆ. ಇನ್ನು 75ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್‌ ಕೂಡ ಲಭ್ಯವಿದೆ. ಇದು ಇದು 50 ದಿನಗಳ ವ್ಯಾಲಿಡಿಟಿ ನೀಡಲಿದೆ.

ವಿ ಟೆಲಿಕಾಂ

ವಿ ಟೆಲಿಕಾಂ

ಇನ್ನು ವಿ ಟೆಲಿಕಾಂ 16ರೂ, 19ರೂ, 39ರೂ, 48ರೂ, 49ರೂ, 79ರೂ ಮತ್ತು 98ರೂ ಬೆಲೆಯ ಪ್ಲಾನ್‌ಗಳನ್ನು ಒಳಗೊಂಡಿವೆ. ಇದರಲ್ಲಿ 16ರೂ, ಡೇಟಾ ಯೋಜನೆಯು 24 ಗಂಟೆಗಳ ವ್ಯಾಲಿಡಿಟಿಯೊಂದಿಗೆ 1GB ಡೇಟಾವನ್ನು ನೀಡುತ್ತದೆ. ಇನ್ನು 19ರೂ, ಪ್ಲಾನ್‌ 200 MB ಡೇಟಾವನ್ನು 2 ದಿನಗಳ ವ್ಯಾಲಿಡಿಟಿ ಯೊಂದಿಗೆ ನೀಡಲಿದೆ. ಹಾಗೆಯೇ 39ರೂ.ಗಳ ಪ್ರಿಪೇಯ್ಡ್‌ ಪ್ಲಾನ್‌ 100MB ಡೇಟಾವನ್ನು 28 ದಿನಗಳ ವ್ಯಾಲಿಡಿಟಿ ಯೊಂದಿಗೆ ನೀಡುತ್ತದೆ. ಇನ್ನು 48ರೂ.ಗಳ ಪ್ಲಾನ್‌ ಡೇಟಾ-ಒನ್ಲಿ ರೀಚಾರ್ಜ್ ಯೋಜನೆಯಾಗಿದ್ದು, ಇದು 28 ದಿನಗಳವರೆಗೆ 3 GB ಡೇಟಾವನ್ನು ನೀಡುತ್ತದೆ. ಫೋನ್ ಅಥವಾ ವೆಬ್ ಅಪ್ಲಿಕೇಶನ್‌ನೊಂದಿಗೆ ರೀಚಾರ್ಜ್ ಮಾಡಿದರೆ ಈ ಯೋಜನೆಯು 200 MB ಹೆಚ್ಚುವರಿ ಡೇಟಾವನ್ನು ನೀಡುತ್ತದೆ. ಇದಲ್ಲದೆ ವಿ ಟೆಲಿಕಾಂ 49ರೂ. ಗಳಲ್ಲಿ ಕಾಂಬೊ ಡೇಟಾ ಯೋಜನೆಯನ್ನು ನೀಡುತ್ತದೆ. ಅದು 28 ದಿನಗಳವರೆಗೆ 300 MB ಡೇಟಾವನ್ನು ನೀಡುತ್ತದೆ. 79ರೂ. ಪ್ಲಾನ್‌ 400 MB ಡೇಟಾ ಮತ್ತು 64 ದಿನಗಳವರೆಗೆ ಟಾಕ್‌ಟೈಮ್ ನೀಡುತ್ತದೆ. 98ರೂ, ಪ್ಲಾನ್‌ ಡಬಲ್ ಡೇಟಾ ಕೊಡುಗೆಯಾಗಿದೆ ಮತ್ತು 28 ದಿನಗಳವರೆಗೆ 12GB ಡೇಟಾವನ್ನು ನೀಡುತ್ತದೆ.

ಜಿಯೋ

ಜಿಯೋ

ಜಿಯೋ ಟೆಲಿಕಾಂ ನೂರು ರೂ.ಒಳಗೆ ಪರಿಚಯಿಸಿರುವ ಪ್ಲಾನ್‌ಗಳಲ್ಲಿ 10ರೂ, 20ರೂ, 50ರೂ ಮತ್ತು 100ರೂ ಪ್ಲಾನ್‌ಗಳು ಸೇರಿವೆ. ಈ ಪ್ಲಾನ್‌ಗಳು ಟಾಕ್‌ಟೈಮ್ ಪ್ರಯೋಜನಗಳನ್ನು ನೀಡುತ್ತವೆ.

Best Mobiles in India

English summary
Airtel, Jio, BSNL and Vi offer telecom plans that give data and calling benefits.to know more visit to kannada.gizbot.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+