Airtel vs Jio vs VI: ಇಂದಿನಿಂದಲೇ ಪರಿಷ್ಕೃತ ದರ ಜಾರಿ..ಯಾವ ಯೋಜನೆ ಬೆಸ್ಟ್?
ಪ್ರಮುಖ ಟೆಲಿಕಾಂ (Telecom) ಸಂಸ್ಥೆಗಳಾದ Airtel, Reliance Jio, ಮತ್ತು Vodfone Idea ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳ ಬೆಲೆ ಏರಿಕೆಯನ್ನು ಘೋಷಿಸಿವೆ. ಏರ್ಟೆಲ್ ಹಾಗೂ ಜಿಯೋದ ಪರಿಷ್ಕೃತ ದರ ಇಂದಿನಿಂದಲೇ (ಜುಲೈ 3) ಜಾರಿಗೆ ಬರಲಿದೆ. ಆದರೆ Vi ರೀಚಾರ್ಜ್ ಯೋಜನೆಗಳು ಜುಲೈ 4 ರಿಂದ ಜಾರಿಗೆ ಬರಲಿದೆ. ಇದರೊಂದಿಗೆ, ಈ ನೂತನ ಪ್ರಿಪೇಯ್ಡ್ ಯೋಜನೆಗಳಲ್ಲಿ ಗ್ರಾಹಕರಿಗೆ ಯಾವ ಯೋಜನೆಯು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ನಿರ್ಧರಿಸಲು ಗೊಂದಲ ಉಂಟುಮಾಡುತ್ತದೆ. ಆದ್ದರಿಂದ ಈ ಸಮಸ್ಯೆ ಪರಿಹರಿಸಲು ನಿಮಗೆ ಸಹಾಯ ಮಾಡಲು ನಾವು ಈ ಲೇಖನವನ್ನು ಯಾವುದು ಬೆಸ್ಟ್ ಯೋಜನೆ ಎಂಬುದರ ಕುರಿತು ಮಾಹಿತಿ ನೀಡಿದ್ದೇವೆ ನೋಡಿ.
Airtel vs Jio vs Vi: 28 ದಿನಗಳ ವ್ಯಾಲಿಡಿಟಿಯೊಂದಿಗೆ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆ:
ಏರ್‌ಟೆಲ್ ರೂ. 349 ಯೋಜನೆ:
ನೀವು ಮಾಸಿಕವಾಗಿ ನಿಮ್ಮ ಫೋನ್ ಅನ್ನು ರೀಚಾರ್ಜ್ ಮಾಡಲು ಯೋಜಿಸುತ್ತಿದ್ದರೆ ಈ ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಯು ಅತ್ಯುತ್ತಮವಾಗಿರುತ್ತದೆ. ಪ್ಯಾಕ್ ಅನಿಯಮಿತ ಧ್ವನಿ ಕರೆಗಳನ್ನು ಮತ್ತು ಪ್ರತಿ ದಿನ 100 SMS ನೀಡುತ್ತದೆ. ಇದಲ್ಲದೆ ನೀವು ಪ್ರತಿದಿನ 1.5GB ಡೇಟಾವನ್ನು ಪಡೆಯಬಹುದು.

Jio ರೂ. 299 ಯೋಜನೆ:
ಈ ವಿಭಾಗದ ಇತರ ಆಪರೇಟರ್‌ಗಳಿಗೆ ಹೋಲಿಸಿದರೆ ರಿಲಯನ್ಸ್ ಜಿಯೋ ಅಗ್ಗದ ಯೋಜನೆಯನ್ನು ನೀಡುತ್ತಿದೆ. ಕಂಪನಿ ನೀಡಿರುವ ರೂ. 299ರ ಈ ಯೋಜನೆಯು ದಿನಕ್ಕೆ 1.5GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪಡೆಯಬಹುದು.
Vodafone Idea ರೂ. 349 ಯೋಜನೆ:
ವಿಐ ತನ್ನ 28 ದಿನಗಳ ವ್ಯಾಲಿಡಿಟಿಯ ಈ ಯೋಜನೆಯ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS, 12 AM ನಿಂದ 6 AM ನಡುವೆ ಅನಿಯಮಿತ ಡೇಟಾವನ್ನು ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಸಹ ಪಡೆಯಬಹುದು.
Airtel vs Jio vs Vi: 56 ದಿನಗಳ ವ್ಯಾಲಿಡಿಟಿಯ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆ:
ಏರ್‌ಟೆಲ್ ರೂ. 649 ಯೋಜನೆ:
ರೂ. 649 ಪ್ರಿಪೇಯ್ಡ್ ರೀಚಾರ್ಜ್ ಜೊತೆಗೆ ನೀವು ದಿನಕ್ಕೆ 2GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಅನ್ನು ಪಡೆಯುತ್ತೀರಿ. ಯೋಜನೆಯು 56 ದಿನಗಳ ಮಾನ್ಯತೆ ಪಡೆದಿರಲಿದೆ.
ಜಿಯೋ ರೂ. 629 ಯೋಜನೆ:
ರಿಲಯನ್ಸ್ ಜಿಯೋ ಏರ್ಟೆಲ್‌ಗೆ ಹೋಲಿಸಿದರೆ ಅಗ್ಗದ ರೀಚಾರ್ಜ್ ಯೋಜನೆ ನೀಡುತ್ತದೆ. 629 ರೂ. ಗಳ ರೀಚಾರ್ಜ್ ಜೊತೆಗೆ ದಿನಕ್ಕೆ 2GB ಡೇಟಾ ನೀಡುವುದರ ಜೊತೆಗೆ ಅನಿಯಮಿತ 5G ಡೇಟಾವನ್ನು ಸಹ ಒದಗಿಸುತ್ತದೆ. ಇದಲ್ಲದೇ ಜಿಯೋದಿಂದ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಅನ್ನು ಸಹ ಪಡೆಯಬಹುದು.
Vi ರೂ. 649 ಯೋಜನೆ:
ವೊಡಾಫೋನ್ ಐಡಿಯಾ ರೂ. 649 ರೀಚಾರ್ಜ್ ಮೂಲಕ ದಿನಕ್ಕೆ 2GB ಡೇಟಾ, ವಾರಾಂತ್ಯದ ಡೇಟಾ ರೋಲ್ ಓವರ್ ಸೌಲಭ್ಯದ ಜೊತೆಗೆ ಕಂಪನಿಯು ತನ್ನ ಗ್ರಾಹಕರಿಗೆ ರಾತ್ರಿ 12 ರಿಂದ ಬೆಳಗ್ಗೆ 6 ರವರೆಗೆ ನಡುವೆ ಅನಿಯಮಿತ ಡೇಟಾವನ್ನು ಸಹ ನೀಡುತ್ತಿದೆ. ಇದಲ್ಲದೆ, ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 SMS ಅನ್ನು ಸಹ ನೀಡುತ್ತದೆ.
Airtel vs Jio vs Vi 84 ದಿನಗಳ ವ್ಯಾಲಿಡಿಟಿಯೊಂದಿಗೆ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆ:
ಏರ್‌ಟೆಲ್ ರೂ. 859 ಯೋಜನೆ:
ಈ ರೀಚಾರ್ಜ್ ಜೊತೆಗೆ ನಿವು 84 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 1.5GB ಡೇಟಾ, ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 SMS ಅನ್ನು ಪಡೆಯಬಹುದಾಗಿದೆ.
Jio ರೂ. 859 ಯೋಜನೆ:
Jio ಗ್ರಾಹಕರು 84 ದಿನಗಳ ಮಾನ್ಯತೆ ಪಡೆಯಲು ರೂ. 859 ರೀಚಾರ್ಜ್ ಮಾಡಬೇಕು ಇದರಲ್ಲಿ ನೀವು ದಿನಕ್ಕೆ 2GB ಡೇಟಾ, ಗ್ರಾಹಕರಿಗೆ ಅನಿಯಮಿತ 5G ಡೇಟಾ ಪಡೆಯಬಹುದಾಗಿದೆ. ಯೋಜನೆಯು ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 SMS ಅನ್ನು ಸಹ ನೀಡುತ್ತದೆ.
Vi ರೂ. 859 ಯೋಜನೆ:
ಈ ಯೋಜನೆ ಮೂಲಕ ದಿನಕ್ಕೆ 1.5GB ಡೇಟಾ ಪಡೆಯಬಹುದು. ವಾರಾಂತ್ಯದ ಡೇಟಾ ರೋಲ್‌ಓವರ್ ಸೌಲಭ್ಯದ ಜೊತೆಗೆ ಕಂಪನಿಯು ತನ್ನ ಗ್ರಾಹಕರಿಗೆ ರಾತ್ರಿ 12 ರಿಂದ ಬೆಳಗ್ಗೆ 6 ರವರೆಗೆ ಅನಿಯಮಿತ ಡೇಟಾವನ್ನು ಸಹ ನೀಡುತ್ತಿದೆ. ಯೋಜನೆಗಳು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಅನ್ನು ಸಹ ನೀಡುತ್ತವೆ.
Airtel vs Jio vs Vi: 365 ದಿನಗಳ ವ್ಯಾಲಿಡಿಟಿಯೊಂದಿಗೆ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆ:
Airtel ರೂ. 3599 ಯೋಜನೆ:
ನೀವು ವಾರ್ಷಿಕ ರೀಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ ಏರ್‌ಟೆಲ್‌ನಿಂದ ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಯು ಅತ್ಯುತ್ತಮವಾಗಿದೆ. ಪ್ಯಾಕ್ ದಿನಕ್ಕೆ 2GB ಡೇಟಾ ಜೊತೆಗೆ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪಡೆಯಬಹುದಾಗಿದೆ.
Jio ರೂ. 3599 ಯೋಜನೆ:
ಜಿಯೋ ವಾರ್ಷಿಕ ರೀಚಾರ್ಜ್ ಯೋಜನೆಯು ಕೆಲವು ಆಸಕ್ತಿದಾಯಕ ಪ್ರಯೋಜನಗಳನ್ನು ನೀಡುತ್ತದೆ. ನೀವು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಜೊತೆಗೆ ದಿನಕ್ಕೆ 2.5GB ಡೇಟಾವನ್ನು ಪಡೆಯುತ್ತೀರಿ. ಇದಲ್ಲದೆ ಜಿಯೋ ಗ್ರಾಹಕರು ಈ ಯೋಜನೆ ಜೊತೆಗೆ ಅನಿಯಮಿತ 5G ಡೇಟಾವನ್ನು ಸಹ ಪಡೆಯಬಹುದು.
Vi ರೂ. 3499 ಯೋಜನೆ:
ವೊಡಾಫೋನ್ ಐಡಿಯಾದ ಅತ್ಯಂತ ದುಬಾರಿ ವಾರ್ಷಿಕ ರೀಚಾರ್ಜ್ ಯೋಜನೆಯು ಏರ್‌ಟೆಲ್ ಮತ್ತು ಜಿಯೋಗೆ ಹೋಲಿಸಿದರೆ ಕಡಿಮೆ ದೈನಂದಿನ ಡೇಟಾ ನೀಡುತ್ತದೆ. ರೂ. 3,499 ರೀಚಾರ್ಜ್ ಜೊತೆಗೆ ದಿನಕ್ಕೆ 1.5GB ಡೇಟಾ. ರಾತ್ರಿ 12 ರಿಂದ ಬೆಳಗ್ಗೆ 6 ರ ನಡುವೆ ಅನಿಯಮಿತ ಡೇಟಾ ಸಹ ನೀಡುತ್ತದೆ. ಜೊತೆಗೆ ವಾರಾಂತ್ಯದ ಡೇಟಾ ರೋಲ್‌ಓವರ್ ಸೌಲಭ್ಯವನ್ನು ನೀಡುತ್ತದೆ. ಇದು ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 SMS ಅನ್ನು ಸಹ ತರುತ್ತದೆ.


Click it and Unblock the Notifications








