ಏರ್‌ಟೆಲ್‌ 3ಜಿಯಿಂದ ಅತ್ಯುತ್ತಮ ಡೇಟಾ ಸೇವೆ

Written By:

ಭಾರತದಲ್ಲಿರುವ ಟೆಲಿಕಾಮ್ ಸೇವೆಯನ್ನು ಒದಗಿಸುವವರ ವಿಷಯಕ್ಕೆ ಬಂದಾಗ, ಕೆಲವೊಂದು ನಗರಗಳಲ್ಲಿ ತನ್ನ 4ಜಿ ಎಲ್‌ಟಿಇ ಸೇವೆಯನ್ನು ಮೊಬೈಲ್ ಫೋನ್‌ಗಳಲ್ಲಿ ಒದಗಿಸುವ ಮೂಲಕ ಏರ್‌ಟೆಲ್ ತನ್ನ ಸ್ಥಾನವನ್ನು ಭದ್ರಪಡಿಸುವ ನಿಟ್ಟಿನಲ್ಲಿದೆ.

ತನ್ನ ಬೆಳವಣಿಗೆಯನ್ನು ಇನ್ನಷ್ಟು ಅಭಿವೃದ್ಧಿಯ ಕಡೆಗೆ ಮುಂದುವರಿಸುತ್ತಾ, ಏರ್‌ಟೆಲ್ ತನ್ನ ಪ್ರಥಮ 3ಜಿ ವೈ-ಫೈ ಡೋಂಗಲ್ ಅನ್ನು ಮುಂಬೈ ಮತ್ತು ಆಂಧ್ರಪ್ರದೇಶದಲ್ಲಿ ಲಾಂಚ್ ಮಾಡಿದ್ದು ಈ ಸೇವೆಯನ್ನು ದೇಶದ ಇನ್ನಷ್ಟು ಪ್ರಮುಖ ನಗರಗಳಿಗೆ ವಿಸ್ತರಿಸುವ ಇರಾದೆಯನ್ನು ಹೊಂದಿದೆ.

ಏರ್‌ಟೆಲ್‌ನಿಂದ 3ಜಿ ವೈ-ಫೈ ಡೋಂಗಲ್

ಈ ಡೋಂಗಲ್ ಶಕ್ತಿಯುಳ್ಳ 3ಜಿ ವೈ-ಫೈಯು HSPA+ತಂತ್ರಜ್ಞಾನವನ್ನು ಹೊಂದಿದೆ. ಇದು ಬಳಕೆದಾರರಿಗೆ ಡೌನ್‌ಲೋಡ್ ವೇಗವನ್ನು 21.6 mbps ವರೆಗೆ 3ಜಿಯಲ್ಲಿ ನೀಡುತ್ತಿದೆ. ಈ ಡೋಂಗಲ್ ಅಂತರ್ನಿರ್ಮಿತ ವೈ-ಫೈ ಬೆಂಬಲದೊಂದಿಗೆ ಬಂದಿದ್ದು, ಲ್ಯಾಪ್‌ಟಾಪ್, ಫೋನ್ ಅಥವಾ ಕಾರಿನ ಸ್ಟಿರಿಯೋಗೆ ಈ ಡಾಂಗಲ್ ಅನ್ನು ಸಿಕ್ಕಿಸುವ ಮೂಲಕ ವೈಫೈ ಹಾಟ್‌ಸ್ಪಾಟ್‌ನ ಪ್ರಯೋಜವನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

ಇದನ್ನು ಒಮ್ಮೆಲೆ ಐದು ಡಿವೈಸ್‌ಗಳಿಗೆ ಸಂಪರ್ಕಪಡಿಸಬಹುದಾಗಿದ್ದು, ಇದು ಡೋಂಗಲ್ ಒದಗಿಸುವ ಅತ್ಯುತ್ತಮ ಸೇವೆಗಳಲ್ಲಿ ಒಂದೆನಿಸಿದೆ. ತನ್ನ ಹೆಚ್ಚಿನ ಚಂದಾದಾರರು ಮತ್ತು ಆದಾಯದ ಮೂಲಕ ದೇಶದ ಅತಿ ದೊಡ್ಡ ಮೊಬೈಲ್ ಆಪರೇಟರ್‌ಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಏರ್‌ಟೆಲ್ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ದಿನದಿಂದ ದಿನಕ್ಕೆ ಏರಿಸಿಕೊಳ್ಳುತ್ತಿದೆ.

ಅದಾಗ್ಯೂ, ಇತ್ತೀಚಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವಲ್ಲಿ ಏರ್‌ಟೆಲ್ ಮಾತ್ರ ಪ್ರಮುಖ ಪಾತ್ರ ವಹಿಸದೇ ಸಿಡಿಎಮ್‌ಎ ಸೇವೆಯನ್ನು ಒದಗಿಸವವರಾದ ಟಾಟಾ ಟೆಲಿಸರ್ವೀಸಸ್ ಮತ್ತು ಸಿಸ್ಟೆಮಾ ಶ್ಯಾಮ್ ಟೆಲಿಸರ್ವೀಸಸ್ ಕೂಡ ಉತ್ತಮ ಡೇಟಾ ಸೇವೆಯೊಂದಿಗೆ ಇಂತಹ ಡೋಂಗಲ್‌ಗಳನ್ನು ಒದಗಿಸುತ್ತಿವೆ.

ಗಿಜ್‌ಬಾಟ್‌ಗೆ ಭೇಟಿ ಕೊಡುತ್ತಿರಿ!

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot