Home
ಸುದ್ದಿಜಾಲ

ಹೊಸ ಗ್ರಾಹಕರಿಗೆ ಏರ್‌ಟೆಲ್‌ ನೀಡಿದೆ ಬಂಪರ್..! ಜಿಯೋಗೆ ಬಿಗ್‌ ಶಾಕ್‌..!

ಭಾರತೀಯ ಟೆಲಿಕಾಂ ಮಾರುಕಟ್ಟೆಯನ್ನು ಜಿಯೋ ತನ್ನ ಬಿಗಿ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಹಿನ್ನೆಲೆ ಹಾಗೂ ಐಡಿಯಾ ಮತ್ತು ಏರ್‌ಟೆಲ್‌ ಸಮ್ಮಿಲನಗೊಂಡು ಟೆಲಿಕಾಂ ಮಾರುಕಟ್ಟೆಯನ್ನು ತಮ್ಮ ತೆಕ್ಕೆಗೆ ತೆಗದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಒಂದು ಕಾಲದ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್‌ ಏರ್‌ಟೆಲ್‌ ತಾನೂ ಸಹ ಟೆಲಿಕಾಂ ಕ್ಷೇತ್ರದಲ್ಲಿ ಗ್ರಾಹಕರನ್ನು ಉಳಿಸಿಕೊಂಡು ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತಿದೆ.

ಹೊಸ ಗ್ರಾಹಕರಿಗೆ ಏರ್‌ಟೆಲ್‌ ನೀಡಿದೆ ಬಂಪರ್..! ಜಿಯೋಗೆ ಬಿಗ್‌ ಶಾಕ್‌..!

ಅದರಂತೆ, ಜಿಯೋ ಪ್ರಾಬಲ್ಯವನ್ನು ತಗ್ಗಿಸಲು ಏರ್‌ಟೆಲ್‌ ತನ್ನ ಹೊಸ ಗ್ರಾಹಕರಿಗೆ ಬಂಪರ್ ಆಫರ್‌ ಘೋಷಿಸಿದೆ. ಭಾರ್ತಿ ಏರ್‌ಟೆಲ್‌ ಕಂಪನಿ ಹೊಸ ಗ್ರಾಹಕರಿಗಾಗಿ 5 ಹೊಸ ಫಸ್ಟ್‌ ರಿಚಾರ್ಜ್‌ ಪ್ಲಾನ್‌ಗಳನ್ನು ಘೋಷಿಸಿದ್ದು, 178 ರೂ. ಗಳಿಂದ 559 ರೂ. ವರೆಗೆ ಲಭ್ಯವಿವೆ. ಎಲ್ಲಾ ಪ್ಲಾನ್‌ಗಳಲ್ಲೂ ಉಚಿತ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಯ ಅವಕಾಶವಿರುವುದು, ಗ್ರಾಹಕರನ್ನು ಸೆಳೆಯುತ್ತಿದೆ. ಆಗಿದ್ದರೆ, ಆ ಪ್ಲಾನ್‌ಗಳು ಯಾವುವು..? ವ್ಯಾಲಿಡಿಟಿ ಎಷ್ಟು..? ಆಫರ್‌ನಲ್ಲಿ ಏನೇನಿದೆ..? ಎಂಬುದನ್ನು ಮುಂದೆ ನೋಡಿ.

ಯಾವ್ಯಾವ ರಿಚಾರ್ಜ್‌ ಪ್ಲಾನ್‌..?

ಯಾವ್ಯಾವ ರಿಚಾರ್ಜ್‌ ಪ್ಲಾನ್‌..?

ಏರ್‌ಟೆಲ್‌ ತನ್ನ ಹೊಸ ಗ್ರಾಹಕರಿಗಾಗಿ ಘೋಷಿಸಿರುವ ಫಸ್ಟ್‌ ರಿಚಾರ್ಜ್‌ ಪ್ಲಾನ್‌ಗಳು 178 ರೂ. ಗಳಿಂದ 559 ರೂ. ವರೆಗೆ ಲಭ್ಯವಿವೆ. 178 ರೂ., 229 ರೂ., 344 ರೂ., 495 ರೂ. ಮತ್ತು 559 ರೂ. ರಿಚಾರ್ಜ್‌ ಪ್ಲಾನ್‌ಗಳಿದ್ದು, ಹೊಸ ಗ್ರಾಹಕರು ಮೈ ಏರ್‌ಟೆಲ್ ಆಪ್‌ ಅಥವಾ ಏರ್‌ಟೆಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ರಿಚಾರ್ಜ್‌ ಮಾಡಿಸಿಕೊಳ್ಳಬಹುದು. ಹಾಗೂ ಸಿಮ್ ತೆಗೆದುಕೊಂಡ ಸ್ಟೋರ್‌ನಲ್ಲಿಯೂ ಈ ಪ್ಲಾನ್‌ಗಳು ಲಭ್ಯವಿವೆ.

FRC 178 ರೂ. ಪ್ಲಾನ್‌

FRC 178 ರೂ. ಪ್ಲಾನ್‌

ಏರ್‌ಟೆಲ್‌ನ ಹೊಸ ಗ್ರಾಹಕರು 178 ರೂ. ರೀಚಾರ್ಜ್ ಮಾಡಿಸಿಕೊಂಡರೆ ಪ್ರತಿದಿನ 1GB 3G/4G ಡೇಟಾವನ್ನು ಪಡೆಯಲಿದ್ದಾರೆ. ಮತ್ತು ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್‌ ಔಟ್‌ಗೋಯಿಂಗ್‌ ಕರೆಗಳು ಉಚಿತವಾಗಿ ದೊರೆಯಲಿವೆ. ಮತ್ತು ದಿನಕ್ಕೆ 100 SMS ಉಚಿತವಾಗಿ ಗ್ರಾಹಕರು ಪಡೆಯಲಿದ್ದು, 28 ದಿನಗಳವರೆಗೆ ಈ ಆಫರ್‌ನ್ನು ಆನಂದಿಸಬಹುದು.

FRC 299 ರೂ. ಪ್ಲಾನ್‌

FRC 299 ರೂ. ಪ್ಲಾನ್‌

299 ರೂ. ಫಸ್ಟ್‌ ರೀಚಾರ್ಜ್ ಪ್ಲಾನ್‌ನಲ್ಲಿ ಹೊಸ ಗ್ರಾಹಕರಿಗೆ ಪ್ರತಿದಿನ 1.4GB 3G/4G ಡೇಟಾ ಸಿಗಲಿದೆ. ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರಾಷ್ಟ್ರೀಯ ರೋಮಿಂಗ್‌ ಕರೆಗಳು ಉಚಿತವಾಗಿ ಗ್ರಾಹಕರು ಪಡೆಯಲಿದ್ದಾರೆ. ಹಾಗೂ ಪ್ರತಿದಿನ 100 SMSಗಳು ಉಚಿತವಾಗಿ ಸಿಗಲಿವೆ. ಈ ಆಫರ್ ವ್ಯಾಲಿಡಿಟಿ ಕೂಡ 28 ದಿನಗಳಾಗಿದ್ದು, ಹೊಸ ಆಫರ್ ಪಡೆಯಬಹುದಾಗಿದೆ.

FRC 344 ರೂ. ಪ್ಲಾನ್‌

FRC 344 ರೂ. ಪ್ಲಾನ್‌

ಏರ್‌ಟೆಲ್‌ನ ಹೊಸ ಗ್ರಾಹಕರು FRC 344 ರೂ. ರೀಚಾರ್ಜ್ ಪ್ಲಾನ್‌ ಆಯ್ದುಕೊಂಡರೆ ಪ್ರತಿದಿನ 2GB 3G/4G ಡೇಟಾ ಪಡೆಯಲಿದ್ದಾರೆ. ಹಾಗೂ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್‌ ಔಟ್‌ಗೋಯಿಂಗ್‌ ಕರೆಗಳು ಉಚಿತವಾಗಿ ಸಿಗಲಿವೆ. ಮತ್ತು ಪ್ರತಿನಿತ್ಯ 100 SMSನ್ನು ಉಚಿತವಾಗಿ ಪಡೆಯಲಿದ್ದು, 28 ದಿನಗಳವರೆಗೆ ಈ ಆಫರ್ ವ್ಯಾಲಿಡಿಟಿ ಹೊಂದಿದೆ.

FRC 495 ಮತ್ತು 559 ರೂ. ಪ್ಲಾನ್‌ಗಳು

FRC 495 ಮತ್ತು 559 ರೂ. ಪ್ಲಾನ್‌ಗಳು

ಎರಡು FRC 495 ಮತ್ತು 559 ರೂ. ಪ್ಲಾನ್‌ಗಳು ಏರ್‌ಟೆಲ್‌ನ ಹೊಸ ಗ್ರಾಹಕರಿಗೆ ಪ್ರತಿದಿನ 1.4 GB 3G/4G ಡೇಟಾ ನೀಡಲಿದ್ದು, ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರಾಷ್ಟ್ರೀಯ ರೋಮಿಂಗ್‌ ಕರೆಗಳು ಉಚಿತವಾಗಿ ಸಿಗಲಿವೆ. ಹಾಗೂ ದೈನಂದಿನವಾಗಿ 100 SMSನ್ನು ಉಚಿತವಾಗಿ ಪಡೆಯಲಿದ್ದು, ಕ್ರಮವಾಗಿ 84 ದಿನ ಹಾಗೂ 90 ದಿನಗಳ ವ್ಯಾಲಿಡಿಟಿ ಹೊಂದಿವೆ.

ಸೌಲಭ್ಯ ದುರ್ಬಳಕೆಯಾದರೆ ಆಫರ್ ವಾಪಸ್‌

ಸೌಲಭ್ಯ ದುರ್ಬಳಕೆಯಾದರೆ ಆಫರ್ ವಾಪಸ್‌

ಏರ್‌ಟೆಲ್‌ ನೀಡಿರುವ ಅನಿಯಮಿತ ಕರೆ ಸೌಲಭ್ಯ ದುರ್ಬಳಕೆಯಾದರೆ ನಿರ್ದಿಷ್ಟ ನಂಬರ್‌ನಿಂದ ಆಫರ್ ವಾಪಸ್‌ ಪಡೆಯುವ ಚಿಂತನೆಯನ್ನು ಏರ್‌ಟೆಲ್‌ ಮಾಡಿದೆ. ಈ ಮೇಲಿನ ಆಫರ್‌ಗಳು ಹೊಸ ಗ್ರಾಹಕರಿಗೆ ಮಾತ್ರ ಅನ್ವಯಿಸಲಿವೆ. ಹೀಗಾಗಲೇ ಇರುವ ಏರ್‌ಟೆಲ್‌ ಗ್ರಾಹಕರು 178 ರೂ. ಮತ್ತು 229 ರೂ, ಪ್ಲಾನ್‌ಗಳ ಸಾಮ್ಯತೆಯನ್ನು 149 ರೂ. ಮತ್ತು 199 ರೂ. ಪ್ಲಾನ್‌ಗಳಲ್ಲಿ ಪಡೆಯಬಹುದಾಗಿದೆ.

23ನೇ ವರ್ಷಕ್ಕೆ ಕೊಡುಗೆ

23ನೇ ವರ್ಷಕ್ಕೆ ಕೊಡುಗೆ

ಇತ್ತೀಚೆಗೆ ತಾನೇ ಭಾರ್ತಿ ಏರ್‌ಟೆಲ್‌ ತನ್ನ 23ನೇ ವಾರ್ಷಿಕೋತ್ಸವ ಸಂಭ್ರಮಕ್ಕಾಗಿ 100 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿಸಿದ ಹಾಗೂ ಇನ್ಫಿನಿಟಿ ಪೋಸ್ಟ್‌ಪೇಡ್‌ ಪ್ಲಾನ್‌ಗೆ ಬದಲಾದರೆ ಏರ್‌ಟೆಲ್‌ 51 ರೂ. ಮೌಲ್ಯದ ಅಮೆಜಾನ್‌ ಪೇ ಡಿಜಿಟಲ್ ಗಿಫ್ಟ್‌ ಕಾರ್ಡ್ ನೀಡುತ್ತಿದೆ. ಹೀಗಾಗಲೇ 5 ಲಕ್ಷ ಅಮೆಜಾನ್‌ ಪೇ ಗಿಫ್ಟ್‌ ಕಾರ್ಡ್‌ನ್ನು ತೆಗೆದುಕೊಂಡಿದ್ದು, ಇದನ್ನು ಮೊಬೈಲ್‌ ರೀಚಾರ್ಜ್‌, ಬಿಲ್‌ ಪೇಮೆಂಟ್‌, ಅಮೆಜಾನ್‌ ಶಾಪಿಂಗ್‌ ಮಾಡಲು ಗ್ರಾಹಕರು ಬಳಸಬಹುದು.

Best Mobiles in India

English summary
Airtel Launches 5 Recharges for First-Time Subscribers, Offers Up to 126GB Data. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+