ಜಿಯೋಗೆ ನಡುಕ ಶುರು: ಏರ್‌ಟೆಲ್ ಲಾಂಚ್ ಮಾಡಿತು 6 ಹೊಸ ಪ್ಯಾಕ್....!
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರನ್ನು ಉಳಿಸಿಕೊಳ್ಳುವ ಸಲುವಾಗಿ ಹಲವು ಮಾದರಿಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಹೊಸ ಪ್ಲಾನ್‌ಗಳನ್ನು ಲಾಂಚ್ ಮಾಡುವುದು ಒಂದಾಗಿದೆ. ಇದೇ ರೀತಿಯಲ್ಲಿ ಏರ್‌ಟೆಲ್ ಒಟ್ಟು ಆರು ಹೊಸ ಮಾದರಿಯ ಪ್ಲಾನ್‌ಗಳನ್ನು ಒಮ್ಮೆಗೆ ಲಾಂಚ್ ಮಾಡಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಹುಟ್ಟಿಹಾಕುವ ಪ್ರಯತ್ನವನ್ನು ಮಾಡುತ್ತಿದೆ.
ಇದೇ ಎರಡು ದಿನಗಳ ಹಿಂದೆ ವೊಡಾಫೋನ್ ಐಡಿಯಾ ತಮ್ಮ ಬಳಕೆದಾರರಿಗೆ ಒಟ್ಟಿಗೆ ಆರು ಹೊಸ ಪ್ಲಾನ್‌ಗಳನ್ನು ಲಾಂಚ್ ಮಾಡಿದ ಮಾದರಿಯಲ್ಲಿಯೇ ಏರ್‌ಟೆಲ್ ಸಹ ತನ್ನ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಲಾಭವನ್ನು ಮಾಡಿಕೊಡುವ ಸಲುವಾಗಿ ಒಮ್ಮೆಗೆ ಆರು ಹೊಸ ಪ್ಲಾನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.

ಒಟ್ಟು ಆರು ಆಫರ್
ರೂ.25 ರಿಂದ ಹಿಡಿದು ರೂ.245ರ ವರೆಗೂ ಪ್ಲಾನ್‌ಗಳನ್ನು ಲಾಂಚ್ ಮಾಡಿರುವ ಏರ್‌ಟೆಲ್. ಈ ಪ್ಲಾನ್‌ನಲ್ಲಿ ತನ್ನ ಬಳಕೆದಾರರಿಗೆ ಟಾಕ್ ಟೈಮ್, ಡೇಟಾ ಮತ್ತು ಕರೆ ದರ ಕಡಿತದ ಆಫರ್‌ಗಳನ್ನು ನೀಡಲು ಮುಂದಾಗಿದೆ. ಏರ್‌ಟೆಲ್ ನೀಡಿರುವ ಎಲ್ಲಾ ಪ್ಲಾನ್‌ಗಳ ವಾಲಿಡಿಟಿಯೂ 28 ದಿನಗಳಿಂದ ಪ್ರಾರಂಭವಾಗುತ್ತವೆ.

ರೂ. 25 ಪ್ಲಾನ್:
28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ 10 MB ಡೇಟಾ ಬಳಕೆಗೆ ನೀಡಲಿದ್ದು, ಇದರೊಂದಿಗೆ ರೂ.18.69 ಟಾಕ್ ಟೈಮ್ ದೊರೆಯಲಿದೆ. ಸದ್ಯ ಏರ್‌ಟೆಲ್ ಲಾಂಚ್ ಆಗಿರುವ ಅತೀ ಸಣ್ಣ ರೀಚಾರ್ಜ್ ಮೊತ್ತ ಇದಾಗಿದೆ.

ರೂ. 35 ಪ್ಲಾನ್:
28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ 10೦ MB ಡೇಟಾ ಬಳಕೆಗೆ ನೀಡಲಿದ್ದು, ಇದರೊಂದಿಗೆ ರೂ.26.6 ಟಾಕ್ ಟೈಮ್ ದೊರೆಯಲಿದೆ. ಇದರಲ್ಲಿ ಒಂದು ನಿಮಿಷಕ್ಕೆ 60 ಪೈಸೆಯ ಕರೆ ದರವನ್ನು ವಿಧಿಸಲಾಗಿದೆ.

ರೂ. 65 ಪ್ಲಾನ್:
28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ 20೦ MB ಡೇಟಾ ಬಳಕೆಗೆ ನೀಡಲಿದ್ದು, ಇದರೊಂದಿಗೆ ರೂ.65 ಟಾಕ್ ಟೈಮ್ ದೊರೆಯಲಿದೆ. ಇದರಲ್ಲಿ ಒಂದು ನಿಮಿಷಕ್ಕೆ 60 ಪೈಸೆಯ ಕರೆ ದರವನ್ನು ವಿಧಿಸಲಾಗಿದೆ.

ರೂ. 95 ಪ್ಲಾನ್:
28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ 500 MB ಡೇಟಾ ಬಳಕೆಗೆ ನೀಡಲಿದ್ದು, ಇದರೊಂದಿಗೆ ರೂ.95 ಟಾಕ್ ಟೈಮ್ ದೊರೆಯಲಿದೆ. ಇದರಲ್ಲಿ ಒಂದು ನಿಮಿಷಕ್ಕೆ 30 ಪೈಸೆಯ ಕರೆ ದರವನ್ನು ವಿಧಿಸಲಾಗಿದೆ.

ರೂ. 145 ಪ್ಲಾನ್:
28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ 1 GB ಡೇಟಾ ಬಳಕೆಗೆ ನೀಡಲಿದ್ದು, ಇದರೊಂದಿಗೆ ರೂ.145 ಟಾಕ್ ಟೈಮ್ ದೊರೆಯಲಿದೆ. ಇದರಲ್ಲಿ ಒಂದು ನಿಮಿಷಕ್ಕೆ 30 ಪೈಸೆಯ ಕರೆ ದರವನ್ನು ವಿಧಿಸಲಾಗಿದೆ.

ರೂ. 245 ಪ್ಲಾನ್:
84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ 2 GB ಡೇಟಾ ಬಳಕೆಗೆ ನೀಡಲಿದ್ದು, ಇದರೊಂದಿಗೆ ರೂ.245 ಟಾಕ್ ಟೈಮ್ ದೊರೆಯಲಿದೆ. ಇದರಲ್ಲಿ ಒಂದು ನಿಮಿಷಕ್ಕೆ 30 ಪೈಸೆಯ ಕರೆ ದರವನ್ನು ವಿಧಿಸಲಾಗಿದೆ.


Click it and Unblock the Notifications








