Home
ಸುದ್ದಿಜಾಲ

ಇದೇ ಮೊದಲು! ಸ್ಪ್ಯಾಮ್ ಪತ್ತೆಗೆ Airtel ಎಐ ಚಾಲಿತ ನೆಟ್‌ವರ್ಕ್ ಪ್ರಾರಂಭ

AI-Powered Network Solution: ಇತ್ತೀಚೆಗೆ ಸ್ಪ್ಯಾಮ್ ಕರೆಗಳು, ಸಂದೇಶಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಭಾರ್ತಿ ಏರ್‌ಟೆಲ್ (Airtel) ಮಹತ್ವದ ಹೆಜ್ಜೆ ಇಟ್ಟಿದೆ. ಹೌದು, ಇಂದು ಸ್ಪ್ಯಾಮ್ ಪತ್ತೆಗಾಗಿ ಎಐ ಚಾಲಿತ ನೆಟ್‌ವರ್ಕ್ ಅನ್ನು ಪ್ರಾರಂಭಿಸಿದೆ. ಇದು ಭಾರತದ ಮೊದಲ ಎಐ ಚಾಲಿತ ನೆಟ್‌ವರ್ಕ್ ಆಗಿದೆ. ಈ ಮೂಲಕ ಏರ್‌ಟೆಲ್ ತನ್ನ ಗ್ರಾಹಕರಿಗೆ ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳ ಸಮಸ್ಯೆಯನ್ನು ಪರಿಹರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಏರ್‌ಟೆಲ್‌ ಈ ಎಐ ಪರಿಹಾರವು ನೈಜ ಸಮಯದಲ್ಲಿ 1 ಟ್ರಿಲಿಯನ್ ದಾಖಲೆಗಳನ್ನು ಪ್ರಕ್ರಿಯೆಗೊಳಿಸುತ್ತದೆ. ನಿತ್ಯ 100 ಮಿಲಿಯನ್ ಸ್ಪ್ಯಾಮ್ ಕರೆಗಳು ಮತ್ತು 3 ಮಿಲಿಯನ್ ಸಂದೇಶಗಳನ್ನು ಫ್ಲ್ಯಾಗ್ ಮಾಡುತ್ತದೆ. ಈ ಮೊದಲ ರೀತಿಯ ಪರಿಹಾರವು, ಎಲ್ಲಾ ಶಂಕಿತ ಸ್ಪ್ಯಾಮ್ ಕರೆಗಳು ಮತ್ತು ಎಸ್ಎಂಎಸ್‌ಗಳಿಗೆ ನೈಜ ಸಮಯದಲ್ಲಿ ಗ್ರಾಹಕರನ್ನು ಎಚ್ಚರಿಸುವ ಸಾಧನವಾಗಿದೆ. ಈ ಪರಿಹಾರವು ಉಚಿತವಾಗಿ ಲಭ್ಯವಿದೆ. ಎಲ್ಲಾ ಏರ್‌ಟೆಲ್ ಗ್ರಾಹಕರಿಗೂ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲದೇ ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಗುತ್ತದೆ.

ಇದೇ ಮೊದಲು! ಸ್ಪ್ಯಾಮ್ ಪತ್ತೆಗೆ Airtel ಎಐ ಚಾಲಿತ ನೆಟ್‌ವರ್ಕ್ ಪ್ರಾರಂಭ

ಈ ಕುರಿತು ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್ ವಿಟ್ಟಲ್ ಮಾಹಿತಿ ನೀಡಿದ್ದಾರೆ. ಸ್ಪ್ಯಾಮ್ ಗ್ರಾಹಕರಿಗೆ ಅಪಾಯವಾಗಿದೆ. ನಾವು ಇದನ್ನು ಸಮಗ್ರವಾಗಿ ಪರಿಹರಿಸಲು ಕಳೆದ ಒಂದು ವರ್ಷ ಶ್ರಮಿಸಿದ್ದೇವೆ. ಇಂದು ನಾವು ಒಂದು ಮೈಲಿಗಲ್ಲನ್ನು ತುಲುಪಿದ್ದೇವೆ. ದೇಶದ ಮೊದಲ ಎಐ ಚಾಲಿತ ಸ್ಪ್ಯಾಮ್-ಮುಕ್ತ ನೆಟ್‌ವರ್ಕ್ ಅನ್ನು ಪ್ರಾರಂಭಿಸಿದ್ದೇವೆ. ಇದು ನಮ್ಮ ಗ್ರಾಹಕರನ್ನು ಒಳನುಗ್ಗುವ ಮತ್ತು ಅನಗತ್ಯ ಸಂವಹನಗಳ ನಿರಂತರ ದಾಳಿಯಿಂದ ರಕ್ಷಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

ಡ್ಯುಯಲ್ ಲೇಯರ್ ಪ್ರೊಟೆಕ್ಷನ್ ಮೆಕ್ಯಾನಿಸಂ

ಇದು ಎರಡು ಫಿಲ್ಟರ್‌ಗಳನ್ನು ಒಳಗೊಂಡಿದೆ. ಒಂದು ನೆಟ್‌ವರ್ಕ್ ಲೇಯರ್‌ ಮತ್ತು ಎರಡನೆಯದು ಐಟಿ ಸಿಸ್ಟಮ್ಸ್ ಲೇಯರ್‌. ಇದನ್ನು ಡ್ಯುಯಲ್ ಲೇಯರ್ ಪ್ರೊಟೆಕ್ಷನ್ ಸಿಸ್ಟಮ್‌ನಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ಕರೆ ಮತ್ತು ಎಸ್‌ಎಂಎಸ್ ಈ ಡ್ಯುಯಲ್ ಲೇಯರ್ಡ್ ಎಐ ಶೀಲ್ಡ್ ಮೂಲಕ ಹಾದುಹೋಗುತ್ತದೆ. ಕೇವಲ 2 ಮಿಲಿಸೆಕೆಂಡ್‌ಗಳಲ್ಲಿ, ನಿತ್ಯ 1.5 ಶತಕೋಟಿ ಸಂದೇಶಗಳನ್ನು ಮತ್ತು 2.5 ಶತಕೋಟಿ ಕರೆಗಳನ್ನು ಪ್ರಕ್ರಿಯೆಗೊಳಿಸುತ್ತದೆ.

ಈ ನೂತನ ಎಐ ಚಾಲಿತ ನೆಟ್‌ವರ್ಕ್ 100 ಮಿಲಿಯನ್ ಸಂಭಾವ್ಯ ಸ್ಪ್ಯಾಮ್ ಕರೆಗಳನ್ನು ಮತ್ತು 3 ಮಿಲಿಯನ್ ಸ್ಪ್ಯಾಮ್ ಎಸ್‌ಎಂಎಸ್‌ಗಳನ್ನು ನೈಜ ಸಮಯದಲ್ಲಿ ಪ್ರಕ್ರಿಯೆಗೊಳಿಸುತ್ತದೆ. ನಮ್ಮ ಗ್ರಾಹಕರನ್ನು ಸುರಕ್ಷಿತವಾಗಿರಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಗೋಪಾಲ್ ವಿಟ್ಟಲ್ ತಿಳಿಸಿದ್ದಾರೆ.

ಇದೇ ಮೊದಲು! ಸ್ಪ್ಯಾಮ್ ಪತ್ತೆಗೆ Airtel ಎಐ ಚಾಲಿತ ನೆಟ್‌ವರ್ಕ್ ಪ್ರಾರಂಭ

ದುರುದ್ದೇಶಪೂರಿತ ಲಿಂಕ್ ಪತ್ತೆ

ಏರ್‌ಟೆಲ್‌ನ ಡೇಟಾ ವಿಜ್ಞಾನಿಗಳು ಎಐ ಚಾಲಿತ ನೆಟ್‌ವರ್ಕ್ ಅಭಿವೃದ್ಧಿಪಡಿಸಿದ್ದಾರೆ. ಕರೆಗಳು ಮತ್ತು ಎಸ್‌ಎಂಎಸ್‌ಗಳನ್ನು 'ಶಂಕಿತ ಸ್ಪ್ಯಾಮ್' ಎಂದು ಗುರುತಿಸಲು ಮತ್ತು ವರ್ಗೀಕರಿಸಲು ಸ್ವಾಮ್ಯದ ಅಲ್ಗಾರಿದಮ್ ಅನ್ನು ಬಳಸುತ್ತಾರೆ. ಎಐ ಚಾಲಿತ ನೆಟ್‌ವರ್ಕ್ ಕರೆ ಮಾಡುವವರ ಅಥವಾ ಕಳುಹಿಸುವವರ ಬಳಕೆಯ ಮಾದರಿಗಳು, ಕರೆ, ಎಸ್‌ಎಂಎಸ್ ಆವರ್ತನ ಮತ್ತು ಕರೆ ಅವಧಿಯಂತಹ ವಿವಿಧ ನಿಯತಾಂಕಗಳನ್ನು ನೈಜ ಸಮಯದಲ್ಲಿ ವಿಶ್ಲೇಷಿಸುತ್ತದೆ. ಶಂಕಿತ ಸ್ಪ್ಯಾಮ್ ಕರೆಗಳು ಮತ್ತು ಎಸ್‌ಎಂಎಸ್‌ಗಳನ್ನು ನಿಖರವಾಗಿ ಫ್ಲ್ಯಾಗ್ ಮಾಡುತ್ತದೆ.

ಅಲ್ಲದೆ, ಎಸ್‌ಎಂಎಸ್ ಮೂಲಕ ಸ್ವೀಕರಿಸಿದ ದುರುದ್ದೇಶಪೂರಿತ ಲಿಂಕ್‌ಗಳ ಬಗ್ಗೆ ಗ್ರಾಹಕರನ್ನು ಎಚ್ಚರಿಸುತ್ತದೆ. ಸ್ಪ್ಯಾಮ್ ಪತ್ತೆಗೆ ಹೆಚ್ಚುವರಿಯಾಗಿ, ಸಂಭಾವ್ಯ ಬೆದರಿಕೆಗಳಿಂದ ಬಳಕೆದಾರರನ್ನು ರಕ್ಷಿಸಲು ಕಪ್ಪುಪಟ್ಟಿ ಮಾಡಲಾದ URL ಗಳ ಕೇಂದ್ರೀಕೃತ ಡೇಟಾಬೇಸ್ ಅನ್ನು ಬಳಸಿಕೊಂಡು ದುರುದ್ದೇಶಪೂರಿತ ಲಿಂಕ್‌ಗಳಿಗಾಗಿ ಎಸ್‌ಎಂಎಸ್‌ಗಳನ್ನು ಸ್ಕ್ಯಾನ್ ಮಾಡುತ್ತದೆ. ಇದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಕೆಲಸ ಮಾಡುತ್ತದೆ. ಮತ್ತು ಕಾನೂನುಬದ್ಧ ವಹಿವಾಟು ಕರೆಗಳನ್ನು ದೃಢಪಡಿಸುತ್ತದೆ.

Best Mobiles in India

English summary
Airtel Launches First AI-Powered Network Solution for Spam Detection in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+