ತನ್ನ ಬಳಕೆದಾರರಿಗೆ ಹೊಸ ಕ್ರೆಡಿಟ್‌ ಕಾರ್ಡ್‌ ಪರಿಚಯಿಸಿದ ಏರ್‌ಟೆಲ್‌!

|

ಏರ್‌ಟೆಲ್‌ ಟೆಲಿಕಾಂ ತನ್ನ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ಟೆಲಿಕಾಂ ವಲಯದಲ್ಲಿ ಜಿಯೋಗೆ ಪೈಪೋಟಿ ನೀಡುತ್ತಿರುವ ಏರ್‌ಟೆಲ್‌ ಇದೀಗ ಹೊಸ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಆಕ್ಸಿಸ್‌ ಬ್ಯಾಂಕ್ ಸಹಯೋಗದೊಂದಿಗೆ ಏರ್‌ಟೆಲ್ ತನ್ನ ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಗೂಗಲ್ ಬೆಂಬಲಿತ ಏರ್‌ಟೆಲ್‌ ಟೆಲಿಕಾಂ ಕಂಪನಿಯು ಆಕ್ಸಿಸ್ ಬ್ಯಾಂಕ್‌ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಮಾಡುವ ಮೂಲಕ ತನ್ನ ವ್ಯವಹಾರವನ್ನು ವಿಸ್ತರಿಸುತ್ತಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಟೆಲಿಕಾಂ ಕಂಪನಿಯು ಆಕ್ಸಿಸ್‌ ಬ್ಯಾಂಕ್ ಸಹಯೋಗದೊಂದಿಗೆ ಹೊಸ ಕ್ರೆಡಿಟ್‌ ಕಾರ್ಡ್‌ ಪರಿಚಯಿಸಿದೆ. ಈ ಕ್ರೆಡಿಟ್‌ ಕಾರ್ಡ್‌ ಅನ್ನು "ಎ ಫಸ್ಟ್-ಆಫ್‌-ಇಟ್ಸ್-ಕಿಂಡ''(a first-of-its-kind)ಎಂದು ವಿವರಿಸಿದೆ. ಏರ್‌ಟೆಲ್ ತನ್ನ ಗ್ರಾಹಕರಿಗೆ ವಿಶ್ವ ದರ್ಜೆಯ ಡಿಜಿಟಲ್ ಸೇವೆಗಳನ್ನು ನೀಡುವ ಪ್ರಯತ್ನದ ಭಾಗವಾಗಿ ಈ ಕ್ರೆಡಿಟ್‌ ಕಾರ್ಡ್‌ ಅನ್ನು ಪರಿಚಯಿಸಿದೆ. ಇನ್ನುಳಿದಂತೆ ಏರ್‌ಟೆಲ್‌ ಕ್ರೆಡಿಟ್‌ ಕಾರ್ಡ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌ ಟೆಲಿಕಾಂ ಆಕ್ಸಿಸ್‌ ಬ್ಯಾಂಕ್‌ ಸಹಯೋಗದೊಂದಿಗೆ ಹೊಸ ಕ್ರೆಡಿಟ್‌ ಕಾರ್ಡ್‌ ಪರಿಚಯಿಸಿದೆ. ಈ ಮೂಲಕ ವಿಶ್ವ ದರ್ಜೆಯ ಡಿಜಿಟಲ್‌ ಸೇವೆಗಳನ್ನು ನೀಡುವುದಕ್ಕೆ ಮುಂದಾಗಿದೆ. ಈ ರೋಮಾಂಚಕಾರಿ ಪ್ರಯಾಣದಲ್ಲಿ ಆಕ್ಸಿಸ್ ಬ್ಯಾಂಕ್‌ನೊಂದಿಗೆ ಸೇರಲು ನಾವು ಸಂತೋಷಪಡುತ್ತೇವೆ ಎನ್ನುವ ಮಾತನ್ನು ಏರ್‌ಟೆಲ್‌ ಟೆಲಿಕಾಂ ಹೇಳಿದೆ. ಇದರಿಂದ ಏರ್‌ಟೆಲ್ ಗ್ರಾಹಕರು ಆಕ್ಸಿಸ್ ಬ್ಯಾಂಕ್‌ನ ವಿಶ್ವ ದರ್ಜೆಯ ಹಣಕಾಸು ಸೇವೆಗಳ ಪೋರ್ಟ್‌ಫೋಲಿಯೊ ಮತ್ತು ವಿಶೇಷ ಪ್ರಯೋಜನಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಆಕ್ಸಿಸ್ ಬ್ಯಾಂಕ್

ಆಕ್ಸಿಸ್ ಬ್ಯಾಂಕ್ ಏರ್‌ಟೆಲ್‌ನ ಡಿಜಿಟಲ್ ಸಾಮರ್ಥ್ಯಗಳು ಮತ್ತು ಆಳವಾದ ವಿತರಣಾ ವ್ಯಾಪ್ತಿಯಿಂದ ಪ್ರಯೋಜನ ಪಡೆಯುತ್ತದೆ, ಎಂದು ಬಾರ್ತಿ ಏರ್‌ಟೆಲ್‌ CEO (ಭಾರತ ಮತ್ತು ದಕ್ಷಿಣ ಏಷ್ಯಾ) ಗೋಪಾಲ್ ವಿಟ್ಟಲ್ ಹೇಳಿದ್ದಾರೆ. ಇನ್ನು ಏರ್‌ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅರ್ಹ ಏರ್‌ಟೆಲ್ ಗ್ರಾಹಕರಿಗೆ ಲಭ್ಯವಾಗಲಿದೆ. ಕಾರ್ಡ್ ಅನ್ನು ಪಡೆಯಲು ಬಳಕೆದಾರರು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ಗೆ ಹೋಗಬಹುದು. ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಿದ ನಂತರ, ಬಳಕೆದಾರರು 30 ದಿನಗಳಲ್ಲಿ 500ರೂ.ಗಳ ಅಮೆಜಾನ್ ಇ-ವೋಚರ್ ಅನ್ನು ಪಡೆಯುತ್ತಾರೆ.

ಏರ್‌ಟೆಲ್‌

ಇದಲ್ಲದೆ ಏರ್‌ಟೆಲ್‌ ಕ್ರೆಡಿಟ್‌ ಕಾರ್ಡ್‌ನಲ್ಲಿ ಹೆಚ್ಚುವರಿಯಾಗಿ, ಪಾವತಿ ಟರ್ಮಿನಲ್‌ನಲ್ಲಿ ಕಾರ್ಡ್ ಅನ್ನು ಟ್ಯಾಪ್ ಮಾಡುವ ಮೂಲಕ ಬಳಕೆದಾರರು ಸಂಪರ್ಕರಹಿತ ಪಾವತಿಗಳನ್ನು ಮಾಡಬಹುದು ಎಂದು ಸೂಚಿಸುವ ವೈ-ಫೈ ಚಿಹ್ನೆಯನ್ನು ಕಾರ್ಡ್‌ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಏರ್‌ಟೆಲ್ ತನ್ನ ಗ್ರಾಹಕರಿಗೆ ವಿಶ್ವದರ್ಜೆಯ ಡಿಜಿಟಲ್ ಸೇವೆಗಳನ್ನು ನೀಡುವ ತನ್ನ ಪ್ರಯತ್ನದ ಭಾಗವಾಗಿ ಈ ರೀತಿಯ ಸೇವೆಯನ್ನು ನೀಡಲು ಮುಂದಾಗಿದೆ ಎಂದು ಏರ್‌ಟೆಲ್‌ ಸಿಇಒ ಹೇಳಿದ್ದಾರೆ.

ಏರ್‌ಟೆಲ್

ಇನ್ನು ಏರ್‌ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಏರ್‌ಟೆಲ್ ಸೇವೆಗಳ ಮೇಲೆ ಶೇಕಡಾ 25% ಕ್ಯಾಶ್‌ಬ್ಯಾಕ್ ನೀಡಲಿದೆ. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ವಿದ್ಯುತ್, ಗ್ಯಾಸ್, ಬಿಲ್ ಪಾವತಿಗಳ ಮೇಲೆ ಶೇಕಡಾ 10% ಕ್ಯಾಶ್‌ಬ್ಯಾಕ್ ದೊರೆಯಲಿದೆ. ಹಾಗೆಯೇ ಸ್ವಿಗ್ಗಿ, ಜೊಮೋಟೋ ಮತ್ತು ಬಿಗ್‌ಬಾಸ್ಕೇಟ್‌ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿಸುವವರಿಗೆ 10% ಕ್ಯಾಶ್ ಬ್ಯಾಕ್ ನೀಡಲಿದೆ. ಇದಲ್ಲದೆ ಎಲ್ಲಾ ವೆಚ್ಚಗಳ ಮೇಲೆ 1% ಕ್ಯಾಶ್‌ಬ್ಯಾಕ್ ಅನ್ನು ಈ ಕ್ರೆಡಿಟ್‌ ಕಾರ್ಡ್‌ನಲ್ಲಿ ಪಡೆದುಕೊಳ್ಳಬಹುದು. ಜೊತೆಗೆ ಏರ್‌ಟೆಲ್ ಸೇವೆಗಳ ಮೇಲಿನ 25% ಕ್ಯಾಶ್‌ಬ್ಯಾಕ್ ಮೊಬೈಲ್ ಮತ್ತು ಡಿಟಿಎಚ್ ರೀಚಾರ್ಜ್‌ಗಳು, ಏರ್‌ಟೆಲ್ ಬ್ಲಾಕ್ ಮತ್ತು ಎಕ್ಸ್‌ಟ್ರೀಮ್ ಫೈಬರ್ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
Airtel launches its own credit card in collaboration with axis Bank

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X