Subscribe to Gizbot

ಜಿಯೋಯಿಂದ ಕಂಗೆಟ್ಟ ಏರ್‌ಟೆಲ್..ಆಗಸ್ಟ್ 1 ರಿಂದ ಹೊಸ ಸೇವೆ!!..ಏನದು?

Written By:

ಇತ್ತೀಚಿಗಷ್ಟೆ ಒಂದು ರೂಪಾಯಿಗೆ ಒಂದು GB ಬ್ರಾಡ್‌ಬ್ಯಾಂಡ್ ಡೇಟಾ ನೀಡಿ ಗಮನಸೆಳೆದಿದ್ದ ಏರ್‌ಟೆಲ್ ತನ್ನ ಪೋಸ್ಟ್‌ಪೇಡ್ ಬಳಕೆದಾರರಿಗೆ ಸಿಹಿಸುದ್ದಿ ನೀಡಿದೆ.!! ಜಿಯೋಯಿಂದ ಕಂಗೆಟ್ಟಿರುವ ಏರ್‌ಟೆಲ್ ಇದೀಗ ಒಂದೊಂದೇ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಾ ಸಾಗಿದೆ.!!

ಎಲ್ಲಾ ಟೆಲಿಕಾಂ ಬಳಕೆದಾರರು ನಿಗದಿತ ಅವಧಿಯೊಳಗೆ ಇಂಟರ್‌ನೆಟ್‌ ಡೇಟಾ ಖಾಲಿ ಮಾಡದಿದ್ದರೆ ಇಷ್ಟು ದಿವಸ ಆ ಡೇಟಾ ವೇಸ್ಟ್ ಆಗುತಿತ್ತು. ಆದರೆ, ಈಗ ಏರ್‌ಟೆಲ್ ಹೊಸ ಆಫರ್ ನೀಡಿದ್ದು, ತನ್ನ ಪೋಸ್ಟ್‌ಪೇಡ್ ಬಳಕೆದಾರರಿಗೆ ವ್ಯಾಲಿಡಿಟಿ ಮುಗಿದರೂ ಡೇಟಾ ಬಳಕೆಗೆ ಅವಕಾಶ ನೀಡಿದೆ.!!

ಹಾಗಾದರೆ, ಏರ್‌ಟೆಲ್ ಯಾವ ಯಾವ ಮಾರ್ಪಾಡುಗಳನ್ನು ಮಾಡಿಕೊಂಡಿದೆ. ಇದರಿಂದ ಪೋಸ್ಟ್‌ಪೇಡ್ ಗ್ರಾಹಕರಿಗೆ ಲಾಭವೇನು? ಹಾಗಾದರೆ ವ್ಯಾಲಿಡಿಟಿ ಇಲ್ಲವೇ ಎಂಬೆಲ್ಲಾ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡರ್‌ಗಳಲ್ಲಿ ಉತ್ತರ ಪಡೆಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇದೆಲ್ಲಾ ಜಿಯೋ ಎಫೆಕ್ಟ್.!!

ಇದೆಲ್ಲಾ ಜಿಯೋ ಎಫೆಕ್ಟ್.!!

ಏನೇ ಮಾಡಿದರೂ ಸಹ ಜಿಯೋವನ್ನು ಮಣಿಸಲು ಯಾವುದೇ ಟೆಲಿಕಾಂಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ತನ್ನಲ್ಲಿಯೇ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡು ಗ್ರಾಹಕರನ್ನು ಉಳಿಸಿಕೊಳ್ಳಲು ಏರ್‌ಟೆಲ್ ಈ ಆಫರ್ ನೀಡಿರುವುದಂತೂ ಸತ್ಯ.!!

ಉಳಿಕೆ ಡೇಟಾವನ್ನು ಮುಂದಿನ ತಿಂಗಳೂ ಬಳಸಿ.!!

ಉಳಿಕೆ ಡೇಟಾವನ್ನು ಮುಂದಿನ ತಿಂಗಳೂ ಬಳಸಿ.!!

ಹಣ ನೀಡಿ ಹಾಕಿಸಿಕೊಂಡ ಡೇಟಾ ಬಳಸದಿದ್ದರೂ ವ್ಯಾಲಿಡಿಟಿ ಮುಗಿದ ನಂತರ ಸುಮ್ಮನೆ ವೇಸ್ಟ್ ಆಯಿತೆಂದು ಕೊರಗುವಂತಿಲ್ಲ. ಏಕೆಂದರೇ ಏರ್‌ಟೆಲ್ ನಿಮ್ಮ ಡೇಟಾವನ್ನು ಮುಂದಿನ ತಿಂಗಳೂ ಕೂಡ ಬಳಸುವ ಅವಕಾಶ ನೀಡಿದೆ.!!

ಡೇಟಾ ಹಂಚಿಕೊಳ್ಳುವ ಅವಕಾಶ

ಡೇಟಾ ಹಂಚಿಕೊಳ್ಳುವ ಅವಕಾಶ

ನಿಮ್ಮ ಡೇಟಾವನ್ನು ಮುಂದಿನ ತಿಂಗಳು ಬಳಸುವ ಅವಕಾಶದ ಜೊತೆಗೆ ಉಳಿದ ಟಾಟಾವನ್ನು ಗ್ರಾಹಕರು ತಮ್ಮ ಕುಟುಂಬ ಸದಸ್ಯರ ಜತೆ ಹಂಚಿಕೊಳ್ಳುವ ಅವಕಾಶವನ್ನು ಏರ್‌ಟೆಲ್ ನೀಡುತ್ತದೆ. ಹಾಗಾಗಿ, ನಿಮ್ಮ ಡೇಟಾವನ್ನು ನಿಮ್ಮ ಮನೆಯವರೆಲ್ಲಾ ಹಂಚಿಕೊಳ್ಳಬಹುದು.!!

ಆಗಸ್ಟ್ 1 ರಿಂದ ಯೋಜನೆ ಜಾರಿಗೆ!!

ಆಗಸ್ಟ್ 1 ರಿಂದ ಯೋಜನೆ ಜಾರಿಗೆ!!

ಟೆಲಿಕಾಂ ಕಂಪನಿಗಳ ಪೈಪೋಟಿ ಹಿನ್ನೆಲೆಯಲ್ಲಿ ಏರ್‌ಟೆಲ್‌ ಗ್ರಾಹಕರಿಗೆ ಈ ರೀತಿಯ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದ್ದು, ಆಗಸ್ಟ್ 1 ರಿಂದಲೇ ಈ ಯೋಜನೆ ಯಾರಿಗೆ ಬರಲಿದೆ ಎಂದು ಹೇಳಲಾಗಿದೆ. ಅಂತೂ ಇಂತು ಒಂದು ಒಳ್ಳೆ ಆಫರ್ ಬರ್ತಿದೆ.!!

ಪ್ರೀಪೆಡ್ ಗ್ರಾಹಕರಿಗೆ?

ಪ್ರೀಪೆಡ್ ಗ್ರಾಹಕರಿಗೆ?

ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರವಲ್ಲದೇ ಪ್ರೀಪೆಡ್ ಗ್ರಾಹಕರಿಗೂ ಉಳಿದ ಡಾಟಾವನ್ನು ಮುಂದಿನ ತಿಂಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವ ಅವಕಾಶ ಇದೆ. ಆದರೆ, ಈ ಬಗ್ಗೆ ಏರ್‌ಟೆಲ್ ಕಾದುನೊಡುವ ತಂತ್ರ ಹಾಕಿಕೊಂಡಿದೆ. !! ಹಾಗೇನಾದರೂ ಆದಲ್ಲಿ ಈ ಸೇವೆ ನೀಡಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಏರ್‌ಟೆಲ್ ಕಾರಣವಾಗಲಿದೆ.

ಓದಿರಿ:ಆಧಾರ್ ಮಾಹಿತಿ ಲೀಕ್ ಆದರೆ ಏನೆಲ್ಲಾ ತೊಂದರೆ ಆಗುತ್ತೆ?!!.ಇದಕ್ಕೆ ಪರಿಹಾರವೇನು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
As part of the plan, Airtel introduced a data rollover opportunity for customers so that their unused data of a particular month does not go waste.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot