Home
ಸುದ್ದಿಜಾಲ

ಏರ್‌ಟೆಲ್‌ನಿಂದ ಹೊಸ ಆಫರ್‌..! 21 ದಿನಗಳ ವ್ಯಾಲಿಡಿಟಿ..!

ಭಾರತದ ಪ್ರೀಪೇಯ್ಡ್ ಗ್ರಾಹಕರಿಗಾಗಿ ಏರ್ ಟೆಲ್ ಹೊಸ ಪ್ಲಾನ್ ಒಂದನ್ನು ಬಿಡುಗಡೆಗೊಳಿಸಿದೆ.ಅದರ ಬೆಲೆ ರೂಪಾಯಿ 159. ಈ ಪ್ಲಾನ್ ನಲ್ಲಿ 1ಜಿಬಿ 3ಜಿ/4ಜಿ ಡಾಟಾ ಗ್ರಾಹಕರಿಗೆ ಲಭ್ಯವಾಗಲಿದ್ದು 21 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಡಾಟಾ ಜೊತೆಗೆ, ಏರ್ ಟೆಲ್ ಈ ಆಫರ್ ನಲ್ಲಿ ಅನಿಯಮಿತ ಎಸ್ ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಆಫರ್ ಮಾಡಿದ್ದು 100 ಎಸ್ಎಂಎಸ್ ಗಳನ್ನು ಪ್ರತಿದಿನ ಉಚಿತವಾಗಿ ನೀಡುತ್ತದೆ.

ಏರ್‌ಟೆಲ್ 149 ಪ್ರೀಪೇಯ್ಡ್ ಪ್ಲಾನ್

ಏರ್‌ಟೆಲ್ 149 ಪ್ರೀಪೇಯ್ಡ್ ಪ್ಲಾನ್

ಏರ್ ಟೆಲ್ ನಲ್ಲಿ 149 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ ಕೂಡ ದೇಶದಲ್ಲಿದೆ. ಈ 149 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ನಲ್ಲಿ ಏರ್ ಟೆಲ್ 1ಜಿಬಿ 3ಜಿ/4ಜಿ ಡಾಟಾವನ್ನು ನೀಡುತ್ತದೆ ಮತ್ತು 20 ದಿನಗಳ ವ್ಯಾಲಿಡಿಟಿಯನ್ನು ಇದು ಹೊಂದಿದೆ. ಇದರ ಜೊತೆಗೆ ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳಿಗೂ ಅವಕಾಶವಿರುತ್ತದೆ ಮತ್ತು ಪ್ರತಿದಿನ 100ಎಸ್ಎಂಎಸ್ ಉಚಿತವಾಗಿ ಲಭ್ಯವಾಗುತ್ತದೆ.

ಏರ್‌ಟೆಲ್ 168 ಪ್ರೀಪೇಯ್ಡ್ ಪ್ಲಾನ್

ಏರ್‌ಟೆಲ್ 168 ಪ್ರೀಪೇಯ್ಡ್ ಪ್ಲಾನ್

ಏರ್ ಟೆಲ್ ನ ಇನ್ನೊಂದು ಪ್ಲಾನ್ ಕಳೆದ ತಿಂಗಳಷ್ಟೇ ಬಿಡುಗಡೆಗೊಂಡಿದ್ದು ಅದು 168 ರುಪಾಯಿಯ ಪ್ಲಾನ್ ಆಗಿದೆ. ಈ ಪ್ಲಾನ್ ನ ಅಡಿಯಲ್ಲಿ ಏರ್ ಟೆಲ್ ಟೆಲಿಕಾಂ ಆಪರೇಟರ್ ಅನಿಯಮಿತ ಕರೆಯ ಸೌಲಭ್ಯ , 1GB ಡಾಟಾ ಮತ್ತು 100ಎಸ್ಎಂಎಸ್ ನ್ನು ಪ್ರತಿದಿನ ಉಚಿತವಾಗಿ ನೀಡುತ್ತದೆ. 28 ದಿನಗಳ ವ್ಯಾಲಿಡಿಟಿಯನ್ನು ಈ ಪ್ಲಾನ್ ಹೊಂದಿದೆ. ಈ ಪ್ಲಾನ್ ನ ಜೊತೆಗೆ ಏರ್ ಟೆಲ್ ಹಲೋ ಟ್ಯೂನ್ಸ್ ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ. ಇದು ಕಂಪೆನು ನೀಡುವ ಕಾಲರ್ ಟ್ಯೂನ್ ಸೇವೆಯಾಗಿದ್ದು ಇದು ಕರೆ ಮಾಡಿದಾಗಿನ ರಿಂಗ್ ಟೋನ್ ನ್ನು ಬದಲಾಯಿಸಲು ನೆರವಾಗುವ ಸೇವೆಯಾಗಿದೆ.

ವೊಡಾಫೋನ್‌ ರೂ.159 ಪ್ರೀಪೇಯ್ಡ್ ಪ್ಲಾನ್

ವೊಡಾಫೋನ್‌ ರೂ.159 ಪ್ರೀಪೇಯ್ಡ್ ಪ್ಲಾನ್

ಆಗಸ್ಟ್ ತಿಂಗಳಲ್ಲಿ ವೊಡಾಫೋನ್‌ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಪ್ಲಾನ್ ಒಂದನ್ನು ಪರಿಚಯಿಸಿದೆ. ಅದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ನ ಅಡಿಯಲ್ಲಿ ಗ್ರಾಹಕರು 3ಜಿ/4ಜಿ ಡಾಟಾ ಮತ್ತು ಅನಿಯಮಿತ ಕರೆಯ ಸೌಲಭ್ಯವನ್ನು ನೀಡುತ್ತದೆ. ಇದರ ಜೊತೆಗೆ ಪ್ರತಿದಿನ ಈ ವ್ಯಾಲಿಡಿಟಿ ಸಮಯದಲ್ಲಿ 100 ಎಸ್ಎಂಎಸ್ ಗಳನ್ನು ಪ್ರತಿದಿನ ಉಚಿತವಾಗಿ ಕಳುಹಿಸಲು ಅವಕಾಶವಿರುತ್ತದೆ.

ರಿಲಯನ್ಸ್ ಜಿಯೋ ರೂ.149 ಪ್ರೀಪೇಯ್ಡ್ ಪ್ಲಾನ್

ರಿಲಯನ್ಸ್ ಜಿಯೋ ರೂ.149 ಪ್ರೀಪೇಯ್ಡ್ ಪ್ಲಾನ್

ರಿಲಯನ್ಸ್ ಜಿಯೋ ನಲ್ಲಿ ಕೂಡ 149 ರುಪಾಯಿ ಪ್ಲಾನ್ ಇದ್ದು, ಇದು 1.5ಜಿಬಿ ಡಾಟಾ ಪ್ರತಿದಿನ ಉಚಿತವಾಗಿ 28 ದಿನಗಳ ಅವಧಿಗೆ ನೀಡುತ್ತದೆ. ಅಂದರೆ ಒಟ್ಟಾರೆ 42ಜಿಬಿ ಡಾಟಾವನ್ನು ನೀವು 28 ದಿನಗಳ ಅವಧಿಯಲ್ಲಿ ಬಳಕೆ ಮಾಡಬಹುದು. ಅದರ ಜೊತೆಗೆ 100ಎಸ್ಎಎಸ್ ಗಳನ್ನು ಪ್ರತಿದಿನ ಉಚಿತವಾಗಿ ಕಳುಹಿಸಬಹುದು ಮತ್ತು ಈ ಆಫರ್ ನ ಅಡಿಯಲ್ಲಿ ಜಿಯೋ ಆಪ್ ಗೆ ಉಚಿತ ಚಂದಾದಾರಿಕೆಯನ್ನು 28 ದಿನಗಳ ಅವಧಿಗೆ ನೀಡಲಾಗುತ್ತದೆ.

Best Mobiles in India

English summary
Airtel launches Rs 159 plan with 21 days validity. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+