Airtel: ಬಂಪರ್ ಆಫರ್.. ಕಡಿಮೆ ಬೆಲೆಗೆ ಭರ್ಜರಿ ಡೇಟಾ, 45 ದಿನಗಳ ವ್ಯಾಲಿಡಿಟಿ
ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಆಕರ್ಷಕ ಪ್ಲಾನ್‌ಗಳನ್ನು ಪರಿಚಯಿಸುತ್ತವೆ. ಕೆಲವೊಮ್ಮೆ ಹೆಚ್ಚುವರಿ ಡೇಟಾ, ಎಕ್ಸ್‌ಟ್ರಾ ಟಾಕ್‌ಟೈಮ್ ನಂತಹ ಆಫರ್‌ಗಳನ್ನು ಘೋಷಿಸುತ್ತವೆ. ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳು ಪ್ರೀಪೇಡ್ ಪ್ಲಾನ್‌ಗಳ ದರ ಏರಿಕೆ ಮಾಡಿವೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಆಕರ್ಷಿಸಲು ಹೆಣಗಾಡುತ್ತಿವೆ. ಆ ಪೈಕಿ ಭಾರ್ತಿ ಏರ್‌ಟೆಲ್ (Airtel) ಸಂಸ್ಥೆಯು ವಿಭಿನ್ನ ಆಫರ್ ನೀಡಲು ಮುಂದಾಗಿದೆ. ಏರ್‌ಟೆಲ್ ತನ್ನ ಯೋಜನೆಗಳ ಪಟ್ಟಿಗೆ ಹೊಸ 279 ರೂ.ನ ಪ್ರಿಪೇಯ್ಡ್ ಯೋಜನೆಯನ್ನು ಸದ್ದಿಲ್ಲದೆ ಸೇರಿಸಿದೆ.
ಹೌದು, ಭಾರತೀಯ ಟೆಲಿಕಾಂ ವಲಯದಲ್ಲಿ ಎರಡನೇ ದೊಡ್ಡ ಟೆಲಿಕಾಂ ಕಂಪನಿಯಾದ ಏರ್‌ಟೆಲ್ ತನ್ನ ಪ್ರಿಪೇಯ್ಡ್ ಯೋಜನೆಗಳ ಪಟ್ಟಿಗೆ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಅದೇ 279 ರೂ.ನ ಯೋಜನೆ. ಏರ್‌ಟೆಲ್ ಪ್ಲಾನ್‌ಗಳಲ್ಲಿ ವ್ಯಾಲಿಡಿಟಿಗಾಗಿ ನೀವು ಹೆಚ್ಚು ಪಾವತಿಸಬೇಕಾಗುತ್ತದೆ ಎಂಬ ಆರೋಪವಿದೆ. ಇದನ್ನು ಪರಿಹರಿಸುವ ಉದ್ದೇಶದಿಂದ ಏರ್‌ಟೆಲ್ 279 ರೂ.ನ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ.

279 ರೂ.ನ ಪ್ಲಾನ್ ಈಗ ಏರ್‌ಟೆಲ್‌ನ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಇದು ವಿಶೇಷ ಯೋಜನೆಯಾಗಿದೆ. ಏಕೆಂದರೆ ಇದು ಕಡಿಮೆ ವೆಚ್ಚದ ಮಾನ್ಯತೆಯನ್ನು ನೀಡುತ್ತದೆ. ವಾಸ್ತವವಾಗಿ ಇದು ಹಳೆಯ ಯೋಜನೆಯಾಗಿದೆ. ಏರ್‌ಟೆಲ್ ಈಗ ಈ ಕೆಲವು ಯೋಜನೆಗಳನ್ನು ಮರುಪ್ರಾರಂಭಿಸುವ ಅಭ್ಯಾಸವನ್ನು ಮಾಡಿದೆ.
ಏರ್‌ಟೆಲ್ 279 ರೂ. ಪ್ಲಾನ್‌ನ ಪ್ರಯೋಜನಗಳು
ಏರ್‌ಟೆಲ್ 279 ರೂ. ಪ್ಲಾನ್ ರೀಚಾರ್ಜ್‌ನ ಪ್ರಯೋಜನಗಳನ್ನು ನೋಡುವುದಾದರೆ, 2GB ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 600 ಎಸ್‌ಎಂಎಸ್ (SMS) ಸೌಲಭ್ಯ ಪಡೆಯಬಹುದು. ಇದು ಈ ಯೋಜನೆಯ ಮುಖ್ಯ ಪ್ರಯೋಜನಗಳಾಗಿವೆ. ಈ ಪ್ಲಾನ್‌ನ ವ್ಯಾಲಿಡಿಟಿ 45 ದಿನಗಳು. ಈ ಯೋಜನೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಲಭ್ಯವಿರುವ ಡೇಟಾದ ಪ್ರಮಾಣವು ಕಡಿಮೆಯಾಗಿದೆ.
2GB ಡೇಟಾ ಖಾಲಿಯಾದ್ರೆ ಮುಂದೇನು?
ಈ 279 ರೂಪಾಯಿಯ ಪ್ಲಾನ್ ಅನ್ನು 45 ದಿನಗಳವರೆಗೆ ಬಳಸುವ ಸರಾಸರಿ ದೈನಂದಿನ ವೆಚ್ಚ 6.2 ರೂ. ಆಗಿದೆ. ಏರ್‌ಟೆಲ್‌ನ ಸಾಮಾನ್ಯ ದರಗಳಿಗೆ ಹೋಲಿಸಿದರೆ, ಇದು ಹೆಚ್ಚು ಅಲ್ಲ. ಆದರೂ, ಒಮ್ಮೆ ಒಟ್ಟು 2GB ಡೇಟಾ ಖಾಲಿಯಾದ ನಂತರ, 19 ರೂ. ನಿಂದ ಪ್ರಾರಂಭವಾಗುವ ಡೇಟಾ ಬೂಸ್ಟರ್ ಯೋಜನೆಗಳನ್ನು ಅವಲಂಬಿಸಬೇಕಾಗುತ್ತದೆ.
ಸಿಮ್ ವ್ಯಾಲಿಡಿಟಿ ಕಾಪಾಡಿಕೊಳ್ಳಲು ಬೆಸ್ಟ್ ಆಯ್ಕೆ
ಮುಖ್ಯ ಪ್ರಯೋಜನಗಳ ಹೊರತಾಗಿ, 279 ರೂ. ಪ್ಲಾನ್‌ನಲ್ಲಿ ಕೆಲವು ಹೆಚ್ಚುವರಿ ಪ್ರಯೋಜನಗಳು ಲಭ್ಯವಿರುತ್ತವೆ. ಅವುಗಳೆಂದರೆ ಅಪೊಲೊ 24/7 ಸರ್ಕಲ್, ಉಚಿತ ಹಲೋಟ್ಯೂನ್ಸ್, ವಿಂಕ್ ಮ್ಯೂಸಿಕ್ ಇತ್ಯಾದಿ. ಹೆಚ್ಚು ಡೇಟಾವನ್ನು ಬಳಸದ ಮತ್ತು ಕಡಿಮೆ ವೆಚ್ಚದಲ್ಲಿ ತಮ್ಮ ಸಿಮ್ ವ್ಯಾಲಿಡಿಟಿಯನ್ನು ಕಾಪಾಡಿಕೊಳ್ಳಲು ಬಯಸುವ ಏರ್‌ಟೆಲ್ ಚಂದಾದಾರರಿಗೆ ಈ ಹೊಸ ಪ್ಲಾನ್ ಬೆಸ್ಟ್ ಆಯ್ಕೆಯಾಗಿದೆ.
279 ರೂ. ಪ್ಲಾನ್ ಹೆಚ್ಚು ಲಾಭದಾಯಕ
ನೀವು ಅನ್‌ಲಿಮಿಡೆಟ್ ವಾಯ್ಸ್ ಕಾಲ್ ಮಾಡುವುದರಿಂದ ಕರೆ ಅಗತ್ಯಗಳು ಸರಾಗವಾಗಿ ಹೋಗುತ್ತವೆ. ನಿಮಗೆ ಕಡಿಮೆ ಡೇಟಾ ಅಗತ್ಯವಿದ್ದರೆ, ನೀವು ಡೇಟಾ ಬೂಸ್ಟರ್ ಯೋಜನೆಗಳನ್ನು ಅವಲಂಬಿಸಬಹುದು. 30 ದಿನಗಳ ವ್ಯಾಲಿಡಿಟಿ ಹೊಂದಿರುವ ಏರ್‌ಟೆಲ್ ಯೋಜನೆಯು ಸಾಮಾನ್ಯವಾಗಿ 250 ರೂ. ಆಗಿದೆ. 45 ದಿನಗಳ ವ್ಯಾಲಿಡಿಟಿಯೊಂದಿಗೆ 279 ರೂ. ರೀಚಾರ್ಜ್ ಪ್ಲಾನ್ ಲಾಭದಾಯಕವಾಗಿದೆ.
ಜಿಯೋ ವ್ಯಾಲಿಡಿಟಿಗೆ ಏರ್‌ಟೆಲ್ ಹತ್ತಿರ ಬಂದಿಲ್ಲ!
ಏರ್‌ಟೆಲ್ ಇತ್ತೀಚೆಗೆ 395 ರೂ. ನಲ್ಲಿ ಹೊಸ ಯೋಜನೆಯನ್ನು ಪರಿಚಯಿಸಿತು. ಈ ಪ್ಲಾನ್‌ನ ವ್ಯಾಲಿಡಿಟಿ 56 ದಿನಗಳು. ಆದರೆ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ, ಏರ್‌ಟೆಲ್ ಈ ಯೋಜನೆಯ ವ್ಯಾಲಿಡಿಟಿಯನ್ನು 70 ದಿನಗಳವರೆಗೆ ಹೆಚ್ಚಿಸಿತು. ಇದು ಹೆಚ್ಚು ಗ್ರಾಹಕರ ಗಮನವನ್ನು ಸೆಳೆಯಿತು. ಆದರೂ, ಅದೇ ದರದಲ್ಲಿ ಜಿಯೋ ನೀಡುವ ವ್ಯಾಲಿಡಿಟಿಗೆ ಏರ್‌ಟೆಲ್ ಇನ್ನೂ ಹತ್ತಿರ ಬಂದಿಲ್ಲ. ಜಿಯೋ 395 ರೂ.ಗೆ 84 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ.
395 ರೂ. ಪ್ಲಾನ್‌ನ ಪ್ರಯೋಜನಗಳೇನು?
ಏರ್‌ಟೆಲ್‌ನ 395 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಒಟ್ಟು 6GB ಡೇಟಾ, ಅನ್‌ಲಿಮಿಡೆಟ್ ವಾಯ್ಸ್ ಕಾಲ್ ಮತ್ತು 600 SMS ಗಳು ಲಭ್ಯವಿರುವ ಪ್ರಯೋಜನಗಳಾಗಿವೆ. 395 ರೂ. ಪ್ಲಾನ್‌ನ ವ್ಯಾಲಿಡಿಟಿಯನ್ನು 56 ರಿಂದ 70 ದಿನಕ್ಕೆ ಹೆಚ್ಚಿಸಿರುವುದರಿಂದ, ಅದರ ದೈನಂದಿನ ವೆಚ್ಚವು 7.05 ರೂ.ನಿಂದ 5.64 ರೂ.ಗೆ ಇಳಿದಿದೆ. ಆದರೆ, ಜಿಯೋದ 395 ರೂ. ಯೋಜನೆಯು ದಿನಕ್ಕೆ ಕೇವಲ 4.70 ರೂ. ಆಗಿದೆ.
ಒಟ್ಟಾರೆ, ಭಾರ್ತಿ ಏರ್‌ಟೆಲ್ ಟೆಲಿಕಾಂ ಸಂಸ್ಥೆ ಈಗಾಗಲೇ ಭಿನ್ನ ಪ್ರಯೋಜನಗಳ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿ ಚಂದಾದಾರರನ್ನು ಸೆಳೆದಿದೆ. ಅವುಗಳ ಪೈಕಿ ಕೆಲವು ಪ್ಲ್ಯಾನ್ ಅತ್ಯುತ್ತಮ ಡೇಟಾ ಸೌಲಭ್ಯ ಹೊಂದಿದ್ದು, ಮತ್ತೆ ಕೆಲವು ಯೋಜನೆಗಳು ಅಧಿಕ ದೈನಂದಿನ ಡೇಟಾ ಹಾಗೂ ಬಿಗ್ ವ್ಯಾಲಿಡಿಟಿಯ ಪ್ರಯೋಜನ ಪಡೆದಿವೆ. ಈ ಪ್ರೀಪೇಯ್ಡ್ ಯೋಜನೆಗಳಲ್ಲಿ ಇತರೆ ಪ್ರಯೋಜನಗಳನ್ನು ಸಹ ನೀವು ಪಡೆಯಬಹುದು.


Click it and Unblock the Notifications








