ಏರ್‌ಟೆಲ್‌ನಿಂದ ಮತ್ತೊಂದು ಬಿಗ್ ಪ್ಲಾನ್..! ಗ್ರಾಹಕರಿಗೆ ಬಂಪರ್..!
ಕಳೆದ ಎರಡು ವರ್ಷಗಳಿಂದ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಏರ್‌ಟೆಲ್ ಮತ್ತು ಜಿಯೋ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಇದರ ಲಾಭವನ್ನು ಎರಡು ಟೆಲಿಕಾಂ ಆಪರೇಟರ್‌ಗಳ ಗ್ರಾಹಕರು ಉತ್ತಮವಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಬಿಎಸ್‌ಎನ್‌ಎಲ್, ವೊಡಾಫೋನ್ ಸ್ಪರ್ಧೆಯಲ್ಲಿದ್ದರೂ ಏರ್‌ಟೆಲ್ ಮತ್ತು ಜಿಯೋ ಸ್ಪರ್ಧೆ ಗ್ರಾಹಕರಿಗೆ ಬರಪೂರ ಲಾಭವನ್ನು ತಂದುಕೊಡುತ್ತಿದೆ.

ಹೌದು, ಭಾರತದ ಅತಿ ದೊಡ್ಡ್ ನೆಟ್‌ವರ್ಕ್ ಸ್ಥಾನವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್‌ಗೆ ಬಿಟ್ಟುಕೊಟ್ಟಿರುವ ಏರ್‌ಟೆಲ್ ಗ್ರಾಹಕರನ್ನು ಸೆಳೆಯಲು ಹೊಸ ಪ್ಲಾನ್ ಒಂದನ್ನು ಘೋಷಿಸಿದ್ದು, 75 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 1.4GB ಡೇಟಾ ಆಫರ್‌ನ್ನು ರೂ. 419ಕ್ಕೆ ನೀಡಿದ್ದು, ಇತರೆ ಆಪರೇಟರ್‌ಗಳಿಗೆ ತಲೆನೋವು ತಂದಿದೆ.

ಎಲ್ಲಾ ಟೆಲಿಕಾಂ ಸರ್ಕಲ್‌ಗಳಲ್ಲೂ ಲಭ್ಯ
ಏರ್‌ಟೆಲ್‌ನ ಹೊಸ ಆಫರ್ ಭಾರತದ ಎಲ್ಲಾ ಟೆಲಿಕಾಂ ಸರ್ಕಲ್‌ಗಳಲ್ಲಿ ಸಿಗಲಿದೆ ಎಂದು ಟೆಲಿಕಾಂ ಟಾಕ್ ವರದಿ ಮಾಡಿದೆ. ಅದಲ್ಲದೇ ದಿನಕ್ಕೆ 1.4GB 4G/3G/2G ಡೇಟಾದ ಈ ಆಫರ್ ಏರ್‌ಟೆಲ್‌ನ 6ನೇ ಪ್ರಿಪೇಯ್ಡ್ ಪ್ಲಾನ್ ಆಗಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ.

ಹೊಸ ಪ್ಲಾನ್‌ನಲ್ಲಿ ಏನೀದೆ..?
ಏರ್‌ಟೆಲ್ ಹೊಸದಾಗಿ ಪರಿಚಯಿಸಿರುವ ರೂ. 419 ಪ್ಲಾನ್‌ನಲ್ಲಿ ಗ್ರಾಹಕರಿಗೆ ಯಾವುದೇ FUP ಲಿಮಿಟ್ ಇಲ್ಲದೇ ಅನಿಯಮಿತ ಕರೆಗಳು, ದಿನಕ್ಕೆ 100 ಉಚಿತ SMS, 105GB ಡೇಟಾವನ್ನು ಪಡೆಯಲಿದ್ದು, ನ್ಯಾಯಯುತ ಬಳಕೆಯ ನಿಯಮದಂತೆ (FUP) ದಿನಕ್ಕೆ 1.4GB ಡೇಟಾವನ್ನು ಪಡೆಯಲಿದ್ದಾರೆ.

ರೂ. 399 ಪ್ಲಾನ್ ಕೂಡ ಇದೆ..!
ಭಾರ್ತಿ ಏರ್‌ಟೆಲ್ ರೂ.419 ಪ್ಲಾನ್ ಘೋಷಿಸಿದ್ದರು ಸಹ ಈ ಹಿಂದೆ ಗ್ರಾಹಕರು ರೂ.399 ಮತ್ತು ರೂ.448 ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ 1.4GB ಡೇಟಾ ಪಡೆಯುತ್ತಿದ್ದರು. ಈ ಮೂರು ಪ್ಲಾನ್‌ಗಳು ಸಾಮ್ಯತೆಯನ್ನು ಹೊಂದಿವೆ. ರೂ. 399 ಪ್ಲಾನ್ 70 ದಿನಗಳ ವ್ಯಾಲಿಡಿಟಿ ಹೊಂದಿದ್ದರೆ, ರೂ.448 ಪ್ಲಾನ್ 82 ದಿನಗಳ ವ್ಯಾಲಿಡಿಟಿ ಹೊಂದಿದೆ. ಜಿಯೋಗೆ ಟಾಂಗ್ ನೀಡಲು ರೂ. 399 ಪ್ಲಾನ್‌ನ ವ್ಯಾಲಿಡಿಟಿಯನ್ನು 84 ದಿನಗಳಿಗೆ ವಿಸ್ತರಿಸಲಾಯಿತು.

ಇತರೆ ಆಫರ್‌ಗಳು
ಮೇಲಿನ ಆಫರ್‌ಗಳ ಜತೆಗೆ ಏರ್‌ಟೆಲ್ ಗ್ರಾಹಕರು ರೂ. 199 ಮತ್ತು ರೂ. 219 ಪ್ಲಾನ್‌ಗಳಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ 1.4GB ಡೇಟಾವನ್ನು ಪಡೆಯಲಿದ್ದಾರೆ. ಇದರ ಜತೆ 90 ದಿನಗಳ ವ್ಯಾಲಿಡಿಟಿಯಲ್ಲಿ ದಿನಕ್ಕೆ 1.4GB ಡೇಟಾವನ್ನು ಪಡೆಯಲಿದ್ದಾರೆ. ರೂ.219ರ ಪ್ಲಾನ್‌ನಲ್ಲಿ ಹಲೋ ಟ್ಯೂನ್ ಚಂದಾದಾರಿಕೆಯು ಸೇರಿದೆ. ಜಿಯೋದೊಂದಿಗೆ ಸ್ಪರ್ಧಿಸಲು ಏರ್‌ಟೆಲ್ ಗ್ರಾಹಕರಿಗೆ ನ್ಯಾಯಯುತ ಬಳಕೆಯ ನಿಯಮ (FUP)ದ ಆಯ್ಕೆಯನ್ನು ನೀಡಿತು.

ವೊಡಾಫೋನ್‌ನಿಂದಲೂ ಪರಿಚಯ
ಇತ್ತೀಚೆಗೆ ತಾನೇ ವೊಡಾಫೋನ್ ತನ್ನ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಗ್ರಾಹಕರಿಗೆ ಪರಿಚಯಿಸಿತ್ತು. ರೂ. 209, ರೂ. 479, ಮತ್ತು ರೂ. 529 ಪ್ಲಾನ್‌ಗಳು ಕ್ರಮವಾಗಿ 28 ದಿನಗಳು, 84 ದಿನಗಳು ಹಾಗೂ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿದಿನ ಗ್ರಾಹಕರಿಗೆ 1.5GB ಡೇಟಾವನ್ನು ನೀಡಲಿವೆ.

ಮುಂಬೈ ಸರ್ಕಲ್‌ಗೆ ಪ್ರತ್ಯೇಕ ಕಾಂಬೋ ಪ್ಲಾನ್ಸ್
ಜಿಯೋ ಎದುರು ಸ್ಪರ್ಧೆ ಮಾಡಲು ಏರ್‌ಟೆಲ್ ತನ್ನ ಮುಂಬೈ ಸರ್ಕಲ್ ಗ್ರಾಹಕರಿಗೆ ಪ್ರತ್ಯೇಕವಾದ ಹೊಸ ಕಾಂಬಓ ಪ್ಲಾನ್‌ಗಳನ್ನು ಪರಿಚಯಿಸಿದೆ. ರೂ. 35 (26.5 ಟಾಕ್‌ಟೈಮ್, 100MB ಡೇಟಾ), ರೂ.65 ( ರೂ. 55 ಟಾಕ್‌ಟೈಮ್, 200MB ಡೇಟಾ, ರೂ. 95 (ರೂ.95 ಟಾಕ್‌ಟೈಮ್, 500MB ಡೇಟಾ), ರೂ. 145 (ರೂ.145 ಟಾಕ್‌ಟೈಮ್, 1GB ಡೇಟಾ, 42 ದಿನಗಳ ವ್ಯಾಲಿಡಿಟಿ) ರೂ. 245 (ರೂ. 245, 2GB ಡೇಟಾ, 84 ದಿನಗಳ ವ್ಯಾಲಿಡಿಟಿ) ಹೊಂದಿವೆ.


Click it and Unblock the Notifications








