ವೆಬ್ ವರ್ಷನ್ನಿನ ಏರ್ ಟೆಲ್ ಟಿವಿ ಆಪ್ ಬಳಸುವುದು ಹೇಗೆ?

By Gizbot Bureau
|

ಟೆಲಿಕಾಂ ಆಪರೇಟರ್ ಭಾರತೀ ಏರ್ ಟೆಲ್ ಅಂತಿಮವಾಗಿ ಏರ್ ಟೆಲ್ ಟಿವಿ ಆಪ್ ನ ವೆಬ್ ವರ್ಷನ್ ನ್ನು ಬಿಡುಗಡೆಗೊಳಿಸಿದ್ದು ವೀಡಿಯೋ ಸ್ಟ್ರೀಮಿಂಗ್ ಸೇವೆಗೆ ಮತ್ತೊಂದು ಹೊಸ ರೂಪ ನೀಡಿದೆ. ಇದುವರೆಗೂ ಏರ್ ಟೆಲ್ ಟಿವಿ ಕೇವಲ ಆಂಡ್ರಾಯ್ಡ್ ಮತ್ತು ಐಓಎಸ್ ಫ್ಲಾಟ್ ಫಾರ್ಮ್ ಗಳಲ್ಲಿ ಚಂದಾದಾರಿಕೆ ಪಡೆದವರಿಗೆ ಮಾತ್ರವೇ ಲಭ್ಯವಾಗುತ್ತಿತ್ತು.ವೆಬ್ ವರ್ಷನ್ ನ್ನು ಬಿಡುಗಡೆಗೊಳಿಸಿರುವುದರಿಂದಾಗಿ ತಮ್ಮ ನೆಚ್ಚಿನ ಚಲನಚಿತ್ರ ಮತ್ತು ಟಿವಿ ಶೋಗಳನ್ನು ಏರ್ ಟೆಲ್ ಚಂದಾದಾರರು ಇದೀಗ ಪಿಸಿ, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಗಳಲ್ಲಿ ಬ್ರೌಸರ್ ಅಪ್ಲಿಕೇಷನ್ ಮೂಲಕ ವೀಕ್ಷಿಸಲು ಅವಕಾಶ ದೊರೆತಂತಾಗಿದೆ.

ವೆಬ್ ನಲ್ಲಿ ನೇರವಾಗಿ ಇನ್ನು ಮುಂದೆ ಏರ್ ಟೆಲ್ ಟಿವಿ ಕಟೆಂಟ್ ಗಳನ್ನು ವೀಕ್ಷಿಸಲು ಅವಕಾಶ:

ವೆಬ್ ನಲ್ಲಿ ನೇರವಾಗಿ ಇನ್ನು ಮುಂದೆ ಏರ್ ಟೆಲ್ ಟಿವಿ ಕಟೆಂಟ್ ಗಳನ್ನು ವೀಕ್ಷಿಸಲು ಅವಕಾಶ:

ಎಲ್ಲರೂ ತಿಳಿದಿರುವಂತೆ, ಭಾರತೀಯ ಟೆಲಿಕಾಂ ಸೆಕ್ಟರ್ ನಲ್ಲಿ ಸದ್ಯ ಡಾಟಾಗಳ ಬೆಲೆಯಲ್ಲಿ ಕ್ರ್ಯಾಷ್ ಆಗುವಿಕೆಯಿಂದಾಗಿ ದೊಡ್ಡ ಮಟ್ಟದ ಸ್ಪರ್ಧೆ ಏರ್ಪಡುತ್ತದೆ. ಹೊಸ ಚಂದಾದಾರರನ್ನು ಆಕರ್ಷಿಸುವುದಕ್ಕಾಗಿ ಮತ್ತು ಈಗಾಗಲೇ ಇರುವ ಚಂದಾದಾರರನ್ನು ಉಳಿಸಿಕೊಳ್ಳುವುದಕ್ಕಾಗಿ ಎಲ್ಲಾ ಪ್ರಮುಖ ಟೆಲಿಕಾಂ ಕಂಪೆನಿಗಳು ಕೂಡ ಆಕರ್ಷಕವಾದ ಆಫರ್ ಗಳನ್ನು ಮತ್ತು ತಂತ್ರಗಳನ್ನು ಬಳಸುತ್ತಾರೆ. ರಿಲಯನ್ಸ್ ಜಿಯೋ ಕೂಡ ತನ್ನ ಆನ್ ಡಿಮಾಂಡ್ ವೀಡಿಯೋ ಸ್ಟ್ರೀಮಿಂಗ್ ಸೇವೆ ಜಿಯೋ ಸಿನಿಮಾದ ವೆಬ್ ವರ್ಷನ್ ನ್ನು ವರ್ಷದ ಹಿಂದೆಯೇ ಬಿಡುಗಡೆಗೊಳಿಸಿದೆ.

ನಿರೀಕ್ಷಿತ ಮಟ್ಟದಲ್ಲಿ ಏರ್ ಟೆಲ್ ಟಿವಿ ವೆಬ್ ವರ್ಷನ್ ಬಳಕೆದಾರರಿಗೆ ಲೈವ್ ಟಿವಿ ಚಾನಲ್ ಗಳನ್ನು ನೋಡುವುದಕ್ಕೆ ಅವಕಾಶ ನೀಡುವುದಿಲ್ಲ.ಒಂದು ವೇಳೆ ನೀವು ಲೈವ್ ಟಿವಿಯನ್ನು ನೋಡುವುದಕ್ಕೆ ಇಚ್ಛೆ ಪಡುವುದಾದರೆ ಏರ್ ಟೆಲ್ ಟಿವಿ ಆಪ್ ನ್ನು ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಬಳಕೆ ಮಾಡಬೇಕಾಗುತ್ತದೆ. ಮತ್ತೊಂದು ಪ್ರಮುಖ ಅಂಶವೇನೆಂದರೆ ವೆಬ್ ವರ್ಷನ್ ZEE5 ಕಟೆಂಟ್ ಗಳನ್ನು ವೀಕ್ಷಿಸುವುದಕ್ಕೆ ಅವಕಾಶ ನೀಡುವುದಿಲ್ಲ.

ಆದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ವೆಬ್ ವರ್ಷನ್ ಗೆ ಎಲ್ಲವೂ ಸೇರಿಕೊಳ್ಳುವ ನಿರೀಕ್ಷೆ ಇದೆ.ಮೊಬೈಲ್ ನಲ್ಲಿ ಏರ್ ಟಿವಿಯು 350+ ಲೈವ್ ಟಿವಿ ಚಾನಲ್ ಗಳು, 10000+ ಚಲನಚಿತ್ರಗಳು, ಮತ್ತು 100+ ಟಿವಿ ಶೋಗಳನ್ನು ಆಫರ್ ಮಾಡುತ್ತದೆ. ಇನ್ನೊಂದೆಡೆ ಜಿಯೋ ಸಿನಿಮಾದಲ್ಲಿ 1 ಲಕ್ಷಕ್ಕೂ ಅಧಿಕ + ಘಂಟೆಗಳ ಕಟೆಂಟ್ ನ್ನು ವೀಕ್ಷಿಸಬಹುದು. ಜೊತೆಗೆ ಡಿಸ್ನಿ ಸೆಕ್ಷನ್ ಕೂಡ ಎಕ್ಸ್ ಕ್ಲೂಸೀವ್ ಆಗಿ ಜಿಯೋ ಸಿನಿಮಾದಲ್ಲಿ ಲಭ್ಯವಿರುತ್ತದೆ.

ಏರ್ ಟೆಲ್ ಟಿವಿ ವೆಬ್ ವರ್ಷನ್ ನ್ನು ಹೇಗೆ ಆಕ್ಸಿಸ್ ಮಾಡುವುದು?

ಏರ್ ಟೆಲ್ ಟಿವಿ ವೆಬ್ ವರ್ಷನ್ ನ್ನು ಹೇಗೆ ಆಕ್ಸಿಸ್ ಮಾಡುವುದು?

ಈಗಾಗಲೇ ತಿಳಿಸಿರುವಂತೆ ಏರ್ ಟೆಲ್ ಟಿವಿ ವೆಬ್ ವರ್ಷನ್ ನ್ನು ಯಾವುದೇ ಬ್ರೌಸರ್ ಅಪ್ಲಿಕೇಷನ್ ಮೂಲಕ ಆಕ್ಸಿಸ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ನೀವು ಮಾಡಬೇಕಾಗಿರುವುದೇನೆಂದರೆ https://www.airtelstream.in ಗೆ ತೆರಳಬೇಕು. ನಂತರ ನೀವು ನೋಡಲು ಇಷ್ಟಪಡುವ ಟಿವಿ ಶೋ ಅಥವಾ ಚಲನಚಿತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ಲೇ ಬಟನ್ ನ್ನು ನೀವು ಯಾವಾಗ ಕ್ಲಿಕ್ಕಿಸುತ್ತೀರೋ ಆಗ ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳುವಂತೆ ಪ್ರಾಮ್ಟ್ ಬರುತ್ತದೆ. ನೀವು ನಿಮ್ಮ ಮೊಬೈಲ್ ನಂಬರ್ ನ್ನು ಎಂಟರ್ ಮಾಡಿದಾಗ ನಂಬರ್ ನ್ನು ವೆರಿಫೈ ಮಾಡುವುದಕ್ಕಾಗಿ ಓಟಿಪಿಯನ್ನು ಸೆಂಡ್ ಮಾಡಲಾಗುತ್ತದೆ.

ಭಾಷೆಗಳು:

ಭಾಷೆಗಳು:

ಏರ್ ಟೆಲ್ ಟಿವಿ ವೆಬ್ ವರ್ಷನ್ ನ್ನು ಏರ್ ಟೆಲ್ ಡಿಜಿಟಲ್ ಟಿವಿ ಚಂದಾದಾರರು ಕೂಡ ಆಕ್ಸಿಸ್ ಮಾಡುವುದಕ್ಕೆ ಅವಕಾಶವಿರುತ್ತದೆ. ಇಂಗ್ಲಿಷ್ ಕಟೆಂಟ್ ಗಳನ್ನು ಹೊರತುಪಡಿಸಿ ಹಿಂದಿ ಭಾಷೆಯಲ್ಲಿ ಮತ್ತು ವೆಬ್ ವರ್ಷನ್ ಬೆಂಗಾಳಿ, ಮರಾಠಿ, ಗುಜರಾತಿ, ತಮಿಳು, ಕನ್ನಡ, ಮಳಯಾಳಂ ಮತ್ತು ತೆಲುಗು ಭಾಷೆಯ ಕಟೆಂಟ್ ಗಳಲ್ಲೂ ಕೂಡ ಲಭ್ಯವಿರುತ್ತದೆ.

Best Mobiles in India

Read more about:
English summary
Airtel Launches Web Version of Airtel TV App for Watching TV Shows, Movies Online to Take on Jio

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X