Home
ಸುದ್ದಿಜಾಲ

ಏರ್‌ಟೆಲ್‌ನಿಂದ ಹೊಸ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಸೇವೆ ಪ್ರಾರಂಭ!

ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ಟೆಲಿಕಾಂ ಕಂಪೆನಿಗಳಲ್ಲಿ ಏರ್‌ಟೆಲ್‌ ಟೆಲಿಕಾಂ ಕೂಡ ಒಂದಾಗಿದೆ. ತನ್ನ ಬಳಕೆದಾರರಿಗೆ ಪ್ರಿಪೇಯ್ಡ್‌, ಪೋಸ್ಟ್‌ಪೇಯ್ಡ್‌ ಜೊತೆಗೆ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಸಹ ನೀಡುತ್ತಾ ಬಂದಿದೆ. ಸದ್ಯ ಇದೀಗ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಎಂಬ ಹೊಸ ಸೇವೆಯೊಂದಿಗೆ ಬಂದಿದೆ. ಈ ಹೊಸ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಒಂದೇ ಚಂದಾದಾರಿಕೆಯ ಅಡಿಯಲ್ಲಿ 15 ವಿಭಿನ್ನ OTT ಸೇವೆಗಳಿಗೆ ಪ್ರವೇಶವನ್ನು ನೀಡಲಿದೆ. ಇದರಲ್ಲಿ ಭಾರತೀಯ ಮತ್ತು ಜಾಗತಿಕ ಮನರಂಜನಾ OTT ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿದೆ.

ಏರ್‌ಟೆಲ್

ಹೌದು, ಏರ್‌ಟೆಲ್ ಹೊಸ ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಸೇವೆಯನ್ನು ಪರಿಚಯಿಸಿದೆ. ಇನ್ನು ಈ ಸೇವೆಯಲ್ಲಿ ಒಂದೇ ಅಪ್ಲಿಕೇಶನ್, ಒಂದೇ ಚಂದಾದಾರಿಕೆ, ಏಕ ಸೈನ್-ಇನ್, ಏಕೀಕೃತ ವಿಷಯ ಹುಡುಕಾಟ ಮತ್ತು ಪ್ರತಿ ಬಳಕೆದಾರರಿಗೆ AI- ಚಾಲಿತ ವೈಯಕ್ತಿಕಗೊಳಿಸಿದ ಕ್ಯುರೇಶನ್ ಅಡಿಯಲ್ಲಿ ಲಭ್ಯವಿರುತ್ತದೆ. ಹಾಗಾದ್ರೆ ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಸೇವೆಯಲ್ಲಿ ಯಾವೆಲ್ಲಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಸೇವೆಯನ್ನು ಪ್ರವೇಶಿಸುವುದು ಹೇಗೆ?

ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಸೇವೆಯನ್ನು ಪ್ರವೇಶಿಸುವುದು ಹೇಗೆ?

ಈ ಸೇವೆಯಲ್ಲಿ ಪ್ಲಾಟ್‌ಫಾರ್ಮ್‌ಗಳ ವಿಷಯವು ಒಂದೇ ಅಪ್ಲಿಕೇಶನ್, ಏಕ ಚಂದಾದಾರಿಕೆ, ಏಕ ಸೈನ್-ಇನ್, ಏಕೀಕೃತ ವಿಷಯ ಹುಡುಕಾಟ ಮತ್ತು ಪ್ರತಿ ಬಳಕೆದಾರರಿಗೆ AI- ಚಾಲಿತ ವೈಯಕ್ತಿಕಗೊಳಿಸಿದ ಕ್ಯುರೇಶನ್ ಅಡಿಯಲ್ಲಿ ಲಭ್ಯವಿರುತ್ತದೆ. ಇನ್ನು ಈ ಸೇವೆಯನ್ನು ಮೊಬೈಲ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳ ಅಪ್ಲಿಕೇಶನ್ ಅಥವಾ ವೆಬ್ ಮೂಲಕ ಮತ್ತು ಟಿವಿಯಲ್ಲಿ ಎಕ್ಸ್‌ಸ್ಟ್ರೀಮ್ ಸೆಟ್-ಟಾಪ್ ಬಾಕ್ಸ್ ಮೂಲಕ ಪ್ರವೇಶಿಸಬಹುದು.

ಯಾವೆಲ್ಲಾ OTT ಸೇವೆಗಳು ಲಭ್ಯವಾಗಲಿದೆ?

ಯಾವೆಲ್ಲಾ OTT ಸೇವೆಗಳು ಲಭ್ಯವಾಗಲಿದೆ?

ಇನ್ನು ಈ ಹೊಸ ಚಂದಾದಾರಿಕೆಯು ಬಳಕೆದಾರರಿಗೆ ಒಟ್ಟು 10,500 ಚಲನಚಿತ್ರಗಳನ್ನು ನೀಡುತ್ತದೆ ಎಂದು ಏರ್‌ಟೆಲ್ ಹೇಳಿಕೊಂಡಿದೆ. ಅಲ್ಲದೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನಲ್ಲಿ ಸೋನಿಲೈವ್‌, ಇರೋಸ್‌ನೌ, ಲಯನ್ಸ್‌ಗೇಟ್‌ ಪ್ಲೇ, Hoichoi, ಮನೋರಮಮ್ಯಾಕ್ಸ್‌, ಶೇಮರೋ, ಅಲ್ಟ್ರಾ, ಹಂಗಾಮ ಪ್ಲೇ, ಎಪಿಕಾನ್‌, ಡಾಕುಬೈ, ಡೈವೋ ಟಿವಿ,Klikk, ನಮ್ಮಫ್ಲಿಕ್ಸ್‌, ಡಾಲಿವುಡ್‌, ಶಾರ್ಟ್ಸ್‌ಟಿವಿ ಅನ್ನು ಒಳಗೊಂಡಿರುತ್ತದೆ.

ಮೀಡಿಯಾ

ಇನ್ನು ಮೀಡಿಯಾ ಪಾರ್ಟ್‌ನರ್ಸ್ ಏಷ್ಯಾ ಪ್ರಕಾರ, 2025 ರ ವೇಳೆಗೆ, ಭಾರತದಲ್ಲಿ OTT ಚಂದಾದಾರಿಕೆ ಮಾರುಕಟ್ಟೆ ಇನ್ನಷ್ಟು ವಿಸ್ತಾರವಾಗುವ ಸಾದ್ಯತೆ ಇದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ $500 ಮಿಲಿಯನ್‌ನಿಂದ $2 ಬಿಲಿಯನ್‌ಗೆ ಬೆಳೆಯುವ ನಿರೀಕ್ಷೆಯಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಏರ್‌ಟೆಲ್‌ ಮುಂದಾಗಿದೆ. ಇದಕ್ಕಾಗಿ ಏರ್‌ಟೆಲ್ ಈ ಹೊಸ ಆಪರ್‌ ಮೂಲಕ 20 ಮಿಲಿಯನ್ ಚಂದಾದಾರಿಕೆಗಳನ್ನು ಗುರಿಯಾಗಿಸಿಕೊಂಡಿದೆ. ಇನ್ನು ಇದೇ ಸಂದರ್ಭದಲ್ಲಿ ಭಾರತದ ವೀಡಿಯೊ OTT ಪರಿಸರ ವ್ಯವಸ್ಥೆಯನ್ನು ವೇಗಗೊಳಿಸಲು ಏರ್‌ಟೆಲ್ ಎಕ್ಸ್‌ಸ್ಟ್ರೀಮ್‌ನೊಂದಿಗೆ ಸೇರಲು ನಾವು ಉತ್ಸುಕರಾಗಿದ್ದೇವೆ ಎಂದು ಸೋನಿ ಲೈವ್‌ ಹೇಳಿಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಈ ಹೊಸ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಸೇವೆಯು ತಿಂಗಳಿಗೆ 149ರೂ. ಬೆಲೆ ಹೊಂದಿದೆ. ವಾರ್ಷಿಕ ಚಂದಾದಾರಿಕೆ 1,499ರೂ.ಬೆಲೆಯನ್ನು ಹೊಂದಿದೆ. ಇವು ಕೇವಲ ಪರಿಚಯಾತ್ಮಕ ಬೆಲೆಗಳು ಎಂದು ಕಂಪನಿ ಘೋಷಿಸಿದೆ. ಸದ್ಯ ಈ ಹೊಸ ಸೇವೆಯು ಏರ್‌ಟೆಲ್ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ.

Best Mobiles in India

English summary
Airtel launches Xstream Premium subscription: priced at Rs 149 per month
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+