ಮಾರುಕಟ್ಟೆಗೆ ಬರಲಿದೆ ಏರ್ ಟೆಲ್ –ಲಾವಾ ಸ್ಮಾರ್ಟ್ ಫೋನ್.!
ಏರ್ ಟೆಲ್ 4G VoLTE ಸಪೋರ್ಟ್ ಮಾಡುವ ಮತ್ತೊಂದು ಫೋನ್ ಲಾಂಚ್ ಮಾಡುವ ಸಲುವಾಗಿ ಲಾವಾ ದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಈ ಫೋನ್ ನೊಂದಿಗೆ ಗ್ರಾಹಕರಿಗೆ ಉಚಿತ ಕರೆಗಳು ಮತ್ತು ಡೇಟಾ ಸೌಲಭ್ಯವನ್ನು ನೀಡಲಿದೆ ಎನ್ನಲಾಗಿದೆ.
ಮಾರುಕಟ್ಟೆಯಲ್ಲಿ ಜಿಯೋಫೋನ್ ಲಾಂಚ್ ಆದ ಮಾದರಿಯಲ್ಲೇ ಏರ್ ಟೆಲ್ ಸಹ ಕಡಿಮೆ ಬೆಲೆಯ 4G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದೇ ತಿಂಗಳ ಆರಂಭದಲ್ಲಿ ಕಾರ್ಬನ್ A40 ಸ್ಮಾರ್ಟ್ ಫೋನ್ ಲಾಂಚ್ ಮಾಡಿದ್ದ ಏರ್ ಟೆಲ್ ಮತ್ತೊಂದು ಫೋನ್ ಲಾಂಚ್ ಮಾಡಲು ಸದ್ಧಿಲ್ಲದೆ ಸಿದ್ಧತೆ ನಡೆಸಿದೆ.

ಏರ್ ಟೆಲ್ 4G VoLTE ಸಪೋರ್ಟ್ ಮಾಡುವ ಮತ್ತೊಂದು ಫೋನ್ ಲಾಂಚ್ ಮಾಡುವ ಸಲುವಾಗಿ ಲಾವಾ ದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಈ ಫೋನ್ ನೊಂದಿಗೆ ಗ್ರಾಹಕರಿಗೆ ಉಚಿತ ಕರೆಗಳು ಮತ್ತು ಡೇಟಾ ಸೌಲಭ್ಯವನ್ನು ನೀಡಲಿದೆ ಎನ್ನಲಾಗಿದೆ.
ಏರ್ ಟೆಲ್ ಲಾವಾ ಸ್ಮಾರ್ಟ್ ಫೋನ್ ಬೆಲೆ ರೂ. 3500ಆಗಿದ್ದು, ಆದರೆ ಏರ್ ಟೆಲ್ ಗ್ರಾಹಕರಿಗೆ ಇದು ರೂ. 1699ಕ್ಕೆ ದೊರೆಯುತ್ತಿದೆ. ಅಲ್ಲದೇ ಕ್ಯಾಷ್ ಬ್ಯಾಕ್ ಕೊಡುಗೆಯನ್ನು ಏರ್ ಟೆಲ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದರೆ ಇದು ತಿಂಗಳ ರೀಚಾರ್ಜ್ ಮಾಡಿದ ಸಂದರ್ಭದಲ್ಲಿ ಪ್ರತಿ ತಿಂಗಳು ದೊರೆಯಲಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಕಾರ್ಬನ್ ಫೋನ್ ಗಿಂತಲೂ ವಿಭಿನ್ನವಾಗಿ ಲಾವಾ ಫೋನ್ ಕಾಣಿಸಿಕೊಳ್ಳಲಿದೆ. ಈ ಫೋನಿನಲ್ಲಿ 4.5 ಇಲ್ಲವೇ 5 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.
ಏರ್ ಟೆಲ್ ಇಷ್ಟಕ್ಕೆ ಸುಮ್ಮನಾಗುವಂತೆ ಕಾಣುತ್ತಿಲ್ಲ, ಲಾವಾ ಫೋನ್ ನಂತರದಲ್ಲಿ ಮತ್ತೊಂದು 4G ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ ಎನ್ನಲಾಗಿದೆ. ಇದರ ಬೆಲೆ ಬಂದು ರೂ. 1399 ರಿಂದ ರೂ. 1699ರ ವರೆಗೆ ಇರಲಿದೆ ಎನ್ನಲಾಗಿದೆ.


Click it and Unblock the Notifications








