Home
ಸುದ್ದಿಜಾಲ

ಜಿಯೋಗೆ ಶಾಕ್: ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗಾಳ ಹಾಕಲು ಏರ್‌ಟೆಲ್‌ ಹೊಸ ತಂತ್ರ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಟೆಲಿಕಾಂ ಕಂಪನಿಗಳು ಹೊಸ ಮಾದರಿಯ ಪ್ರಯತ್ನಗಳಿಗೆ ಮುಂದಾಗುತ್ತಿವೆ, ಕಳೆದ ಒಂದು ವರ್ಷದ ಅಂತರದಲ್ಲಿ ಟೆಲಿಕಾಂ ಕಂಪನಿಗಳ ಸ್ವರೂಪವೂ ಬದಲಾಗಿದ್ದು, ಜಿಯೋ ಆರಂಭವಾಗಿದ್ದು ಇದೆಕ್ಕೆ ಕಾರಣ ಎಂದರೆ ತಪ್ಪಾಗುವುದಿಲ್ಲ. ಕೇವಲ ಟೆಲಿಕಾಂ ಸೇವೆಯನ್ನು ಮಾತ್ರವೇ ನೀಡುತ್ತಿದ್ದ ಟೆಲಿಕಾಂ ಕಂಪನಿಗಳು ಇಂದು, ಅದಕ್ಕೂ ಮೀರಿದಂತೆ ಆಪ್‌, ಸ್ಮಾರ್ಟ್‌ಫೋನ್, ಪೇಮೆಂಟ್ ಬ್ಯಾಂಕ್ ಸೇರಿದಂತೆ ವಿವಿಧ ಸೇವೆಯನ್ನು ಬಳಕೆಗೆ ನೀಡುತ್ತಿವೆ.

ಜಿಯೋಗೆ ಶಾಕ್: ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗಾಳ ಹಾಕಲು ಏರ್‌ಟೆಲ್‌ ಹೊಸ ತಂತ್ರ..

ಟೆಲಿಕಾಂ ಕಂಪನಿಗಳು ಮಾರುಕಟ್ಟೆಯಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿರುವ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಸೆಳೆಯುವ ಸಲುವಾಗಿ ಮನರಂಜನೆಯನ್ನು ನೀಡುವಂತಹ ಆಪ್‌ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ. ಇದೇ ಮಾದರಿಯಲ್ಲಿ ಜಿಯೋ ತನ್ನ ಜಿಯೋ ಟಿವಿ ಆಪ್ ಮೂಲಕ 500 ಟಿವಿ ಚಾನಲ್‌ಗಳನ್ನು ಬಳಕೆಗೆ ನೀಡುತ್ತಿದೆ. ಇದೇ ಮಾದರಿಯಲ್ಲಿ ಏರ್‌ಟೆಲ್ ಸಹ ಹಲವು ಸಿನಮಾ, ಟಿವಿ ಸೇವೆಗಳನ್ನು ನೀಡುತ್ತಿದೆ. ಸದ್ಯ ಮತ್ತೊಮ್ಮೆ ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ಹೊಸದೊಂದು ಸೇವೆಯನ್ನು ನೀಡಲು ಯೋಜನೆಯನ್ನು ರೂಪಿಸುತ್ತಿದೆ.

ಏರ್‌ಟೆಲ್‌ನಿಂದ ನೆಟ್‌ಫಿಕ್ಸ್:

ಏರ್‌ಟೆಲ್‌ನಿಂದ ನೆಟ್‌ಫಿಕ್ಸ್:

ಏರ್‌ಟೆಲ್ ತನ್ನ ಮೈ ಏರ್‌ಟೆಲ್ ಆಪ್ ಅನ್ನು ಹೆಚ್ಚಿನ ಮಂದಿಗೆ ತಲುಪಿಸಬೇಕು ಮತ್ತು ಕೊಡುಗೆಗಳನ್ನು ನೋಡಿಯೇ ಏರ್‌ಟೆಲ್ ನೆಟ್‌ವರ್ಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ತನ್ನ ಬಳಕೆದಾರರಿಗೆ ನೆಟ್‌ಫಿಕ್ಸ್ ಅನ್ನು ಉಚಿತವಾಗಿ ನೀಡುವ ಯೋಜನೆಯನ್ನು ರೂಪಿಸುತ್ತಿದೆ. ಇದಕ್ಕಾಗಿ ನೆಟ್‌ಫಿಕ್ಸ್ ನೊಂದಿಗೆ ಮಾತುಕತೆ ನಡೆಸುತ್ತಿದೆ. ನೆಟ್‌ಫ್ಲಿಕ್ಸ್‌ ಇಂದು ಜಾಗತಿಕವಾಗಿ ಹೆಚ್ಚಿನ ಸದ್ದು ಮಾಡುತ್ತಿದೆ.

ಈಗಾಗಲೇ ಪ್ರೈಮ್ ಸೇವೆ:

ಈಗಾಗಲೇ ಪ್ರೈಮ್ ಸೇವೆ:

ಏರ್‌ಟೆಲ್ ತನ್ನ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಈಗಾಗಲೇ ಉಚಿತವಾಗಿ ಅಮೆಜಾನ್ ಪ್ರೈಮ್ ವಿಡಿಯೋವನ್ನು ನೋಡುವಂತಹ ಅವಕಾಶವನ್ನು ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಈ ಉಚಿತ ಸೇವೆಯನ್ನು ಪಡೆಯುವ ಸಲುವಾಗಿಯೇ ಏರ್‌ಟೆಲ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮತ್ತೊಂದು ಸೇವೆಯನ್ನು ನೀಡಲು ತುದಿಗಾಲಿನಲ್ಲಿ ನಿಂತಿದೆ.

ಜಿಯೋ ಮಣಿಸುವ ತಂತ್ರ:

ಜಿಯೋ ಮಣಿಸುವ ತಂತ್ರ:

ಜಿಯೋ ಟಿವಿ ಆಪ್ ಮೂಲಕ ಬಳಕೆದಾರರಿಗೆ ಹೆಚ್ಚಿನ ಟಿವಿ ಚಾನಲ್‌ಗಳು ಮತ್ತು ಸಿನಿಮಾಗಳನ್ನು ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದೇ ಮಾದರಿಯ ಏರ್‌ಟೆಲ್‌ ಸಹ ಸೇವೆಯನ್ನು ನೀಡುತ್ತಿದ್ದು, ಅದಕ್ಕಿಂತ ಹೆಚ್ಚಿನ ಸೇವೆಯನ್ನು ನೀಡಿದರೆ ಬಳಕೆದಾರರನ್ನು ಸೆಳೆಯಬಹುದು ಎನ್ನುವುದು ಏರ್‌ಟೆಲ್ ತಂತ್ರವಾಗಿದೆ.

ಹೆಚ್ಚುತ್ತಿದೆ ಆನ್‌ಲೈನ್‌ ಸ್ಟ್ರೀಮಿಂಗ್:

ಹೆಚ್ಚುತ್ತಿದೆ ಆನ್‌ಲೈನ್‌ ಸ್ಟ್ರೀಮಿಂಗ್:

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಇಂಟರ್‌ನೆಟ್ ದೊರೆಯುತ್ತಿರುವ ಹಿನ್ನಲೆಯಲ್ಲಿ, ಹೆಚ್ಚಿನ ಮಂದಿನ ಆನ್‌ಲೈನ್ ಸ್ಟ್ರೀಮಿಂಗ್ ಸೇವೆಯನ್ನು ಪಡೆಯಲು ಮುಂದಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೇಯ್ಡ್ ಸೇವೆಯನ್ನು ನೀಡುತ್ತಿರುವ ಅಮೆಜಾನ್ ಪ್ರೈಮ್ ಮತ್ತು ನೆಟ್‌ಪ್ಲಿಕ್ಸ್ ಸೇವೆಯೂ ದೇಶದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸುತ್ತಿವೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಪೋಸ್ಟ್ ಪೇಯ್ಡ್ ಮತ್ತು ಬ್ಯಾಂಡ್‌ ಬ್ಯಾಂಡ್:

ಪೋಸ್ಟ್ ಪೇಯ್ಡ್ ಮತ್ತು ಬ್ಯಾಂಡ್‌ ಬ್ಯಾಂಡ್:

ಸದ್ಯ ನೆಟ್‌ಫಿಕ್ಸ್ ನೊಂದಿಗೆ ಮಾತುಕತೆ ನಡೆಸುತ್ತಿರುವ ಏರ್‌ಟೆಲ್, ಈ ಉಚಿತ ಸೇವೆಯನ್ನು ಪೋಸ್ಟ್ ಪೇಯ್ಡ್ ಮತ್ತು ಬ್ರಾಂಡ್ ಬ್ಯಾಂಡ್ ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಪ್ರೀಪೇಯ್ಡ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಬ್ರಾಡ್ ಬ್ಯಾಂಡ್ ಮತ್ತು ಪೋಸ್ಟ್ ಪೇಯ್ಡ್ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ಈ ಕ್ರಮಕ್ಕೆ ಮುಂದಾಗುತ್ತಿದೆ ಎನ್ನಲಾಗಿದೆ.

Best Mobiles in India

English summary
Airtel likely to offer free subscription of Netflix on TV app. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+