ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯಿಂದ ಏರ್‌ಟೆಲ್‌ಗೆ ಊಹಿಸಲಾಗದ ನಷ್ಟ!

|

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ವೇಳೆ ಮೊಬೈಲ್‌ ನೆಟ್‌ವರ್ಕ್‌ ಮೇಲೆ ನಿರ್ಬಂಧ ಹೇರಿದ್ದ ಪರಿಣಾಮವಾಗಿ ಏರ್‌ಟೆಲ್‌ಗೆ ಊಹಿಸಲಾಗಿದ ನಷ್ಟವಾಗಿರುವುದು ವರದಿಯಾಗಿದೆ. ಒಂದೆಡೆ ಜಿಯೋ ಪ್ರತಿಸ್ಪರ್ಧೆಯಿಂದ ಸಂಕಷ್ಟವನ್ನು ಎದುರಿಸುತ್ತಿರುವ ಏರ್‌ಟೆಲ್‌ಗೆ ಜಮ್ಮು ಕಾಶ್ಮೀರದಲ್ಲಿ ಆಗಿರುವ ಬೆಳವಣಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಜಮ್ಮು ಕಾಶ್ಮೀರದಲ್ಲಿ ತಿಂಗಳುಗಳ ಕಾಲ ಮೊಬೈಲ್‌ ನೆಟ್‌ವರ್ಕ್‌ ಮೇಲೆ ನಿರ್ಬಂಧ ಹೇರಿದ ನಂತರ ಏರ್‌ಟೆಲ್‌ ಬರೋಬ್ಬರಿ 30 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ.

ಸೆಪ್ಟೆಂಬರ್

ಹೌದು, ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಜಮ್ಮು ಮತ್ತು ಕಾಶ್ಮೀರದ ನೆಟ್‌ವರ್ಕ್ ಸ್ಥಗಿತವು ಟೆಲಿಕಾಂ ಕಂಪನಿಗಳ ಚಂದಾದಾರರ ಮೇಲೆ ಪರಿಣಾಮ ಬೀರಿದೆ. ಇವುಗಳಲ್ಲಿ ಭಾರತಿ ಏರ್ಟೆಲ್ ಕಂಪೆನಿ ಬರೋಬ್ಬರಿ 30 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದರೆ, ಈ ತ್ರೈಮಾಸಿಕದಲ್ಲಿ 89 ಲಕ್ಷ ಗ್ರಾಹಕರ ನಿವ್ವಳ ನಷ್ಟದೊಂದಿಗೆ ಚಂದಾದಾರರನ್ನು ಕಳೆದುಕೊಳ್ಳುತ್ತಲೇ ಇರುವ ವೊಡಾಫೋನ್ ಐಡಿಯಾ ಕಂಪೆನಿ ಕೂಡ ಜಮ್ಮ ಕಾಶ್ಮೀರದಲ್ಲಿ ಲಕ್ಷಾಂತರ ಬಳಕೆದಾರರನ್ನು ಕಳೆದುಕೊಂಡಿದೆ ಎಂದು ಬ್ರೋಕರೇಜ್ ಐಸಿಐಸಿಐ ಸೆಕ್ಯುರಿಟೀಸ್ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಜೂನ್-ಸೆಪ್ಟೆಂಬರ್ ತ್ರೈಮಾಸಿಕ

ಜೂನ್-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅದರ ವರದಿಯಾದ ಚಂದಾದಾರರ ಸಂಖ್ಯೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ನೆಟ್‌ವರ್ಕ್ ಸ್ಥಗಿತದಿಂದ ಚಂದಾದಾರರನ್ನು ಕಳೆದುಕೊಂಡಿರುವ ಪಟ್ಟಿಯಲ್ಲಿ ಭಾರತಿ ಏರ್‌ಟೆಲ್‌ ಅಗ್ರಸ್ಥಾನದಲ್ಲಿದ್ದರೂ, ನಿವ್ವಳ ಚಂದಾದಾರರ ಜೊತೆಗೆ 26 ಲಕ್ಷ ಚಂದಾದಾರರನ್ನು ಸೇರಿಸಿದೆ. ಇನ್ನು ವೊಡಾಫೋನ್ ಐಡಿಯಾ ಕಂಪೆನಿ ಬಹುತೇಕ ವೃತ್ತಗಳಲ್ಲಿ ತನ್ನ ನೆಲೆ ಕಳೆದುಕೊಳ್ಳುವುದನ್ನು ಮುಂದುವರೆಸಿದ್ದರೂ, ರೆವೆನ್ಯೂ ಮಾರ್ಕೆಟ್ ಶೇರ್ ತುಲನೆಯಲ್ಲಿ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಸೆಪ್ಟೆಂಬರ್ ತ್ರೈಮಾಸಿಕ

ಸೆಪ್ಟೆಂಬರ್ ತ್ರೈಮಾಸಿಕದ ಹೊಂದಿಸಲಾದ ಒಟ್ಟು ಆದಾಯದಲ್ಲಿ (ಎಜಿಆರ್) 60 ಬೇಸಿಸ್ ಪಾಯಿಂಟುಗಳ (ಬಿಪಿಎಸ್) ಸದೃಢ ಕ್ರಮಾನುಗತ ಹೆಚ್ಚಳವನ್ನು ವರದಿಮಾಡಿದ ಜಿಯೋ ಆದಾಯದ ಮಾರುಕಟ್ಟೆ ಪಾಲು 29% ತಲುಪಿದೆ. ಹಿಂದಿನ ತ್ರೈಮಾಸಿಕದ ಹೋಲಿಕೆಯಲ್ಲಿ 40 ಬಿಪಿಎಸ್ ಇಳಿಕೆ ಕಂಡ ಭಾರ್ತಿ ಏರ್ ಟೆಲ್ ನ ಆರ್ ಎಂ ಎಸ್ (ಟಾಟಾ ಟೆಲಿಸರ್ವಿಸಸ್ ಸೇರಿ) 51.7% ತಲುಪಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವೊಡಾಫೋನ್-ಐಡಿಯಾದ ಆರ್ ಎಂ ಎಸ್ ಕೂಡ 30 ಬೇಸಿಸ್ ಪಾಯಿಂಟುಗಳ (ಬಿಪಿಎಸ್) ಕ್ರಮಾನುಗತ ಇಳಿಕೆಯೊಂದಿಗೆ 15.6%ಗೆ ತಲುಪಿದೆ.

ಉಚಿತ ಕರೆ

ಇನ್ನು ಈಗಾಗಲೇ ನಿಮಗೆ ತಿಳಿದಿರುವಂತೆ, ಇಲ್ಲಿಯವರೆಗೂ ಅಗ್ಗವಾಗಿ ಡೇಟಾ ಮತ್ತು ಉಚಿತ ಕರೆಗಳನ್ನು ಬಳಸುತ್ತಿದ್ದವರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಇದೇ ಡಿಸೆಂಬರ್ ಆರಂಭದಿಂದ ಟೆಲಿಕಾಂ ಕಂಪನಿಗಳು ಡೇಟಾ ಮತ್ತು ಕರೆ ದರಗಳನ್ನು ಶೇ.30 ರಿಂದ 40 ರಷ್ಟು ಏರಿಸಲಿವೆ ಎನ್ನಲಾಗಿದೆ. ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಐಡಿಯಾ ವೊಡಾಫೋನ್ ನಂತರ ಇದೀಗ ರಿಲಯನ್ಸ್ ಜಿಯೋ ಕೂಡ ತನ್ನ ಟ್ಯಾರಿಫ್ ಬೆಲೆಗಳನ್ನು ಏರಿಸುವುದು ಬಹುತೇಕ ಖಚಿತವಾಗಿದ್ದು, ಜಿಯೋ ಬೆಲೆ ಹೆಚ್ಚಳಕ್ಕೆ ಸರ್ಕಾರದ ಒತ್ತಡವೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ

Most Read Articles
Best Mobiles in India

English summary
The network shutdown in Jammu and Kashmir impacted the subscriber base of telecom companies in the quarter ended September, owing to which Bharti Airtel lost up to 30 lakh customers, while Vodafone Idea too lost customers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X