Home
ಸುದ್ದಿಜಾಲ

ಏರ್‌ಟೆಲ್ ಪೋಸ್ಟ್‌ಪೇಡ್ ಗ್ರಾಹಕರಿಗೆ ಈಗ 'ಬಂಪರ್ ಆಫರ್'!!

ಈಗಾಗಲೇ ತನ್ನ ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಒಂದು ವರ್ಷದ ಉಚಿತ ಅಮೆಜಾನ್ ಪ್ರೈಮ್ ಸೇವೆಯನ್ನು ಒದಗಿಸುತ್ತಿರುವ ಏರ್‌ಟೆಲ್, ಇದರ ಜೊತೆಗೆ ಈಗ ತನ್ನ ಪೋಸ್ಟ್ಪೇಯ್ಡ್ ಹಾಗೂ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ನೆಟ್‌ಫ್ಲಿಕ್ಸ್ ಆಫರ್ ನೀಡಿದೆ. ಈ ಉಚಿತ ಆಫರ್ ತನ್ನ ಪೋಸ್ಟ್‌ಪೇಯ್ಡ್ಗೆ ಹೊಸದಾಗಿ ಚಂದಾದಾರಗುವವರಿಗೂ ಲಭ್ಯ ಎಂದು ಏರ್‌ಟೆಲ್ ಕಂಪೆನಿ ತಿಳಿಸಿದೆ.

ಹೌದು, ಭಾರತದ ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರಕ್ಕೆ ಸೊರಗಿಹೋಗಿರುವ ಏರ್‌ಟೆಲ್ ಇದೀಗ 3 ತಿಂಗಳು ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಯನ್ನು ನೀಡುವ ಮೂಲಕ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ರೂ.499ರ ಪೋಸ್ಟ್‌ಪೇಡ್ ಪ್ಲಾನ್ ಮತ್ತು ಅದಕ್ಕಿಂತ ಹೆಚ್ಚಿನ ಪ್ಲಾನ್ ಹೊಂದುವ ತನ್ನ ಪೋಸ್ಟ್‌ಪೇಡ್ ಗ್ರಾಹಕರಿಗೆ ಉಚಿತ ಸೇವೆ ನೀಡಲು ತಯಾರಾಗಿದೆ.

ಏರ್‌ಟೆಲ್ ಪೋಸ್ಟ್‌ಪೇಡ್ ಗ್ರಾಹಕರಿಗೆ ಈಗ 'ಬಂಪರ್ ಆಫರ್'!!

ಏರ್‌ಟೆಲ್ ಪೋಸ್ಟ್ ಪೇಯ್ಡ್ ಗ್ರಾಹಕರು ರೂ.499 ಪ್ಲಾನ್ ನಲ್ಲಿ ಮತ್ತು ಅದಕ್ಕಿಂತ ಹೆಚ್ಚಿನ ಪ್ಲಾನ್‌ನಲ್ಲಿ ಇದ್ದಾರೋ ಅವರಿಗೆ 'ಅಮೆಜಾನ್ ಪ್ರೈಮ್' ಸೇವೆ ನೇರವಾಗಿ ಆಕ್ಟಿವೇಟ್ ಆದರೆ, ನೆಟ್ ಫ್ಲಿಕ್ಸ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದಾಗಿದ್ದು, ಹಾಗಾದರೆ ಏರ್‌ಟೆಲ್ ಪೋಸ್ಟ್‌ಪೇಡ್ ಗ್ರಾಹಕರು ಉಚಿತ ನೆಟ್‌ಫ್ಲಿಕ್ಸ್ ಸೇವೆ ಪಡೆಯುವುದು ಹೇಗೆ? ಎಂದು ಮುಂದೆ ತಿಳಿಯಿರಿ.

3 ತಿಂಗಳು ಉಚಿತ

3 ತಿಂಗಳು ಉಚಿತ

ಹೊಸ ಪೋಸ್ಟ್ ಪೇಯ್ಡ್ಗೆ ಚಂದಾದಾರ ಆಫರ್ ಅಡಿಯಲ್ಲಿ ನೆಟ್‌ಫ್ಲಿಕ್ಸ್‌ನ ಚಂದಾದಾರಿಕೆಯು 3 ತಿಂಗಳ ಅವಧಿಗೆ ಲಭ್ಯವಾಗುತ್ತದೆ. ನೆಟ್‌ಫ್ಲಿಕ್ಸ್ ಬೇಸಿಕ್ ಪ್ಲಾನ್ ಆಗಿರುವ ಮಾಸಿಕ 500 ರೂ. ಚಂದಾದಾರಿಕೆ ನಿಮಗೆ ಲಭ್ಯವಾಗುತ್ತದೆ. ಇದರಲ್ಲಿ ಬಳಕೆದಾರರು ನೆಟ್‌ಫ್ಲಿಕ್ಸ್ ಕಂಟೆಂಟ್‌ಗಳನ್ನು ನೀವು ಒಂದೇ ಸ್ಕ್ರೀನ್ ನಲ್ಲಿ ನೋಡುವುದಕ್ಕೆ ಅವಕಾಶವಿರುತ್ತದೆ.

ಆಫರ್ ಪಡೆಯುವುದು ಹೇಗೆ?

ಆಫರ್ ಪಡೆಯುವುದು ಹೇಗೆ?

3 ತಿಂಗಳ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಯನ್ನು ಪಡೆಯಲು ಏರ್‌ಟೆಲ್ ಗ್ರಾಹಕರು ಮೈ ಏರ್‌ಟೆಲ್ ಆಪ್‌ಗೆ ತೆರಳಬೇಕು ಮತ್ತು ಅಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಬ್ಯಾನರ್‌ಗೆ ತೆರಳಿದರೆ, ಕೆಲವು ಟ್ಯಾಪ್ ಗಳನ್ನು ಮಾಡುವ ಮುಖಾಂತರ ನೀವು ಸುಲಭವಾಗಿ ಚಂದಾದಾರಿಕೆಯನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು. ಇದರ ಹಂತಗಳು ಮುಂದಿವೆ ನೋಡಿ.

ಆಫರ್ ಪಡೆಯುವುದು ಹೇಗೆ? ಹಂತ 1

ಆಫರ್ ಪಡೆಯುವುದು ಹೇಗೆ? ಹಂತ 1

3 ತಿಂಗಳ ಉಚಿತ ನೆಟ್‌ಫ್ಲಿಕ್ಸ್ ಆಫರ್ ಪಡೆಯಲು ಮೈ ಏರ್‌ಟೆಲ್ ಆಪ್ ಅನ್ನು ತೆರೆಯಿರಿ ಮತ್ತು ಏರ್‌ಟೆಲ್ ಥ್ಯಾಂಕ್ಸ್ ಬ್ಯಾನರ್ ಅನ್ನು ಕ್ಲಿಕ್ಕಿಸಿ. ಇದಾದ ನಂತರ, ನೀವು 1,500 ರೂಪಾಯಿಯ ನೆಟ್‌ಫ್ಲಿಕ್ಸ್ ಚಂದಾದಾರಿಕೆಯ ಗಿಫ್ಟ್ ವೋಚರ್ ಅನ್ನು ಫ್ರೀಬೀಸ್ ಲಿಸ್ಟ್ನಲ್ಲಿ ಗಮನಿಸಬಹುದು. ನಂತರ ನೀವು ಅದರ ಮೇಲೆ ಕ್ಲೈಮ್ ಬಟನ್ ನ್ನು ಕ್ಲಿಕ್ಕಿಸಬೇಕು.

ಆಫರ್ ಪಡೆಯುವುದು ಹೇಗೆ? ಹಂತ 2

ಆಫರ್ ಪಡೆಯುವುದು ಹೇಗೆ? ಹಂತ 2

ಇದಾದ ನಂತರ ನೀವು ಈಗಾಗಲೇ ಹೊಂದಿರುವ ನೆಟ್‌ಫ್ಲಿಕ್ಸ್ ಅಕೌಂಟಿನಲ್ಲಿ ಲಾಗಿನ್ ಆಗಬೇಕು ಅಥವಾ ಹೊಸ ಅಕೌಂಟ್ ಅನ್ನು ತೆರೆಯಲು ಕ್ರಿಯೇಟ್ ನ್ಯೂ ಅಕೌಂಟ್ ಬಟನ್ ಅನ್ನು ಹಿಟ್ ಮಾಡಿ ಪ್ರೊಸೀಡ್ ಬಟನ್ ಒತ್ತಿ ಮುಂದುವರಿಯಬೇಕು. ಒಂದು ವೇಳೆ ನೀವು ನೆಟ್‌ಫ್ಲಿಕ್ಸ್ ಸದಸ್ಯರಾಗಿದ್ದಲ್ಲಿ ಈ ಅಮೌಂಟ್ ನಿಮ್ಮ ಅಕೌಂಟಿಗೆ ಆಗಲೇ ಕ್ರೆಡಿಟ್ ಆಗುತ್ತದೆ.

ನೆಟ್‌ಫ್ಲಿಕ್ಸ್ ಪ್ರಿಯರಿಗೆ ಬೆಸ್ಟ್!

ನೆಟ್‌ಫ್ಲಿಕ್ಸ್ ಪ್ರಿಯರಿಗೆ ಬೆಸ್ಟ್!

ಜನಪ್ರಿಯ ಕಾರ್ಯಕ್ರಮಗಳಿಂದ ಹೆಚ್ಚು ಸದ್ದು ಮಾಡುತ್ತಿರುವ ನೆಟ್‌ಫ್ಲಿಕ್ಸ್ ಈಗ ಯುವಜನತೆಯ ಪ್ರಮುಖ ವಿಡಿಯೋ ಸ್ಟ್ರೀಮಿಂಗ್ ತಾಣವಾಗಿದೆ. ಏರ್‌ಟೆಲ್ ಪೋಸ್ಟ್‌ಪೇಡ್1,500 ರೂಪಾಯಿಯ ನೆಟ್‌ಫ್ಲಿಕ್ಸ್ ಚಂದಾದಾರಿಕೆಯ ಗಿಫ್ಟ್ ವೋಚರ್ ಸಿಗುವುದು ನೆಟ್‌ಫ್ಲಿಕ್ಸ್ ಪ್ರಿಯರಿಗೆ ಬೆಸ್ಟ್ ಆಯ್ಕೆ ಎನ್ನಬಹುದು. ಆದರೆ, ಇಲ್ಲಿ ಪ್ರತಿ ತಿಂಗಳು 500 ರೂ. ಚಂದಾದಾರಿಗೆ ಮಾತ್ರ ಸಿಗಲಿದೆ.

Best Mobiles in India

English summary
Customers eligible for 3 months of free Netflix will be able to avail ... Airtel NetflixOffer: Here's How to Activate or Gift Free 3-Month Subscription on My Airtel App. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+