IPL ಸಮರ: ನೂತನ ಬಳಕೆದಾರರಿಗೆ ಏರ್‌ಟೆಲ್‌ನಿಂದ 1000GB ಡೇಟಾ ಉಚಿತ....!

|

ಈ ಬಾರಿಯ IPL ಟೆಲಿಕಾಂ ಕಂಪನಿಗಳ ನಡುವಿನ ಸಮರಕ್ಕೂ ಸಾಕ್ಷಿಯಾಗುತ್ತಿದೆ. ಅದರಲ್ಲೂ ಜಿಯೋ ಮತ್ತು ಏರ್‌ಟೆಲ್ ನಡುವೆ ದೊಡ್ಡ ಸಮರವನ್ನು ಏರ್ಪಡಿಸಿದೆ. ಇದರಿಂದಾಗಿ ಈ ಎರಡು ಟೆಲಿಕಾಂ ಕಂಪನಿಗಳ ಬಳಕೆದಾರರಿಗೆ ಭಾರೀ ಲಾಭವಾಗುತ್ತಿದೆ. ಇದೇ ಮಾದರಿಯಲ್ಲಿ ಏರ್‌ಟೆಲ್ ತನ್ನ ನೂತನ ಬಳಕೆದಾರರಿಗೆ IPL ನೋಡುವ ಸಲುವಾಗಿಯೇ 1000GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ.

IPL ಸಮರ: ನೂತನ ಬಳಕೆದಾರರಿಗೆ ಏರ್‌ಟೆಲ್‌ನಿಂದ 1000GB ಡೇಟಾ ಉಚಿತ....!

ಏರ್‌ಟೆಲ್ ಹೊಸ ಬಳಕೆದಾರರಿಗೆ IPL ಅಂಗವಾಗಿ ಹೊಸ ಆಫರ್ ಗಳನ್ನು ಲಾಂಚ್ ಮಾಡುತ್ತಿದೆ. ಈ ಬಾರಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಹೊಸದಾಗಿ ಬಳಕೆ ಮಾಡಿಕೊಳ್ಳುವವರಿಗೆ ಭರ್ಜರಿ ಆಫರ್ ವೊಂದನ್ನು ನೀಡಿದೆ. ಬ್ರಾಡ್ ಬ್ಯಾಂಡ್ ಬಳಕೆದಾರರನ್ನು ಸೆಳೆಯುವ ಸಲುವಾಗಿ 1000GB ಡೇಟಾವನ್ನು ಉಚಿತವಾಗಿ ನೀಡಲು ಮುಂದಾಗಿದೆ. ಈ ಆಫರ್ ಅಕ್ಟೋಬರ್ 31ರ ವರೆಗೆ ಲಭ್ಯವಿದೆ.

1000GB ಡೇಟಾ:

1000GB ಡೇಟಾ:

ಹೊಸ ಬಳಕೆದಾರರಿಗೆ ಏರ್‌ಟೆಲ್ 'ಬಿಗ್ ಬೈಟ್ ಡೇಟಾ' ಆಫರ್ ಹೆಸರಿನಲ್ಲಿ 1000GB ಡೇಟಾವನ್ನು ನೀಡುತ್ತಿದ್ದು, ಅಕ್ಟೋಬರ್ 31ರ ವರೆಗೂ ಈ ಆಫರ್ ಲಭ್ಯವಿರಲಿದೆ. ಹೊಸದಾಗಿ ಏರ್‌ಟೆಲ್ ಸೇವೆಯನ್ನು ಪಡೆಯುವವರು ಒಮ್ಮೆಗೆ 1000GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಇದಲ್ಲದೇ IPL ಮ್ಯಾಚ್ ಅನ್ನು ತಡೆಯಿಲ್ಲದೇ ಆನ್‌ಲೈನಿನಲ್ಲಿಯೇ ನೋಡಬಹುದಾಗಿದೆ.

ಎರಡು ಪ್ಲಾನ್:

ಎರಡು ಪ್ಲಾನ್:

ಹೊಸದಾಗಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆದುಕೊಳ್ಳುವವರಿಗೆ ಹೊಸ ಎರಡು ಪ್ಲಾನ್‌ಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಹೆಚ್ಚಿನ ವೇಗದ ಡೇಟಾ ಮತ್ತು ಹೆಚ್ಚಿನ ಪ್ರಮಾಣದ ಡೇಟಾವನ್ನು ನೀಡುತ್ತಿದೆ.

ರೂ.1099:

ರೂ.1099:

ಏರ್‌ಟೆಲ್‌ ರೂ.1099 ಪ್ಲಾನ್‌ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಬಳಕೆದಾರರಿಗೆ ಒಟ್ಟು 250GB ಡೇಟಾವನ್ನು ಬಳಕೆಗೆ ನೀಡಲಿದೆ. ಇದು 100Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಇದಲ್ಲದೇ ಈ ಪ್ಲಾನ್‌ನಲ್ಲಿ ಏರ್‌ಟೆಲ್ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?
ರೂ.1299 ಪ್ಲಾನ್:

ರೂ.1299 ಪ್ಲಾನ್:

ರೂ.1299ರ ಪ್ಲಾನ್ ನಲ್ಲಿ ಏರ್‌ಟೆಲ್ ಬಳಕೆದಾರರಿಗೆ ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ 350GB ಡೇಟಾವನ್ನು 100Mbps ವೇಗದಲ್ಲಿ ನೀಡಲಿದೆ. ಅಲ್ಲದೇ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ನೀಡುತ್ತಿದೆ.

Best Mobiles in India

English summary
Airtel New Schemes: IPL 2018 Offer 1000GB Free Data Offer. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X