Subscribe to Gizbot

ಗ್ರಾಹಕರ ಹಣವನ್ನು ಬಡ್ಡಿ ಸಮೇತ ನೀಡುವೆ ಎಂದ ಏರ್‌ಟೆಲ್!!

Written By:

ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಪೇಮೆಂಟ್ಸ್ ಬ್ಯಾಂಕ್ ಅಕೌಂಟ್ ಸೃಷ್ಟಿಸಿ ಸುಮಾರು 167.7 ಕೋಟಿ ರೂಪಾಯಿ ಎಲ್‌ಪಿಜಿ ಸಬ್ಸಿಡಿ ಹಣವನ್ನು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ಗೆ ವರ್ಗಾವಣೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಏರ್‌ಟೆಲ್ ಸ್ಪಷ್ಟನೆ ನೀಡಿದೆ.! ಗ್ರಾಹಕರ ಬ್ಯಾಂಕ್ ಖಾತೆಗೆ ಹಣವನ್ನು ಬಡ್ಡಿ ಸಮೇತ ವರ್ಗಾವಣೆ ಮಾಡುವುದಾಗಿ ಏರ್‌ಟೆಲ್ ತಿಳಿಸಿದೆ.!!

ಕಳೆದ ಶನಿವಾರವ ಭಾರ್ತಿ ಏರ್‌ಟೆಲ್ ಮತ್ತು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನ ಆಧಾರ್ ಆಧಾರಿತ ಸಿಮ್ ಪರಿಶೀಲನೆಗೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಾತ್ಕಾಲಿಕ ತಡೆ ನೀಡಿದ ನಂತರ ಏರ್‌ಟೆಲ್ ಎಚ್ಚೆತ್ತುಕೊಂಡಿದ್ದು, ತಕ್ಷಣವೇ ಮೆಂಟ್ಸ್ ಬ್ಯಾಂಕ್‌ನಿಂದ್ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಹಣ ವಾಪಸ್ ಮಾಡುವುದಾಗಿ ಹೇಳಿದೆ.!!

ಗ್ರಾಹಕರ ಹಣವನ್ನು ಬಡ್ಡಿ ಸಮೇತ ನೀಡುವೆ ಎಂದ ಏರ್‌ಟೆಲ್!!

ಸಿಮ್ ಮತ್ತು ಆಧಾರ್ ಲಿಂಕ್ ಅಮಯದಲ್ಲಿ ಸುಮಾರು 37.21 ಲಕ್ಷ ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಅಥವಾ ಒಪ್ಪಿಗೆ ಇದ್ದರೂ ಅವರಿಗೆ ತಿಳಿಯದಂತೆ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ ಖಾತೆಯನ್ನು ಏರ್‌ಟೆಲ್ ಆರಂಭಿಸಿದೆ ಎನ್ನಲಾಗಿದ್ದು, ಇದರಿಂದ ಸುಮಾರು 167.7 ಕೋಟಿ ರೂಪಾಯಿ ಎಲ್‌ಪಿಜಿ ಸಬ್ಸಿಡಿ ಹಣ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ಸೇರಿಕೊಂಡಿತ್ತು.!!

ಗ್ರಾಹಕರ ಹಣವನ್ನು ಬಡ್ಡಿ ಸಮೇತ ನೀಡುವೆ ಎಂದ ಏರ್‌ಟೆಲ್!!

ಹಾಗಾಗಿ, ಆಧಾರ್ ಕಾಯ್ದೆ ಉಲ್ಲಂಘನೆ ಆರೋಪದ ಕುರಿತು ಏರ್‌ಟೆಲ್‌ ವಿರುದ್ಧ ಪ್ರಾಧಿಕಾರ ಕಳೆದ ತಿಂಗಳು ತನಿಖೆಗೆ ಆದೇಶಿಸಿತ್ತು.! ಅಂತೆಯೇ ತಕ್ಷಣದಿಂದಲೇ ಈ ಕಾರ್ಯವನ್ನು ನಿಲ್ಲಿಸದಿದ್ದರೆ ಭಾರೀ ಪ್ರಮಾಣದ ದಂಡ ತೆರಬೇಕಾದೀತು ಎಂದು ಯುಐಡಿಎಐ ಭಾರ್ತಿ ಏರ್‌ಟೆಲ್‌ಗೆ ಎಚ್ಚರಿಕೆ ಸಹ ನೀಡಿತ್ತು.!!

ಓದಿರಿ: ಎಲೆಕ್ಟ್ರಾನಿಕ್ ಮತಯಂತ್ರವನ್ನು ಹ್ಯಾಕ್ ಮಾಡಬಹುದೇ?..ಯಕ್ಷಪ್ರಶ್ನೆಗೆ ಇಲ್ಲಿದೆ ಉತ್ತರ!!

English summary
Bharti AirtelBSE 1.95 % agreed to return the subsidy amount of Rs 190 crore (along with interest) to the consumers.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot