ಏರ್‌ಟೆಲ್‌ನಿಂದ ಹೊಸ ಪ್ಲಾನ್ ಲಾಂಚ್..! ರೂ. 419ಕ್ಕೆ 105GB ಡೇಟಾ..!
ಏರ್ ಟೆಲ್ ಹೊಸ ಪ್ರೀಪೇಯ್ಡ್ ತಾರಿಫ್ ಪ್ಲಾನ್ ವೊಂದನ್ನು ಪರಿಚಯಿಸಿದ್ದು 419 ರುಪಾಯಿ ಬೆಲೆಯ ಪ್ಲಾನ್ ಇದಾಗಿದೆ. ಈ ಪ್ಲಾನ್ ನ ಅಡಿಯಲ್ಲಿ105ಜಿಬಿ ಡಾಟಾ ಮತ್ತು ಅನಿಯಮಿತ ಕರೆಗಳು 419 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. ಇದು ಓಪನ್ ಮಾರ್ಕೆಟ್ ಪ್ಲಾನ್ ಆಗಿರುವುದರಿಂದಾಗಿ ಯಾವುದೇ ಏರ್ ಟೆಲ್ ಪ್ರಿಪೇಯ್ಡ್ ಬಳಕೆದಾರರು ಕೂಡ ಇದನ್ನು ಪಡೆಯಬಹುದು. ಈ ಪ್ಲಾನ್ ಪ್ರಕಾರ 1.4ಜಿಬಿ ಡಾಟಾ ಪ್ರತಿ ದಿನ, ಅನಿಯಮಿತ ವಾಯ್ಸ್ ಕರೆಗಳು, 100ಎಸ್ಎಂಎಸ್ ಉಚಿತವಾಗಿ 75 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಇದು ಸದ್ಯ ಲಭ್ಯವಿರುವ ಏರ್ ಟೆಲ್ ನ 399 ಪ್ಲಾನ್ ಮತ್ತು 448 ಪ್ಲಾನ್ ನ ನಡುವೆ ಬರುವ ಮತ್ತೊಂದು ಪ್ಲಾನ್ ಆಗಿದೆ.

ಸದ್ಯ ಲಭ್ಯವಿರುವ 399 ಮತ್ತು 448 ಪ್ಲಾನ್ ನ ಪ್ರೀಪೇಯ್ಡ್ ರೀಚಾರ್ಜ್ ನಲ್ಲಿ 1.4ಜಿಬಿ ಡಾಟಾ ಪ್ರತಿದಿನ ಮತ್ತು ಅನಿಯಮಿತ ವಾಯ್ಸ್ ಕರೆಗಳು ವಿಭಿನ್ನ ಅವಧಿಗೆ ಲಭ್ಯವಾಗುತ್ತದೆ 399 ರೂಪಾಯಿ ಪ್ಲಾನ್ 70 ದಿನಗಳ ಅವಧಿಗೆ ಲಭ್ಯವಾದರೆ,448 ರುಪಾಯಿ ಪ್ಲಾನ್ 82 ದಿನಗಳ ಅವಧಿಗೆ ಲಭ್ಯವಾಗುತ್ತದೆ.

ಏರ್ ಟೆಲ್ ನ ಕಡಿಮೆ ಬೆಲೆಯ ಪ್ಲಾನ್ ಗಳು:
ಏರ್ ಟೆಲ್ ನಲ್ಲಿ ಇನ್ನೆರಡು ಕಡಿಮೆ ಬೆಲೆಯ ಪ್ಲಾನ್ ಕೂಡ ಲಭ್ಯವಿದ್ದು 199 ರುಪಾಯಿ ಮತ್ತು 219 ರುಪಾಯಿಯ ಪ್ಲಾನ್ ಗಳು ಇದಾಗಿದೆ. ಈ ಪ್ಲಾನ್ ನ ಅನ್ವಯ 1.4ಜಿಬಿ ಡಾಟಾ ಪ್ರತಿದಿನ 28 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಇದರ ಜೊತೆಗೆ 509 ರೂಪಾಯಿಯ ಪ್ಲಾನ್ ಕೂಡ ಇದ್ದು 1.4ಜಿಬಿ ಡಾಟಾ ಪ್ರತಿದಿನ 90 ದಿನಗಳ ಅವಧಿಗೆ ಈ ಪ್ಲಾನ್ ನಲ್ಲಿ ಉಚಿತವಾಗಿರಲಿದೆ.

ಡಾಟಾ ಸೇವೆ ಮುಂದುವರಿಕೆ:
ಏರ್ ಟೆಲ್ 419 ರೀಚಾರ್ಜ್ ಪ್ಲಾನ್ ನಲ್ಲಿ ಒಂದು ವೇಳೆ ನೀವು FUPಯನ್ನು ಸೆಟ್ ಮಾಡಿಕೊಂಡಲ್ಲಿ ಅನಿಯಮಿತ ಡಾಟಾ ಬರಲಿದೆ.105ಜಿಬಿ ಕೋಟಾವನ್ನು ಬಳಕೆ ಮಾಡಿದ ನಂತರವೂ ಕೂಡ ಚಂದಾದಾರರು ಡಾಟಾ ಸೇವೆಯನ್ನು ಮುಂದುವರಿಸಿಕೊಳ್ಳಲು ಇದರಲ್ಲಿ ಅವಕಾಶವಿರುತ್ತದೆ. ಆದರೆ ಅದರ ವೇಗದ ಮಿತಿಯಲ್ಲಿ ಇಳಿಕೆ ಇರುತ್ತದೆ.
ಏರ್ ಟೆಲ್ ನ ಈ 419 ರೂಪಾಯಿ ಪ್ಲಾನ್ ಜಿಯೋ ನೀಡುವ ಹಲವು ಆಫರ್ ಗಳ ಜೊತೆ ಸ್ಪರ್ಧೆ ಮಾಡಲಿದೆ.ನಿಜ ಹೇಳಬೇಕು ಎಂದರೆ ಏರ್ ಟೆಲ್ ನ ಮೇಲಿನ ಎಲ್ಲಾ ಪ್ಯಾಕ್ ಗಳಲ್ಲೂ ಕೂಡ 1.4ಜಿಬಿ ಡಾಟಾವನ್ನು ಪ್ರತಿದಿನ ಉಚಿತವಾಗಿ ನೀಡಲಾಗುತ್ತದೆ.

ವೊಡಾಫೋನ್ ಆಫರ್:
ವೊಡಾಫೋನ್ ಕೂಡ ಹಲವು ಇದೇ ರೀತಿಯ ಆಫರ್ ಗಳನ್ನು ನೀಡುತ್ತದೆ. ಇತ್ತೀಚೆಗೆ 204,479,529 ರುಪಾಯಿಗಳ ರೀಚಾರ್ಜ್ ಪ್ಯಾಕ್ ಗಳನ್ನು ಆಫರ್ ಮಾಡಿದ್ದು 1.5ಜಿ ಡಾಟಾವನ್ನು ಪ್ರತಿದಿನ ಉಚಿತವಾಗಿ 28,84,90 ದಿನಗಳ ಅವಧಿ ಕ್ರಮವಾಗಿ ನೀಡಲಾಗುತ್ತದೆ.

ಏರ್ ಟೆಲ್ ನ 181 ರುಪಾಯಿ ಪ್ಲಾನ್:
ಏರ್ ಟೆಲ್ ಇತ್ತೀಚೆಗೆ 181 ರುಪಾಯಿ ಪ್ಲಾನ್ ನ್ನು ತನ್ನ ಪ್ರೀಪೇಯ್ಡ್ ಬಳಕೆದಾರರಿಗಾಗಿ ಪರಿಚಯಿಸಿದ್ದು, ಅದರಲ್ಲಿ ಹೆಚ್ಚು ಡಾಟಾವನ್ನು ಆಫರ್ ಮಾಡಲಾಗಿದೆ. ಹೌದು 181 ರುಪಾಯಿ ಪ್ಯಾಕ್ ರೀಚಾರ್ಜ್ ಮಾಡಿಸಿಕೊಂಡಿರುವ ಏರ್ ಟೆಲ್ ಪ್ರೀಪೇಯ್ಡ್ ಗ್ರಾಹಕರು 3ಜಿಬಿ ಡಾಟಾವನ್ನು ಪ್ರತಿದಿನ ಉಚಿತವಾಗಿ, ಅನಿಯಮಿತ ವಾಯ್ಸ್ ಕರೆಗಳು, ಮತ್ತು 100ಎಸ್ ಎಂಎಸ್ ಪ್ರತಿದಿನ ಉಚಿತವಾಗಿ ಕಳಿಸುವ ಅವಕಾಶವನ್ನು ಹೊಂದಿರುತ್ತಾರೆ. ಈ ಪ್ಲಾನ್ ನ ಅವಧಿ ಕೇವಲ 14 ದಿನಗಳು ಮಾತ್ರ. ಅಂದರೆ 181 ರುಪಾಯಿಗೆ 42ಜಿಬಿ ಡಾಟಾವನ್ನು 14 ದಿನಗಳ ಅವಧಿಗೆ ಗ್ರಾಹಕರು ಬಳಕೆ ಮಾಡಬಹುದಾಗಿರುತ್ತದೆ.


Click it and Unblock the Notifications








