ನಂ.1 ಬಜೆಟ್ ಸ್ಮಾರ್ಟ್‌ಫೋನ್ 'ವಿಷನ್ 3' ಜೊತೆಗೆ 'ಏರ್‌ಟೆಲ್' ಬಂಪರ್ ಆಫರ್!!
ಕೇವಲ 6,999 ರೂ.ಗಳ ಬೆಲೆಯ 4000mAh ಬ್ಯಾಟರಿ, 5.7 ಇಂಚು ಡಿಸ್‌ಪ್ಲೇಯಂತಹ ಅತ್ಯಾಕರ್ಷಕ ಫೀಚರ್‌ಗಳನ್ನು ಒಳಗೊಂಡಿರುವ 'ಇನ್‌ಫೋಕಸ್ ವಿಷನ್ 3' ಹೆಚ್ಚು ಸದ್ದು ಮಾಡುತ್ತಿದೆ.
ಮಾರುಕಟ್ಟೆಯಲ್ಲಿ ಬಿಸಿತುಪ್ಪದಂತೆ ಖರ್ಚಾಗುತ್ತಿರುವ ಅಮೆರಿಕ ಮೂಲದ 'ಇನ್‌ಫೋಕಸ್ ವಿಷನ್ 3' ಸ್ಮಾರ್ಟ್‌ಫೋನ್ ಮೇಲೆ ಏರ್‌ಟೆಲ್ ಭರ್ಜರಿ ಆಫರ್ ಅನ್ನು ಘೋಷಿಸಿದೆ.!! ನೂತನ ಆಫರ್‌ನಲ್ಲಿ 'ಇನ್‌ಫೋಕಸ್ ವಿಷನ್ 3' ಸ್ಮಾರ್ಟ್‌ಫೋನ್ ಖರೀದಿಸಿದ ಗ್ರಾಹಕರಿಗೆ ಉಚಿತವಾಗಿ 90GB ಡೇಟಾವನ್ನು ನೀಡುವುದಾಗಿ ತಿಳಿಸಿದೆ.!!

ಕೇವಲ 6,999 ರೂ.ಗಳ ಬೆಲೆಯ 4000mAh ಬ್ಯಾಟರಿ, 5.7 ಇಂಚು ಡಿಸ್‌ಪ್ಲೇಯಂತಹ ಅತ್ಯಾಕರ್ಷಕ ಫೀಚರ್‌ಗಳನ್ನು ಒಳಗೊಂಡಿರುವ 'ಇನ್‌ಫೋಕಸ್ ವಿಷನ್ 3' ಹೆಚ್ಚು ಸದ್ದು ಮಾಡುತ್ತಿದೆ. ಹಾಗಾಗಿ, ಏರ್‌ಟೆಲ್ ಕೂಡ ವಿಷನ್ 3 ಫೋನ್ ಜೊತೆ ಕೈಜೋಡಿಸಿದೆ. ಹಾಗಾದರೆ, ಫೋನ್ ಇತರೆ ಫೀಚರ್ಸ್ ಏನು? ಏರ್‌ಟೆಲ್ ಡೇಟಾ ಪಡೆಯುವುದು ಹೇಗೆ ಎಂದು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

90GB ಏರ್‌ಟೆಲ್ ಡೇಟಾ ಆಫರ್.!!
'ಇನ್‌ಫೋಕಸ್ ವಿಷನ್ 3' ಸ್ಮಾರ್ಟ್‌ಫೋನ್ ಖರೀದಿಸಿದ ಗ್ರಾಹಕರು ಏರ್‌ಟೆಲ್ 349 ರೂ. ಮೇಲೆ ರೀಚಾರ್ಜ್ ಮಾಡಿಸಿದರೆ 90GB ಏರ್‌ಟೆಲ್ ಡೇಟಾ ಪಡೆಯಬಹುದಾಗಿದೆ. 6 ತಿಂಗಳು 15GBಯಂತೆ ಗ್ರಾಹಕರಿಗೆ ಹೆಚ್ಚುವರಿ ಡೇಟಾ ಸಿಗಲಿದೆ.!! ಈಗಾಗಲೇ ಮೊಬೈಲ್ ಖರೀದಿಸಿದ ಗ್ರಾಹಕರು ಕೂಡ ಏರ್‌ಟೆಲ್ ಆಪ್‌ನಲ್ಲಿ ಈ ಆಫರ್ ಪಡೆಯಲಿದ್ದಾರೆ.!!

ವಿಷನ್ 3 ಡಿಸ್‌ಪ್ಲೇ ಹೇಗಿದೆ?
ಮೊದಲೇ ಹೇಳಿದಂತೆ 'ಇನ್‌ಫೋಕಸ್ ವಿಷನ್ 3' ಸ್ಮಾರ್ಟ್‌ಫೋನ್ 5.7 ಇಂಚುಗಳ (1,440x720p ರೆಸೊಲ್ಯೂಷನ್) ಫುಲ್ HD+ ಸ್ಕ್ರೀನ್ ಅನ್ನು ಹೊಂದಿದೆ. 18:9 ಆಕಾರ ಅನುಪಾತದಲ್ಲಿ ಡಿಸ್‌ಪ್ಲೇಯನ್ನು ರೂಪಿಸಲಾಗಿದ್ದು, 2.5D ಕರ್ವ್ಡ್ ಗ್ಲಾಸ್ ಮೂಲಕ ಡಿಸ್‌ಪ್ಲೇ ರಕ್ಷಣಾ ಕವಚ ರೂಪಿಸಲಾಗಿದೆ.!!


ಅದ್ಬುತ ಕ್ಯಾಮೆರಾ ಫೀಚರ್ಸ್!!
13MP ಮತ್ತು 5MP ಸೆನ್ಸಾರ್ ಜತೆ ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 120 ಡಿಗ್ರಿ ವೈಡ್ ಆಂಗಲ್ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8MP ಫ್ರಂಟ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ನಲ್ಲಿದೆ.! ಒಂದೇ ಸಮಯಕ್ಕೆ ಫ್ರಂಟ್ ಮತ್ತು ಬ್ಯಾಕ್ ಕ್ಯಾಮೆರಾಗಳಲ್ಲಿ ಚಿತ್ರ ತೆಗೆಯಬಹುದಾದ ವಿಶೇಷತೆ ಈ ಸ್ಮಾರ್ಟ್‌ಫೋನ್‌ನಲ್ಲಿದೆ.!!

ಪ್ರೊಸೆಸರ್ ಯಾವುದು?
ರೆಡ್‌ಮಿ ನೋಟ್ 4 ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿದ್ದರೆ, ಇನ್‌ಫೋಕಸ್ ವಿಷನ್ 3 ಫೋನ್ 1.3Ghz ಕ್ವಾಡ್ ಕೋರ್ ಮೀಡಿಯಾಟೆಕ್ M6373 Cortex-A53 ಪ್ರೊಸೆಸರ್ ಹೊಂದಿದೆ.! ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ನಂತೆಯೇ Cortex-A53 ಪ್ರೊಸೆಸರ್ ಉತ್ತಮ ಕಾರ್ಯನಿರ್ವಹಣೆಗೆ ಹೆಸರಾಗಿದೆ.!!

RAM ಮತ್ತು ಮೆಮೊರಿ!!
ಇನ್‌ಫೋಕಸ್ ವಿಷನ್ 3 ಫೋನ್ 2GB RAM ಹಾಗೂ 16GB ಇಂಟರ್ನಲ್ ಮೆಮರಿ ಹೊಂದಿದೆ. ಜೊತೆಗೆ ಎಸ್‌ಡಿ ಕಾರ್ಡ್ ಮೂಲಕ ಫೋನ್ ಮೆಮೊರಿನ್ನು 64GB ವರೆಗೂ ವರ್ಧಿಸಬಹುಹಾಗಿದ್ದು, ಆಂಡ್ರಾಯ್ಡ್ 7.0 ನೌಗಾಟ್ ಮೂಲಕ ಫೋನ್ ಕಾರ್ಯನಿರ್ವಹಿಸಲಿದೆ.!!

ಬ್ಯಾಟರಿ ಮತ್ತು ಇತರ ಫೀಚರ್ಸ್!!
ಇನ್‌ಫೋಕಸ್ ವಿಷನ್ 3 ಫೋನ್ ಅದ್ಬುತ 4000mAh ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಬ್ಯಾಟರಿಯಲ್ಲಿ ರೆಡ್‌ಮಿ ನೋಟ್ 4 ಗೆ ಸೆಡ್ಡು ಹೊಡೆಯುತ್ತಿದೆ.! ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸಾರ್, ಬ್ಲೂಟೂತ್4.0 , ಔಐಫೈ ಡೈರೆಕ್ಟ್, ಮೈಕ್ರೋUSB 2.0 ಮತ್ತು OTGಯಂತಹ ಇತರೆ ಫೀಚರ್ಸ್‌ಗಳು ಫೋನ್ ಅಲಂಕಾರ ಹೆಚ್ಚಿಸಿವೆ.!!


Click it and Unblock the Notifications








