Home
ಸುದ್ದಿಜಾಲ

ಜಿಯೋ ಸೋಲಿಸಲು ಏರ್‌ಟೆಲ್‌ನಿಂದ ಒಂದು ವರ್ಷದ ಉಚಿತ ಆಫರ್..! ಅನ್‌ಲಿಮಿಟೆಡ್ ಡೇಟಾ-ಕರೆ..!

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಏರ್‌ಟೆಲ್ ಮತ್ತು ಜಿಯೋಗಳು ತಮ್ಮ ಬಳಕೆದಾರರಿಗೆ ದೊಡ್ಡ ಮಾದರಿಯಲ್ಲಿ ಆಫರ್‌ಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಏರ್‌ಟೆಲ್ ಮಾರುಕಟ್ಟೆಯಲ್ಲಿಯೇ ವಿಭಿನ್ನವಾದ ಆಫರ್ ನೀಡಲು ಮುಂದಾಗಿದೆ. ಒಂದು ವರ್ಷ ಪೂರ್ತಿ ತನ್ನ ಬಳಕೆದಾರರಿಗೆ ಡೇಟಾ-ಕರೆ ಮಾಡುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ.

ಜಿಯೋ ಸೋಲಿಸಲು ಏರ್‌ಟೆಲ್‌ನಿಂದ ಒಂದು ವರ್ಷದ ಉಚಿತ ಆಫರ್..!

ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಸ್ಪರ್ಧೆಯೂ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಏರ್‌ಟೆಲ್ ಹೊಸ ಮಾದರಿಯ ಪ್ರಯತ್ನಕ್ಕೆ ಮುಂದಾಗಿದೆ. ಇದರಿಂದಾಗಿ ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳು ನಷ್ಟದ ಹಂತಕ್ಕೆ ತಲುಪುವ ಸಾಧ್ಯತೆ ಇದೆ. ಈ ಹೊಸ ಮಾದರಿಯ ಪ್ಲಾನ್‌ನಿಂದಾಗಿ ಏರ್‌ಟೆಲ್ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಸಹಾಯವಾಗಲಿದೆ.

ಏರ್‌ಟೆಲ್ ಆನ್‌ಲೈನ್ ಸ್ಟೋರ್:

ಏರ್‌ಟೆಲ್ ಆನ್‌ಲೈನ್ ಸ್ಟೋರ್:

ಏರ್‌ಟೆಲ್ ಆನ್‌ಲೈನ್‌ ಸ್ಟೋರಿನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಿದವರಿಗೆ ಹೆಚ್ಚಿನ ಪ್ರಮಾಣದ ಲಾಭಗಳು ಏರ್‌ಟೆಲ್ ಮಾಡಿಕೊಡುತ್ತಿವೆ. ಅಲ್ಲದೇ ಒಂದು ವರ್ಷಗಳ ಕಾಲ ನಿತ್ಯ 1.4 GB ಡೇಟಾವನ್ನು ಮತ್ತು ಉಚಿತವಾಗಿ ಕರೆ ಮಾಡುವ ಅವಕಾಶದೊಂದಿಗೆ ನಿತ್ಯ 100 SMSಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

ಯಾವ ಫೋನ್‌ಗಳಿಗೆ:

ಯಾವ ಫೋನ್‌ಗಳಿಗೆ:

ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ನೋಕಿಯಾ 7 ಪ್ಲಸ್, ನೋಕಿಯಾ 6.1 ಮತ್ತು ಒಪ್ಪೋ F9 ಪ್ರೋ ಸ್ಮಾರ್ಟ್‌ಪೋನ್‌ಗಳನ್ನು ಏರ್‌ಟೆಲ್ ಆನ್‌ಲೈನ್‌ ಸ್ಟೋರಿನಲ್ಲಿ EMI ನಲ್ಲಿ ಖರೀದಿ ಮಾಡಿದವರಿಗೆ ಮಾತ್ರವೇ ಒಂದು ವರ್ಷದ ಉಚಿತ ಸೇವೆಯೂ ಲಭ್ಯವಾಗಲಿದೆ ಎನ್ನಲಾಗಿದೆ.

ಪಡೆಯುವುದು ಹೇಗೆ..?

ಪಡೆಯುವುದು ಹೇಗೆ..?

ಸದ್ಯ ಈ ಮೂರು ಡಿವೈಸ್‌ಗಳಲ್ಲಿ ಯಾವುದಾರರು ಒಂದನ್ನು ಖರೀದಿ ಮಾಡಿ, ಏರ್‌ಟೆಲ್ ಪ್ರೀಪೇಯ್ಡ್ ಬಳಕೆ ಮಾಡಿಕೊಳ್ಳುತ್ತಿದ್ದರೇ ನೀವು ಒಂದು ವರ್ಷದ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ಪ್ಲಾನ್ ಏನು..?

ಪ್ಲಾನ್ ಏನು..?

ಈ ಪ್ಲಾನ್‌ಗೆ ಏರ್‌ಟೆಲ್ ಆನ್‌ಲೈನ್ ಪ್ರೀಪೇಯ್ಡ್ ಪ್ಲಾನ್ ಎಂದು ನಾಮಕರಣ ಮಾಡಲಾಗಿದೆ. ಇದು ಉಚಿತವಾಗಿ ದೊರೆಯಲಿದ್ದು, ಒಂದು ವರ್ಷಗಳ ಕಾಲ ಅನ್‌ಲಿಮಿಟೆಡ್ ಕರೆ ಗಳನ್ನು ಮಾಡಬಹುದಾಗಿದೆ. ಅಲ್ಲದೇ 511 GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ 35600 SMSಗಳನ್ನು 365 ದಿನಗಳ ಕಾಲ ಪಡೆಯಬಹುದಾಗಿದೆ.

ಲಾಭ ಹೇಗೆ..?

ಲಾಭ ಹೇಗೆ..?

ಉದಾಹರಣೆಗೆ ನೀವು ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಖರೀದಿ ಮಾಡಿದ ಸಂದರ್ಭದಲ್ಲಿ ಒನ್‌ ಟೈಮ್ ಪೇಮೆಂಟ್ ಆಗಿ ನೀವು ರೂ.7699 ಪಾವತಿ ಮಾಡಬೇಕಾಗಿದೆ. ಇದಾದ ನಂತರದಲ್ಲಿ 12 ತಿಂಗಳು ಕಾಲ ಪ್ರತಿ ತಿಂಗಳು ನೀವು ರೂ.1734 ಪಾವತಿ ಮಾಡಿದರೆ ಒಂದು ವರ್ಷಗಳ ಕಾಲ ಏರ್‌ಟೆಲ್ ಉಚಿತ ಸೇವೆಯ ಲಾಭ ಪಡೆದುಕೊಳ್ಳಬಹುದಾಗಿದೆ.

ಒಪ್ಪೊ F9 ಪ್ರೋ ಖರೀದಿ ಮಾಡಿದರೆ ..?

ಒಪ್ಪೊ F9 ಪ್ರೋ ಖರೀದಿ ಮಾಡಿದರೆ ..?

ಉದಾಹರಣೆಗೆ ನೀವು ಒಪ್ಪೊ F9 ಪ್ರೋ ಸ್ಮಾರ್ಟ್‌ಫೋನ್ ಖರೀದಿ ಮಾಡಿದ ಸಂದರ್ಭದಲ್ಲಿ ಒನ್‌ ಟೈಮ್ ಪೇಮೆಂಟ್ ಆಗಿ ನೀವು ರೂ.6015 ಪಾವತಿ ಮಾಡಬೇಕಾಗಿದೆ. ಇದಾದ ನಂತರದಲ್ಲಿ 12 ತಿಂಗಳು ಕಾಲ ಪ್ರತಿ ತಿಂಗಳು ನೀವು ರೂ.1714 ಪಾವತಿ ಮಾಡಿದರೆ ಒಂದು ವರ್ಷಗಳ ಕಾಲ ಏರ್‌ಟೆಲ್ ಉಚಿತ ಸೇವೆಯ ಲಾಭ ಪಡೆದುಕೊಳ್ಳಬಹುದಾಗಿದೆ.

ನೋಕಿಯಾ 6.1 ಖರೀದಿ ಮಾಡಿದರೆ ..?

ನೋಕಿಯಾ 6.1 ಖರೀದಿ ಮಾಡಿದರೆ ..?

ಉದಾಹರಣೆಗೆ ನೀವು ನೋಕಿಯಾ 6.1 ಸ್ಮಾರ್ಟ್‌ಫೋನ್ ಖರೀದಿ ಮಾಡಿದ ಸಂದರ್ಭದಲ್ಲಿ ಒನ್‌ ಟೈಮ್ ಪೇಮೆಂಟ್ ಆಗಿ ನೀವು ರೂ.4599 ಪಾವತಿ ಮಾಡಬೇಕಾಗಿದೆ. ಇದಾದ ನಂತರದಲ್ಲಿ 12 ತಿಂಗಳು ಕಾಲ ಪ್ರತಿ ತಿಂಗಳು ನೀವು ರೂ.1275 ಪಾವತಿ ಮಾಡಿದರೆ ಒಂದು ವರ್ಷಗಳ ಕಾಲ ಏರ್‌ಟೆಲ್ ಉಚಿತ ಸೇವೆಯ ಲಾಭ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Airtel Offers Free Unlimited 4G Data, Calls For A Year, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+