Home
ಸುದ್ದಿಜಾಲ

ಏರ್‌ಟೆಲ್‌ನಿಂದ ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9+ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಆಫರ್..!

By Tejaswini P G

ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆದ ಭಾರ್ತಿ ಏರ್ಟೆಲ್ನ ಆನ್ಲೈನ್ ಸ್ಟೋರ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9+ ಸರಣಿ ಖರೀದಿಗೆ ಲಭ್ಯವಾಗಿದ್ದು, ಏರ್ಟೆಲ್ ಸಂಸ್ಥೆಯು ಇದರ ಖರೀದಿಯ ಮೇಲೆ ಡೌನ್ ಪೇಯ್ಮೆಂಟ್ ಸೌಲಭ್ಯ, ಇನ್ಸ್ಟೆಂಟ್ ಪೈನಾನ್ಸ್, ಬಂಡಲ್ಡ್ ತಿಂಗಳ ಪ್ಲ್ಯಾನ್ ಗಳು ಇತ್ಯಾದಿ ಆಯ್ಕೆಗಳನ್ನು ನೀಡುತ್ತಿದೆ.

ಏರ್‌ಟೆಲ್‌ನಿಂದ ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9+ ಸ್ಮಾರ್ಟ್‌ಫೋನ್ ಆಫರ್..!


ಭಾರ್ತಿ ಏರ್ಟೆಲ್ ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಆದ ವಾಣಿ ವೆಂಕಟೇಶ್ ಅವರು "ಭಾರತದ ಅಗ್ರ ಸ್ಮಾರ್ಟ್ಫೋನ್ ನೆಟ್ವರ್ಕ್ ಎನಿಸಿರುವ ನಾವು ನಮ್ಮ ಆನ್ಲೈನ್ ಸ್ಟೋರ್ ನಲ್ಲಿ ಸ್ಯಾಮ್ಸಂಗ್ ನ ಇತ್ತೀಚಿನ ಫ್ಲ್ಯಾಗ್ಶಿಪ್ ಮೊಬೈಲ್ ಹೊಂದಿರುವುದು ನಮಗೆ ಸಂತೋಷವನ್ನುಂಟು ಮಾಡಿದೆ. ನಾವು ನಮ್ಮ ಗ್ರಾಹಕರಿಗೆ ರಿಯಾಯಿತಿ ದರ ಮತ್ತು ಇನ್ಸ್ಟೆಂಟ್ ಫೈನಾನ್ಸಿಂಗ್ ಸೌಲಭ್ಯ ನೀಡುವ ಮೂಲಕ ಈ ಪ್ರೀಮಿಯಂ ಮೊಬೈಲ್ ಅನ್ನು ತಮ್ಮದಾಗಿಸಿಕೊಳ್ಳುವ ಸದಾವಕಾಶವನ್ನು ನೀಡುತ್ತಿದ್ದೇವೆ. ನಾವು ನಮ್ಮ ಗ್ರಾಹಕರಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ವಿನಂತಿಸಿಕೊಳ್ಳುತ್ತಿದ್ದು, ಈ ಮೂಲಕ ಈ ನೂತನ ಸ್ಮಾರ್ಟ್ಫೋನ್ ನ ಅನುಭವ ಪಡೆಯಲಿ ಎಂಬ ಆಶಯ ನಮ್ಮದು" ಎಂದು ಹೇಳಿದ್ದಾರೆ.

ಗ್ರಾಹಕರು ನಮ್ಮ ಏರ್ಟೆಲ್ ಆನ್ಲೈನ್ ಸ್ಟೋರ್ ನಲ್ಲಿ ಈ ಸ್ಯಾಮ್ಸಂಗ್ ಗ್ಯಾಲಕ್ಸಿ S9 ಅನ್ನು ರೂ 9900 ಡೌನ್ ಪೇಯ್ಮೆಂಟ್ ಮಾಡುವ ಮೂಲಕ ಖರೀದಿಸಬಹುದಾಗಿದ್ದು, 24 ತಿಂಗಳುಗಳ ಕಾಲ ರೂ 2499 ರ ಕಂತನ್ನು ಪಾವತಿಸಬೇಕು. ಈ ತಿಂಗಳ ಕಂತಿನಲ್ಲಿ 80GB ಡೇಟಾ. ಅನಿಯಮಿತ ಕರೆಗಳು , ಆಕರ್ಷಕ ಮೀಡಿಯಾ ಕಂಟೆಂಟ್ ನ ಸಬ್ಸ್ಕ್ರಿಪ್ಶನ್( 1 ವರ್ಷ ಅಮೇಜಾನ್ ಪ್ರೈಮ್ ಸದಸ್ಯತನ,ಏರ್ಟೆಲ್ ಸೆಕ್ಯೂರ್, ಏರ್ಟೆಲ್ ಟಿವಿ, ವಿಂಕ್ ಮ್ಯೂಸಿಕ್) ನೀಡುವ ಪೋಸ್ಟ್ ಪೇಯ್ಡ್ ಪ್ಲ್ಯಾನ್ ಕೂಡ ಒಳಗೊಂಡಿದೆ.

ಇನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ S9+ ಅನ್ನು ಗ್ರಾಹಕರು ನಮ್ಮ ಏರ್ಟೆಲ್ ಆನ್ಲೈನ್ ಸ್ಟೋರ್ ನಲ್ಲಿ ರೂ 9900 ಡೌನ್ ಪೇಯ್ಮೆಂಟ್ ಮಾಡುವ ಮೂಲಕ ಖರೀದಿಸಬಹುದಾಗಿದ್ದು 24 ತಿಂಗಳುಗಳ ಕಾಲ ರೂ 2799 ರ ಕಂತನ್ನು ಪಾವತಿಸಬೇಕು. ಈ ತಿಂಗಳ ಕಂತಿನಲ್ಲಿ 80GB ಡೇಟಾ. ಅನಿಯಮಿತ ಕರೆಗಳು , ಆಕರ್ಷಕ ಮೀಡಿಯಾ ಕಂಟೆಂಟ್ ನ ಸಬ್ಸ್ಕ್ರಿಪ್ಶನ್( 1 ವರ್ಷ ಅಮೇಜಾನ್ ಪ್ರೈಮ್ ಸದಸ್ಯತನ,ಏರ್ಟೆಲ್ ಸೆಕ್ಯೂರ್, ಏರ್ಟೆಲ್ ಟಿವಿ, ವಿಂಕ್ ಮ್ಯೂಸಿಕ್) ನೀಡುವ ಪೋಸ್ಟ್ ಪೇಯ್ಡ್ ಪ್ಲ್ಯಾನ್ ಕೂಡ ಒಳಗೊಂಡಿದೆ.

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!

ಸ್ಯಾಮ್ಸಂಗ್ ಗ್ಯಾಲಕ್ಸಿ S9/S9+ ಅನ್ನು ಏರ್ಟೆಲ್ ಆನ್ಲೈನ್ ಸ್ಟೋರ್ ನಲ್ಲಿ ಪಡೆಯುವುದು ಹೇಗೆ?

1. https://www.airtel.in/onlinestore/ ಗೆ ಹೋಗಿ ನೀವು ಇಚ್ಛಿಸುವ ಸಾಧನವನ್ನು ಆಯ್ಕೆ ಮಾಡಿ

2. ನಿಮ್ಮ ಅರ್ಹತೆಯ ಅನುಸಾರ ಸಿಗುವ ಸಾಲಕ್ಕೆ ಸಮ್ಮತಿ ಪಡೆಯಿರಿ

3. ನಿಮ್ಮ ಫೋನ್ ಗೆ ಡೌನ್ ಪೇಯ್ಮೆಂಟ್ ಮಾಡಿರಿ

4. ಈ ಸಾಧನವನ್ನು ನಿಮ್ಮ ಆಯ್ಕೆಯ ವಿಳಾಸಕ್ಕೆ ತಲುಪಿಸಲಾಗುವುದು

ಈ ಟೆಲಿಕಾಂ ಸಂಸ್ಥೆಯು HDFC ಬ್ಯಾಂಕ್, ಫೆಡರಲ್ ಬ್ಯಾಂಕ್, ಕ್ಲಿಕ್ಸ್ ಕ್ಯಾಪಿಟಲ್, ಸೇಯ್ನ್ಸ್ ಟೆಕ್ನಾಲಜೀಸ್ ಜೊತೆಗೆ ಕೈಜೋಡಿಸಿದ್ದು ಆನ್ಲೈನ್ ಸ್ಟೋರ್ನಲ್ಲಿ ಡಿಜಿಟಲ್ ಅನುಭವವನ್ನು ಪಡೆಯಬಹುದಾಗಿದೆ.

ಏರ್ಟೆಲ್ ನ ಡಿಜಿಟಲ್ ಇನೋವೇಶನ್ ಕಾರ್ಯಕ್ರಮವಾದ ಪ್ರಾಜೆಕ್ಟ್ ನೆಕ್ಸ್ಟ್ ನ ಅಂಗವಾಗಿರುವ ಏರ್ಟೆಲ್ ಆನ್ಲೈನ್ ಸ್ಟೋರ್ ಏರ್ಟೆಲ್ ನ ಎಲ್ಲಾ ಸರ್ವೀಸ್ ಮತ್ತು ಟಚ್ ಪಾಯಿಂಟ್ಗಳಲ್ಲಿ ಗ್ರಾಹಕರ ಅನುಭವವನ್ನು ಉತ್ತಮವಾಗಿಸುವ ಗುರಿ ಹೊಂದಿದೆ. ಏರ್ಟೆಲ್ ಈ ಪ್ರಾಜೆಕ್ಟ್ ನೆಕ್ಸ್ಟ್ ನಲ್ಲಿ ರೂ 2000 ಕೋಟಿ ಹೂಡುವ ಯೋಜನೆ ಹೊಂದಿದ್ದು, ತಮ್ಮ ಗ್ರಾಹಕರ ಅನುಭವದಲ್ಲಿ ಸರಳತೆ ಮತ್ತು ಸಂವಾದಾತ್ಮಕತೆ ತರಲು ಡಿಜಿಟಲ್ ಇನೋವೇಶನ್ ಗಳನ್ನು ಲಾಂಚ್ ಮಾಡುವ ಹುನ್ನಾರದಲ್ಲಿದೆ.

Best Mobiles in India

English summary
ಏರ್ಟೆಲ್ನ ಆನ್ಲೈನ್ ಸ್ಟೋರ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9+ ಸರಣಿ ಖರೀದಿಗೆ ಲಭ್ಯವಾಗಿದ್ದು, ಏರ್ಟೆಲ್ ಸಂಸ್ಥೆಯು ಇದರ ಖರೀದಿಯ ಮೇಲೆ ಡೌನ್ ಪೇಯ್ಮೆಂಟ್ ಸೌಲಭ್ಯ, ಇನ್ಸ್ಟೆಂಟ್ ಪೈನಾನ್ಸ್, ಬಂಡಲ್ಡ್ ತಿಂಗಳ ಪ್ಲ್ಯಾನ್ ಗಳು ಇತ್ಯಾದಿ ಆಯ್ಕೆಗಳನ್ನು ನೀಡುತ್ತಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+