ಹೊಸ ಸ್ಮಾರ್ಟ್‌ಫೋನ್‌ ಖರೀದಿಗೆ ಏರ್‌ಟೆಲ್‌ನಿಂದ ಭಾರೀ ಕ್ಯಾಶ್‌ಬ್ಯಾಕ್‌..!

|

ಭಾರತೀಯ ಟೆಲಿಕಾಂ ಲೋಕದಲ್ಲಿ ಮತ್ತೆ ತನ್ನ ಪ್ರಭುತ್ವ ಸಾಧಿಸಲು ಏರ್‌ಟೆಲ್‌ ಅನೇಕ ತಂತ್ರಗಳನ್ನು ರೂಪಿಸುತ್ತಿದೆ. ಗ್ರಾಹಕರನ್ನು ಸೆಳೆಯಲು ಭಾರ್ತಿ ಏರ್‌ಟೆಲ್‌ ದಿನಕ್ಕೊಂದು ಆಫರ್‌ಗಳನ್ನು ಪರಿಚಯಿಸುತ್ತಿದ್ದು, ಹೊಸ ರಿಚಾರ್ಜ್‌ ಪ್ಲಾನ್‌ಗಳನ್ನು ರೂಪಿಸುತ್ತಿದೆ. ಅದರಂತೆ ಹಳೇ ಪ್ಲಾನ್‌ಗಳನ್ನು ಕೂಡ ಪರಿಷ್ಕರಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ ಖರೀದಿಗೆ ಏರ್‌ಟೆಲ್‌ನಿಂದ ಭಾರೀ ಕ್ಯಾಶ್‌ಬ್ಯಾಕ್‌..!

ಹೌದು, ಭಾರ್ತಿ ಏರ್‌ಟೆಲ್‌ ಮಂಗಳವಾರ ಹೊಸ ಯೋಜನೆಯೊಂದನ್ನು ಪರಿಚಯಿಸಿದ್ದು, ಹೊಸ 4G ಸ್ಮಾರ್ಟ್‌ಫೋನ್‌ ಖರೀದಿಸಿದರೆ ರೂ. 2,000 ಕ್ಯಾಶ್‌ಬ್ಯಾಕ್‌ನ್ನು ಗ್ರಾಹಕರು ಪಡೆಯಲಿದ್ದಾರೆ. ಇತ್ತೀಚೆಗೆ ತಾನೇ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಈ ಆಫರ್‌ ನೀಡಿದ್ದ ಏರ್‌ಟೆಲ್‌ ಇದೀಗ ಆಫ್‌ಲೈನ್‌ ಸ್ಟೋರ್‌ಗಳಿಗೂ ವಿಸ್ತರಿಸಿದ್ದು, ಗ್ರಾಹಕರು ಬಂಪರ್‌ ಕ್ಯಾಶ್‌ಬ್ಯಾಕ್‌ ಪಡೆಯಲಿದ್ದಾರೆ.

ಅಕ್ಟೋಬರ್‌ 31ರವರೆಗೆ ಆಫರ್‌

ಅಕ್ಟೋಬರ್‌ 31ರವರೆಗೆ ಆಫರ್‌

ಹೊಸ ಆಫರ್‌ ಅಕ್ಟೋಬರ್‌ 31ರವರೆಗೆ ಮಾತ್ರ ಲಭ್ಯವಿದೆ. ಈ ಅವಧಿಯ ಒಳಗಡೆ 4G ಸ್ಮಾರ್ಟ್‌ಫೋನ್‌ ಖರೀದಿಸಿ, ಏರ್‌ಟೆಲ್‌ 4G ಸಿಮ್‌ ಹಾಕಿ ಸಕ್ರಿಯಗೊಳಿಸಬೇಕು. ಆಗ ಮಾತ್ರ ಕ್ಯಾಶ್‌ಬ್ಯಾಕ್‌ ನಿಮ್ಮ ಮೈ ಏರ್‌ಟೆಲ್‌ ಅಕೌಂಟ್‌ಗೆ ಬರುತ್ತದೆ.

ಹೇಗೆ ಕ್ಯಾಶ್‌ಬ್ಯಾಕ್‌..?

ಹೇಗೆ ಕ್ಯಾಶ್‌ಬ್ಯಾಕ್‌..?

ಹೊಸ ಸ್ಮಾರ್ಟ್‌ಫೋನ್‌ ತೆಗೆದುಕೊಂಡಾಗ ಏರ್‌ಟೆಲ್‌ ನೀಡುವ ರೂ. 2000 ಕ್ಯಾಶ್‌ಬ್ಯಾಕ್‌ ಗ್ರಾಹಕನಿಗೆ 40 ಕೂಪನ್‌ಗಳಲ್ಲಿ ದೊರೆಯಲಿದೆ. ಈ 40 ಕೂಪನ್‌ಗಳಲ್ಲಿ ಪ್ರತಿ ಒಂದು ಕೂಪನ್‌ ರೂ.50ಯನ್ನು ಹೊಂದಿರಲಿವೆ. ಈ ಕೂಪನ್‌ಗಳು 40 ತಿಂಗಳವರೆಗೆ ಚಾಲ್ತಿಯಲ್ಲಿರಲಿವೆ.

ಕೂಪನ್‌ಗಳ ಬಳಕೆ ಹೇಗೆ..?

ಕೂಪನ್‌ಗಳ ಬಳಕೆ ಹೇಗೆ..?

ಕ್ಯಾಶ್‌‌ಬ್ಯಾಕ್‌ ಕೂಪನ್‌ಗಳನ್ನು ಪ್ರಿಪೇಯ್ಡ್‌ ಗ್ರಾಹಕರು ರೂ.199ಕ್ಕಿಂತ ಹೆಚ್ಚಿನ ರಿಚಾರ್ಜ್‌ಗಳಲ್ಲಿ ಬಳಸಬಹುದು. ಪೋಸ್ಟ್‌ಪೇಡ್‌ ಗ್ರಾಹಕರು ರೂ. 399ಕ್ಕಿಂತ ಹೆಚ್ಚಿನ ಬಿಲ್‌ ಪಾವತಿಸುವಾಗ ಬಳಸಬಹುದು. ಆದರೆ, ಒಂದು ಬಾರಿ ರಿಚಾರ್ಜ್‌ಗೆ ಒಂದೇ ಕೂಪನ್‌ ಬಳಸಬೇಕೆಂಬ ನಿಯಮವಿದೆ. ನೀವು ರಿಚಾರ್ಜ್‌ ಮಾಡುವಾಗ ಸ್ವಯಂಚಾಲಿತವಾಗಿ ಕೂಪನ್‌ಗಳನ್ನು ಅಪ್ಲೇ ಮಾಡುತ್ತದೆ.

ಆಫ್‌ಲೈನ್‌ ಖರೀದಿಗೂ ಕ್ಯಾಶ್‌ಬ್ಯಾಕ್‌

ಆಫ್‌ಲೈನ್‌ ಖರೀದಿಗೂ ಕ್ಯಾಶ್‌ಬ್ಯಾಕ್‌

ಫ್ಲಿಪ್‌ಕಾರ್ಟ್‌ ಅಷ್ಟೇ ಅಲ್ಲದೇ ಆಫ್‌ಲೈನ್‌ನಲ್ಲೂ ಈ ಕ್ಯಾಶ್‌ಬ್ಯಾಕ್‌ ಆಫರ್‌ ದೊರೆಯುತ್ತಿದೆ. ಏರ್‌ಟೆಲ್‌ ಕ್ಯಾಶ್‌ಬ್ಯಾಕ್‌ ಆಫರ್‌ ಘೋಷಿಸಿದಾಗ ಮೊದಲು ಕೇವಲ ಫ್ಲಿಪ್‌ಕಾರ್ಟ್‌ನ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ ಮಾತ್ರ ಕ್ಯಾಶ್‌ಬ್ಯಾಕ್‌ ಲಭ್ಯವಾಗುತ್ತಿತ್ತು. ಆದರೆ, ಈಗ ಯಾವುದೇ ಆನ್‌ಲೈನ್‌ ಸ್ಟೋರ್‌ಗಳಲ್ಲಿ ಅಥವಾ ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಹೊಸ 4G ಸ್ಮಾರ್ಟ್‌ಫೋನ್‌ ಖರೀದಿಸಿದರೆ ರೂ.2000 ಕ್ಯಾಶ್‌ಬ್ಯಾಕ್‌ ದೊರೆಯಲಿದೆ.

#AirtelThanks

#AirtelThanks

ಏರ್‌ಟೆಲ್‌ ಇತ್ತೀಚೆಗೆ ತಾನೇ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ದರವಿಲ್ಲದೇ ಅನೇಕ ಹೆಚ್ಚುವರಿ ಸೌಲಭ್ಯಗಳನ್ನು ನೀಡುವ #AirtelThanks ಯೋಜನೆಯನ್ನು ಪ್ರಾರಂಭಿಸಿತ್ತು. #AirtelThanks ಆಫರ್‌ಗಳು ತಿಂಗಳಿಗೆ 100 ರೂ. ಮತ್ತು ಅದಕ್ಕಿಂತ ಹೆಚ್ಚಿನ ಆದಾಯವನ್ನು ಏರ್‌ಟೆಲ್‌ಗೆ ನೀಡುತ್ತಿರುವ ಗ್ರಾಹಕರಿಗೆ ಈ ಆಫರ್‌ಗಳು ಲಭ್ಯವಿವೆ.

3 ತಿಂಗಳ ನೆಟ್‌ಫ್ಲಿಕ್ಸ್‌ ಉಚಿತ

3 ತಿಂಗಳ ನೆಟ್‌ಫ್ಲಿಕ್ಸ್‌ ಉಚಿತ

#AirtelThanks ಯೋಜನೆಯಡಿಯಲ್ಲಿ ಏರ್‌ಟೆಲ್‌ನ ಇನ್ಫಿನಿಟಿ ಪೋಸ್ಟ್‌ಪೇಡ್‌ ಗ್ರಾಹಕರಿಗೆ 1500 ರೂ. ಮೌಲ್ಯದ 3 ತಿಂಗಳ ನೆಟ್‌ಫ್ಲಿಕ್ಸ್‌ ಉಚಿತವಾಗಿ ಏರ್‌ಟೆಲ್‌ ನೀಡುತ್ತಿದೆ. ಈ ಆಫರ್‌ನ್ನು V-Fiber ಹೋಮ್‌ ಬ್ರಾಡ್‌ಬ್ಯಾಂಡ್‌ ಬಳಕೆದಾರರಿಗೆ ಶೀಘ್ರದಲ್ಲಿಯೇ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಆಫರ್‌ 499 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಪ್ಲಾನ್‌ ಹೊಂದಿದ ಗ್ರಾಹಕರಿಗೆ ಅನ್ವಯವಾಗುತ್ತದೆ.

ZEE5 ಪ್ರೀಮಿಯಂ ಕಂಟೆಂಟ್‌ ಉಚಿತ

ZEE5 ಪ್ರೀಮಿಯಂ ಕಂಟೆಂಟ್‌ ಉಚಿತ

ಪೋಸ್ಟ್‌ಪೇಡ್‌ ಗ್ರಾಹಕರಿಗೆ ನೆಟ್‌ಫ್ಲಿಕ್ಸ್‌ ನೀಡಿದಂತೆ, ಪ್ರಿಪೇಡ್‌ ಗ್ರಾಹಕರಿಗೆ ZEE5 ಅಕ್ಸೆಸ್‌ ಸಿಗಲಿದೆ. ಯಾರು 199 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್‌ನ್ನು ಮಾಡಿಸುತ್ತಾರೋ ಅಂತಹ ಗ್ರಾಹಕರಿಗೆ ZEE5 ಪ್ರೀಮಿಯಂ ಕಂಟೆಂಟ್‌ ಸಿಗಲಿದೆ. ನೆಟ್‌ಫ್ಲಿಕ್ಸ್‌ ಮತ್ತು ZEE5 ಪ್ರಿಮಿಯಂ ಕಂಟೆಂಟ್‌ಗಳನ್ನು ಕೇವಲ Airtel TV ಮತ್ತು MyAirtel ಆಪ್‌ಗಳ ಮೂಲಕ ವೀಕ್ಷಿಸಬಹುದಾಗಿದೆ.

Best Mobiles in India

English summary
Airtel offers Rs 2,000 cashback on buying new 4G phone: Here’s how to get it. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X