ಓಲಾ ಜೊತೆಗೆ ಕೈ ಜೋಡಿಸಿದ ಏರ್‌ಟೆಲ್: ಯಾವ ಕಾರಣಕ್ಕೆ...!?

Written By:

ದೇಶಿಯ ಟೆಲಿಕಾಂ ಲೋಕದಲ್ಲಿ ತನ್ನದೆ ಛಾಪು ಮೂಡಿಸಿರುವ ಏರ್‌ಟೆಲ್ ದೇಶಿಯ ಆಪ್‌ ಆಧಾರಿತ ಟ್ಯಾಕ್ಸಿ ಸೇವೆಯಲ್ಲಿ ಮುಂಚುಣಿಯಲ್ಲಿರುವ ಓಲಾ ದೊಂದಿಗೆ ಕೈ ಜೋಡಿಸಿದೆ. ಸದ್ಯ ಪೇಮೆಂಟ್ ಬ್ಯಾಂಕ್ ಆರಂಭಿಸಿರುವ ಏರ್‌ಟೆಲ್‌ಗೆ, ಓಲಾ ಮನಿ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ.

ಓಲಾ ಜೊತೆಗೆ ಕೈ ಜೋಡಿಸಿದ ಏರ್‌ಟೆಲ್: ಯಾವ ಕಾರಣಕ್ಕೆ...!?

ಏರ್‌ಟೆಲ್ ತನ್ನ ಬ್ಯಾಂಕ್ ಸೇವೆಯಿಂದ ಓಲಾ ಗ್ರಾಹಕರಿಗೆ ಪಾವತಿ ಮಾಡುವ ಅವಕಾಶ ನೀಡಲಿದ್ದು ಮತ್ತು ಆಕರ್ಷಕ ಆಫರ್ ನೀಡಲಿದೆ. ಅಲ್ಲದೇ ಓಲಾ ಮನಿಯೊಂದಿಗೆ ಸಮ್ಮಿಲಗೊಂಡು ಕಾರ್ಯುನಿರ್ವಹಿಸಲಿದೆ ಎಂದು ಏರ್‌ಟೆಲ್ ಕಂಪನಿಯ ಮೂಲಗಳು ತಿಳಿಸಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ ಮನಿ ಜೊತೆಗೆ ಓಲಾ

ಏರ್‌ಟೆಲ್ ಮನಿ ಜೊತೆಗೆ ಓಲಾ

ಏರ್‌ಟೆಲ್ ಮನಿ ಹೊಂದಿರುವ ಗ್ರಾಹಕರು ಆ ಮೂಲಕ ಓಲಾ ಬಾಡಿಗೆಯನ್ನು ಪಾವತಿ ಮಾಡಬಹುದಾಗಿದೆ. ಇದೇ ಮಾದರಿಯಲ್ಲಿ ಓಲಾ ಚಾಲಕರು ಏರ್‌ಟೆಲ್ ಬ್ಯಾಂಕ್ ನಿಂದಲೇ ತಮ್ಮ ವೇತನವನ್ನು ಪಡೆಯಲಿದ್ದಾರೆ ಎನ್ನಲಾಗಿದೆ. ಇದಲ್ಲದೇ ಓಲಾ ಮನಿಯ ಮೂಲಕವೇ ಏರ್‌ಟೆಲ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಏರ್‌ಟೆಲ್ ಮೊಬೈಲ್ ಮತ್ತು ಡಿಟಿಹೆಚ್ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ಡಿಜಿಟಲ್ ಪಾವತಿ

ಡಿಜಿಟಲ್ ಪಾವತಿ

ಸದ್ಯ ದೇಶದಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗುತ್ತಿದ್ದು, ಇದರ ಲಾಭವನ್ನು ಪಡೆದುಕೊಳ್ಳಲು ಏರ್‌ಟೆಲ್ ಪ್ರಯತ್ನ ನಡೆಸುತ್ತಿದ್ದು, ತನ್ನ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಸಲುವಾಗಿ ಈ ಒಪ್ಪಂದವು ನಡೆದಿದೆ ಎನ್ನುವ ಮಾತು ಕೇಳಿಬಂದಿದೆ.

ಏರ್‌ಟೆಲ್ ಇಂಟರ್‌ನೆಟ್ ಸೇವೆ

ಏರ್‌ಟೆಲ್ ಇಂಟರ್‌ನೆಟ್ ಸೇವೆ

ಸದ್ಯ ಓಲಾ ಆರಂಭಿಸಿರುವ ಓಲಾ ಪ್ಲೇ ಸೇವೆಗೆ ಏರ್‌ಟೆಲ್ ಮೂವಿ ಸೇವೆಯು ಸಹಾಯ ಮಾಡಲಿದ್ದು, ಅದೇ ಮಾದರಿಯಲ್ಲಿ ಏರ್‌ಟೆಲ್ ಡಿವೈಸ್ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ಇಂಟರ್‌ನೆಟ್ ಸೇವೆಯನ್ನು ನೀಡಲಿದೆ. ಇದು ಎರಡು ಕಂಪನಿಗಳು ಲಾಭ ತಂದುಕೊಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Bharti Airtel today announced a strategic partnership with Ola to offer a range of digital services to customers. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot