ಪ್ರತಿ 1 ರೂ ಡೆಪಾಸಿಟ್‌ಗೆ 1 ನಿಮಿಷ ಟಾಕ್‌ಟೈಮ್‌: ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್

'ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್' ಸೇವಿಂಗ್ ಖಾತೆ ಓಪನ್ ಮಾಡಿ ಹಣ ಡೆಪಾಸಿಟ್ ಮಾಡುವ ಏರ್‌ಟೆಲ್‌ ಗ್ರಾಹಕರಿಗೆ ಪ್ರತಿ ಒಂದು ರೂಪಾಯಿ ಡೆಪಾಸಿಟ್‌ಗೆ ಒಂದು ನಿಮಿಷ ಟಾಕ್‌ಟೈಮ್‌ ಆಫರ್ ನೀಡುತ್ತಿದೆ.

By Suneel
|

ಟೆಕ್‌ ದೈತ್ಯ ಭಾರತಿ ಏರ್‌ಟೆಲ್‌ನ ಭಾಗವಾದ 'ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್' ಸೇವಿಂಗ್ ಖಾತೆ ಓಪನ್ ಮಾಡಿ ಹಣ ಡೆಪಾಸಿಟ್ ಮಾಡುವ ಏರ್‌ಟೆಲ್‌ ಗ್ರಾಹಕರಿಗೆ ಪ್ರತಿ ಒಂದು ರೂಪಾಯಿ ಡೆಪಾಸಿಟ್‌ಗೆ ಒಂದು ನಿಮಿಷ ಟಾಕ್‌ಟೈಮ್‌ ಆಫರ್‌ ಅನ್ನು ನೀಡುತ್ತಿದೆ.

ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವುದು ಹೇಗೆ? ಉಪಯೋಗಗಳೇನು?

ಪ್ರತಿ 1 ರೂ ಡೆಪಾಸಿಟ್‌ಗೆ 1 ನಿಮಿಷ ಟಾಕ್‌ಟೈಮ್‌: ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್

ಒಬ್ಬ ಗ್ರಾಹಕ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್‌ನಲ್ಲಿ ಖಾತೆ ಓಪನ್ ಮಾಡಿ ರೂ.1,000 ಡೆಪಾಸಿಟ್ ಮಾಡಿದ್ದಲ್ಲಿ ಅವರು ಉಚಿತವಾಗಿ 1,000 ನಿಮಿಷಗಳ ಟಾಕ್‌ಟೈಮ್ ಪಡೆಯುತ್ತಾರೆ. ಈ ಬಗ್ಗೆ ಶುಕ್ರವಾರ ಏರ್‌ಟೆಲ್‌ ಟೆಲಿಕಾಂ ಮಾಹಿತಿ ಪ್ರಕಟಣೆ ಮಾಡಿದೆ. ಈ 1,000 ನಿಮಿಷಗಳ ಉಚಿತ ಟಾಕ್‌ಟೈಮ್‌ ಅನ್ನು ಭಾರತದಾದ್ಯಂತ ಗ್ರಾಹಕರು ಏರ್‌ಟೆಲ್‌ ಟು ಏರ್‌ಟೆಲ್ ಕರೆಗಾಗಿ ಬಳಸಿಕೊಳ್ಳಬಹುದು. ಈ ಬೆನಿಫಿಟ್‌ ಕೇವಲ ಮೊದಲ ಬಾರಿ ಹಣ ಡೆಪಾಸಿಟ್‌ ಮಾಡಿದವರಗಿಎ ಮಾತ್ರ. ಅಲ್ಲದೇ 30 ದಿನಗಳ ವ್ಯಾಲಿಡಿಟಿಯನ್ನು ಟಾಕ್‌ಟೈಮ್‌ ಹೊಂದಿರುತ್ತದೆ.

ಪ್ರತಿ 1 ರೂ ಡೆಪಾಸಿಟ್‌ಗೆ 1 ನಿಮಿಷ ಟಾಕ್‌ಟೈಮ್‌: ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್

ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ತನ್ನ ಪೈಲಟ್ ಸರ್ವೀಸ್ ಅನ್ನು ಅನ್ನು ರಾಜಸ್ತಾನದಲ್ಲಿ ಕಳೆದ ವಾರವಷ್ಟೇ ತನ್ನ ಸಿಸ್ಟಮ್ ಮತ್ತು ಪ್ರೋಸೆಸ್ ಪರೀಕ್ಷೆ ಮಾಡಲು ಲಾಂಚ್ ಮಾಡಿತ್ತು. ರಾಜಸ್ತಾನದ ನಗರ ಪ್ರದೇಶ ಮತ್ತು ಹಳ್ಳಿಗಳಲ್ಲಿ ಏರ್‌ಟೆಲ್‌ ರೀಟೇಲ್ ಕೇಂದ್ರಗಳಲ್ಲಿ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಖಾತೆ ಓಪನ್ ಮಾಡಬಹುದು. ಏರ್‌ಟೆಲ್ ಬ್ಯಾಂಕಿಂಗ್‌ನಲ್ಲಿ ಬೇಸಿಕ್ ಮತ್ತು ಅನುಕೂಲಕರ ಸೇವೆಗಳು ಲಭ್ಯವಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿ 1 ರೂ ಡೆಪಾಸಿಟ್‌ಗೆ 1 ನಿಮಿಷ ಟಾಕ್‌ಟೈಮ್‌: ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್

ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್ ಪೈಲಟ್ ಬ್ಯಾಂಕಿಂಗ್ ಕೇಂದ್ರಗಳನ್ನು 10,000 ಏರ್‌ಟೆಲ್‌ ರೀಟೇಲ್‌ ಕೇಂದ್ರಗಳಲ್ಲಿ ಆರಂಭಿಸಿತ್ತು. 10,000 ಕ್ಕಿಂತ ಹೆಚ್ಚಿನ ಗ್ರಾಹಕರು 2 ದಿನಗಳಲ್ಲಿ ಸೇವಿಂಗ್ ಖಾತೆಗಳನ್ನು ಓಪನ್‌ ಮಾಡಿದ್ದು, ಹೆಚ್ಚಿನ ಖಾತೆಗಳು ಅರೆ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳವು ಎಂದು ಕಂಪನಿ ಹೇಳಿದೆ.

ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್‌, ಲೀಡಿಂಗ್ ಮೊಬೈಲ್‌ ಫೋನ್‌ ನೆಟ್‌ವರ್ಕ್‌ ಆಪರೇಟರ್‌ ಆದ ಭಾರತಿ ಏರ್‌ಟೆಲ್‌ನ ಅಂಗ ಸಂಸ್ಥೆ ಆಗಿದ್ದು, ಖಾತೆದಾರರಿಗೆ ವಾರ್ಷಿಕವಾಗಿ ಶೇ.7.25 ಬಡ್ಡಿ ಮತ್ತು ಪ್ರತಿ ಖಾತೆದಾರರಿಗೂ 1 ಲಕ್ಷದವರೆಗೆ ಇನ್ಸುರೆನ್ಸ್ ನೀಡುತ್ತದೆ.

ಪ್ರತಿ 1 ರೂ ಡೆಪಾಸಿಟ್‌ಗೆ 1 ನಿಮಿಷ ಟಾಕ್‌ಟೈಮ್‌: ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್

ಕಂಪನಿಯು ಖಾತೆದಾರರಿಗೆ ಉತ್ತಮ ಬೆನಿಫಿಟ್‌ಗಳಾದ ಬಡ್ಡಿ, ಡೆಪಾಸಿಟ್‌ ಮಾಡಿದ ಹಣಕ್ಕೆ ಪ್ರತಿ ರೂಪಾಯಿಗೆ 1 ನಿಮಿಷ ಟಾಕ್‌ಟೈಮ್‌ ಆಫರ್‌ಗಳನ್ನು ನೀಡಲು ನಿರ್ಧರಿಸಿದ್ದು, ಹೆಚ್ಚು ಗ್ರಾಹಕರನ್ನು ಹೊಂದುವ ಗುರಿಹೊಂದಿದೆ ಎಂದು ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಓ ಆದ ಶಶಿ ಅರೊರಾ ಹೇಳಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Airtel payments bank offers 1 minute talktime for Rs 1 deposit. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X