ಶಾಕಿಂಗ್ ನ್ಯೂಸ್: ಜಿಯೋ ಹಿಂದಿಕ್ಕುವ ಭರದಲ್ಲಿ ಏರ್‌ಟೆಲ್ ನಿಂದ ಬಳಕೆದಾರರಿಗೆ ಮಹಾ ಮೋಸ..!
ಭಾರತೀಯ ಟೆಲಿಕಾಂ ಮಾರುಕಟ್ಟೆಯ ದೈತ್ಯ ಏರ್‌ಟೆಲ್, ಜಿಯೋ ಹಿಂದಿಕ್ಕುವ ಭರದಲ್ಲಿ ಪೇಮೆಂಟ್ ಬ್ಯಾಂಕ್ ಆರಂಭಿಸಿದ ನಂತರದಿಂದ ಒಂದಲ್ಲ ಒಂದು ತಪ್ಪುಗಳನ್ನು ಮಾಡುತ್ತಿದೆ. ಈ ಹಿಂದೆ ಆಧಾರ್ ಜೋಡನೆ ಸಂದರ್ಭದಲ್ಲಿ ಅಕ್ರಮವೆಸಗಿ ಗ್ರಾಹಕರಿಗೆ ತೊಂದರೆಯನ್ನು ನೀಡಿದ್ದ ಏರ್‌ಟೆಲ್ ಪೇಮೆಂಟ್ ಬ್ಯಾಂಕ್, ಮತ್ತೊಮ್ಮೆ ನಿಯಮಗಳನ್ನು ಉಲ್ಲಂಘಿಸಿ RBI ಕೆಂಗಣ್ಣಿಗೆ ಗುರಿಯಾಗಿದೆ.

ಮೂಲಕ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ದೊಡ್ಡ ಮೊತ್ತದ ದಂಡ ಪಾವತಿಯ ಶಿಕ್ಷೆಯನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಕಾರ್ಯಾಚರಣೆ ಮಾರ್ಗಸೂಚಿಗಳು ಮತ್ತು ಕೆವೈಸಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ಗೆ ಆರ್‌ಬಿಐ 5 ಕೋಟಿ ರೂ. ದಂಡ ವಿಧಿಸಿದೆ.

ಕಾರಣವೇನು..?
ಈ ಹಿಂದೆ ಏರ್‌ಟೆಲ್ ಸಿಮ್ ಕಾರ್ಡ್‌ನೊಂದಿಗೆ ಆಧಾರ್ ಜೋಡನೆ ಮಾಡಲು ಬಂದ ಗ್ರಾಹಕರ ಒಪ್ಪಿಗೆ ಇಲ್ಲದೆ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿದೆ. ಇದು ಗ್ರಾಹಕರ ಕೆವೈಸಿ ನಿಯಮಗಳನ್ನು ಉಲ್ಲಂಘಿಸಿರುವುದಾಗಿದ್ದು, ಈ ಕುರಿತು ದೂರು ದಾಖಲಾಗಿತ್ತು. ಈ ಬಗ್ಗೆ ಆರ್‌ಬಿಐ ವಿಚಾರಣೆ ನಡೆಸಿ ದಂಡ ಹಾಕಿದೆ.

ಸರಕಾರದ ಸಬ್ಸಿಡಿ:
ಗ್ರಾಹರ ಅರಿವಿಗೆ ಬಾರದೆ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದ ಏರ್‌ಟೆಲ್, ಗ್ರಾಹಕರ ಕೆವೈಸಿಯನ್ನು ಪಡೆದುಕೊಂಡಿತ್ತು. ಇದರಿಂದಾಗಿ ಸರಕಾರದಿಂದ ನೇರಾವಾಗಿ ವರ್ಗಾವಣೆಯಾಗುವ ಸಬ್ಸಿಡಿ ಹಣವು ಏರ್‌ಟೆಲ್ ಪೇಮೆಂಟ್ ಬ್ಯಾಂಕಿಗೆ ಹರಿದು ಬಂದಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಸಹ ಆಗಿತ್ತು.

RBI ವಿಚಾರಣೆ:
ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ RBI, ಗ್ರಾಹಕರ ಕೆವೈಸಿ ಪಡೆದುಕೊಳ್ಳುವ ವಿಚಾರದಲ್ಲಿ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಅಕ್ರಮವೆಸಗಿರುವುದು ಸಾಭೀತಾದ ಹಿನ್ನಲೆಯಲ್ಲಿ ಈ ದೊಡ್ಡ ಮಟ್ಟದ ದಂಡವನ್ನು ವಿಧಿಸಿದೆ.


23 ಲಕ್ಷ ಗ್ರಾಹಕರು:
ಕಳೆದ ವರ್ಷದ ಜನವರಿಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ 23 ಲಕ್ಷ ಗ್ರಾಹಕರನ್ನು ಹೊಂದಿದೆ. ಆದರೆ ಇದರಲ್ಲಿ ಎಷ್ಟೋ ಗ್ರಾಹಕರಿಗೆ ತಮ್ಮ ಖಾತೆ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ನಲ್ಲಿದೆ ಎಂಬುದೆ ತಿಳಿದಿಲ್ಲ ಎನ್ನಲಾಗಿದೆ.

ಏರ್‌ಟೆಲ್ USSD ಕೋಡ್‌ಗಳು:
ದೇಶಿಯ ಟೆಲಿಕಾಂ ಮಾರುಕಟ್ಟೆಯ ದೈತ್ಯ ಕಂಪನಿ ಏರ್‌ಟೆಲ್ ತನ್ನ ಬಳಕೆದಾರರಿಗೆ ಅನೇಕ ಸೇವೆಗಳನ್ನು ಬೆರಳ ತುದಿಗೆ ನೀಡುತ್ತಿದೆ. ವಿವಿಧ ಮಾದರಿಯ ಸೇವೆಯನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಸೇವೆಗಳ ಮಾಹಿತಿಯೂ ಬಳಕೆದಾರರಿಗೆ ದೊರೆಯಲಿ ಎನ್ನುವ ಕಾರಣಕ್ಕೆ ಅನೇಕ ಕೋಡ್ ಗಳನ್ನು ನೀಡುತ್ತಿದೆ. ಈ ಮೂಲಕ ಏರ್‌ಟೆಲ್ ಬಳಕೆದಾರರು ತಾವು ಪಡೆಯುತ್ತಿರುವ ಸೇವೆಗಳ ಕುರಿತು ಸಂಫೂರ್ಣ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ.

ಯಾರು ಹೇಳಿಕೊಡದ ವಿಷಯಗಳು.! ತಿಳಿದರೆ ಒಳ್ಳೆಯದು.!
ಏರ್‌ಟೆಲ್ ಬಳಕೆದಾರರು ಬ್ಯಾಲೆನ್ಸ್ ಚೆಕ್ ಮಾಡುವುದರಿಂದ ಹಿಡಿದ್ದು, SMS ಬ್ಯಾಲೆನ್ಸ್, ಹೆಲೋ ಟೊನ್ಸ್, ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಒಂದಕ್ಕೆ ಒಂದು ಕೋಡ್ ಗಳನ್ನು ನೀಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಏರ್‌ಟೆಲ್ ಬಳಕೆದಾರರು ತಿಳಿಯಲೇ ಬೇಕಾದ ವಿಚಾರವು ಇದಾಗಿದೆ ಎನ್ನಲಾಗಿದೆ.

ಏರ್‌ಟೆಲ್ ಕಸ್ಟಮ್ ಕೇರ್ ನಂಬರ್:
ನೀವು ಏರ್‌ಟೆಲ್ ಕುರಿತ ಯಾವುದೇ ಮಾಹಿತಿಯನ್ನು ಪಡೆಯಲು 121 ನಂಬರ್‌ಗೆ ಕರೆ ಮಾಡಬಹುದಾಗಿದೆ, ಇದು ಉಚಿತವಾಗಿ ಯಾವುದೇ ದರಗಳನ್ನು ಇದಕ್ಕೆ ವಿಧಿಸುವುದಿಲ್ಲ.

ಏರ್‌ಟೆಲ್ ದೂರು ದಾಖಲಿಸಿಸಲು:
ಏರ್‌ಟೆಲ್ ಸೇವೆಗಳ ಕುರಿತು ದೂರು ದಾಖಲು ಮಾಡಬೇಕಾದರೆ ನೀವು 198ಗೆ ಕರೆ ಮಾಡಬಹುದಾಗಿದೆ. ಇದು ಉಚಿತವಾಗಿ ಯಾವುದೇ ದರಗಳನ್ನು ಇದಕ್ಕೆ ವಿಧಿಸುವುದಿಲ್ಲ.

ಏರ್‌ಟೆಲ್ ಬ್ಯಾಲೆನ್ಸ್ ಚೆಕ್ ಮಾಡಲು:
ಇದಲ್ಲದೇ ಏರ್‌ಟೆಲ್ ಬ್ಯಾಲೆನ್ಸ್ ಚೆಕ್ ಮಾಡಲು *123# ಡಯಲ್ ಮಾಡಬೇಕಾಗಿದೆ. ಇಲ್ಲಿ ನಿಮ್ಮ ಉಳಿಕೆಯ ಬ್ಯಾಲೆನ್ಸ್ ನೋಡಬಹುದಾಗಿದೆ.

ಏರ್‌ಟೆಲ್ 4G ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲು:
ಏರ್‌ಟೆಲ್ ನೀಡುವ ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲು *123*8# ಡಯಲ್ ಮಾಡಬೇಕಾಗಿದೆ. ಇಲ್ಲಿ ನಿಮ್ಮ ಉಳಿಕೆಯ ಡೇಟಾ ಬ್ಯಾಲೆನ್ಸ್ ಕಾಣಿಸಿಕೊಳ್ಳಲಿದೆ.

ಏರ್‌ಟೆಲ್ ಲೋನ್ ತೆಗೆದುಕೊಳ್ಳಲು:
ನಿಮ್ಮ ಬ್ಯಾಲೆನ್ಸ್ ಕಡಿಮೆಯಾಗಿ ಲೋನ್ ತೆಗೆದುಕೊಳ್ಳಲು *141*10# or 52141 ಡಯಲ್ ಮಾಡಬೇಕಾಗಿದೆ. ಇದು ಉಚಿತವಾಗಿ ಯಾವುದೇ ದರಗಳನ್ನು ಇದಕ್ಕೆ ವಿಧಿಸುವುದಿಲ್ಲ.

ಏರ್‌ಟೆಲ್ ಆಫರ್‌ಗಳನ್ನು ಚೆಕ್ ಮಾಡಲು:
ಏರ್‌ಟೆಲ್ ನಿಮಗೆ ಮಾತ್ರವೇ ನೀಡುವ ಆಫರ್‌ಗಳನ್ನು ಚೆಕ್ ಮಾಡಲು *121# ಡಯಲ್ ಮಾಡಿ. ಇಲ್ಲಿ ನಿಮ್ಮ ಸ್ಪೆಷಲ್ ಆಫರ್‌ಗಳು ಕಾಣಿಸಿಕೊಳ್ಳಲಿದೆ.

ಏರ್‌ಟೆಲ್ ಹೆಲೋ ಟೋನ್:
ಏರ್‌ಟೆಲ್ ಬಳಕೆದಾರರು ಹೆಲೋ ಟೋನ್ ಬದಲಾವಣೆ ಮಾಡಿಕೊಳ್ಳಲು, ಹೊಸ ಹೊಸ ಟೋನ್‌ಗಳನ್ನು ಹುಡುಕಲು *678# ಡಯಲ್ ಮಾಡಬೇಕಾಗಿದೆ.

ನಿಮ್ಮ ಏರ್‌ಟೆಲ್ ನಂಬರ್ ನೋಡಲು:
ನಿಮ್ಮ ಏರ್‌ಟೆಲ್ ನಂಬರ್ ಮರೆತು ಹೋದ ಸಂದರ್ಭದಲ್ಲಿ *282# ಡಯಲ್ ಮಾಡಿದರೆ ನಿಮ್ಮ ನಂಬರ್ ಕಾಣಿಸಿಕೊಳ್ಳಲಿದೆ.

ಏರ್‌ಟೆಲ್ ಮೊಬೈಲ್ ನಂಬರ್ ಪೋರ್ಟಬಲಿಟಿ:
ಇದಲ್ಲದೇ ನಿಮ್ಮ ಏರ್‌ಟೆಲ್ ಮೊಬೈಲ್ ನಂಬರ್ ಪೋರ್ಟಬಲಿಟಿ ಗಾಗಿ ನೀವು PORT ಎಂದು ಟೈಪ್ ಮಾಡಿ ನಿಮ್ಮ ನಂಬರ್ ಹಾಕಿ 1909 ಗೆ ಕಳುಹಿಸಬೇಕಾಗಿದೆ.


Click it and Unblock the Notifications








