ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಸುದ್ದಿ!..ಪೋಸ್ಟ್‌ಪೇಡ್ ಗ್ರಾಹಕರಾಗಲು ಇದು ಸಕಾಲ!!
ಜಿಯೋ ಮತ್ತು ವೊಡಾಫೋನ್-ಐಡಿಯಾ ಕಂಪೆನಿಗಳಿಗೆ ಸೆಡ್ಡುಹೊಡೆಯಲು ಏರ್‌ಟೆಲ್ ಇದೀಗ ಕಡಿಮೆ ಬೆಲೆಯ ಪೋಸ್ಟ್‌ಪೇಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಕಳೆದ ತಿಂಗಳು 499 ರೂ. ಮೇಲ್ಪಟ್ಟ ಪೋಸ್ಟ್‌ಪೇಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ್ದ ಕಂಪೆನಿ, ಇದೀಗ 349 ಮತ್ತು 399 ರೂ. ಗಳ ಹೊಸ ಎರಡು ಹೊಸ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ನೀಡಿ ಗಮನಸೆಳೆದಿದೆ.
ಪ್ರೀಪೇಯ್ಡ್ ಆಫರ್ಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್‌ಪೇಡ್ ಆಫರ್ಗಳಿಂದ ಖಚಿತ ಆದಾಯವನ್ನು ಎದುರುನೋಡಬಹು ಎಂದುಕೊಂಡಿರುವ ಏರ್‌ಟೆಲ್, ತನ್ನ ಪ್ರೀಪೇಡ್ ರೀಚಾರ್ಜ್ ಪ್ಲ್ಯಾನ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಪೋಸ್ಟ್‌ಪೇಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು ಕರ್ನಾಟಕ ಸೇರಿದಂತೆ ಕೆಲವೇ ಕೆಲವು ರಾಜ್ಯಗಳಲ್ಲಿ ಲಭ್ಯವಿದೆ ಎಂದು ತಿಳಿಸಿದೆ.

ಈ ನೂತನ ಪ್ಲಾನ್‌ಗಳಲ್ಲಿ ಏರ್‌ಟೆಲ್ ಪೋಸ್ಟ್‌ಪೇಡ್ ಗ್ರಾಹಕರು ಉಚಿತವಾಗಿ ಹೆಚ್ಚುವರಿ ಡೇಟಾವನ್ನು ಪಡೆಯಲಿದ್ದಾರೆ. ಇನ್ನು ಈ ಆಫರ್‌ಗಳು 4G ಗ್ರಾಹಕರ ಜತೆ 3G ಗ್ರಾಹಕರಿಗೂ ಲಭ್ಯವಿದೆ. ಹಾಗಾದರೆ, ಪ್ರಸ್ತುತ ಏರ್‌ಟೆಲ್ ನೀಡುತ್ತಿರುವ ಎಲ್ಲಾ ಪೋಸ್ಟ್‌ಪೇಡ್ ಆಫರ್‌ಗಳು ಯಾವುವು?, ಯಾವ ಪ್ಲಾನ್ ಎಷ್ಟು ಉತ್ತಮವಾಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏರ್‌ಟೆಲ್ 349 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 349 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 5GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಗ್ರಾಹಕರಿಗೆ STD ಮತ್ತು ರೊಮಿಂಗ್ ಕರೆಗಳು ಉಚಿತವಾಗಿ ದೊರೆಯುವ ಈ ಆಫರ್‌ನಲ್ಲಿ ಏರ್‌ಟೆಲ್ ಟಿವಿ ಮತ್ತು ಝೀ5 ಸೇವೆಗಳಿಗೆ ಉಚಿತವಾಗಿ ಸಬ್ಸ್ಕ್ರಿಪ್ಷನ್ ಅವಕಾಶವನ್ನು ನೀಡಲಾಗಿದೆ.

ಏರ್‌ಟೆಲ್ 399 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 399 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 40GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಗ್ರಾಹಕರಿಗೆ STD ಮತ್ತು ರೊಮಿಂಗ್ ಕರೆಗಳು ಉಚಿತವಾಗಿ ದೊರೆಯುವ ಈ ಆಫರ್‌ನಲ್ಲಿ ಏರ್‌ಟೆಲ್ ಟಿವಿ ಮತ್ತು ಝೀ5 ಸೇವೆಗಳಿಗೆ ಉಚಿತವಾಗಿ ಸಬ್ಸ್ಕ್ರಿಪ್ಷನ್ ಅವಕಾಶವನ್ನು ನೀಡಲಾಗಿದೆ.

ಏರ್‌ಟೆಲ್ 499 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 499 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 75GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಜೀ ಶೋಸ್ ಅಂಡ್ ಮೂವಿಸ್ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಚಂದಾದಾರಿಕೆಯನ್ನು ಏರ್‌ಟೆಲ್ ನೀಡುತ್ತಿದೆ. ಜತೆಗೆ ಹ್ಯಾಂಡ್‌ಸೆಟ್ ಪ್ರೊಟೆಕ್ಷನ್ ಸಹ ಗ್ರಾಹಕರಿಗೆ ಸಿಗಲಿದೆ.

ಏರ್‌ಟೆಲ್ 749 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 749 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 125GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಜೀ ಶೋಸ್ ಅಂಡ್ ಮೂವಿಸ್ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಚಂದಾದಾರಿಕೆಯನ್ನು ಏರ್‌ಟೆಲ್ ನೀಡುತ್ತಿದೆ. ಇದರಲ್ಲಿ ಫ್ರೀ ಆಡ್ ಆನ್ ಕನೆಕ್ಷನ್ ಜೊತೆಗೆ ಹ್ಯಾಂಡ್‌ಸೆಟ್ ಪ್ರೊಟೆಕ್ಷನ್ ಗ್ರಾಹಕರಿಗೆ ಸಿಗಲಿದೆ.

ಏರ್‌ಟೆಲ್ 999 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 999 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 150GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಜೀ ಶೋಸ್ ಅಂಡ್ ಮೂವಿಸ್ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಚಂದಾದಾರಿಕೆಯನ್ನು ಏರ್‌ಟೆಲ್ ನೀಡುತ್ತಿದೆ. ಇದರಲ್ಲಿ 3 ರೆಗ್ಯುಲರ್ ಮತ್ತು ಒಂದು ಫ್ರೀ ಆಡ್ ಆನ್ ಕನೆಕ್ಷನ್ ಹ್ಯಾಂಡ್‌ಸೆಟ್ ಪ್ರೊಟೆಕ್ಷನ್ ಗ್ರಾಹಕರಿಗೆ ಸಿಗಲಿದೆ.

ಏರ್‌ಟೆಲ್ 1599 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 1599 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 150GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಜೀ ಶೋಸ್ ಅಂಡ್ ಮೂವಿಸ್ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಚಂದಾದಾರಿಕೆಯನ್ನು ಏರ್‌ಟೆಲ್ ನೀಡುತ್ತಿದೆ. ಇದರಲ್ಲಿ 3 ರೆಗ್ಯುಲರ್ ಮತ್ತು ಒಂದು ಫ್ರೀ ಆಡ್ ಆನ್ ಕನೆಕ್ಷನ್ ಹ್ಯಾಂಡ್‌ಸೆಟ್ ಪ್ರೊಟೆಕ್ಷನ್ ಜೊತೆಗೆ 200 ನಿಮಿಷಗಳ ಐಎಸ್‌ಡಿ, ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್‌ನಲ್ಲಿ ಶೇ. 10 ಡಿಸ್ಕೌಂಟ್ ದೊರೆಯಲಿದೆ.


Click it and Unblock the Notifications








