Home
ಸುದ್ದಿಜಾಲ

ಏರ್‌ಟೆಲ್ ಗ್ರಾಹಕರು ಉಚಿತವಾಗಿ IPL 2025 ವೀಕ್ಷಿಸುವುದು ಹೇಗೆ?

ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವಿಲೀನವಾಗಿ ಜಿಯೋಹಾಟ್‌ಸ್ಟಾರ್ ಆದ ನಂತರ ನಂತರ 'ಐಪಿಎಲ್ 2025' ವೀಕ್ಷಣೆಗೆ ಚಂದಾದಾರಿಕೆ ಕಡ್ಡಾಯವಾಗಿದೆ. ಇದರಿಂದ ಈ ಹಿಂದಿನ ಐಪಿಎಲ್ ಕ್ರೀಡಾಕೂಟಗಳನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡುತ್ತಿದ್ದ ಕ್ರಿಕೆಟ್ ಪ್ರಿಯರಿಗೆ ನಿರಾಸೆಯಾಗಿದೆ. ಅದರಲ್ಲೂ ಏರ್‌ಟೆಲ್ ಗ್ರಾಹಕರನ್ನು ಈ ಕುರಿತು ಚಿಂತೆಗೀಡಾಗಿದ್ದಾರೆ. ಐಪಿಎಲ್ ಪಂಧ್ಯಗಳನ್ನು ವೀಕ್ಷಿಸಲು ಜಿಯೋ ಹಾಟ್‌ಸ್ಟಾರ್‌ಗೆ ಹಣ ಪಾವತಿಸಿ ಚಂದಾದಾರರಾಗಬೇಕೆ ಎಂಬುದು ಅವರ ಯೋಚನೆ. ಆದರೆ, ಚಿಂತಿಸಬೇಡಿ. ನಿಮಗೂ ಸಹ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುವ ಕೆಲವು ಪ್ರೀಪೇಡ್ ರೀಚಾರ್ಜ್ ಯೋಜನೆಗಳು ಲಭ್ಯವಿವೆ. ಈ ಯೋಜನೆಗಳು ಹೆಚ್ಚುವರಿ ಶುಲ್ಕವಿಲ್ಲದೆ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತವೆ.

ಐಪಿಎಲ್ 2025 ವೀಕ್ಷಿಸಲು ನಿಮಗೆ ಏರ್‌ಟೆಲ್‌ನಿಂದ ಯಾವುದೇ ವಿಶೇಷ ಯೋಜನೆಗಳನ್ನು ಒದಗಿಸಿಲ್ಲ. ಆದರೆ, ಈಗಾಗಲೇ ಏರ್‌ಟೆಲ್‌ನ ಕೆಲವು ಪ್ರಿಪೇಯ್ಡ್ ಯೋಜನೆಗಳು ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತವೆ. ಈ ಯೋಜನೆಗಳು ಬಳಕೆದಾರರಿಗೆ ಹೆಚ್ಚುವರಿ ಶುಲ್ಕಗಳಿಲ್ಲದೆ 5G ಡೇಟಾದೊಂದಿಗೆ ಐಪಿಎಲ್ ಪಂದ್ಯಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತವೆ ಮತ್ತು ಅನಿಯಮಿತ ಕರೆ ಮತ್ತು ಎಸ್‌ಎಂಎಸ್‌ನಂತಹ ಯೋಜನೆಗಳನ್ನು ಒದಗಿಸುತ್ತಿವೆ. ಹಾಗಾದರೆ, ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ನೀಡು ಏರ್‌ಟೆಲ್ ಕೆಲವು ಆಯ್ದ ಪ್ರಿಪೇಯ್ಡ್ ಯೋಜನೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಏರ್‌ಟೆಲ್ ಗ್ರಾಹಕರು ಉಚಿತವಾಗಿ IPL 2025 ವೀಕ್ಷಿಸುವುದು ಹೇಗೆ?

ಏರ್‌ಟೆಲ್‌ನ 398 ರೂ. ಯೋಜನೆ: ಈ ಯೋಜನೆಯು 2GB/ದಿನ 4G ಡೇಟಾ, ಅನಿಯಮಿತ 5G ಡೇಟಾ, ಧ್ವನಿ ಕರೆಗಳು ಮತ್ತು 28 ದಿನಗಳ ಕಾಲ 100 SMS/ದಿನವನ್ನು ಒದಗಿಸುತ್ತದೆ. ಇದಲ್ಲದೆ, ಬಳಕೆದಾರರು ಒಂದು ತಿಂಗಳ JioHotstar ಮೊಬೈಲ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತಾರೆ.

Take a Poll

ಏರ್‌ಟೆಲ್‌ನ 1,029 ರೂ. ಯೋಜನೆ: ಈ ಪ್ರಿಪೇಯ್ಡ್ ಯೋಜನೆಯು 84 ದಿನಗಳ ಕಾಲ 2GB/ದಿನ 4G ಡೇಟಾ, ಅನಿಯಮಿತ 5G ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು 100 SMS/ದಿನವನ್ನು ನೀಡುತ್ತದೆ. ಇದರಲ್ಲಿ ಮೂರು ತಿಂಗಳ JioHotstar ಮೊಬೈಲ್ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.

ಏರ್‌ಟೆಲ್‌ನ 3,999 ರೂ. ಯೋಜನೆ: ಈ ಯೋಜನೆಯು ಒಂದು ವರ್ಷದ ಕಾಲ ಉಚಿತ JioHotstar ಮೊಬೈಲ್ ಚಂದಾದಾರಿಕೆಯನ್ನು ಒದಗಿಸುತ್ತದೆ. ಜೊತೆಗೆ, ಬಳಕೆದಾರರು 365 ದಿನಗಳ ಕಾಲ 2.5GB/ದಿನ 4G ಡೇಟಾ, ಅನಿಯಮಿತ 5G ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು 100 SMS/ದಿನವನ್ನು ಪಡೆಯುತ್ತಾರೆ.

ಏರ್‌ಟೆಲ್‌ನ ಈ ಮೂರು ಪ್ರೀಪೇಡ್ ಯೋಜನೆಗಳು ಉಚಿತವಾಗಿ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆ ನೀಡುತ್ತವೆ. ನೀವು ಐಪಿಎಲ್ ಕ್ರಿಕೆಟ್ ಪ್ರಿಯರಾಗದಿದ್ದರೆ, ಏರ್‌ಟೆಲ್‌ನಿಂದ ಇತರೆ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳು ಕೂಡ ಲಭ್ಯವಿವೆ. ಅವುಗಳನ್ನು ಕೂಡ ಪರಿಶೀಲಿಸೋಣ.

ಏರ್‌ಟೆಲ್‌ನ 379 ರೂ. ಯೋಜನೆ:ಈ ಯೋಜನೆಯು ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಒಳಗೊಂಡಿಲ್ಲ, ಆದರೆ 30 ದಿನಗಳ ಕಾಲ ಅನಿಯಮಿತ 5G ಡೇಟಾ, ಪ್ರತಿದಿನ 100 SMS, ಅನಿಯಮಿತ ಧ್ವನಿ ಕರೆಗಳು ಮತ್ತು 2GB ದೈನಂದಿನ ಡೇಟಾವನ್ನು ಒದಗಿಸುತ್ತದೆ.

ಏರ್‌ಟೆಲ್‌ನ 409 ರೂ. ಯೋಜನೆ: ಈ ಪ್ರಿಪೇಯ್ಡ್ ಯೋಜನೆಯು 28 ದಿನಗಳ ಅವಧಿಗೆ ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 SMS, 2.5GB ಡೇಟಾ, 5 ರೂ ಟಾಕ್‌ಮೈಮ್ ಮತ್ತು ಅನಿಯಮಿತ 5G ಡೇಟಾವನ್ನು ನೀಡುತ್ತದೆ. ಇದಲ್ಲದೆ, ಈ ಯೋಜನೆಯು 28 ದಿನಗಳ ಕಾಲ ಉಚಿತ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಅನ್ನು ಒಳಗೊಂಡಿದ್ದು, 20+ OTT ಸೇವೆಗಳಿಗೆ ಪ್ರವೇಶ, ಉಚಿತ ಹೆಲೋಟ್ಯೂನ್‌ಗಳು ಮತ್ತು ವಿಂಕ್ ಮ್ಯೂಸಿಕ್‌ಗೆ ಉಚಿತ ಪ್ರವೇಶವನ್ನು ಒದಗಿಸುತ್ತದೆ.

ಏರ್‌ಟೆಲ್‌ನ 429 ರೂ. ಯೋಜನೆ:*ಈ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 SMS, ದಿನಕ್ಕೆ 2.5GB ಡೇಟಾ, 5 ರೂ ಟಾಕ್‌ಟೈಮ್ ಮತ್ತು 30 ದಿನಗಳ ಕಾಲ ಅನಿಯಮಿತ 5G ಡೇಟಾವನ್ನು ಒದಗಿಸುತ್ತದೆ.

ಐಪಿಎಲ್ 2025 ವಿವರ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 18ನೇ ಆವೃತ್ತಿಯು ಇದೇ ಮಾರ್ಚ್ 22, 2025 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಉದ್ಘಾಟನಾ ಪಂದ್ಯದಿಂದ ಪ್ರಾರಂಭವಾಗಲಿದೆ.

Best Mobiles in India

English summary
The telecom company has not yet announced any specific plans for IPL 2025. Last year, Airtel introduced IPL Bonanza recharge options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+