Airtel: ಏರ್‌ಟೆಲ್ ಟೆಲಿಕಾಂನ ಈ ಪ್ಲಾನ್‌ಗಳಲ್ಲಿ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ!
ಏರ್‌ಟೆಲ್ ಟೆಲಿಕಾಂ ತನ್ನ ಗ್ರಾಹಕರಿಗಾಗಿ ಹಲವಾರು ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಾ ಬಂದಿದೆ. ಈ ಪ್ಲಾನ್‌ಗಳಲ್ಲಿ ಅನಿಯಮಿತ ಕರೆ ಪ್ರಯೋಜನ ಮಾತ್ರವಲ್ಲದೆ ಹಲವಾರು ಸೌಲಭ್ಯಗಳನ್ನು ನೀಡಲಾಗ್ತಿದೆ. ಅದರಲ್ಲೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಅವಕಾಶ ನೀಡುವ ಪ್ರಿಪೇಯ್ಡ್ ಪ್ಲಾನ್‌ಗಳು ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿವೆ.
ಹೌದು, ಏರ್‌ಟೆಲ್ ಟೆಲಿಕಾಂನ ಹಲವು ಪ್ರೀಪೇಯ್ಡ್ ಪ್ಲಾನ್‌ಗಳು ಒಟಿಟಿ ಪ್ರಯೋಜನಗಳನ್ನು ನೀಡುತ್ತಿವೆ. ಇದರಿಂದ ನೀವು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯಲು ಸಾದ್ಯವಾಗಲಿದೆ. ಇದರಲ್ಲಿ ಏರ್‌ಟೆಲ್ ಟೆಲಿಕಾಂ ಯಾವೆಲ್ಲಾ ಪ್ಲಾನ್‌ಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇಗೆ ಬಂಡಲ್ ಪ್ರವೇಶ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ 499ರೂ. ಪ್ರಿಪೇಯ್ಡ್ ಪ್ಲಾನ್
ಏರ್‌ಟೆಲ್ 499ರೂ. ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 3 ತಿಂಗಳ ಚಂದಾದಾರಿಕೆ ಪ್ರಯೋಜನ ನೀಡಲಿದೆ. ಅಲ್ಲದೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ 149ರೂ ಮೌಲ್ಯದ 28-ದಿನದ ಚಂದಾದಾರಿಕೆ ಲಭ್ಯವಾಗಲಿದೆ. ಜೊತೆಗೆ 3 ತಿಂಗಳವರೆಗೆ ಪೂರಕವಾದ Apollo 24|7 ಸರ್ಕಲ್ ಸದಸ್ಯತ್ವ, ವಿಂಕ್ ಮ್ಯೂಸಿಕ್‌ಗೆ ಉಚಿತ ಪ್ರವೇಶವನ್ನು ಸಹ ನೀಡಲಿದೆ. ಇನ್ನು ಈ ಪ್ಲಾನ್‌ನಲ್ಲಿ ನಿಮಗೆ ಅನಿಯಮಿತ ಕರೆ ಪ್ರಯೋಜನ ಹಾಗೂ ದೈನಂದಿನ 100 SMS ಮತ್ತು ದಿನಕ್ಕೆ 3 GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಈ ಪ್ಲಾನ್ ಒಟ್ಟು 28 ದಿನಗಳ ಮಾನ್ಯತೆಯೊಂದಿಗೆ ಬರಲಿದೆ.
ಏರ್‌ಟೆಲ್ 839ರೂ. ಪ್ರಿಪೇಯ್ಡ್ ಪ್ಲಾನ್
ಏರ್‌ಟೆಲ್ 839ರೂ. ಪ್ರಿಪೇಯ್ಡ್ ಪ್ಲಾನ್ ಒಟ್ಟು 84 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಯೋಜನೆಯು ದಿನಕ್ಕೆ 2 GB ಡೇಟಾ ಮತ್ತು ದೈನಂದಿನ 100 ಎಸ್‌ಎಂಎಸ್ ಪ್ರಯೋಜನವನ್ನು ನೀಡಲಿದೆ. ಇದರೊಂದಿಗೆ ಈ ಪ್ಲಾನ್‌ನಲ್ಲಿ ನೀವು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 3-ತಿಂಗಳ ಚಂದಾದಾರಿಕೆ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ , ಕಾಂಪ್ಲಿಮೆಂಟರಿ ಅಪೊಲೊ 24|7 ಸರ್ಕಲ್ ಸದಸ್ಯತ್ವ, ರಿವಾರ್ಡ್‌ಮಿನಿ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಏರ್‌ಟೆಲ್ ವಿಂಕ್ ಮ್ಯೂಸಿಕ್‌ಗೆ ಉಚಿತ ಪ್ರವೇಶ ಕೂಡ ದೊರೆಯಲಿದೆ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇನಲ್ಲಿ ಏನೆಲ್ಲಾ ಪ್ರಯೋಜನ ಲಭ್ಯ
ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇನಲ್ಲಿ ನೀವು ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ನೀವು ಸೋನಿ LIV, ಲಯನ್ಸ್‌ಗೇಟ್ ಪ್ಲೇ, ಫ್ಯಾನ್‌ಕೋಡ್, ಇರೋಸ್ ನೌ, ಹೋಯ್‌ಚೋಯ್, ಮನೋರಮಾಮ್ಯಾಕ್ಸ್ ಒಳಗೊಂಡಂತೆ 15 OTT ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಇದಲ್ಲದೆ ನೀವು ನಿಮ್ಮ ಮೊಬೈಲ್, ಟ್ಯಾಬ್ಲೆಟ್ ಅಥವಾ ಟಿವಿಯಲ್ಲಿಯು ಸಹ ಹಲವ ವಿಷಯಗಳನ್ನು ಆನಂದಿಸಲು ಅವಕಾಶ ಸಿಗಲಿದೆ.
ಒಂದು ವೇಳೆ ನಿಮಗೆ ಹೆಚ್ಚಿನ ಡೇಟಾ ಅವಶ್ಯಕತೆ ಇದ್ದರೆ ಏರ್‌ಟೆಲ್ ಟೆಲಿಕಾಂನ 509 ರೂ.ಗಳ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಲ್ಯಾನ್ ಒಂದು ತಿಂಗಳ ಮಾನ್ಯತೆ ಹೊಂದಿದ್ದು, ಇದರಲ್ಲಿ 60 GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಅಂದರೆ ದಿನಕ್ಕೆ 2GB ಬಳಕೆ ಮಾಡಬಹುದು. ಇನ್ನು ಇದರ ಮಾನ್ಯತೆ ಅವಧಿ 30 ದಿನಗಳು. ಇದರೊಂದಿಗೆ ಅನಿಯಮಿತ ವಾಯಿಸ್ ಕಾಲ್ ಸೇವೆ ಹಾಗೂ 300 ಎಸ್‌ಎಮ್‌ಎಸ್ ಸೌಲಭ್ಯವನ್ನು ಈ ಪ್ಲ್ಯಾನ್‌ನಲ್ಲಿ ಪಡೆದುಕೊಳ್ಳಬಹುದು.ಈ ಪ್ಲ್ಯಾನ್‌ನಲ್ಲಿ ಮತ್ತೊಂದು ವಿಶೇಷ ಸೌಲಭ್ಯ ಎಂದರೆ ಅನಿಯಮಿತ 5G ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ನೀವು ಈ ಸೇವೆ ಪಡೆದುಕೊಳ್ಳಬೇಕು ಎಂದಾದರೆ ಏರ್‌ಟೆಲ್‌ನ 5G ಕವರೇಜ್ ಪ್ರದೇಶದಲ್ಲಿ ವಾಸ ಇರಬೇಕಾಗುತ್ತದೆ. ಇಷ್ಟೆಲ್ಲಾ ಪ್ರಯೋಜನಗಳ ಜೊತೆಗೆ ಕೆಲವು ಇತರೆ ವಿಭಾಗಗಳಿಗೆ ಉಚಿತ ಎಂಟ್ರಿ ಈ ಪ್ಲ್ಯಾನ್‌ನಲ್ಲಿ ಸಿಗಲಿದೆ. ಈ ಮೂಲಕ ಕರೆ ಹಾಗೂ ಇಂಟರ್ನೆಟ್ ಸೇವೆಯೊಂದಿಗೆ ಈ ಸೇವೆಯನ್ನೂ ಪಡೆಯಬಹುದು.


Click it and Unblock the Notifications








