Home
ಸುದ್ದಿಜಾಲ

ಏರ್‌ಟೆಲ್‌, ಜಿಯೋದಿಂದ ಮುಂದುವರೆದ ಸ್ಪರ್ಧೆ..! ರಿಟೇಲ್‌ ವ್ಯಾಪಾರಿಗಳಿಗೆ ಬಂಪರ್..!

By Gizbot Bureau

ಭಾರತೀಯ ಟೆಲಿಕಾಂ ಲೋಕದಲ್ಲಿ ಭಾರ್ತಿ ಏರ್‌ಟೆಲ್‌ ಮತ್ತು ರಿಲಾಯನ್ಸ್‌ ಜಿಯೋ ನಡುವೆ ಸ್ಪರ್ಧೆ ಮುಂದುವರೆದಿದೆ. ಎರಡು ಕಂಪನಿಗಳು ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡುವ ಮೂಲಕ ಸ್ಪರ್ಧೆ ಮುಂದುವರೆಸಿವೆ. ಪ್ರತಿ ಎರಡು ಜಿಯೋ ಗ್ರಾಹಕರನ್ನು ಭಾರ್ತಿ ಏರ್‌ಟೆಲ್‌ಗೆ ಪರಿವರ್ತಿಸಿದರೆ ಚಿಲ್ಲರೆ ವ್ಯಾಪಾರಿಗಳು 100 ರೂ.ಗಳನ್ನು ಪಡೆಯಲಿದ್ದಾರೆ. ಆದರೆ, ವೊಡಾಫೋನ್ ಐಡಿಯಾ ಬಳಕೆದಾರರನ್ನು ಸೆಳೆಯಲು ಇಂತಹ ಯಾವುದೇ ಪ್ರೋತ್ಸಾಹವನ್ನು ನೀಡುತ್ತಿಲ್ಲ.

ಜಿಯೋದ ಆಕ್ರಮಣಶೀಲತೆ

ಜಿಯೋದ ಆಕ್ರಮಣಶೀಲತೆ

ಇನ್ನು, ಜಿಯೋ ಕೂಡ ತನ್ನ ಆಕ್ರಮಣಾಕಾರಿ ಮನೋಭಾವ ಮುಂದುವರೆಸಿದ್ದು, ಪ್ರತಿ ಹೊಸ ಸಿಮ್ ಕಾರ್ಡ್‌ ಮಾರಾಟ ಮಾಡಿದರೆ ಚಿಲ್ಲರೆ ವ್ಯಾಪಾರಿಗಳಿಗೆ 100 ರೂ.ನ್ನು ಜಿಯೋ ಕಂಪನಿ ನೀಡಲಿದೆ. ಟ್ಯಾಕ್ಸ್‌ ಹೆಚ್ಚಳ, ಏರ್‌ಟೆಲ್ ಮತ್ತು ವೊಡಾಫೋನ್ ಇಂಡಿಯಾ ಲಿಮಿಟೆಡ್ ಉಚಿತ ಕರೆಗಳನ್ನು ಅನಿಯಮಿತಗೊಳಿಸಿದ ನಂತರ, ಅವರ ಕಡೆಯಿಂದ ಹೆಚ್ಚಿನ ಗ್ರಾಹಕರನ್ನು ಜಿಯೋ ಕಡೆ ಸೆಳೆಯಲು ವಿತರಕರಿಗೆ ಪ್ರೋತ್ಸಾಹವನ್ನು ನೀಡುತ್ತಿದೆ.

ವೊಡಾಫೋನ್‌, ಏರ್‌ಟೆಲ್‌ನಿಂದ ದರ ಹೆಚ್ಚಳ

ವೊಡಾಫೋನ್‌, ಏರ್‌ಟೆಲ್‌ನಿಂದ ದರ ಹೆಚ್ಚಳ

ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಎರಡು ಕಂಪನಿಗಳು ಹೆಚ್ಚಿನ ಸಾಲ, ನಷ್ಟದ ವಿಸ್ತರಣೆ ಮತ್ತು 89,000 ಕೋಟಿ ರೂ. ಬಾಕಿ ಪಾವತಿಯನ್ನು ಎದುರಿಸಲು ಡಿಸೆಂಬರ್ 3 ರಂದು ಶೇ.40ರವರೆಗೆ ದರವನ್ನು ಹೆಚ್ಚಿಸಿವೆ. ಜಿಯೋ ಕೂಡ ಡಿಸೆಂಬರ್ 6ರಂದು ಟ್ಯಾರಿಫ್‌ ದರ ಹೆಚ್ಚಿಸಿದ್ದು, ಜಿಯೋ ದರ ಪ್ರತಿಸ್ಪರ್ಧಿಗಳಿಗಿಂತ ಶೇ.25ರಷ್ಟು ಅಗ್ಗವಾಗಿದೆ.

ಗ್ರಾಹಕರಿಗಾಗಿ ಹೋರಾಟ

ಗ್ರಾಹಕರಿಗಾಗಿ ಹೋರಾಟ

ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಅವರು ಇತರೆ ನೆಟ್‌ವರ್ಕ್‌ಗಳ ಕರೆಗಳಿಗೆ ಶುಲ್ಕ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದಿವೆ. ಆದರೆ, ಜಿಯೋ ಮಾತ್ರ ಇತರೆ ನೆಟ್‌ವರ್ಕ್‌ಗಳ ಕರೆಗಳ ಮೇಲೆ ಶುಲ್ಕ ವಿಧಿಸುವುದನ್ನು ಮುಂದುವರೆಸಿದೆ. ಇತರೆ ನೆಟ್‌ವರ್ಕ್‌ಗಳ ಕರೆಗಳಿಗೆ ಹೆಚ್ಚುವರಿ ಶುಲ್ಕ ಹೊರತುಪಡಿಸಿ, 98 ರೂ. ಪ್ಲಾನ್‌ನ್ನು ಮತ್ತೆ ಪರಿಚಯಿಸುವ ಮೂಲಕ ಪರಿಣಾಮಕಾರಿಯಾಗಿ ಸುಂಕದ ಯೋಜನೆಯನ್ನು ತಗ್ಗಿಸಿದ್ದು, ಗ್ರಾಹಕರಿಗಾಗಿ ನಡೆಯುತ್ತಿರುವ ಹೋರಾಟವನ್ನು ಎತ್ತಿ ತೋರಿಸಿದೆ.

ಜಿಯೋಗೆ ಕಷ್ಟ

ಜಿಯೋಗೆ ಕಷ್ಟ

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದ ಗ್ರಾಹಕರು ತಮ್ಮ ಕರೆ ಕ್ಯಾಪ್‌ಗಳನ್ನು ತಲುಪದಿರಬಹುದು, ಆದರೆ, ಈಗ ಅನಿಯಮಿತ ಕರೆ ಸಿಗುತ್ತಿದೆ ಎಂದು ಗ್ರಾಹಕರಿಗೆ ತಿಳಿದಿದೆ. ಇದರಿಂದ ಆ ಗ್ರಾಹಕರನ್ನು ಜಿಯೋ ಕಡೆ ಸೆಳೆಯಲು ತುಂಬಾ ಪ್ರಯಾಸ ಪಡಬೇಕಿದೆ. ಹೆಚ್ಚಿನ ಗ್ರಾಹಕರನ್ನು ಹೊಂದಲು ಅನೇಕ ಕಾರ್ಯಗಳನ್ನು ಜಿಯೋ ಮಾಡುತ್ತಿದ್ದು, 500 ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿಯನ್ನು ನಿಗದಿಪಡಿಸಿಕೊಂಡಿದೆ.

ಮೂವರಿಗೂ ಹತ್ತಿರದ ಸ್ಪರ್ಧೆ

ಮೂವರಿಗೂ ಹತ್ತಿರದ ಸ್ಪರ್ಧೆ

ಚಂದಾದಾರರು ಮತ್ತು ಆದಾಯ ಮಾರುಕಟ್ಟೆ ಪಾಲು ವಿಷಯದಲ್ಲಿ ಮೂರು ಕಂಪನಿಗಳು ಪರಸ್ಪರ ಹತ್ತಿರದಲ್ಲಿವೆ ಎಂಬುದು ತಜ್ಞರ ಅಭಿಪ್ರಾಯ. ಮೂರು ನೆಟ್‌ವರ್ಕ್‌ಗಳಲ್ಲಿ ವೊಡಾಫೋನ್ ಐಡಿಯಾ ಆರ್ಥಿಕವಾಗಿ ದುರ್ಬಲವಾಗಿದ್ದು, ಇತರ ಎರಡು ಆಪರೇಟರ್‌ಗಳ ವಿರುದ್ಧ ತನ್ನ ಪಾಲನ್ನು ರಕ್ಷಿಸಿಕೊಳ್ಳುವುದು ವಿಐಎಲ್‌ಗೆ ಕಠಿಣ ಎನಿಸುತ್ತಿದೆ.

ಜಿಯೋ ಮುನ್ನಡೆ

ಜಿಯೋ ಮುನ್ನಡೆ

ಸೆಪ್ಟೆಂಬರ್ ಅಂತ್ಯಕ್ಕೆ, 355 ದಶಲಕ್ಷಕ್ಕೂ ಹೆಚ್ಚು ಬಳಕೆದಾರರು ಅಥವಾ ಶೇ.35ರಷ್ಟು ಆದಾಯ ಮಾರುಕಟ್ಟೆ ಪಾಲು ಹೊಂದಿರುವ ಜಿಯೋ ಟೆಲಿಕಾಂ ಲೋಕವನ್ನು ಮುನ್ನಡೆಸಿದೆ. ನಂತರ ಭಾರ್ತಿ ಏರ್‌ಟೆಲ್‌ 280 ಮಿಲಿಯನ್ ಬಳಕೆದಾರರು, ಶೇ.32.1 ರಷ್ಟು ಆರ್ಎಂಎಸ್ ಹೊಂದಿದೆ. ಹಾಗೂ ವೊಡಾಫೋನ್ ಐಡಿಯಾ 355 ಮಿಲಿಯನ್ ಬಳಕೆದಾರರು ಶೇ.27.2 ರಷ್ಟು ಆರ್ಎಂಎಸ್ ಹೊಂದಿದೆ.

Best Mobiles in India

English summary
Airtel, Reliance Jio Launch Bigger Incentives For Retailers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+